For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ಸ್ಕೋರ್ ಪದೇ ಪದೇ ಚೆಕ್ ಮಾಡುವವರೆ, ಎಚ್ಚರ!

|

ನಾವು ಸಾಲವನ್ನು ಪಡೆಯಬೇಕಾದರೆ ಕ್ರೆಡಿಟ್ ಸ್ಕೋರ್ ಅತೀ ಮುಖ್ಯವಾಗಿದೆ. ಸಾಲವನ್ನು ಸರಳ ಹಾಗೂ ಕಡಿಮೆ ಬಡ್ಡಿದರದಲ್ಲಿ ಪಡೆಯಬೇಕಾದರೆ ಉತ್ತಮ ಕ್ರೆಡಿಟ್ ಸ್ಕೋರ್ ಇರುವುದು ಅತೀ ಮುಖ್ಯವಾಗಿದೆ. ಆದರೆ ನೀವು ಪದೇ ಪದೇ ಕ್ರೆಡಿಟ್ ಸ್ಕೋರ್ ಚೆಕ್ ಮಾಡುವ ಅಭ್ಯಾಸ ಹೊಂದಿದ್ದರೆ ಈ ಸುದ್ದಿಯನ್ನು ಓದಲೇ ಬೇಕು.

 

ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್ ಹೆಚ್ಚಾಗಿದ್ದರೆ ಆ ವ್ಯಕ್ತಿ ಸಾಲವನ್ನು ಪಡೆಯಲು ಹೆಚ್ಚು ಅರ್ಹತೆಯನ್ನು ಹೊಂದಿರುವ ವ್ಯಕ್ತಿ, ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬಲ್ಲರು ಎಂದು ಅರ್ಥವಾಗಿದೆ. ಹಾಗೆಯೇ ತಮಗೆ ಬೇಕಾದ ಅವಧಿಗೆ, ಕಡಿಮೆ ಬಡ್ಡಿದರಕ್ಕೆ ಸಾಲವನ್ನು ಪಡೆಯಲು ಕೂಡಾ ಈ ಉತ್ತಮ ಕ್ರೆಡಿಟ್ ಸ್ಕೋರ್ ಸಹಾಯಕವಾಗಿದೆ.

ಕ್ರೆಡಿಟ್ ಕಾರ್ಡ್ ಇಲ್ಲದೆಯೇ ಕ್ರೆಡಿಟ್ ಸ್ಕೋರ್ ಹೀಗೆ ಹೆಚ್ಚಿಸಿ!ಕ್ರೆಡಿಟ್ ಕಾರ್ಡ್ ಇಲ್ಲದೆಯೇ ಕ್ರೆಡಿಟ್ ಸ್ಕೋರ್ ಹೀಗೆ ಹೆಚ್ಚಿಸಿ!

ಆದರೆ ನೀವು ಪದೇ ಪದೇ ಕ್ರೆಡಿಟ್ ಸ್ಕೋರ್ ಅನ್ನು ಚೆಕ್ ಮಾಡುವ ಅಭ್ಯಾಸವನ್ನು ಹೊಂದಿದ್ದೀರಾ? ಹಾಗಿದ್ದರೆ ಆ ಅಭ್ಯಾಸವನ್ನು ಈಗಲೇ ಬಿಡುವುದು ಉತ್ತಮ. ತೀರಾ ಅಗತ್ಯವಾದರೆ ಮಾತ್ರ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿದರೆ ಒಳಿತು. ನೀವು ಪದೇ ಪದೇ ಸ್ಕೋರ್ ಪರಿಶೀಲನೆ ಮಾಡಿದರೆ, ನಿಮ್ಮ ಸ್ಕೋರ್ ಕಡಿಮೆಯಾಗುತ್ತದೆ!, ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಕ್ರೆಡಿಟ್ ಸ್ಕೋರ್ ಪರಿಶೀಲನೆಯಲ್ಲಿ ಎರಡು ವಿಧ

ಕ್ರೆಡಿಟ್ ಸ್ಕೋರ್ ಪರಿಶೀಲನೆಯಲ್ಲಿ ಎರಡು ವಿಧ

ಈ ಬಗ್ಗೆ ರಿಂಗ್‌ನ ಮುಖ್ಯ ಡೇಟಾ ಮತ್ತು ಅನಾಲಿಟಿಕ್ಸ್ ಅಧಿಕಾರಿ ನೇಹಾ ಶಿವರಾನ್ ಮಾಹಿತಿ ನೀಡಿದ್ದಾರೆ. "ಕ್ರೆಡಿಟ್ ಸ್ಕೋರ್‌ನ ಪರಿಶೀಲನೆಯನ್ನು ಎರಡು ರೀತಿಯಲ್ಲಿ ಮಾಡಲಾಗುತ್ತದೆ. ಮೃದು ವಿಚಾರಣೆ ಮತ್ತು ಕಠಿಣ ವಿಚಾರಣೆ ಈ ಎರಡು ವಿಧಾನವಾಗಿದೆ. ನಿಮ್ಮ ಸ್ವಂತ ಕ್ರೆಡಿಟ್ ಸ್ಕೋರ್ ಅಥವಾ ನೀವು ಸಾಲ ಪಡೆಯು ಹಣಕಾಸು ಘಟಕದ ಕ್ರೆಡಿಟ್ ಸ್ಕೋರ್ ಅನ್ನು (ಸಾಲ ನೀಡುವ ಸಂಸ್ಥೆ, ಕ್ರೆಡಿಟ್ ಕಾರ್ಡ್ ಕಂಪನಿ, ಬ್ಯಾಂಕ್, ಇತ್ಯಾದಿ) ಅದನ್ನು ಮೃದು ವಿಚಾರಣೆ ಎಂದು ಪರಿಗಣಿಸಲಾಗುತ್ತದೆ. ಇದು ನೀವು ಸಾಲವನ್ನು ಪಡೆಯುವ ಉದ್ದೇಶದಿಂದ ನೋಡುವ ಕ್ರೆಡಿಟ್ ಸ್ಕೋರ್ ಆಗಿದೆ. ಇದರಿಂದಾಗಿ ಯಾವುದೇ ಪರಿಣಾಮ ಉಂಟಾಗದು. ಇನ್ನು ನೀವು ಕಾರ್ಯ ನಿರ್ವಹಣೆ ಮಾಡುವ ಸಂಸ್ಥೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿದರೂ ಅದನ್ನು ಮೃದು ವಿಚಾರಣೆ ಎಂದೇ ಪರಿಗಣಿಸಲಾಗುತ್ತದೆ," ಎಂದು ತಿಳಿಸಿದ್ದಾರೆ.

 ಎರಡನೇ ವಿಧ ಯಾವುದು ನೋಡಿ?
 

ಎರಡನೇ ವಿಧ ಯಾವುದು ನೋಡಿ?

"ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಸಾಲ ನೀಡುವ ಸಂಸ್ಥೆ ಅಥವಾ ಕಂಪನಿಯು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲನೆ ಮಾಡುವ ವಿನಂತಿಯನ್ನು ಮಾಡಿದ್ದರೆ, ಅದನ್ನು ಕಠಿಣ ವಿಚಾರಣೆ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ಕಠಿಣ ವಿಚಾರಣೆಗಳು ನಿಮ್ಮ ಕ್ರೆಡಿಟ್ ಸ್ಕೋರ್‌ಗಳ ಮೇಲೆ ಪ್ರಭಾವ ಬೀರುತ್ತವೆ. ನಿಮ್ಮ ಪ್ರಸ್ತುತ ಕ್ರೆಡಿಟ್ ಸ್ಕೋರ್ ಈ ಕಠಿಣ ವಿಚಾರಣೆಯನ್ನು ಅವಲಂಭಿಸಿ ನಿಮ್ಮ ಸ್ಕೋರ್ ಮೇಲೆ ಪರಿಣಾಮ ಬೀರಬಹುದು," ಎಂದು ಕೂಡಾ ರಿಂಗ್‌ನ ಮುಖ್ಯ ಡೇಟಾ ಮತ್ತು ಅನಾಲಿಟಿಕ್ಸ್ ಅಧಿಕಾರಿ ನೇಹಾ ಶಿವರಾನ್ ಹೇಳಿದ್ದಾರೆ.

 ಸಾಲ ಪಡೆಯುವ ಮುನ್ನ ಕ್ರೆಡಿಟ್ ಸ್ಕೋರ್ ತಿಳಿಯುವುದು ಹೇಗೆ?

ಸಾಲ ಪಡೆಯುವ ಮುನ್ನ ಕ್ರೆಡಿಟ್ ಸ್ಕೋರ್ ತಿಳಿಯುವುದು ಹೇಗೆ?

ಸಾಲಕ್ಕಾಗಿ ನೀವು ಬೇರೆ ಬೇರೆ ಕಡೆಗಳಲ್ಲಿ ಚೆಕ್ ಮಾಡುವ ಬದಲಾಗಿ ಸರಿಯಾಗಿ ಪರಿಶೀಲನೆ ಮಾಡಿಕೊಂಡು ಯಾವ ಸಂಸ್ಥೆಯಿಂದ ಸಾಲ ಪಡೆಯುವುದು ಎಂದು ನಿರ್ಧಾರ ಮಾಡಿಕೊಂಡು ಸಾಲ ಪಡೆಯುವುದು ಉತ್ತಮ. ಆ ಸಂದರ್ಭದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರಲಾರದು. ನೀವು ಪದೇ ಪದೇ ಚೆಕ್ ಮಾಡಿದರೆ ಕ್ರೆಡಿಟ್ ಸ್ಕೋರ್ ಕೆಳಕ್ಕೆ ಇಳಿಕೆಯಾಗುತ್ತಾ ಹೋಗುತ್ತದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

 ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ?

ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ?

ಹಂತ 1: ಅಧಿಕೃತ ವೆಬ್‌ಸೈಟ್ https://www.cibil.com/ ಗೆ ಭೇಟಿ ನೀಡಿ
ಹಂತ 2: GET FREE CIBIL SCORE & REPORT ಮೇಲೆ ಕ್ಲಿಕ್ ಮಾಡಿ
ಹಂತ 3: ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಹೆಸರು, ಐಡಿ ಸಂಖ್ಯೆ ಉಲ್ಲೇಖ ಮಾಡಿ. ನಿಮ್ಮ ಪ್ಯಾನ್, ಪಾಸ್‌ಪೋರ್ಟ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ರೇಷನ್ ಅನ್ನು ಐಡಿ ಪ್ರೂಫ್ ಆಗಿ ಬಳಕೆ ಮಾಡಬಹುದು.
ಹಂತ 4: Accept and Continue ಮೇಲೆ ಕ್ಲಿಕ್ ಮಾಡಿ
ಹಂತ 5: ನೀವು ಪ್ರಸ್ತುತ ಬಳಸುತ್ತಿರುವ ಮೊಬೈಲ್‌ ಅನ್ನು ಲಿಂಕ್ ಮಾಡಲು ಕೇಳಲಾಗುತ್ತದೆ. ಇದು ಸರಳವಾದ ಲಾಗಿನ್ ಪ್ರಕ್ರಿಯೆಯನ್ನು ಒದಗಿಸಲು ವೆಬ್‌ಸೈಟ್‌ಗೆ ಅನುವು ಮಾಡಿಕೊಡುತ್ತದೆ.
ಹಂತ 6: ಆಯ್ಕೆಗಳಲ್ಲಿ ಒಂದನ್ನು ಆಯ್ಕೆಮಾಡಿ, ನಂತರ Continue ಕ್ಲಿಕ್ ಮಾಡಿ.
ಹಂತ 7: You have successfully enrolled! ಮೇಲೆ ಕ್ಲಿಕ್ ಮಾಡಿ
ಹಂತ 8: ಮುಂದಿನ ಪುಟದಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಲಭ್ಯವಾಗಲಿದೆ.

English summary

If Your Checking Credit Score Frequently for a Loan, You Should Know This

If Your Checking Credit Score Frequently for a Loan, Beware! Your score, loan eligibility will go down. here's details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X