For Quick Alerts
ALLOW NOTIFICATIONS  
For Daily Alerts

2021-22 ಆರ್ಥಿಕ ವರ್ಷದಲ್ಲಿ 2.38 ಕೋಟಿ ಐಟಿ ರಿಟರ್ನ್ಸ್ ಸಲ್ಲಿಕೆ

|

ನವದೆಹಲಿ, ನವೆಂಬರ್ 10: ಆದಾಯ ತೆರಿಗೆ ಇಲಾಖೆಯು 2021-22ರ ಆರ್ಥಿಕ ವರ್ಷದಲ್ಲಿ ಒಟ್ಟು ಪಾವತಿ ಮಾಡಲಾದ ಆದಾಯ ತೆರಿಗೆ ಮೊತ್ತವನ್ನು ಪ್ರಕಟಿಸಿದೆ. ಪ್ರಸಕ್ತ ಆರ್ಥಿಕ ವರ್ಷ (assessment year 2021-22)ದಲ್ಲಿ ಒಟ್ಟಾರೆ, 2.38 ಕೋಟಿ ಐಟಿ ರಿಟರ್ನ್ಸ್ ಫೈಲ್ ಆಗಿದೆ. ಈ ಪೈಕಿ 1.68 ಕೋಟಿ ಆದಾಯ ತೆರಿಗೆ ಪಾವತಿ ಪ್ರಕ್ರಿಯೆ ಪೂರ್ಣಗೊಂಡಿದೆ ಹಾಗೂ 64 ಲಕ್ಷ ಪಾವತಿಗೆ ರೀಫಂಡ್ ನೀಡಲಾಗಿದೆ.

ಸುಮಾರು 2.38 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದ್ದರೂ ಅನೇಕ ಮಂದಿ ಇನ್ನೂ ವೈಯಕ್ತಿಕ ಐಟಿ ರಿಟರ್ನ್ಸ್ ಮಾಡುವಲ್ಲಿ ಹಿಂದೆ ಉಳಿದಿದ್ದಾರೆ, ಇ ಫೈಲಿಂಗ್ ಪೋರ್ಟಲ್ ಮೂಲಕ ತೆರಿಗೆ ಪಾವತಿಸಲು ಇಲಾಖೆ ಸೂಚಿಸಿದೆ.

ಕೋವಿಡ್ 19 ಸಾಂಕ್ರಾಮಿಕದ ದೆಸೆಯಿಂದ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಜುಲೈ 31,2021ರ ಬದಲಿಗೆ ಸೆಪ್ಟೆಂಬರ್ 30, 2021 ರ ತನಕ ಐಟಿ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ತೆರಿಗೆದಾರರಿಗೆ 2020-21ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕವನ್ನು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 139 (1) ರ ನಿಬಂಧನೆಗಳ ಪ್ರಕಾರ ಈ ಸೂಚನೆ ನೀಡಲಾಗಿತ್ತು.

2021-22 ಆರ್ಥಿಕ ವರ್ಷದಲ್ಲಿ 2.38 ಕೋಟಿ ಐಟಿ ರಿಟರ್ನ್ಸ್ ಸಲ್ಲಿಕೆ

ಮೂಲ ತೆರಿಗೆ ಪಾವತಿ ಮಿತಿ ಮೂಲ ತೆರಿಗೆ ಪಾವತಿ ಮಿತಿ: 5 ಲಕ್ಷ ರು ತನಕ ತೆರಿಗೆ ಪಾವತಿಸುವಂತಿಲ್ಲ, ಇನ್ನೊಂದಿಷ್ಟು ಉಳಿತಾಯ ತೋರಿಸಿದರೆ 9 ಲಕ್ಷ ರು ತನಕ ತೆರಿಗೆ ಕಟ್ಟದೆ ಇರಬಹುದು ಎಂದು ತಜ್ಞರು ತಿಳಿಸಿದ್ದಾರೆ. ಆದರೆ, ತೆರಿಗೆ ಪಾವತಿ ಮೂಲ ಮಿತಿಯಾದ 2.5 ಲಕ್ಷ ರುಗಳನ್ನು 2014ರಿಂದ ಇಲ್ಲಿ ತನಕ ಬದಲಾಯಿಸಿಲ್ಲ. ಪ್ರಸ್ತುತ ಬಜೆಟ್ ನಲ್ಲಿ ಈ ಮಿತಿಯನ್ನು 3 ಲಕ್ಷ ರುಗಳಿಗೆ ಏರಿಸಲು ಬೇಡಿಕೆ ಬಂದಿತ್ತು. ಆದರೆ, ಈಗಾಗಲೇ ವೈಯಕ್ತಿಕ ಆದಾಯ 5 ಲಕ್ಷರು ತನಕ ಹೊಂದಿರುವವರು ಸೆಕ್ಷನ್ 87ಎ ಅಡಿಯಲ್ಲಿ ಪೂರ್ತಿ ತೆರಿಗೆ ರಿಬೇಟ್ ಪಡೆಯಬಹುದಾಗಿದೆ. ಹೀಗಾಗಿ, ಮೂಲ ಮಿತಿಯನ್ನು ಬದಲಾಯಿಸಿಲ್ಲ.

ಆದಾಯ ತೆರಿಗೆ ಪಾವತಿ ಮಾಡಲಿ ಆಧಾರ್, ಪ್ಯಾನ್ ಕಾರ್ಡ್ ಎರಡರಲ್ಲಿ ಒಂದು ಹೊಂದಿದ್ದರೆ ಸಾಕು, ಎರಡು ಕಡ್ಡಾಯ ಎಂಬ ಸಡಿಲಗೊಳಿಸಲಾಗಿದೆ.ಒಂದು ಬ್ಯಾಂಕಿನ ಒಂದು ಖಾತೆಯಿಂದ ವಾರ್ಷಿಕ 1 ಕೋಟಿ ರು ವಿಥ್ ಡ್ರಾ ಮಾಡಿದರೆ ಶೇ 2ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ.

ಹೊಸ ವೆಬ್‌ತಾಣ: ಐಟಿಆರ್ ಗೊಂದಲಗಳಿಗೆ ತಕ್ಷಣವೇ ಪರಿಹಾರ, ರೀಫಂಡ್, ತೆರಿಗೆದಾರರ ಎಲ್ಲಾ ಸಂವಹನಗಳು ಮತ್ತು ಅಪ್ಲೋಡ್‌ಗಳು ಅಥವಾ ಬಾಕಿ ಇರುವ ಕ್ರಿಯೆಗಳನ್ನು ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಹೊಸ ಪೋರ್ಟಲ್‌ನಲ್ಲಿ ಹೊಸ ಆನ್ಲೈನ್ ತೆರಿಗೆ ಪಾವತಿ ವ್ಯವಸ್ಥೆಯನ್ನು ತರುವಾಯ ನೆಟ್‌ಬ್ಯಾಂಕಿಂಗ್, ಯುಪಿಐ, ಕ್ರೆಡಿಟ್ ಕಾರ್ಡ್ ಮತ್ತು ಆರ್‌ಟಿಜಿಎಸ್ / ಎನ್ಇಎಫ್‌ಬಿ ಬಳಸಿ ಯಾವುದೇ ಬ್ಯಾಂಕಿನಲ್ಲಿ ತೆರಿಗೆ ಪಾವತಿದಾರರ ಯಾವುದೇ ಖಾತೆಯಿಂದ ತೆರಿಗೆಗಳನ್ನು ಸುಲಭವಾಗಿ ಪಾವತಿಸಲು ಸಕ್ರಿಯಗೊಳಿಸಲಾಗುತ್ತದೆ.

ತೆರಿಗೆದಾರರು ತಮ್ಮ ಐಟಿಆರ್ ಸಲ್ಲಿಕೆ ಪೂರ್ವದಲ್ಲಿ ಭರ್ತಿ ಮಾಡಲು ಬಳಸಲಾಗುವ ಐಟಿಆರ್ ನಲ್ಲಿ ವೇತನ, ,ಗೃಹ ಆಸ್ತಿ, ವ್ಯವಹಾರ / ವೃತ್ತಿ ಸೇರಿದಂತೆ ಆದಾಯದ ಕೆಲವು ವಿವರಗಳನ್ನು ಒದಗಿಸಲು ತಮ್ಮ ಪ್ರೊಫೈಲ್ ಅನ್ನು ಪೂರ್ವಭಾವಿಯಾಗಿ ನವೀಕರಿಸಲು ಸಾಧ್ಯವಾಗುತ್ತದೆ. ಟಿಡಿಎಸ್ ಮತ್ತು ಎಸ್‌.ಎಫ್‌.ಟಿ ಲೆಕ್ಕಾಚಾರದ ದಾಖಲೆಗಳನ್ನು ಅಪ್‌ ಲೋಡ್ (ಕೊನೆಯ ದಿನಾಂಕ ಜೂನ್ 30, 2021) ಮಾಡಿದ ನಂತರ ವೇತನ ಆದಾಯ, ಬಡ್ಡಿ, ಲಾಭಾಂಶ ಮತ್ತು ಬಂಡವಾಳ ಆದಾಯ (ಕ್ಯಾಪಿಟಲ್ ಗೈನ್)ಗಳೊಂದಿಗೆ ಪೂರ್ವ -ಭರ್ತಿಯ ವಿವರವಾದ ಸಕ್ರಿಯಗೊಳಿಸುವಿಕೆ ಲಭ್ಯವಿರುತ್ತದೆ.

English summary

ITR Filing: Over 2.38 crore income tax returns filed for AY 2021-22, says I-T Dept

The Income Tax Department on Tuesday that more than 2.38 crore taxpayers have filed their income tax returns for the financial year 2020-21 (assessment year 2021-22).
Story first published: Wednesday, November 10, 2021, 7:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X