For Quick Alerts
ALLOW NOTIFICATIONS  
For Daily Alerts

ಈ ಕಾರ್ಯ ಮಾಡದಿದ್ದರೆ 2022-23ರ ಐಟಿಆರ್ ಅಮಾನ್ಯ!

|

ಈಗಾಗಲೇ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಕೊನೆಯ ದಿನಾಂಕವು ಮುಗಿದಾಗಿದೆ. ಕೊನೆಯ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಐಟಿಆರ್ ಸಲ್ಲಿಕೆ ಮಾಡಲಾಗಿದ್ದರೂ ಇನ್ನೂ ಕೂಡಾ ಹಲವಾರು ಮಂದಿ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಿಲ್ಲ. ಇನ್ನು ಡಿಸೆಂಬರ್ ಕೊನೆಯ ಒಳಗಾಗಿ ದಂಡವನ್ನು ಪಾವತಿ ಮಾಡಿ ಐಟಿಆರ್ ಸಲ್ಲಿಕೆ ಮಾಡಬೇಕಾಗುತ್ತದೆ. ಈ ನಡುವೆ ನೀವು ಈ ಒಂದು ಕಾರ್ಯವನ್ನು ಮಾಡದಿದ್ದರೆ ಹಣಕಾಸು ವರ್ಷ 2022-23ರ ನಿಮ್ಮ ಆದಾಯ ತೆರಿಗೆ ರಿಟರ್ನ್ ಅಮಾನ್ಯವಾಗಲಿದೆ.

ಜುಲೈ 31ರವರೆಗೆ 1.8 ಕೋಟಿಗೂ ಅಧಿಕ ಆದಾಯ ತೆರಿಗೆ ರಿಟರ್ನ್ ಅನ್ನು ವೆರಿಫೈ ಮಾಡಲಾಗಿಲ್ಲ. ನಾವು ಐಟಿಆರ್ ಫೈಲಿಂಗ್ ಪ್ರಕ್ರಿಯೆಯನ್ನು ಪೂರ್ಣ ಮಾಡಬೇಕಾದರೆ ಐಟಿಆರ್ ಅನ್ನು ವೇರಿಫೈ ಮಾಡುವುದು ಮುಖ್ಯವಾಗಿದೆ. ಐಟಿಆರ್ ಅನ್ನು ತೆರಿಗೆದಾರರು ವೆರಿಫೈ ಮಾಡಿದ ಬಳಿಕವೇ ಐಟಿಆರ್‌ ಅನ್ನು ಆದಾಯ ತೆರಿಗೆ ಇಲಾಖೆಯು ಪ್ರಕ್ರಿಯೆ ಮಾಡುತ್ತದೆ. ಪರಿಶೀಲನೆ ಮಾಡಿ ಯಾವುದೇ ರಿಫಂಡ್ ಇದ್ದರೆ ಮಾಡಲಾಗುತ್ತದೆ ಅಥವಾ ತೆರಿಗೆ ಬಾಕಿಯ ನೋಟಿಸ್ ಅನ್ನು ಸಲ್ಲಿಕೆ ಮಾಡಲಾಗುತ್ತದೆ.

ಕೊನೆ ದಿನಕ್ಕೂ ಮುನ್ನ ಐಟಿಆರ್ ಫೈಲ್ ಮಾಡದಿದ್ದರೆ ಏನಾಗುತ್ತದೆ?ಕೊನೆ ದಿನಕ್ಕೂ ಮುನ್ನ ಐಟಿಆರ್ ಫೈಲ್ ಮಾಡದಿದ್ದರೆ ಏನಾಗುತ್ತದೆ?

ಜುಲೈ 31 ಐಟಿಆರ್ ಫೈಲಿಂಗ್‌ಗೆ ಕೊನೆಯ ದಿನಾಂಕವಾಗಿತ್ತು. ಈ ದಿನದವರೆಗೆ ಫೈಲ್ ಮಾಡಲಾದ 5.82 ಕೋಟಿ ಆದಾಯ ತೆರಿಗೆ ರಿಟರ್ನ್ ಪೈಕಿ 4.02 ಕೋಟಿ ಐಟಿಆರ್ ಅನ್ನು ಮಾತ್ರ ವೆರಿಫೈ ಮಾಡಲಾಗಿದೆ. ಈ ಪೈಕಿ ಆದಾಯ ತೆರಿಗೆ ಇಲಾಖೆಯು 3.01 ಕೋಟಿ ವೆರಿಫೈ ಮಾಡಲಾದ ಐಟಿಆರ್ ಅನ್ನು ಪ್ರಕ್ರಿಯೆ ಮಾಡಿದೆ. ಒಂದು ವೇಳೆ ನೀವು ನಿಮ್ಮ ಐಟಿಆರ್ ಅನ್ನು ವೆರಿಫೈ ಮಾಡದಿದ್ದರೆ ನಿಮ್ಮ ಐಟಿಆರ್ ಅಮಾನ್ಯವಾಗಲಿದೆ. ವೆರಿಫೈ ಮಾಡುವುದು ಹೇಗೆ, ಅದು ಯಾಕೆ ಅಷ್ಟು ಮುಖ್ಯ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಐಟಿಆರ್ ವೆರಿಫೀಕೇಶನ್ ಟೈಮ್‌ಲೈನ್

ಐಟಿಆರ್ ವೆರಿಫೀಕೇಶನ್ ಟೈಮ್‌ಲೈನ್

ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಆದಾಯ ತೆರಿಗೆ ಇಲಾಖೆಯು ಇ ವೆರಿಫೀಕೇಶನ್ ದಿನವನ್ನು ಕಡಿತ ಮಾಡಿದೆ. ಜುಲೈ 29ರಂದು ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ಇ ವೆರಿಫಿಕೇಶನ್ ಅಥವಾ ಐಟಿಆರ್‌-ವಿ ಸಲ್ಲಿಕೆಯನ್ನು ನಾವು 30 ದಿನದ ಒಳಗೆ ಮಾಡಬೇಕಾಗಿದೆ. ಅಂದರೆ ತೆರಿಗೆದಾರರು 30 ದಿನದ ಒಳಗಾಗಿ ತಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ವೆರಿಫೈ ಮಾಡಬೇಕಾಗುತ್ತದೆ. ಈ ಹಿಂದೆ ಇ ವೆರಿಫಿಕೇಶನ್‌ಗೆ ಸಮಯಮಿತಿ 120 ದಿನಗಳು ಆಗಿತ್ತು. 2022ರ ಆಗಸ್ಟ್ 1ರಿಂದ ಹೊಸ ನಿಯಮ ಜಾರಿಗೆ ಬಂದಿದೆ. ಸ್ಪೀಡ್ ಪೋಸ್ಟ್‌ನಲ್ಲಿ ಐಟಿಆರ್‌ವಿ ಅನ್ನು ಸಲ್ಲಿಕೆ ಮಾಡಿದ್ದರೆ ಸ್ಲೀಡ್ ಪೋಸ್ಟ್ ಅನ್ನು ಕಳುಹಿಸಿದ ದಿನಾಂಕವನ್ನು ಪರಿಗಣಿಸಲಾಗುತ್ತದೆ.

ಆದಾಯ ತೆರಿಗೆ ರಿಫಂಡ್ ಎಂದರೇನು, ಹೇಗೆ ಪಡೆಯುವುದು, ಅರ್ಹತೆ ಏನು? ಇಲ್ಲಿದೆ ಮಾಹಿತಿಆದಾಯ ತೆರಿಗೆ ರಿಫಂಡ್ ಎಂದರೇನು, ಹೇಗೆ ಪಡೆಯುವುದು, ಅರ್ಹತೆ ಏನು? ಇಲ್ಲಿದೆ ಮಾಹಿತಿ

 ಐಟಿಆರ್ ವೆರಿಫಿಕೇಶನ್ ಯಾಕೆ ಮುಖ್ಯ

ಐಟಿಆರ್ ವೆರಿಫಿಕೇಶನ್ ಯಾಕೆ ಮುಖ್ಯ

ಆದಾಯ ತೆರಿಗೆ ರಿಟರ್ನ್ ಪ್ರಕ್ರಿಯೆಯನ್ನು ಸಂಪೂರ್ಣ ಮಾಡಲು ಐಟಿಆರ್ ವೆರಿಫಿಕೇಶನ್ ಅತೀ ಮುಖ್ಯವಾಗಿದೆ. ಒಂದು ವೇಳೆ ನೀವು ಐಟಿಆರ್ ಅನ್ನು ನಿಗದಿತ ಸಮಯದೊಳಗೆ ವೆರಿಫೈ ಮಾಡದಿದ್ದರೆ, ನೀವು ಫೈಲ್ ಮಾಡಿದ ಆದಾಯ ತೆರಿಗೆ ರಿಟರ್ನ್ ಅನ್ನು ಅಮಾನ್ಯ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಲು ಸಾಧ್ಯವಾಗದಿದ್ದರೆ, ನೀವು ಆ ಸಂದರ್ಭದಲ್ಲಿ ವಿನಂತಿ ಪತ್ರವನ್ನು ಸಲ್ಲಿಕೆ ಮಾಡಬಹುದು. ಆದರೆ ಅದರಲ್ಲಿ ನೀವು ಐಟಿಆರ್ ಫೈಲಿಂಗ್ ವೆರಿಫಿಕೇಶನ್ ಯಾಕೆ ತಡ ಮಾಡಿದ್ದೀರಿ ಎಂದು ಉಲ್ಲೇಖ ಮಾಡಬೇಕಾಗುತ್ತದೆ.

 ಐಟಿಆರ್ ಅನ್ನು ವೆರಿಫೈ ಮಾಡುವುದು ಹೇಗೆ?

ಐಟಿಆರ್ ಅನ್ನು ವೆರಿಫೈ ಮಾಡುವುದು ಹೇಗೆ?

ಒಟಿಪಿ ಮೂಲಕ ಐಟಿಆರ್ ಅನ್ನು ಸುಲಭವಾಗಿ ವೆರಿಫೈ ಮಾಡಿಕೊಳ್ಳಬಹುದು. ನಿಮ್ಮ ಆಧಾರ್ ಹಾಗೂ ನೆಟ್‌ ಬ್ಯಾಂಕಿಂಗ್‌ಗೆ ಲಿಂಕ್ ಆದ ಮೊಬೈಲ್‌ಗೆ ಬರುವ ಒಟಿಪಿಯನ್ನು ಹಾಕುವ ಮೂಲಕ ನೀವು ಆದಾಯ ತೆರಿಗೆ ರಿಟರ್ನ್ ಅನ್ನು ವೆರಿಫೈ ಮಾಡಿಕೊಳ್ಳಬಹುದು. ಆಫ್‌ಲೈನ್‌ನಲ್ಲಿ ಕೂಡಾ ನೀವು ವೆರಿಫೈ ಮಾಡಿಕೊಳ್ಳಬಹುದು. ಆಧಾರ್ ಒಟಿಪಿ ಮೂಲಕ ಇ ವೆರಿಫಿಕೇಶನ್ ಮಾಡಲು ಇಫೈಲಿಂಗ್ ಖಾತೆಗೆ ಲಾಗಿನ್ ಆಗಬೇಕಾಗುತ್ತದೆ. e-Verify Return ಮೇಲೆ ಕ್ಲಿಕ್ ಮಾಡಿ, ಇಲ್ಲಿ ನೀವು ಇ ವೆರಿಫಿಕೇಶನ್ ಮಾಡುವ ವಿಧಾನ ಆಯ್ಕೆ ಮಾಡಿಕೊಳ್ಳಬಹುದು. ಪ್ರಕ್ರಿಯೆಯನ್ನು ಪೂರ್ಣ ಮಾಡಿಕೊಳ್ಳಬಹುದು. ಆಫ್‌ಲೈನ್‌ನಲ್ಲಿ ವೆರಿಫೀಕೇಶನ್ ಮಾಡಬೇಕಾದರೆ ನೀವು ಐಟಿಆರ್ ವೆರಿಫಿಕೇಶನ್ ಫಾರ್ಮ್ ಅನ್ನು ಪ್ರಿಂಟ್ ಮಾಡಬೇಕಾಗುತ್ತದೆ. ಅದರಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ Centralised Processing Centre, Income Tax Department, Bengaluru (560500) ಗೆ ಸ್ಪೀಡ್ ಪೋಸ್ಟ್ ಮಾಡಬಹುದು.

English summary

ITR for AY 2022-23 Would Become Invalid if You Don’t verify ITR

ITR filing: Income Tax Return for AY 2022-23 would become invalid if you don’t do this soon. read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X