For Quick Alerts
ALLOW NOTIFICATIONS  
For Daily Alerts

ಎಫ್‌ಡಿ ಬಡ್ಡಿದರ ಏರಿಸಿದ 5ನೇ ಅತೀ ದೊಡ್ಡ ಬ್ಯಾಂಕ್: ಇಲ್ಲಿದೆ ವಿವರ

|

ಹಣದುಬ್ಬರವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಏರಿಕೆ ಮಾಡಿದೆ. ಈ ನಡುವೆ ಹಲವಾರು ಬ್ಯಾಂಕುಗಳು ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಭಾರತದ ಐದನೇ ಅತೀ ದೊಡ್ಡ ಬ್ಯಾಂಕ್ ಆದ ಇಂಡಸ್ ಇಂಡ್ ಬ್ಯಾಂಕ್ ಈಗ ರೆಪೋ ದರವನ್ನು ಹೆಚ್ಚಳ ಮಾಡಿದೆ.

ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಇಂಡಸ್ ಇಂಡ್ ಬ್ಯಾಂಕ್ ಸುಮಾರು 2.5 ಕೋಟಿ ಗ್ರಾಹಕರನ್ನು ಹೊಂದಿದ್ದು, ಒಟ್ಟು ಎರಡು ಸಾವಿರ ಕಚೇರಿಗಳನ್ನು ಹೊಂದಿದೆ. ಈ ಬ್ಯಾಂಕ್ ರಿಟೇಲ್ ಹಾಗೂ ಕಾರ್ಪೋರೇಟ್ ಗ್ರಾಹಕರಿಗೆ ಹಲವಾರು ಆಫರ್‌ಗಳನ್ನು ಕೂಡಾ ನೀಡುತ್ತದೆ. ಈಗ ಈ ಪ್ರಮುಖ ಬ್ಯಾಂಕ್ ತನ್ನ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ.

 ಬ್ಯಾಂಕ್‌ ಎಫ್‌ಡಿಗಿಂತ ಅಧಿಕ ಬಡ್ಡಿದರ ನೀಡುತ್ತೆ ಈ ಯೋಜನೆ! ಬ್ಯಾಂಕ್‌ ಎಫ್‌ಡಿಗಿಂತ ಅಧಿಕ ಬಡ್ಡಿದರ ನೀಡುತ್ತೆ ಈ ಯೋಜನೆ!

2022ರ ಜೂನ್ 21ರಿಂದ ಈ ಪರಿಷ್ಕೃ ಬಡ್ಡಿದರವು ಅನ್ವಯವಾಗಲಿದೆ. ಇನ್ನು ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಇಂಡಸ್ ಇಂಡ್ ಬ್ಯಾಂಕ್ ಹಲವಾರು ಅವಧಿಗಳ ಎಫ್‌ಡಿ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಹಾಗಾದರೆ ಈ ಬಡ್ಡಿದರ ಎಷ್ಟಿದೆ, ಎಷ್ಟು ಏರಿಕೆಯಾಗಿದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...

 ಅಧಿಕ ಬಡ್ಡಿದರವೆಷ್ಟು ಗೊತ್ತಾ?

ಅಧಿಕ ಬಡ್ಡಿದರವೆಷ್ಟು ಗೊತ್ತಾ?

ಇಂಡಸ್ ಇಂಡ್ ಬ್ಯಾಂಕ್‌ನಲ್ಲಿ ಸಾಮಾನ್ಯ ನಾಗರಿಕರಿಗೆ ಗರಿಷ್ಠ ಬಡ್ಡಿದರವು ಶೇಕಡ 6.50 ಆಗಿದ್ದು, ಹಿರಿಯ ನಾಗರಿಕರಿಗೆ ಗರಿಷ್ಠ ಬಡ್ಡಿದರವು ಶೇಕಡ 7 ಆಗಿದೆ. ಬ್ಯಾಂಕ್ ಮೂರು ವಿಭಾಗದಲ್ಲಿ ಎಫ್‌ಡಿಯನ್ನು ಹೊಂದಿದೆ. ಈ ಪೈಕಿ ಎರಡರಲ್ಲಿ ಮೆಚ್ಯೂರಿಟಿಗೂ ಮುನ್ನ ವಿತ್‌ಡ್ರಾ ಮಾಡುವುದಕ್ಕೆ ಅವಕಾಶವಿದೆ. ಆದರೆ ಒಂದು ಎಫ್‌ಡಿಯಲ್ಲಿ ಮೆಚ್ಯೂರಿಟಿ ಮುನ್ನ ವಿತ್‌ಡ್ರಾ ಮಾಡಲು ಅವಕಾಶವಿಲ್ಲ. 61 ತಿಂಗಳಿಗಿಂತ ಅಧಿಕ ಅವಧಿಯ ಎಫ್‌ಡಿಗೆ ಶೇಕಡ 6ರಷ್ಟು ಬಡ್ಡಿದರ ನೀಡಲಾಗುತ್ತದೆ. ಹಿರಿಯ ನಾಗರಿಕರಾದರೆ 6.50 ಬಡ್ಡಿದರ ನೀಡಲಾಗುತ್ತದೆ. ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿಗೆ ಮೆಚ್ಯೂರಿಟಿ ಮುನ್ನ ವಿತ್‌ಡ್ರಾ ಮಾಡುವ ಅವಕಾಶವಿದೆ. ಬಡ್ಡಿದರ ತ್ರೈಮಾಸಿಕ ಆಧಾರದಲ್ಲಿ ಜಮೆ ಆಗಲಿದೆ.

 ಪರಿಷ್ಕರಣೆ ಬಳಿಕ ಜಾರಿಗೆ ಬರುವ ಬಡ್ಡಿದರ ಇಲ್ಲಿದೆ

ಪರಿಷ್ಕರಣೆ ಬಳಿಕ ಜಾರಿಗೆ ಬರುವ ಬಡ್ಡಿದರ ಇಲ್ಲಿದೆ

7 ದಿನದಿಂದ 14 ದಿನ: ಶೇಕಡ 3.25 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 3.75 ಬಡ್ಡಿದರ
15 ದಿನದಿಂದ 30 ದಿನ: ಶೇಕಡ 3.5 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 4 ಬಡ್ಡಿದರ
31 ದಿನದಿಂದ 45 ದಿನ: ಶೇಕಡ 3 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 4.2 ಬಡ್ಡಿದರ
46 ದಿನದಿಂದ 60 ದಿನ: ಶೇಕಡ 3.8 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 4.3 ಬಡ್ಡಿದರ
60 ದಿನದಿಂದ 90 ದಿನ: ಶೇಕಡ 4 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 4.5 ಬಡ್ಡಿದರ
91 ದಿನದಿಂದ 120 ದಿನ: ಶೇಕಡ 4.4 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 4.9 ಬಡ್ಡಿದರ
121 ದಿನದಿಂದ 180 ದಿನ: ಶೇಕಡ 4.5 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5 ಬಡ್ಡಿದರ
181 ದಿನದಿಂದ 210 ದಿನ: ಶೇಕಡ 4.75 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.25 ಬಡ್ಡಿದರ
211 ದಿನದಿಂದ 269 ದಿನ: ಶೇಕಡ 5 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.5 ಬಡ್ಡಿದರ
270 ದಿನದಿಂದ 354 ದಿನ: ಶೇಕಡ 4.5 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 6 ಬಡ್ಡಿದರ
355 ದಿನದಿಂದ 364 ದಿನ: ಶೇಕಡ 5.5 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 6 ಬಡ್ಡಿದರ
1 ವರ್ಷದಿಂದ 1 ವರ್ಷ 6 ತಿಂಗಳಿಗಿಂತ ಕಡಿಮೆ: ಶೇಕಡ 6 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 6.5 ಬಡ್ಡಿದರ
1 ವರ್ಷ 6 ತಿಂಗಳಿನಿಂದ 1 ವರ್ಷ 7 ತಿಂಗಳಿಗಿಂತ ಕಡಿಮೆ: ಶೇಕಡ 6.25 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 6.75 ಬಡ್ಡಿದರ
1 ವರ್ಷ 7 ತಿಂಗಳಿನಿಂದ 2 ವರ್ಷಕ್ಕಿಂತ ಕಡಿಮೆ: ಶೇಕಡ 6.25 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 6.75 ಬಡ್ಡಿದರ
2 ವರ್ಷದಿಂದ 2 ವರ್ಷ 6 ತಿಂಗಳಿಗಿಂತ ಕಡಿಮೆ: ಶೇಕಡ 6.5 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 7 ಬಡ್ಡಿದರ
2 ವರ್ಷ 6 ತಿಂಗಳಿನಿಂದ 2 ವರ್ಷ 9 ತಿಂಗಳಿಗಿಂತ ಕಡಿಮೆ: ಶೇಕಡ 6.5 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 7 ಬಡ್ಡಿದರ
3 ವರ್ಷದಿಂದ 61 ತಿಂಗಳಿಗಿಂತ ಕಡಿಮೆ: ಶೇಕಡ 6.5 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 7 ಬಡ್ಡಿದರ
61 ತಿಂಗಳಿನಿಂದ ಹೆಚ್ಚಿನ ಅವಧಿ: ಶೇಕಡ 6 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 6.5 ಬಡ್ಡಿದರ
ಇಂಡಸ್ ತೆರಿಗೆ ಉಳಿತಾಯ ಠೇವಣಿ (ಐದು ವರ್ಷ): ಶೇಕಡ 6.5 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 7 ಬಡ್ಡಿದರ

 ಎಫ್‌ಡಿ ಮಾರುವ ಮುನ್ನ ಇಲ್ಲಿ ಓದಿ

ಎಫ್‌ಡಿ ಮಾರುವ ಮುನ್ನ ಇಲ್ಲಿ ಓದಿ

* ಹಣದುಬ್ಬರದ ಕಾರಣದಿಂದಾಗಿ ಉಂಟಾಗುವ ಬದಲಾವಣೆಯ ಸಂದರ್ಭದಲ್ಲಿ ಬಡ್ಡಿದರ ಹಾಗೂ ಠೇವಣಿ ದರವು ಬದಲಾವಣೆ ಆಗಲಿದೆ
* ನೀವು ಈ ಸಂದರ್ಭದಲ್ಲಿ ಮೂರರಿಂದ ಐದು ವರ್ಷದ ಫಿಕ್ಸಿಡ್ ಡೆಪಾಸಿಟ್ ಮೇಲೆ ಹೂಡಿಕೆ ಮಾಡುವುದು ಒಳಿತು. ಏಕೆಂದರೆ ಈ ಸಂದರ್ಭದಲ್ಲಿ ಎಫ್‌ಡಿ ಬಡ್ಡಿದರವು ಅಧಿಕವಾಗಿದೆ. ಬಳಿಕ ಬಡ್ಡಿದರ ಇಳಿಕೆಯಾಗಬಹುದು.

English summary

Indusind Bank Hikes Interest Rates on Fixed Deposits by Highest 7%; Check Rates Here

India's 5th Largest Private Bank IndusInd Bank Hikes fixed deposits Rates, Offers Highest 7%, Check Rates Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X