For Quick Alerts
ALLOW NOTIFICATIONS  
For Daily Alerts

ಐಷಾರಾಮಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಮುನ್ನ ಈ ಅಂಶ ತಿಳಿದಿರಿ..

|

ರಿಯಲ್ ಎಸ್ಟೇಟ್ ಹೂಡಿಕೆಯು ದೀರ್ಘಾವಧಿಯ ಹೂಡಿಕೆ. ಅಷ್ಟು ಮಾತ್ರವಲ್ಲದೇ ಭಾರೀ ಅಪಾಯಕಾರಿ ಹೂಡಿಕೆಯಾಗಿದೆ. ಹಲವಾರು ಅಪಾಯಗಳನ್ನು ಒಳಗೊಂಡಿರುವಾಗ ಈ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ.

ಹೂಡಿಕೆ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಎಲ್ಲಾ ಅಂಶಗಳನ್ನು ಎಚ್ಚರಿಕೆಯಿಂದ ಯೋಚಿಸಬೇಕಾಗಿದೆ. ಹೂಡಿಕೆ ಮಾಡಿದ ಬಳಿಕ ನಷ್ಟಕ್ಕೆ ಒಳಗಾಗಿ ಚಿಂತೆ ಮಾಡುವುದಕ್ಕಿಂತ ಹೂಡಿಕೆ ಮಾಡುವ ಮೊದಲೇ ಎಲ್ಲಾ ಅಂಶಗಳನ್ನು ಎಚ್ಚರಿಕೆಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು.

ಬಾಡಿಗೆ ಮನೆಗೆ ಹೋಗುವ ಮುನ್ನ, Rent Agreement ಬಗ್ಗೆ ಅರಿವಿರಲಿಬಾಡಿಗೆ ಮನೆಗೆ ಹೋಗುವ ಮುನ್ನ, Rent Agreement ಬಗ್ಗೆ ಅರಿವಿರಲಿ

ಉದ್ಯಮ ಮತ್ತು ಸಂಬಂಧಿತ ನಿಯಮಗಳು ಮತ್ತು ನಿಬಂಧನೆಗಳ ಜ್ಞಾನವಿಲ್ಲದ ಹೂಡಿಕೆದಾರರು ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಬಹುದು. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರೀ ಸಂಕಷ್ಟಕ್ಕೆ ಒಳಗಾದ ಬಳಿಕ ಈಗ ಚೇತರಿಕೆ ವೇಳೆ ಹಲವಾರು ಮಂದಿ ಆಸ್ತಿ ಖರೀದಿಗೆ ಮುಂದಾಗಿದ್ದಾರೆ. ಹಲವಾರು ಮಂದಿ ರಿಯಲ್ ಎಸ್ಟೇಟ್‌ ಮೇಲೆ ಹೂಡಿಕೆ ಮಾಡಲು ಮುಂದಾಗಿದ್ದಾರೆ. ನೀವು ಐಷಾರಾಮಿ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡುವ ಮುನ್ನ ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಮುಂದೆ ಓದಿ...

 ಆರ್‌ಇಆರ್‌ಎ ನೋಂದಣಿ

ಆರ್‌ಇಆರ್‌ಎ ನೋಂದಣಿ

RERA ಎಂಬುದು ರಿಯಲ್ ಎಸ್ಟೇಟ್ ವಹಿವಾಟುಗಳನ್ನು ಪಾರದರ್ಶಕವಾಗಿಸುವ ಕಾನೂನು. ವಲಯದಲ್ಲಿ ಅಕ್ರಮಗಳನ್ನು ನಿಗ್ರಹಿಸಲು ಮತ್ತು ಖರೀದಿದಾರರಿಗೆ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು ರೂಪಿಸಲಾಗಿದೆ. ಯೋಜನೆಯು RERA ನಲ್ಲಿ ನೋಂದಾಯಿಸಲ್ಪಟ್ಟಿದೆಯೇ ಅಥವಾ ಇಲ್ಲವೇ ಎಂಬುದನ್ನು ಹೂಡಿಕೆದಾರರು ಪರಿಶೀಲಿಸಬೇಕು. ಇದನ್ನು ನೀವು ಪುರಸಭೆಯ ಅಧಿಕಾರಿಗಳ ಮೂಲಕ ಆನ್‌ಲೈನ್‌ನಲ್ಲಿ ದೃಢೀಕರಿಸಬಹುದು.

 ಸ್ಥಳ ಪರಿಶೀಲಿಸಿ

ಸ್ಥಳ ಪರಿಶೀಲಿಸಿ

ಆಸ್ತಿಯಲ್ಲಿ ಹೂಡಿಕೆ ಮಾಡುವ ಮೊದಲು ನೀವು ಪರಿಗಣಿಸಬೇಕಾದ ಪ್ರಮುಖ ಅಂಶವೆಂದರೆ ಅದು ಸ್ಥಳದ ಬಗ್ಗೆ ಪರಿಶೀಲನೆ ಮಾಡುವುದು. ರಸ್ತೆಗಳು, ಸಾರ್ವಜನಿಕ ಸಾರಿಗೆ, ಆರೋಗ್ಯ ಸೌಲಭ್ಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಪ್ರಮುಖ ಮೂಲಸೌಕರ್ಯಗಳನ್ನು ನೀವು ಪಡೆಯಬೇಕಾದರೆ ರಿಯಲ್ ಎಸ್ಟೇಟ್ ಇರುವ ಸ್ಥಳ ಯಾವುದು ಎಂಬುವುದು ಮುಖ್ಯವಾಗಿರುತ್ತದೆ. ಎಲ್ಲ ಸೌಕರ್ಯಗಳು ಇದೆಯೇ ಎಂದು ನೋಡಿಕೊಂಡು ನೀವು ಹೂಡಿಕೆ ಮಾಡಬೇಕು. ಸೈಟ್‌ನ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಹೂಡಿಕೆದಾರರು ಆಸ್ತಿಯನ್ನು ಸಂಪೂರ್ಣವಾಗಿ ವಿಶ್ಲೇಷಿಸಬೇಕು. ಸೈಟ್‌ನಲ್ಲಿರುವ ವ್ಯವಸ್ಥೆಯನ್ನು ಕೂಡಾ ಪರಿಶೀಲನೆ ಮಾಡಿಕೊಳ್ಳಬೇಕು.

 ಭದ್ರತೆ ಮತ್ತು ಸೌಕರ್ಯಗಳು

ಭದ್ರತೆ ಮತ್ತು ಸೌಕರ್ಯಗಳು

  ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಭದ್ರತೆಯು ಎಲ್ಲರಿಗೂ ಪ್ರಾಥಮಿಕ ಪ್ರಮುಖ ಅಂಶವಾಗಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಈ ವೈರಸ್, ಸಾಂಕ್ರಾಮಿಕ ರೋಗಗಳಿಂದ ದೂರ ಉಳಿಯುವುದು ಮುಖ್ಯವಾಗಿದೆ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಗಾಗಿ ನೀವು ಚಿಂತನೆ ಮಾಡಿದ್ದರೆ, ಮೊದಲು ಭದ್ರತೆಯನ್ನು ಖಚಿತಪಡಿಸಿಕೊಳ್ಳಿ. ಅದು ಮಾತ್ರವಲ್ಲದೇ ನೀವು ಪರಿಶೀಲನೆ ಮಾಡಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಒದಗಿಸಿದ ಸೌಕರ್ಯಗಳು. ಒಪ್ಪಂದವನ್ನು ಅಂತಿಮಗೊಳಿಸುವ ಮೊದಲು ನಿರ್ವಹಣೆ ಶುಲ್ಕಗಳು, ವಿದ್ಯುತ್ ಸರಬರಾಜು, ನೀರಿನ ಶುಲ್ಕಗಳು ಮತ್ತು ಇತರ ಹೆಚ್ಚುವರಿ ಶುಲ್ಕಗಳು ಎಷ್ಟಿದೆ ಎಂದು ಪರಿಶೀಲನೆ ಮಾಡಿ ನಿರ್ಧಾರ ಕೈಗೊಳ್ಳಿ.

 ಶೀರ್ಷಿಕೆ ಯಾಕೆ ಮುಖ್ಯ?

ಶೀರ್ಷಿಕೆ ಯಾಕೆ ಮುಖ್ಯ?

ಆಸ್ತಿಯನ್ನು ಖರೀದಿಸುವಾಗ ಆಸ್ತಿಯ ಶೀರ್ಷಿಕೆ ಅಥವಾ ಹೆಸರನ್ನು ತನಿಖೆ ಮಾಡುವುದು ಬಹಳ ಮುಖ್ಯ. ಈ ಸಂಕೀರ್ಣ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಪ್ರತಿಷ್ಠಿತ ವಕೀಲರ ಕಾನೂನು ಸಲಹೆಯನ್ನು ತೆಗೆದುಕೊಳ್ಳಬೇಕು. ನೇರವಾಗಿ ಬಿಲ್ಡರ್‌ನಿಂದ ಅಲ್ಲದೆ ನೀವು ಬೇರೊಬ್ಬರಿಂದ ಖರೀದಿ ಮಾಡುವುದಾದರೆ ಇದನ್ನು ಪರಿಶೀಲನೆ ಮಾಡುವುದು ಬಹಳ ಮುಖ್ಯವಾಗಿದೆ. ಕೆಲವೊಮ್ಮೆ, ಪಾವತಿಸದ ಬಾಕಿ ಅಥವಾ ಕೆಲವು ಶುಲ್ಕಗಳನ್ನು ಬ್ರೋಕರ್ ಅಥವಾ ಮಾರಾಟಗಾರರು ಮರೆಮಾಡಿರಬಹುದು. ಅದಕ್ಕಾಗಿ ನೀವು ವಕೀಲರ ಸಹಾಯದ ಮೂಲಕ ಪರಿಶೀಲನೆ ಮಾಡಿ.

 ಮಾರುಕಟ್ಟೆ ಬೆಲೆಗಳನ್ನು ಹೋಲಿಕೆ ಮಾಡಿ

ಮಾರುಕಟ್ಟೆ ಬೆಲೆಗಳನ್ನು ಹೋಲಿಕೆ ಮಾಡಿ

ಹೂಡಿಕೆಯ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಹೂಡಿಕೆದಾರರು ಮಾರುಕಟ್ಟೆಯಲ್ಲಿನ ಬೆಲೆಗಳನ್ನು ಹೋಲಿಸಬೇಕು. ಹಣವನ್ನು ಉಳಿಸಲು ಹಾಗೂ ಅತ್ಯುತ್ತಮ ಕೊಡುಗೆಯನ್ನು ಖಚಿತಪಡಿಸಲು ಇದು ಸಹಕಾರಿಯಾಗಲಿದೆ. ಇದಲ್ಲದೆ, ಭವಿಷ್ಯದ ಮೌಲ್ಯಮಾಪನಕ್ಕಾಗಿ ಡೆವಲಪರ್‌ನ ಬ್ರ್ಯಾಂಡ್ ಮೌಲ್ಯವನ್ನು ತಿಳಿದುಕೊಳ್ಳುವುದು ಒಳ್ಳೆಯದು. ರಿಯಲ್ ಎಸ್ಟೇಟ್ ಹೂಡಿಕೆಯು ಬಹಳ ದೊಡ್ಡ ನಿರ್ಧಾರವಾಗಿದೆ ಏಕೆಂದರೆ ಇದು ದೊಡ್ಡ ಪ್ರಮಾಣದ ಹಣವನ್ನು ಒಳಗೊಂಡಿರುತ್ತದೆ. ಆದ್ದರಿಂದಾಗಿ ಬಹಳ ಜಾಗರೂಕರಾಗಿ ನಿರ್ಧಾರ ಕೈಗೊಳ್ಳುವುದು ಉತ್ತಮ.

English summary

Key Things to consider before investing in luxury real estate in kannada

Here we explain the Key Things to consider before investing in luxury real estate in kannada. Read on.
Story first published: Wednesday, May 18, 2022, 16:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X