For Quick Alerts
ALLOW NOTIFICATIONS  
For Daily Alerts

Employee Provident Fund: ಇಪಿಎಫ್ ಈಗಲೂ ಉತ್ತಮ ಆಯ್ಕೆಯೇ?

|

ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು 1977-78 ರ ನಂತರದ ಅತ್ಯಂತ ಕಡಿಮೆ ದರಕ್ಕೆ ಇಳಿಸುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಒ) ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಪ್ರಸ್ತುತ ಇಪಿಎಫ್ ಬಡ್ಡಿದರವು ಶೇಕಡ 8.1ಕ್ಕೆ ಇಳಿಕೆ ಕಂಡಿದೆ. ಈ ನಡುವೆ ಈಗಲೂ ಇಪಿಎಫ್‌ ಉತ್ತಮ ಆಯ್ಕೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ ಇಪಿಎಫ್‌ಗೆ ಪರ್ಯಾಯ ಸುರಕ್ಷಿತ ಹೂಡಿಕೆ ಯಾವುದು ಎಂಬುವುದು ಕೂಡಾ ಪ್ರಶ್ನೆಯಾಗಿದೆ.

 

ಕೆಲವು ಇಪಿಎಫ್‌ ಚಂದಾದಾರರು ಬೇರೆ ಪರ್ಯಾಯ ವ್ಯವಸ್ಥೆಯತ್ತ ವಾಲುತ್ತಿದ್ದಾರೆ. ಆದರೆ ಇಪಿಎಫ್‌ನಂತೆ ಸುರಕ್ಷಿತ ಆಯ್ಕೆ ವಿಚಾರದಲ್ಲಿ ಗೊಂದಲದಲ್ಲಿ ಇದ್ದಾರೆ. ಸಾಮಾನ್ಯವಾಗಿ ತೆರಿಗೆ ಮುಕ್ತ, ಅಪಾಯವಿಲ್ಲ ಕಾರಣದಿಂದಾಗಿ ಇಪಿಎಫ್ ಹೆಚ್ಚು ಉತ್ತಮ ಆಯ್ಕೆ ಎಂದು ತಜ್ಞರು ಹೇಳುತ್ತಾರೆ. ಆದರೆ ನಿವೃತ್ತಿ ಸಂದರ್ಭದಲ್ಲಿ ನಮಗೆ ಇದರಿಂದಾಗುವ ಪ್ರಯೋಜನವೇನು ಎಂಬ ಗೊಂದಲ ಕೂಡಾ ಚಂದಾದಾರರಿಗೆ ಇದೆ.

ಭವಿಷ್ಯ ನಿಧಿ ಬಡ್ಡಿದರ ಶೇ8.1ಕ್ಕೆ ಇಳಿಕೆಗೆ ಸರ್ಕಾರದ ಸಮ್ಮತಿಭವಿಷ್ಯ ನಿಧಿ ಬಡ್ಡಿದರ ಶೇ8.1ಕ್ಕೆ ಇಳಿಕೆಗೆ ಸರ್ಕಾರದ ಸಮ್ಮತಿ

ನಾವು ಪ್ರತಿ ತಿಂಗಳು ಹತ್ತು ಸಾವಿರ ರೂಪಾಯಿ ಇಪಿಎಫ್ ಖಾತೆಗೆ ಹೂಡಿಕೆ ಮಾಡಿದರೆ, ಶೇಕಡ 8ರಷ್ಟು ಬಡ್ಡಿಯಂತೆ ಮೂವತ್ತು ವರ್ಷಕ್ಕೆ 1.49 ಕೋಟಿ ರೂಪಾಯಿ ಆಗುತ್ತದೆ. ಈ ಪೈಕಿ ಸುಮಾರು 39 ಲಕ್ಷ ರೂಪಾಯಿ ನಮಗೆ ಬಡ್ಡಿಯಾಗಿ ಲಭ್ಯವಾಗುತ್ತದೆ. ಹೀಗಿರುವಾಗ ಇಪಿಎಫ್‌ನಲ್ಲಿ ಹೂಡಿಕೆ ಮಾಡುವುದು ನಷ್ಟವೇನಲ್ಲ. ಅಷ್ಟು ಮಾತ್ರವಲ್ಲದೇ ನೀವು ನಿಮಗೆ ಬೇಕಾದ ಸಂದರ್ಭದಲ್ಲಿ ಇಪಿಎಫ್ ಖಾತೆಯಿಂದ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು.

ಬರೀ ಇಪಿಎಫ್ ಹೂಡಿಕೆ ಉತ್ತಮವೇ?

ಬರೀ ಇಪಿಎಫ್ ಹೂಡಿಕೆ ಉತ್ತಮವೇ?

ಇಪಿಎಫ್ ನಮಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ನಮ್ಮ ನಿವೃತ್ತಿ ಸಂದರ್ಭದ ಉಳಿತಾಯವನ್ನು ಈ ಮೂಲಕ ನಾವು ಮಾಡಲು ಸಾಧ್ಯವಾಗುತ್ತದೆ. ಆದರೆ ನಮ್ಮ ನಿವೃತ್ತಿ ಸಂದರ್ಭದಲ್ಲಿ ನಾವು ಗಳಿಸುವ ಹಣವು ನಮ್ಮ ನಿವೃತ್ತಿ ಜೀವನ ಸಾಗಿಸಲು ಸಾಕಾಗದು. ಅದರಲ್ಲೂ ನಾವು ಉದ್ಯೋಗ ಸಂದರ್ಭದಲ್ಲೇ ತುರ್ತು ವೇಳೆಯಲ್ಲಿ ಇಪಿಎಫ್ ಖಾತೆಯಿಂದ ಕೊಂಚ ಹಣವನ್ನು ಹಿಂಪಡೆದಿದ್ದರೆ ಬರೀ ಈ ಹಣದಿಂದ ನಿವೃತ್ತಿ ಜೀವನ ನಡೆಸಲು ಸಾಧ್ಯವಾಗದು. ಆದ್ದರಿಂದಾಗಿ ನಾವು ಇಪಿಎಫ್‌ ಜೊತೆಗೆ ಬೇರೆ ಹೂಡಿಕೆಯನ್ನು ಕೂಡಾ ಮಾಡುವುದು ಉತ್ತಮವಾಗಿದೆ.

ಅಧಿಕ ರಿಸ್ಕ್ ಬೇಡ, ಎಚ್ಚರ

ಅಧಿಕ ರಿಸ್ಕ್ ಬೇಡ, ಎಚ್ಚರ

ಹಲವಾರು ವಿಮೆ, ಪಿಂಚಣಿ ಯೋಜನೆಗಳು ಇದ್ದು, ಇದರಲ್ಲಿ ಹೂಡಿಕೆ ಮಾಡುವ ಮೂಲಕ ನಾವು ಪರ್ಯಾಯ ಉಳಿತಾಯವನ್ನು ಕೂಡಾ ಮಾಡಬಹುದು. ಆದರೆ ಈ ಹೂಡಿಕೆಯ ವೇಳೆಯು ನೀವು ಅಧಿಕ ರಿಸ್ಕ್ ಇರುವೆಡೆ ಹೂಡಿಕೆ ಮಾಡುವುದರಿಂದ ಹಿಂದಕ್ಕೆ ಸರಿಯಿರಿ. ನೀವು ನಿವೃತ್ತಿ ಜೀವನಕ್ಕೆ ಹಣವನ್ನು ಸಂಗ್ರಹ ಮಾಡಿಟ್ಟುಕೊಳ್ಳಲು ಬಯಸುವುದಾದರೆ ಅದಕ್ಕೆ ಎನ್‌ಪಿಎಸ್‌ ಉತ್ತಮ ಆಯ್ಕೆ ಆಗಿದೆ. ಇದಕ್ಕೆ ತೆರಿಗೆ ಪ್ರಯೋಜನ ಕೂಡಾ ಇದೆ.

ಎನ್‌ಪಿಎಸ್ ಹೂಡಿಕೆ ಉತ್ತಮ
 

ಎನ್‌ಪಿಎಸ್ ಹೂಡಿಕೆ ಉತ್ತಮ

ಇನ್ನು ಬೇರೆಡೆ ಹೂಡಿಕೆ ಮಾಡಲು ಬಯಸುವವರು ಈಕ್ವಿಟಿ ಫಂಡ್ ಮೇಲೆ ಹೂಡಿಕೆ ಮಾಡಬಹುದು. ಆದರೆ ಇದರಲ್ಲಿ ರಿಸ್ಕ್ ಅಧಿಕವಾಗಿದೆ. ಅದಕ್ಕಾಗಿ ನೀವು ಫ್ಲೆಕ್ಸಿ ಕ್ಯಾಪ್ ಮೇಲೆ ಹೂಡಿಕೆ ಮಾಡಬಹುದು. ಆದರೆ ಸಾಮಾನ್ಯವಾಗಿ ಇಪಿಎಫ್‌ ಜೊತೆಗೆ ಎನ್‌ಪಿಎಸ್ ಅನ್ನು ಕೂಡಾ ಹೊಂದಿರುವುದು ಉತ್ತಮ ಆಯ್ಕೆ ಎಂದು ತಜ್ಞರು ಹೇಳುತ್ತಾರೆ.

English summary

Is Employee Provident Fund Still a Good Option?

Employee Provident Fund (EPF) : EPF is tax-free, risk-free return and, above all, compounding effect. Read on to know is Employee Provident Fund Still a Good Option? What are the alternative options? Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X