For Quick Alerts
ALLOW NOTIFICATIONS  
For Daily Alerts

ಇದ್ದಕ್ಕಿದ್ದಂತೆ ನಿಮ್ಮ ಪ್ರೀತಿ ಪಾತ್ರರು ಕೋವಿಡ್‌ಗೆ ಬಲಿಯಾದರೆ, ಮೊದಲು ಇದನ್ನು ಮಾಡಿ..

|

ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆಯ ಭೀಕರತೆಯನ್ನು ನೋಡಿರುವ ನಮಗೆ ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಯ ಆತಂಕ ಈಗ ಎದುರಾಗಿದೆ. ಕೊರೊನಾ ವೈರಸ್‌ ಸೋಂಕಿನ ಮುಂದಿನ ಅಲೆಯನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಸರ್ಕಾರಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮಗಳನ್ನು ಈಗಲೇ ಕೈಗೊಳ್ಳುತ್ತಿದೆ. ಹಾಗಿರುವಾಗ ನಮ್ಮ ವೈಯಕ್ತಿಕ ಆರೋಗ್ಯ ಹಾಗೂ ಹಣಕಾಸು ಆರೋಗ್ಯವನ್ನು ನಾವು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.

ನಾವು ನಮ್ಮ ಪ್ರೀತಿಪಾತ್ರರನ್ನು ಕೊರೊನಾ ವೈರಸ್‌ ಸೋಂಕು ಕಾರಣದಿಂದ ಕಳೆದುಕೊಂಡಿರುವ ಸಂದರ್ಭದಲ್ಲೂ ನಾವು ಕೆಲವೊಂದು ಆರ್ಥಿಕ ಜವಾಬ್ದಾರಿಯನ್ನು ನಿಭಾಯಿಸುವುದು ಅಥವಾ ನೋಡಿಕೊಳ್ಳುವುದು ಅತ್ಯಗತ್ಯ. ಏಕೆಂದರೆ ನಾವು ಅಂದುಕೊಂಡತೆ ಆಗಿದಿರಬಹುದು. ಇನ್ನು ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಉಂಟಾಗಬಹುದಾದ ಅವಘಡಗಳ ಸಂದರ್ಭದಲ್ಲಿ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವ ರೀತಿಯ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ. ಅದಕ್ಕಾಗಿ ನಮ್ಮ ಪ್ರೀತಿ ಪಾತ್ರರನ್ನು ನಾವು ಕಳೆದುಕೊಂಡ ಸಂದರ್ಭದಲ್ಲಿ ನಮ್ಮ ಆರ್ಥಿಕ ಸ್ಥಿತಿಗೆ ಹೇಗೆ ಪೆಟ್ಟು ಬಿದ್ದೀತು ಎಂಬುವುದನ್ನು ನಾವಿಲ್ಲಿ ವಿವರಿಸುತ್ತೇವೆ.

ಬೆಂಗಳೂರಿನ ಶೇಕಡಾ 75ಕ್ಕಿಂತ ಹೆಚ್ಚಿನ ಮನೆ ಮಾಲೀಕರು, ತಮ್ಮ ನಿವಾಸದ ಬೆಲೆ ಹೆಚ್ಚಿಸುವ ನಿರೀಕ್ಷೆ!ಬೆಂಗಳೂರಿನ ಶೇಕಡಾ 75ಕ್ಕಿಂತ ಹೆಚ್ಚಿನ ಮನೆ ಮಾಲೀಕರು, ತಮ್ಮ ನಿವಾಸದ ಬೆಲೆ ಹೆಚ್ಚಿಸುವ ನಿರೀಕ್ಷೆ!

ಬೆಂಗಳೂರಿನ ಮನೆಯೊಂದರಲ್ಲಿ ಪತಿ, ಪತ್ನಿ ಹಾಗೂ ಮಗ ವಾಸಿಸುತ್ತಿದ್ದರು. ಪತಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಗೃಹಿಣಿಯಾಗಿದ್ದರು. ಮಗ ಕಾಲೇಜು ವಿದ್ಯಾರ್ಥಿ. ಆದರೆ ಈ ಕುಟುಂಬದ ಮೂವರಿಗೂ ಕೊರೊನಾ ವೈರಸ್‌ ಸೋಂಕು ತಗುಲಿದ್ದು ಕುಟುಂಬದ ಹಸಿವು ನೀಗಿಸುತ್ತಿದ್ದ ಪತಿ ಸೋಂಕಿಗೆ ಬಲಿಯಾದರು. ಪತ್ನಿ ಗೃಹಿಣಿಯಾಗಿದ್ದ ಕಾರಣ ಯಾವುದೇ ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾದರು. ಓರ್ವ ಪ್ರೀತಿ ಪಾತ್ರರ ನಿಧನವು ಮಾನಸಿಕ ನೋವು ಉಂಟು ಮಾಡುವುದು ಮಾತ್ರವಲ್ಲದೇ ಇಡೀ ಕುಟುಂಬಕ್ಕೆ ಆರ್ಥಿಕ ಸಂಕಷ್ಟವನ್ನು ಉಂಟು ಮಾಡಿದೆ. ಇಂತಹ ಸಂದರ್ಭದಲ್ಲಿ ನಾವು ಈ ಆರ್ಥಿಕ ಸ್ಥಿತಿಯನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ವಿವರ ಮುಂದೆ ಓದಿ...

 ಉದ್ಯೋಗದಾತರಿಂದ ಲಭಿಸುವ ಸೌಲಭ್ಯಗಳನ್ನು ಮೊದಲು ತಿಳಿಯಿರಿ

ಉದ್ಯೋಗದಾತರಿಂದ ಲಭಿಸುವ ಸೌಲಭ್ಯಗಳನ್ನು ಮೊದಲು ತಿಳಿಯಿರಿ

ಕೊರೊನಾ ವೈರಸ್‌ ಸೋಂಕು ಆಗಿರಲಿ ಅಥವಾ ಯಾವುದೇ ಕಾರಣದಿಂದಾಗಿ ನಮ್ಮ ಪ್ರೀತಿ ಪಾತ್ರರನ್ನು ನಾವು ಕಳೆದುಕೊಂಡಾಗ ಮುಖ್ಯವಾಗಿ ಉದ್ಯೋಗದಾತರ ಬಳಿ ಮಾತನಾಡಬೇಕು. ಕುಟುಂಬವು ಸಾವನ್ನಪ್ಪಿದ ವ್ಯಕ್ತಿಯ ಉದ್ಯೋಗದಾಯತರಲ್ಲಿ ಮಾತನಾಡುವುದು ಅತೀ ಮುಖ್ಯ. ಕುಟುಂಬವು ಉದ್ಯೋಗದಾತರಿಂದ ಯಾವೆಲ್ಲಾ ಸೌಲಭ್ಯವಿದೆ ಎಂಬುವುದನ್ನು ಕಂಡುಕೊಳ್ಳಬೇಕು. ಉದ್ಯೋಗಿಗಳ ಭವಿಷ್ಯ ನಿಧಿ, ಗ್ರಾಚ್ಯುಟಿ ಮತ್ತು ಇತರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಬೇಕು.

 ಎಲ್ಲಾ ಪ್ರಮುಖ ಹಣಕಾಸು ದಾಖಲೆಗಳನ್ನು ಪರಿಶೀಲಿಸಿ

ಎಲ್ಲಾ ಪ್ರಮುಖ ಹಣಕಾಸು ದಾಖಲೆಗಳನ್ನು ಪರಿಶೀಲಿಸಿ

ಭಾರತದ ಬಹುತೇಕ ಕುಟುಂಬದಲ್ಲಿ ಕುಟುಂಬದ ಪುರುಷರಿಗೆ ಮಾತ್ರ ಎಲ್ಲಾ ಹಣಕಾಸು ವ್ಯವಹಾರಗಳ ಜವಾಬ್ದಾರಿ ಇರುತ್ತದೆ. ಕುಟುಂಬದಲ್ಲಿನ ಯಾವುದೇ ಹಣಕಾಸು ಮಾಹಿತಿಯೂ ಕುಟುಂಬದ ಇತರೆ ಸದಸ್ಯರಿಗೆ ಇರುವುದಿಲ್ಲ. ಪತ್ನಿಗೆ ತನ್ನ ಪತಿ ಯಾವೆಲ್ಲಾ ಹಣಕಾಸು ವ್ಯವಹಾರ ನಡೆಸಿದ್ದಾರೆ ಎಂದು ತಿಳಿದಿರುವುದಿಲ್ಲ, ಮಕ್ಕಳಿಗೂ ಈ ಬಗ್ಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ನಮ್ಮ ಕುಟುಂಬದವರನ್ನು ನಾವು ಕಳೆದುಕೊಂಡಾಗ ಮೊದಲು ಎಲ್ಲಾ ಪ್ರಮುಖ ಹಣಕಾಸು ದಾಖಲೆಗಳನ್ನು ಪರಿಶೀಲಿಸಬೇಕು ಹಾಗೂ ಅದನ್ನು ಸಂಗ್ರಹ ಮಾಡಿ ಇಟ್ಟು ಕೊಳ್ಳಬೇಕು. ಈ ಬಗ್ಗೆ ಎಲ್ಲಾ ವ್ಯವಹಾರವನ್ನು ನಿಭಾಯಿಸಲು ನೀವು ಹಣಕಾಸು ವಿಚಾರದಲ್ಲಿ ಹೆಚ್ಚು ತಿಳಿದಿರುವವರ, ನಂಬಿಕಸ್ತರ ಸಹಾಯ ಪಡೆಯುವುದು ಉತ್ತಮ.

ಇಳಿಕೆಗೊಂಡಿದ್ದ ಚಿನ್ನದ ಬೆಲೆ ಏರಿಕೆ: ಆಗಸ್ಟ್‌ 27ರಂದು ಯಾವ ನಗರದಲ್ಲಿ ಬೆಲೆ ಎಷ್ಟಿದೆ?ಇಳಿಕೆಗೊಂಡಿದ್ದ ಚಿನ್ನದ ಬೆಲೆ ಏರಿಕೆ: ಆಗಸ್ಟ್‌ 27ರಂದು ಯಾವ ನಗರದಲ್ಲಿ ಬೆಲೆ ಎಷ್ಟಿದೆ?

 ಬೇರೆ ದಾರಿ ಯಾವುದು ಎಂಬುವುದನ್ನು ಕಂಡುಕೊಳ್ಳಿ

ಬೇರೆ ದಾರಿ ಯಾವುದು ಎಂಬುವುದನ್ನು ಕಂಡುಕೊಳ್ಳಿ

ನಮ್ಮ ಕುಟುಂಬದ ಆದಾಯಕ್ಕೆ ಬೆನ್ನೆಲುಬು ಆಗಿರುವ ವ್ಯಕ್ತಿಯೇ ಸಾವನ್ನಪ್ಪಿದರೆ ಮುಂದೆ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವುದು ಯಾರು ಎಂಬ ಪ್ರಶ್ನೆ ಎಲ್ಲರಿಗೂ ಬರುತ್ತದೆ. ಈ ಸಂದರ್ಭದಲ್ಲಿ ಕುಟುಂಬವು ಆದಾಯವನ್ನು ಬದಲಿಸುವ ಆಯ್ಕೆಗಳ ಬಗ್ಗೆ ಯೋಚಿಸಬೇಕು ಅಥವಾ ಮಾಸಿಕ ಖರ್ಚುಗಳನ್ನು ನೋಡಿಕೊಳ್ಳಲು ಆದಾಯದ ಬಗ್ಗೆ ನೋಡಿಕೊಳ್ಳಬೇಕು. ಈ ಸಂದರ್ಭದಲ್ಲಿ ನಾವು ದಿನದೂಡಲು ಸಾಕಾಗುವ ಸಣ್ಣ ಉದ್ಯಮವನ್ನು ನಾವು ಮೊದಲು ಮಾಡುವುದು ಉತ್ತಮ.

 ಮೃತರು WILL ಬರೆದಿದ್ದಾರೆಯೇ ನೋಡಿಕೊಳ್ಳಿ

ಮೃತರು WILL ಬರೆದಿದ್ದಾರೆಯೇ ನೋಡಿಕೊಳ್ಳಿ

ಸಾಮಾನ್ಯವಾಗಿ ಕುಟುಂಬಸ್ಥರು ತೀರಿಕೊಂಡಾಗ ನಾವು ಆ ನೋವಿನಲ್ಲೇ ಇರುತ್ತೇವೆ. ಆದರೆ ಆ ವ್ಯಕ್ತಿಯು ಕುಟುಂಬದ ಪ್ರಮುಖ ಆಧಾರ ಸ್ತಂಭವಾಗಿರುವಾಗ ನಾವು ಮುಂದಿನ ನಮ್ಮ ಕುಟುಂಬದ ಹೊಟ್ಟೆ ಪಾಡೇನು ಎಂಬುವುದನ್ನು ನೋಡಿಕೊಳ್ಳಬೇಕು. ನಾವು ಎಲ್ಲಾ ಆರ್ಥಿಕ ದಾಖಲೆಗಳನ್ನು ಸಂಗ್ರಹ ಮಾಡಿ ಪರಿಶೀಲಿಸುವುದು ಎಷ್ಟು ಮುಖ್ಯವೋ, ಅಷ್ಟೇ ನಾವು ಮೃತರು ಯಾವುದಾದರು WILL ಬರೆದಿದ್ದಾರೆಯೇ ನೋಡಿಕೊಳ್ಳುವುದು ಕೂಡಾ ಮುಖ್ಯ. ಆ WILL ನಲ್ಲಿ ಏನಿದೆ ಎಂದು ಓದುವುದು ಮುಖ್ಯ. WILL ನಲ್ಲಿ ನಿಮ್ಮ ಎಲ್ಲಾ ಸಂಪತ್ತಿನ ಬಗ್ಗೆ ಮಾಹಿತಿ ಇದ್ದು, ನಿಮಗೆ ಸಂಕಷ್ಟದ ಸಂದರ್ಭದಲ್ಲಿ ಸಹಕಾರಿಯಾಗುತ್ತದೆ.

 ವಿಮಾ ಪಾಲಿಸಿಗಳನ್ನು ಕ್ಲೇಮ್ ಮಾಡಿ

ವಿಮಾ ಪಾಲಿಸಿಗಳನ್ನು ಕ್ಲೇಮ್ ಮಾಡಿ

ಭಾರತೀಯ ಮಧ್ಯಮ ವರ್ಗದ ಕುಟುಂಬಗಳಿಗೆ ಹೂಡಿಕೆಯ ಪ್ರಥಮ ಮೂಲ ವಿಮಾ ಪಾಲಿಸಿ ಆಗಿರುತ್ತದೆ. ಅನೇಕ ಮಂದಿ ಟರ್ಮ್ ಪಾಲಿಸಿ, ಆರೋಗ್ಯ ವಿಮೆ, ಇತರೆ ವಿಮೆಗಳನ್ನು ಭಾರತೀಯ ಜೀವ ವಿಮಾ ನಿಗಮದಿಂದ ಖರೀದಿ ಮಾಡಿರುತ್ತಾರೆ. ನಮ್ಮ ಕುಟುಂಬ ಸದಸ್ಯರನ್ನು ಸಾವನ್ನಪ್ಪಿದ ಸಂದರ್ಭದಲ್ಲಿ ಉಂಟಾಗುವ ಆರ್ಥಿಕ ಹೊರೆಯನ್ನು ನಿಭಾಯಿಸಲು ನಾವು ಪಾಲಿಸಿ ದಾಖಲೆಗಳನ್ನು ಪರಿಶೀಲಿಸಿ ಅದನ್ನು ಕ್ಲೈಮ್ ಮಾಡುವುದು ಕೂಡಾ ಒಳಿತು.

 ಯಾವುದಾದರೂ ಸಾಲ ಇದೆಯೇ ಎಂದು ಪರಿಶೀಲಿಸಿ

ಯಾವುದಾದರೂ ಸಾಲ ಇದೆಯೇ ಎಂದು ಪರಿಶೀಲಿಸಿ

ನಿಮ್ಮ ಕುಟುಂಬ ಸದಸ್ಯರು ಸಾವನ್ನಪ್ಪುವ ಮುನ್ನ ಯಾವುದಾದರೂ ಸಾಲವನ್ನು ಪಡೆದಿರಬಹುದು, ಆ ಸಾಲದ ಬಗ್ಗೆ ನೀವು ತಿಳಿದುಕೊಂಡು ಅದರ ಹೊರೆಯಿಂದ ಮೊದಲು ಹೊರಬನ್ನಿ. ವಾಸ್ತವವಾಗಿ, ಅನೇಕ ಹಣಕಾಸು ಸಲಹೆಗಾರರು ಇದನ್ನು ವಿಲ್‌ನಲ್ಲಿ ಬರೆಯಲು ಸಲಹೆ ನೀಡುತ್ತಾರೆ. ಸ್ವತ್ತುಗಳನ್ನು ತಮ್ಮ ಮಕ್ಕಳಿಗೆ ಪಾಲು ಮಾಡುವ ಮುನ್ನ, ಎಲ್ಲಾ ಸಾಲಗಳು, ಹೊಣೆಗಾರಿಕೆಗಳು ಮತ್ತು ತೆರಿಗೆಗಳನ್ನು ಮೊದಲು ಪಾವತಿ ಮಾಡಬೇಕಾಗುತ್ತದೆ. ಈ ಹಿನ್ನೆಲೆ ಸಾವನ್ನಪ್ಪಿದ ನಿಮ್ಮ ಕುಟುಂಬ ಸದಸ್ಯರು ಪಡೆದ ಸಾಲ ಯಾವುದಾದರೂ ಪಾವತಿ ಮಾಡದೆ ಬಾಕಿಯಾಗಿದೆಯೇ ಎಂದು ಪರಿಶೀಲಿಸಿ.

 ನಿಮ್ಮ ಮಾಸಿಕ ಬಜೆಟ್‌ ಮಾಡಿಕೊಳ್ಳಿ

ನಿಮ್ಮ ಮಾಸಿಕ ಬಜೆಟ್‌ ಮಾಡಿಕೊಳ್ಳಿ

ಹಲವಾರು ಮಂದಿಯ ಕುಟುಂಬದಲ್ಲಿ ತಿಂಗಳ ಖರ್ಚು ವೆಚ್ಚದ ಬಗ್ಗೆ ಕುಟುಂಬದ ಒಂದಿಬ್ಬರಿಗೆ ಬಿಟ್ಟು ಯಾರಿಗೂ ತಿಳಿದಿರುವುದಿಲ್ಲ. ಆದರೆ ಕುಟುಂಬದ ಎಲ್ಲಾ ವ್ಯಕ್ತಿಯು ತಿಂಗಳ ವೆಚ್ಚದ ಬಗ್ಗೆ ತಿಳಿಯುವುದು ಅತೀ ಮುಖ್ಯ. ಯಾವುದಾದರೂ ಅನರೀಕ್ಷಿತ ಅವಘಢವು ನಿಮ್ಮ ಜೀವನ ಶೈಲಿಗೆ ಭಾರೀ ಪೆಟ್ಟು ನೀಡಬಹುದು. ಆದ್ದರಿಂದ ನೀವು ಕುಟುಂಬದ ಖರ್ಚು ವೆಚ್ಚವನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಬೇಕು. ನೀವು ಯಾವುದೇ ಹೂಡಿಕೆ ಮಾಡುವುದಾದರೂ ಬಹಳ ಜಾಗರೂಕರಾಗಿದೆ. ಅನಗತ್ಯ ವೆಚ್ಚವನ್ನು ಮಾಡದಿರಿ. ನಿಮ್ಮ ಜೀವನ ಸಾಗಿಸಲು ತಿಂಗಳಿಗೆ ಉತ್ತಮ ಬಡ್ಡಿ ದೊರೆಯುವ ಕಡೆ ಹೂಡಿಕೆ ಮಾಡಲು ನೀವು ಯೋಜಿಸುತ್ತಿದ್ದರೆ ಸರಿಯಾಗಿ ಯೋಚಿಸಿ, ತಜ್ಞರ ಸಲಹೆ ಪಡೆದು ಹೂಡಿಕೆ ಮಾಡಿ.

English summary

If you lose a loved one in Covid suddenly, You have to do this

If you lose a loved one in Covid suddenly, You have to do this. Explained here, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X