For Quick Alerts
ALLOW NOTIFICATIONS  
For Daily Alerts

ಕೊನೆ ದಿನಕ್ಕೂ ಮುನ್ನ ಐಟಿಆರ್ ಫೈಲ್ ಮಾಡದಿದ್ದರೆ ಏನಾಗುತ್ತದೆ?

|

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಗಡುವು ಹತ್ತಿರವಾಗುತ್ತಿದೆ. ಕೊನೆಯ ದಿನಾಂಕಕ್ಕೆ ಇನ್ನು ಕೆಲವೇ ದಿನಗಳು ಇದೆ. ಐಟಿಆರ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಗಡುವು ವಿಸ್ತರಣೆ ಆಗ್ರಹ ಕೇಳಿ ಬಂದಿದೆ. ಆದರೆ ಸರ್ಕಾರ ಮಾತ್ರ ಐಟಿಆರ್ ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ನಡುವೆ ನಾವು ಕೊನೆ ದಿನಾಂಕಕ್ಕೂ ಮುನ್ನ ಐಟಿಆರ್ ಫೈಲ್ ಮಾಡದಿದ್ದರೆ ಏನಾಗುತ್ತದೆ ಎಂಬ ಪ್ರಶ್ನೆ ಹಲವಾರು ಮಂದಿಗೆ ಕಾಡುತ್ತಿದೆ. ಈ ಬಗ್ಗೆ ನಾವು ಇಲ್ಲಿ ವಿವರ ನೀಡಿದ್ದೇವೆ.

 

ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಿಂದಾಗಿ ಕಳೆದ ಎರಡು ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಕೊನೆಯ ದಿನಾಂಕವನ್ನು ಸರ್ಕಾರ ವಿಸ್ತರಣೆ ಮಾಡಿತ್ತು. ಆದರೆ ಈ ಬಾರಿ ವಿಸ್ತರಣೆ ಮಾಡುವುದಿಲ್ಲ ಎಂದು ಸರ್ಕಾರ ಈಗಾಗಲೇ ಹೇಳಿಕೊಂಡಿದೆ. ಈ ನಡುವೆ ಹಲವಾರು ತಾಂತ್ರಿಕ ಸಮಸ್ಯೆಗಳು ಇರುವ ಕಾರಣದಿಂದಾಗಿ ಗಡುವು ವಿಸ್ತರಣೆ ಮಾಡಬೇಕು ಎಂಬ ಒತ್ತಾಯವನ್ನು ನೆಟ್ಟಿಗರು ಮಾಡುತ್ತಿದ್ದಾರೆ.

ಐಟಿಆರ್ ಗಡುವು ವಿಸ್ತರಣೆ ಮಾಡಿ: ಟ್ವಿಟ್ಟರ್‌ನಲ್ಲಿ ಟ್ರೆಂಡ್

ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿ, "ಆತ್ಮೀಯ ತೆರಿಗೆದಾರರೇ ನೀವು ಐಟಿಆರ್ ಅನ್ನು ಫೈಲ್ ಮಾಡಿದ್ದರೆ ಕೂಡಲೇ ಫೈಲ್ ಮಾಡಿಬಿಡಿ. ಹಣಕಾಸು ವರ್ಷ 2022-23ರ ಆದಾಐ ತೆರಿಗೆ ರಿಟರ್ನ್ ಫೈಲಿಂಗ್ ಕೊನೆಯ ದಿನಾಂಕ 2022ರ ಜುಲೈ 31 ಆಗಿದೆ," ಎಂದು ತಿಳಿಸಿದೆ. ಇನ್ನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್, "ಜುಲೈ 20ರವರೆಗೆ 2021-22ರ ಹಣಕಾಸು ವರ್ಷದ 2.3 ಕೋಟಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲಾಗಿದೆ. ಸಂಖ್ಯೆಯು ದ್ವಿಗುಣವಾಗುತ್ತಿದೆ," ಎಂದು ತಿಳಿಸಿದ್ದಾರೆ.

ಕೊನೆ ದಿನಕ್ಕೂ ಮುನ್ನ ಐಟಿಆರ್ ಫೈಲ್ ಮಾಡದಿದ್ದರೆ ಏನಾಗುತ್ತದೆ?

"ಪ್ರತಿ ಬಾರಿಯೂ ಗಡುವು ವಿಸ್ತರಣೆ ಮಾಡಲಾಗುತ್ತದೆ ಎಂಬ ನಿರ್ಧಾರಕ್ಕೆ ಜನರು ಬಂದಿದ್ದಾರೆ. ಆದ್ದರಿಂದಾಗಿ ಆರಂಭದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯನ್ನು ನಿಧಾನವಾಗಿ ಮಾಡಿದ್ದಾರೆ. ಆದರೆ ಈಗ ಐಟಿಆರ್ ಸಲ್ಲಿಕೆ ಹೆಚ್ಚಳವಾಗುತ್ತಿದೆ. ಪ್ರತಿದಿನ ನಮಗೆ 15ರಿಂದ 18 ಲಕ್ಷ ಐಟಿಆರ್ ಸಲ್ಲಿಕೆಯಾಗುತ್ತಿದೆ. ಇದು ಇನ್ನೂ ಕೂಡಾ ಅಧಿಕವಾಗಬಹುದು. ಪ್ರತಿದಿನ 25ರಿಂದ 30 ಲಕ್ಷ ರಿಟರ್ನ್ ಸಲ್ಲಿಕೆ ಕೂಡಾ ಆಗುವ ಸಾಧ್ಯತೆ ಇದೆ," ಎಂದು ವಿವರಿಸಿದ್ದಾರೆ.

 

ಐಟಿಆರ್ ಎಂಬುವುದು ಒಬ್ಬ ವ್ಯಕ್ತಿ ತನ್ನ ಆದಾಯ, ತೆರಿಗೆ ಬಗ್ಗೆ ನೀಡುವ ಸಂಪೂರ್ಣ ಮಾಹಿತಿಯಾಗಿದೆ. ಆದರೆ ನೀವು ಐಟಿಆರ್ ಅನ್ನು ಕೊನೆಯ ದಿನಾಂಕಕ್ಕೂ ಮುನ್ನ ಫೈಲ್ ಮಾಡದಿದ್ದರೆ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?. ಈ ಬಗ್ಗೆ ತಿಳಿಯೋಣ ಮುಂದೆ ಓದಿ....

ಆದಾಯ ತೆರಿಗೆ ರಿಫಂಡ್ ಎಂದರೇನು, ಹೇಗೆ ಪಡೆಯುವುದು, ಅರ್ಹತೆ ಏನು? ಇಲ್ಲಿದೆ ಮಾಹಿತಿ

ಕೊನೆಯ ದಿನಾಂಕಕ್ಕೂ ಮುನ್ನ ಐಟಿಆರ್ ಫೈಲ್ ಮಾಡದಿದ್ದರೆ..?

ಒಂದು ಹಣಕಾಸು ವರ್ಷದಲ್ಲಿ 2.5 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ನೀವು ಕೊನೆಯ ದಿನಾಂಕಕ್ಕೂ ಮುನ್ನ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಿಲ್ಲ ಎಂದಾದರೆ ಭಯ ಪಡಬೇಕಾಗಿಲ್ಲ. ನೀವು ಡಿಸೆಂಬರ್ 31ರವರೆಗೂ ರಿಟರ್ನ್ ಅನ್ನು ಸಲ್ಲಿಕೆ ಮಾಡಬಹುದು. ಆದರೆ ನೀವು ಅದಕ್ಕಾಗಿ ದಂಡ ಪಾವತಿ ಮಾಡಬೇಕಾಗುತ್ತದೆ.

5 ಲಕ್ಷಕ್ಕಿಂತ ಅಧಿಕ ಆದಾಯಕ್ಕೆ ನೀವು ಐದು ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದರೆ ನೀವು ಒಂದು ಸಾವಿರ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಬಡ್ಡಿಯನ್ನು ಕೂಡಾ ಪಾವತಿ ಮಾಡಬೇಕಾಗುತ್ತದೆ. ಕೊನೆಯ ದಿನಾಂಕಕ್ಕೂ ಮುನ್ನ ಐಟಿಆರ್ ಫೈಲ್ ಮಾಡದಿದ್ದರೆ ಡಿಸೆಂಬರ್ 31ರ ಒಳಗೆ ಐಟಿಆರ್ ಸಲ್ಲಿಕೆ ಮಾಡಿ. ಆದರೆ ಬಳಿಕ ಫೈಲ್ ಮಾಡಲು ಸಾಧ್ಯವಾಗದು.

English summary

ITR filing deadline: What Happens if You Don't File Your Income Tax Returns by 31 July?

ITR filing deadline: What Happens if You Don't File Your Income Tax Returns by 31 July?. Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X