For Quick Alerts
ALLOW NOTIFICATIONS  
For Daily Alerts

ಶೀಘ್ರ ನಿವೃತ್ತಿ ಪಡೆಯಲು ಈಗಲೇ ತಯಾರಿ ಮಾಡುವುದು ಹೇಗೆ?

|

ತಮ್ಮ 20 ರ ಹರೆಯದ ಅನೇಕ ಜನರು ನಾವು ಶೀಘ್ರದಲ್ಲೇ ನಿವೃತ್ತಿ ಪಡೆದುಕೊಳ್ಳಬೇಕು ಎಂಬುವುದು ಒಂದು ಕನಸಾಗಿರುತ್ತದೆ. ಅದಕ್ಕಾಗಿ ನಾವು ಅಷ್ಟೇ ತಯಾರಿಯನ್ನು ಮಾಡಿಕೊಳ್ಳುವುದು ಅತೀ ಮುಖ್ಯವಾಗಿದೆ. ನಾವು ಯಾವುದೇ ತಯಾರಿ ಇಲ್ಲದೆ ನಿವೃತ್ತಿ ಪಡೆದರೆ ಮುಂದಿನ ಜೀವನ ಹೇಗೆ ಎಂಬುವುದು ದೊಡ್ಡ ಪ್ರಶ್ನೆಯಾಗಲಿದೆ.

 

ನೀವು ಅವಧಿಪೂರ್ವ ನಿವೃತ್ತಿಯನ್ನು ಪಡೆಯುವಾಗ ನಿಮ್ಮ ಜೀವನವನ್ನು ಕಷ್ಟಕ್ಕೆ ತಲ್ಲುವಂತೆ ಮಾಡಿಕೊಳ್ಳಬೇಡಿ. ಶೀಘ್ರವೇ ನೀವು ನಿವೃತ್ತಿಯನ್ನು ಪಡೆಯಬೇಕಾದರೆ ನೀವು ಈಗಲೇ ಉಳಿತಾಯ ಮಾಡಿಕೊಳ್ಳುವುದು ಉತ್ತಮವಾಗಿದೆ. ಅವಧಿ ಪೂರ್ವ ನಿವೃತ್ತಿಗೂ ಮುನ್ನವೇ ಯೋಜನೆಯನ್ನು ಮಾಡಿಕೊಳ್ಳವುದು ಕೂಡಾ ಒಂದು ಕಲೆಯಾಗಿದೆ. ಅವಧಿ ಪೂರ್ವ ನಿವೃತ್ತಿಯ ಬಳಿಕದ ಜೀವನ ಹೇಗೆ ಇರುತ್ತದೆ ಎಂಬುವುದು ನೀವು ಹಣಕಾಸು ನಿರ್ವಹಣೆ ಮಾಡಲು ಯಾವೆಲ್ಲಾ ಸಿದ್ದತೆ ಮಾಡಿದ್ದೀರಿ ಎಂಬುವುದರ ಮೇಲೆ ಅವಲಂಬಿತವಾಗಿರುತ್ತದೆ.

ವಾರ್ಷಿಕ ಸರಾಸರಿ 22.44 ರಿಟರ್ನ್ಸ್, ನಿವೃತ್ತಿ ಉಳಿತಾಯಕ್ಕೆ ಇದು ಉತ್ತಮ ಆಯ್ಕೆವಾರ್ಷಿಕ ಸರಾಸರಿ 22.44 ರಿಟರ್ನ್ಸ್, ನಿವೃತ್ತಿ ಉಳಿತಾಯಕ್ಕೆ ಇದು ಉತ್ತಮ ಆಯ್ಕೆ

ಈ ಏರುತ್ತಿರುವ ಹಣದುಬ್ಬರದ ನಡುವೆ ಯಾವುದೇ ಹಣ ಸಂಪಾದನೆಯ ಮೂಲಗಳು ಇಲ್ಲದೆ ಇರುವ ಸಂದರ್ಭದಲ್ಲಿ ಜೀವನ ಸಾಗಿಸಲು ನಿಮ್ಮಲ್ಲಿ ಇರುವ ಉಳಿತಾಯ ಮಾತ್ರ ಸಾಕಾಗುವುದಿಲ್ಲ. ನೀವು ಬೇಗನೆ ನಿವೃತ್ತಿ ಹೊಂದಬೇಕು ಎಂದು ಬಯಸಿದರೆ, ಕೆಲವೊಂದು ನಿಯಮಗಳನ್ನು ಪಾಲಿಸಲೇ ಬೇಕಾಗುತ್ತದೆ. ಈಗಲೇ ಯೋಜನೆ ರೂಪಿಸಿಕೊಳ್ಳಬೇಕಾಗುತ್ತದೆ. ಇಲ್ಲಿದೆ ವಿವರ ಮುಂದೆ ಓದಿ...

 ನಿಮ್ಮ ಹಣಕಾಸಿನ ಬಗ್ಗೆ ನಿಗಾ ಇರಿಸಿ

ನಿಮ್ಮ ಹಣಕಾಸಿನ ಬಗ್ಗೆ ನಿಗಾ ಇರಿಸಿ

ನೀವು ಖರ್ಚು ಹೇಗೆ ಮಾಡುತ್ತಿದ್ದೀರಿ ಎಂದು ನಿಗಾ ಇಡುವುದು ಅತ್ಯಗತ್ಯವಾಗಿದೆ. ಹಣಕಾಸಿನ ನಿರ್ವಹಣೆಗೆ ಉಚಿತ ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಖರ್ಚುಗಳನ್ನು ನೀವು ಲೆಕ್ಕ ಹಾಕಿಕೊಂಡಾಗ, ನಿಮಗೆ ಖರ್ಚು ವೆಚ್ಚದ ಅಂದಾಜು ಲಭ್ಯವಾಗುತ್ತದೆ. ಆಗ ನೀವು ಅನಗತ್ಯ ಎನಿಸುವ ಖರ್ಚಿಗೆ ಬ್ರೇಕ್ ಹಾಕಿ ಹಣ ಉಳಿತಾಯ ಮಾಡಿಕೊಳ್ಳಬಹುದು. ಇದು ನಿಮ್ಮ ಹಣಕಾಸು ನಿರ್ವಹಣೆಯನ್ನು ಸರಾಗಗೊಳಿಸುತ್ತದೆ, ಒಟ್ಟಾರೆಯಾಗಿ ಬೇಗನೆ ನಿವೃತ್ತಿ ಪಡೆಯಲು ಸಹಾಯಕವಾಗಿದೆ.

 ನೀವು ನಿಭಾಯಿಸಬಹುದಾದ ಮೊತ್ತವನ್ನು ಮಾತ್ರ ಖರ್ಚು ಮಾಡಿ

ನೀವು ನಿಭಾಯಿಸಬಹುದಾದ ಮೊತ್ತವನ್ನು ಮಾತ್ರ ಖರ್ಚು ಮಾಡಿ

ನೀವು ಖರ್ಚು ಮಾಡುವ ಸಂದರ್ಭದಲ್ಲಿ ಅಷ್ಟು ಖರ್ಚು ನಾನು ಮಾಡಿದರೆ ಮುಂದೇನು, ಅಷ್ಟು ಹಣ ನನ್ನ ಬಳಿ ಇದೆಯೇ, ಹಣವನ್ನು ಈಗ ಖರ್ಚು ಮಾಡಿದರೆ ಮುಂದೆ ಬೇರೆ ಖರ್ಚು ನಿಭಾಯಿಸಲು ಸಾಧ್ಯವಾಗಲಿದೆಯೇ ಎಂದು ನೋಡಿಕೊಳ್ಳಬೇಕಾಗುತ್ತದೆ. ನಿಮ್ಮ ಗಳಿಕೆ ಎಷ್ಟಿದೆ, ಜೀವನದ ವೆಚ್ಚ ಎಷ್ಟಿದೆ ಎಂದು ನೋಡಿಕೊಳ್ಳಿ. ಅದನ್ನು ಸರಿದೂಗಿಸುವುದು ಅತ್ಯಗತ್ಯ. ನಿಮ್ಮಲ್ಲಿ ಸಾಧ್ಯಕ್ಕಿಂತ ಅಧಿಕ ಖರ್ಚು ಮಾಡಿದರೆ ಅಂತಿಮವಾಗಿ ಸಾಲದ ಹೊರೆ ನಿಮ್ಮ ಮೇಲೆ ಬೀಳಲಿದೆ. ದುಬಾರಿ ವೆಚ್ಚದ ಜೀವನ ಶೈಲಿಗೆ ಬ್ರೇಕ್ ಹಾಕಿದರೆ ಮುಂದಿನ ಜೀವನ ಉತ್ತಮ.

 ಅಲ್ಪಾವಧಿಯ ಹಣಕಾಸಿನ ಹೂಡಿಕೆ
 

ಅಲ್ಪಾವಧಿಯ ಹಣಕಾಸಿನ ಹೂಡಿಕೆ

ದೀರ್ಘಾವಧಿಯ ಹೂಡಿಕೆಯ ಮೇಲೆ ಕೇಂದ್ರೀಕರಿಸುವುದಕ್ಕಿಂತ ಅಲ್ಪಾವಧಿಯ ಹೂಡಿಕೆಗೆ ಗಮನಕೊಡಿ. ಎಸ್‌ಐಪಿ ಹೂಡಿಕೆಯಂತಹ ಅಲ್ಪಾವಧಿ ಹೂಡಿಕೆ ಮಾಡಿ. ಅಲ್ಪಾವಧಿ ಹೂಡಿಕೆಯು ನಿಮ್ಮನ್ನು ಆರ್ಥಿಕವಾಗಿ ಸ್ಥಿರವಾಗಿಸುತ್ತದೆ. ಇದು ನಿಮಗೆ ಅಂತಿಮವಾಗಿ ಹೆಚ್ಚು ಮೊತ್ತದ ದೀರ್ಘಾವಧಿ ಹೂಡಿಕೆಯನ್ನು ಮಾಡಿ ನಿವೃತ್ತಿ ಜೀವನ ಕಳೆಯಲು ಸಹಾಯಕವಾಗಲಿದೆ. ಹೂಡಿಕೆ ಮಾಡುವ ಸಂದರ್ಭದಲ್ಲೂ ಅಪಾಯಕಾರಿ ಹೂಡಿಕೆ ಉತ್ತಮವಲ್ಲ.

 ಆರ್ಥಿಕವಾಗಿ ಶಿಕ್ಷಿತರಾಗಿರಿ

ಆರ್ಥಿಕವಾಗಿ ಶಿಕ್ಷಿತರಾಗಿರಿ

ದೇಶದಲ್ಲಿ ಯುವಕರಲ್ಲಿ ಆರ್ಥಿಕ ಶಿಕ್ಷಣವು ಹೆಚ್ಚುತ್ತಿದೆ. ಅದು ಕೂಡಾ ಉತ್ತಮ ಕಾರಣಕ್ಕಾಗಿ ಯುವಕರಲ್ಲಿ ಆರ್ಥಿಕ ಶಿಕ್ಷಣ ಹೆಚ್ಚುತ್ತಿದೆ. ಅದಕ್ಕೆ ಮುಖ್ಯ ಕಾರಣ ಇಂದಿನ ಹಣದುಬ್ಬರ ಎಂದರೆ ತಪ್ಪಾಗಲಾರದು. ಎಲ್ಲವೂ ದುಬಾರಿಯಾದಾಗ ಯುವಕರಲ್ಲಿ ಉಳಿತಾಯ ಮಾಡಬೇಕಾಗಿದೆ ಎಂಬ ಮನೋಭಾವ ಕೊಂಚ ಹುಟ್ಟುತ್ತಿದೆ. ಕಷ್ಟಪಟ್ಟು ಗಳಿಸಿದ ಹಣವನ್ನು ಹೂಡಿಕೆ ಮಾಡುವಾಗ ಜಾಗರೂಕರಾಗಿ ನಿರ್ಧಾರ ಕೈಗೊಳ್ಳಿ. ನೀವು ಆರ್ಥಿಕವಾಗಿ ಸಾಕ್ಷರರಾಗಿರುವಾಗ, ನೀವು ಕೇವಲ ಹಣವನ್ನು ಉಳಿಸುವುದು ಮಾತ್ರವಲ್ಲ ನಿಮ್ಮ ವೈಕ್ತಿತ್ವವು ಬೆಳೆಯುತ್ತದೆ.

 ಲೆಕ್ಕ ಹಾಕಿ ಅಪಾಯ ಸ್ವೀಕರಿಸಿ

ಲೆಕ್ಕ ಹಾಕಿ ಅಪಾಯ ಸ್ವೀಕರಿಸಿ

ನೀವು ಹೂಡಿಕೆ ಮಾಡುವಾಗ ಲೆಕ್ಕ ಹಾಕಿ ಅಪಾಯವನ್ನು ತೆಗೆದುಕೊಳ್ಳುವುದು ಉತ್ತಮವಾಗಿದೆ. ನೀವು ಹಾದಿಯಲ್ಲಿ ಅಮೂಲ್ಯವಾದ ಪಾಠಗಳನ್ನು ಕಲಿಯುವುದು ಮಾತ್ರವಲ್ಲದೆ ಮಾರುಕಟ್ಟೆಯಲ್ಲಿ ಮಾಡಿದ ತಪ್ಪುಗಳಿಂದ ತ್ವರಿತವಾಗಿ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಸಹ ಹೊಂದಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಷೇರು ಮಾರುಕಟ್ಟೆಯಲ್ಲಿ ಅಪಾಯ ಹೆಚ್ಚು ನೀವು ಅಲ್ಲಿ ಹೂಡಿಕೆ ಮಾಡುವುದಾದರೆ ಬಹಳ ಜಾಗರೂಕರಾಗಿರಿ.

English summary

How You Can Plan Your Investments To Retire Early in Kannada

Here's how you can plan your investments to retire early. Keep your cost of living in check with your earnings in kannada. Read on.
Story first published: Tuesday, May 24, 2022, 13:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X