For Quick Alerts
ALLOW NOTIFICATIONS  
For Daily Alerts

ಫರ್ನೀಚರ್ ನಿಂದ ಐಫೋನ್ ತನಕ ಬಾಡಿಗೆ ಜಗತ್ತು; ಇದು ಹೊಸ ಟ್ರೆಂಡ್

|

ಇಪ್ಪತ್ತೊಂಬತ್ತು ವರ್ಷದ ಮುಂಬೈನ ಈ ಯುವಕನ ಫ್ಲ್ಯಾಟ್, ಕಾರು, ಅಷ್ಟೇ ಏಕೆ ಕುರ್ಚಿ ಕೂಡ ಬಾಡಿಗೆಯದು. ಈಗ ಭಾರತೀಯ ಯುವ ಜನತೆ ಪಾಲಿಗೆ ಪೀಠೋಪಕರಣದಿಂದ ಐಫೋನ್ ತನಕ ಎಲ್ಲವೂ ಬಾಡಿಗೆಗೆ ಪಡೆಯುವುದು ಉತ್ತಮ ಆಯ್ಕೆ ಎನಿಸುತ್ತಿದೆಯಂತೆ. "ಈ ಹಿಂದೆ ಯಾವುದನ್ನು ಸ್ವಾತಂತ್ರ್ಯ ಎಂದುಕೊಳ್ಳಲಾಗುತ್ತಿತ್ತೋ ಈಗ ನನ್ನ ವಯಸ್ಸಿನಲ್ಲಿ ಇರುವವರಿಗೆ ಅದು ಕಟ್ಟಿ ಹಾಕಿದಂತೆ ಅನಿಸುತ್ತದೆ" ಎನ್ನುತ್ತಾರೆ ಮುಂಬೈನ ಆ ಯುವಕ.

ನಮ್ಮ ತಂದೆ- ತಾಯಿಗೆ ಈ ಬಾಡಿಗೆ ಲೆಕ್ಕಾಚಾರ ಅರ್ಥವೇ ಆಗಲ್ಲ. ದೀರ್ಘಾವಧಿಗೆ ಲೆಕ್ಕ ಹಾಕಿದರೆ ಬಾಡಿಗೆಗೆ ತೆಗೆದುಕೊಳ್ಳುವುದಕ್ಕಿಂತ ಸ್ವಂತಕ್ಕೆ ಖರೀದಿ ಮಾಡುವುದು ಉತ್ತಮ ಅಂತಲೂ ಹಲವರು ಹೇಳುತ್ತಾರೆ. 4,247 ರುಪಾಯಿ ತಿಂಗಳ ಬಾಡಿಗೆಗೆ ಮುಂಬೈ ಮೂಲದ ವ್ಯಕ್ತಿಯೊಬ್ಬರು ಇಡೀ ಮನೆಯ ಪೀಠೋಪಕರಣ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅದರಲ್ಲಿ ರೆಫ್ರಿಜರೇಟರ್, ಮೈಕ್ರೋವೇವ್ ಕೂಡ ಸೇರಿದೆ.

ಮನೆಗಷ್ಟೇ ಅಲ್ಲ, ಕಚೇರಿಗಳಿಗೂ ಈಗ ಬಾಡಿಗೆ ಪೀಠೋಪಕರಣಗಳನ್ನೇ ಆದ್ಯತೆ ಮೇಲೆ ತೆಗೆದುಕೊಳ್ಳಲಾಗುತ್ತಿದೆ. ಲ್ಯಾಪ್ ಟಾಪ್, ಕುರ್ಚಿ, ಮೇಜು ಹೀಗೆ ಕಚೇರಿಗೆ ಅಗತ್ಯ ಇರುವ ಬಹುಪಾಲನ್ನು ಬಾಡಿಗೆ ಆಧಾರದಲ್ಲಿ ಖರೀದಿಸಲಾಗುತ್ತದೆ. ಒಂದು ವೇಳೆ ಬಿಜಿನೆಸ್ ಚೆನ್ನಾಗಿ ನಡೆದರೆ ಸರಿ, ಇಲ್ಲದಿದ್ದರೆ ಬಾಡಿಗೆಯನ್ನು ಚುಕ್ತಾ ಮಾಡಿ ಕೈತೊಳೆದುಕೊಳ್ಳಬಹುದು. ಇಲ್ಲದಿದ್ದರೆ ಖರೀದಿ ಮೊತ್ತವೇ ವಿಪರೀತ ಹೆಚ್ಚಾಗುತ್ತದೆ ಎನ್ನುತ್ತಾರೆ ಬಾಡಿಗೆಗೆ ಪಡೆದು ಅನುಭವ ಇರುವವರು.

ಫರ್ನೀಚರ್ ನಿಂದ ಐಫೋನ್ ತನಕ ಬಾಡಿಗೆ ಜಗತ್ತು; ಇದು ಹೊಸ ಟ್ರೆಂಡ್

2025ರ ಹೊತ್ತಿಗೆ ಜಾಗತಿಕ ಮಟ್ಟದಲ್ಲಿ ಈ ಬಾಡಿಗೆ ವ್ಯವಹಾರದಿಂದ $335 ಬಿಲಿಯನ್ ಆದಾಯ ಉತ್ಪತ್ತಿ ಆಗಬಹುದು ಎಂಬ ಅಂದಾಜು ಮಾಡಲಾಗಿದೆ. ಅಮೆರಿಕದಲ್ಲಿ ಗ್ರಾಹಕರಿಗೆ ಫ್ಯಾಷನ್ ದಿರಿಸನ್ನು ಹಾಗೂ ಚೀನಾದಲ್ಲಿ ಬಿಎಂಡಬ್ಲ್ಯು ಕಾರನ್ನು ಬಾಡಿಗೆಗೆ ನೀಡಲಾಗುತ್ತಿದೆ.

ಫೂರ್ಲೆಂಕೋ, ರೆಂಟ್ ಮೋಜೋ ಮತ್ತು ಗ್ರ್ಯಾಬ್ ಆನ್ ರೆಂಟ್ ನಂಥವು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಷ್ಟೇ ಅಲ್ಲ್, ಆಭರಣಗಳನ್ನು ಬಾಡಿಗೆಗೆ ನೀಡುವ ಅಪ್ಲಿಕೇಷನ್ ಗಳು ಸಹ ಬಂದಿವೆ. ಮುಂದಿನ ಐದಾರು ವರ್ಷದಲ್ಲೇ ಭಾರತದಲ್ಲಿ ಪೀಠೋಪಕರಣ ಬಾಡಿಗೆ ಮಾರುಕಟ್ಟೆಯೇ ಹತ್ತಾರು ಸಾವಿರ ಕೋಟಿ ವ್ಯವಹಾರದ ನಿರೀಕ್ಷೆ ಮಾಡಲಾಗುತ್ತಿದೆ.

ಬೆಂಗಳೂರು ಮೂಲದ ಸಂಸ್ಥೆಯೊಂದು ಪೀಠೋಪಕರಗಳು, ಜಿಮ್ ಸಲಕರಣೆಗಳು, ಐಫೋನ್ ಗಳು ಮತ್ತು ಗೂಗಲ್ ಹೋಮ್, ಅಮೆಜಾನ್ ಎಕೋದಂಥದ್ದನ್ನು ಬಾಡಿಗೆಗೆ ನೀಡುತ್ತಿದೆ. ಸ್ಮಾರ್ಟ್ ಫೋನ್ ಬಾಡಿಗೆಗೆ ನೀಡುವುದು ಯುವಜನರ ಮಧ್ಯೆ ಬಹಳ ಜನಪ್ರಿಯವಾಗಿದೆಯಂತೆ. ಏಕೆಂದರೆ ಪದೇಪದೇ ತಮ್ಮ ಫೋನ್ ಬದಲಿಸಲು ಬಯಸುವ ಅವರು ಖರೀದಿ ಮಾಡುತ್ತಾ ದೊಡ್ಡ ಮಟ್ಟದ ಹಣ ಕಳೆದುಕೊಳ್ಳಲು ಬಯಸುವುದಿಲ್ಲವಂತೆ.

ಇನ್ನು ಪದೇ ಪದೇ ವರ್ಗಾವಣೆ ಆಗುವ ಉದ್ಯೋಗದಲ್ಲಿ ಇದ್ದವರಿಗೆ ಈ ರೀತಿ ಪೀಠೋಪಕರಗಳನ್ನು ಬಾಡಿಗೆಗೆ ಪಡೆಯುವುದು ಲಾಭದಾಯಕ ಎನಿಸಿದೆ. ಕೆಲವು ಕಂಪೆನಿಗಳಂತೂ ಈ ರೀತಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಟವನ್ನು ಉಚಿತವಾಗಿ ಮಾಡಿಕೊಡುತ್ತವಂತೆ. ಒಟ್ಟಿನಲ್ಲಿ ಇದೊಂದು ಬಗೆಯ ಹೊಸ ವ್ಯವಹಾರ

English summary

India Millennial Prefer Rental Furniture To iPhones

India youth people prefer rental furniture to iPhone now days. What is the reason behind it? Here is an interesting story.
Story first published: Sunday, December 1, 2019, 13:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X