For Quick Alerts
ALLOW NOTIFICATIONS  
For Daily Alerts

ಎಫ್‌ಡಿ ಬಡ್ಡಿದರ ಏರಿಕೆ ಮಾಡಿದ ಇಂಡಿಯನ್ ಬ್ಯಾಂಕ್

|

ಆರ್‌ಬಿಐ ಇಂದು (ಆಗಸ್ಟ್ 5) ರೆಪೋ ದರವನ್ನು ಏರಿಕೆ ಮಾಡಿದೆ. ಇದಕ್ಕೂ ಮುನ್ನವೇ ಇಂಡಿಯನ್ ಬ್ಯಾಂಕ್ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಆಗಸ್ಟ್ 4ರಿಂದಲೇ ಜಾರಿಗೆ ಬರುವಂತೆ ಎಫ್‌ಡಿ ಬಡ್ಡಿದರವನ್ನು ಇಂಡಿಯನ್ ಬ್ಯಾಂಕ್ ಏರಿಕೆ ಮಾಡಿದೆ.

 

ಕಳೆದ ತಿಂಗಳು ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡುವ ಒಂದು ದಿನ ಮುನ್ನವೇ ಕೆಲವು ಬ್ಯಾಂಕ್‌ಗಳು ಎಫ್‌ಡಿ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿತ್ತು. ಸಾಮಾನ್ಯವಾಗಿ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದಾಗ ಬ್ಯಾಂಕ್‌ಗಳು ಸಾಲದ ಬಡ್ಡಿದರವನ್ನು ಶೀಘ್ರವೇ ಏರಿಕೆ ಮಾಡುತ್ತದೆ. ಆದರೆ ಎಫ್‌ಡಿ ಬಡ್ಡಿದರ ಹೆಚ್ಚಿಸಲು ಸಮಯ ತೆಗೆದುಕೊಳ್ಳುತ್ತದೆ ಎಂಬ ಆರೋಪವಿದೆ. ಈ ನಡುವೆ ಬ್ಯಾಂಕ್ ಈಗ ಎಫ್‌ಡಿ ಬಡ್ಡಿದರವನ್ನು ಮೊದಲೇ ಏರಿಕೆ ಮಾಡಿದೆ.

ಎಫ್‌ಡಿ ಬಡ್ಡಿದರ ಏರಿಸಿದ ಪಿಎನ್‌ಬಿ: ನೂತನ ದರ ತಿಳಿಯಿರಿ

ಒಂದು ವರ್ಷದಲ್ಲಿ ಮೆಚ್ಯೂರ್ ಆಗುವ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರದಲ್ಲಿ ಇಂಡಿಯನ್ ಬ್ಯಾಂಕ್ ಐದು ಮೂಲಾಂಕ ಹೆಚ್ಚಿಸಿದೆ. ಆದರೆ ಉಳಿದ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಇಂಡಿಯನ್ ಬ್ಯಾಂಕ್ ಹೆಚ್ಚಳ ಮಾಡಿಲ್ಲ. 7 ರಿಂದ 10 ವರ್ಷದ ಒಳಗೆ ಮೆಚ್ಯೂರಿಟಿ ಹೊಂದುವ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಇಂಡಿಯನ್ ಬ್ಯಾಂಕ್ ಶೇಕಡ 2.80 ರಿಂದ ಶೇಕಡ 5.60ರ ನಡುವೆ ಕಾಯ್ದಿರಿಸಿದೆ. ಹಾಗಾದರೆ ನೂತನ ಬಡ್ಡಿದರ ಎಷ್ಟಿದೆ ಎಂದು ತಿಳಿಯೋಣ ಮುಂದೆ ಓದಿ...

 ಎರಡು ಕೋಟಿಗಿಂತ ಕಡಿಮೆ ಮೊತ್ತದ ಎಫ್‌ಡಿ

ಎರಡು ಕೋಟಿಗಿಂತ ಕಡಿಮೆ ಮೊತ್ತದ ಎಫ್‌ಡಿ

7-14 ದಿನಗಳು: ಶೇಕಡ 2.80 ಬಡ್ಡಿದರ
15-29 ದಿನಗಳು: ಶೇಕಡ 2.80 ಬಡ್ಡಿದರ
30-45 ದಿನಗಳು: ಶೇಕಡ 3.00 ಬಡ್ಡಿದರ
46-90 ದಿನಗಳು: ಶೇಕಡ 3.25 ಬಡ್ಡಿದರ
91-120 ದಿನಗಳು: ಶೇಕಡ 3.50 ಬಡ್ಡಿದರ
121-180 ದಿನಗಳು: ಶೇಕಡ 3.75 ಬಡ್ಡಿದರ
181 ದಿನದಿಂದ 9 ತಿಂಗಳು: ಶೇಕಡ 4.00 ಬಡ್ಡಿದರ
9 ತಿಂಗಳಿನಿಂದ 1 ವರ್ಷಕ್ಕಿಂತ ಕಡಿಮೆ ಅವಧಿ: ಶೇಕಡ 4.40 ಬಡ್ಡಿದರ
1 ವರ್ಷ: ಶೇಕಡ 5.30 ಬಡ್ಡಿದರ
1 ವರ್ಷಕ್ಕಿಂತ ಅಧಿಕ 2 ವರ್ಷಕ್ಕಿಂತ ಕಡಿಮೆ ಅವಧಿ: ಶೇಕಡ 5.40 ಬಡ್ಡಿದರ
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ: ಶೇಕಡ 5.50 ಬಡ್ಡಿದರ
3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ: ಶೇಕಡ 5.60 ಬಡ್ಡಿದರ
5 ವರ್ಷ: ಶೇಕಡ 5.60 ಬಡ್ಡಿದರ
5 ವರ್ಷಕ್ಕಿಂತ ಅಧಿಕ ಅವಧಿ: ಶೇಕಡ 5.60 ಬಡ್ಡಿದರ

ಎಫ್‌ಡಿ ಬಡ್ಡಿದರ ಏರಿಸಿದ 5ನೇ ಅತೀ ದೊಡ್ಡ ಬ್ಯಾಂಕ್: ಇಲ್ಲಿದೆ ವಿವರ

 ಎರಡು ಕೋಟಿಗಿಂತ ಅಧಿಕ ಮೊತ್ತದ ಎಫ್‌ಡಿ
 

ಎರಡು ಕೋಟಿಗಿಂತ ಅಧಿಕ ಮೊತ್ತದ ಎಫ್‌ಡಿ

7-14 ದಿನಗಳು: ಶೇಕಡ 2.90 ಬಡ್ಡಿದರ
15-29 ದಿನಗಳು: ಶೇಕಡ 2.90 ಬಡ್ಡಿದರ
30-45 ದಿನಗಳು: ಶೇಕಡ 2.90 ಬಡ್ಡಿದರ
46-90 ದಿನಗಳು: ಶೇಕಡ 2.90 ಬಡ್ಡಿದರ
91-120 ದಿನಗಳು: ಶೇಕಡ 2.90 ಬಡ್ಡಿದರ
121-180 ದಿನಗಳು: ಶೇಕಡ 2.90 ಬಡ್ಡಿದರ
181 ದಿನದಿಂದ 9 ತಿಂಗಳು: ಶೇಕಡ 3.90 ಬಡ್ಡಿದರ
9 ತಿಂಗಳಿನಿಂದ 1 ವರ್ಷಕ್ಕಿಂತ ಕಡಿಮೆ ಅವಧಿ: ಶೇಕಡ 3.25 ಬಡ್ಡಿದರ
1 ವರ್ಷ: ಶೇಕಡ 3.55 ಬಡ್ಡಿದರ
1 ವರ್ಷಕ್ಕಿಂತ ಅಧಿಕ 2 ವರ್ಷಕ್ಕಿಂತ ಕಡಿಮೆ ಅವಧಿ: ಶೇಕಡ 3.25 ಬಡ್ಡಿದರ
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ: ಶೇಕಡ 3.25 ಬಡ್ಡಿದರ
3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ: ಶೇಕಡ 3.25 ಬಡ್ಡಿದರ
5 ವರ್ಷ: ಶೇಕಡ 3.25 ಬಡ್ಡಿದರ
5 ವರ್ಷಕ್ಕಿಂತ ಅಧಿಕ ಅವಧಿ: ಶೇಕಡ 3.25 ಬಡ್ಡಿದರ

 ಹಿರಿಯ ನಾಗರಿಕರ ಸ್ಥಳೀಯ ಟರ್ಮ್ ಡೆಪಾಸಿಟ್ ಅಕೌಂಟ್

ಹಿರಿಯ ನಾಗರಿಕರ ಸ್ಥಳೀಯ ಟರ್ಮ್ ಡೆಪಾಸಿಟ್ ಅಕೌಂಟ್

ಇಂಡಿಯನ್ ಬ್ಯಾಂಕ್ ವೆಬ್‌ಸೈಟ್ ಪ್ರಕಾರ ಕಡಿಮೆ ಅವಧಿಯ ಡೆಪಾಸಿಟ್ ಮೇಲೆ ಅಧಿಕ ಬಡ್ಡಿದರವನ್ನು ಪಡೆಯಲಿದ್ದಾರೆ. ಅದು ಮಾತ್ರವಲ್ಲದೇ ಹಿರಿಯ ನಾಗರಿಕರು ಕಾಯಂ ಡೆಪಾಸಿಟ್ ಮೇಲೆ ಹಾಗೂ ಬೇರೆ ಯಾವುದೇ ಡೆಪಾಸಿಟ್ ಮೇಲೆ ಸಾಮಾನ್ಯ ಜನರಿಗಿಂತ ಅಧಿಕ ಬಡ್ಡಿದರವನ್ನು ಪಡೆಯುತ್ತಾರೆ. 10 ಕೋಟಿವರೆಗಿನ ಮೊತ್ತಕ್ಕೆ ಸಾಮಾನ್ಯ ಜನರಿಗಿಂತ ಶೇಕಡ 0.50ರಷ್ಟು ಅಧಿಕ ಬಡ್ಡಿದರವನ್ನು ಹಿರಿಯ ನಾಗರಿಕರು ಪಡೆಯುತ್ತಾರೆ. ಇನ್ನು ಬ್ಯಾಂಕ್ ಹಿರಿಯ ನಾಗರಿಕರಿಗೆ ವಿಶೇಷ ಆಫರ್ ಅನ್ನು ಕೂಡಾ ನೀಡುತ್ತದೆ. 5 ವರ್ಷದಿಂದ 10 ವರ್ಷದ ಅವಧಿಗೆ ಹಿರಿಯ ನಾಗರಿಕರಿಗೆ ಎಷ್ಟು ಬಡ್ಡಿದರ ನೀಡಲಾಗುತ್ತದೆಯೋ ಅದಕ್ಕಿಂತ ಶೇಕಡ 0.25ರಷ್ಟು ಅಧಿಕ ಬಡ್ಡಿದರವನ್ನು ವಿಶೇಷ ಆಫರ್ ಆಗಿ ನೀಡಲಾಗುತ್ತದೆ.

English summary

Indian Bank Hiked FD Interest Rate For This Tenure, Details Here

Indian Bank has raised interest rates on fixed deposits under Rs 2 crore.
Story first published: Friday, August 5, 2022, 15:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X