For Quick Alerts
ALLOW NOTIFICATIONS  
For Daily Alerts

IMPS ವರ್ಗಾವಣೆ ಮಿತಿ ಏರಿಕೆ ಬಗ್ಗೆ ಎಸ್‌ಬಿಐ ಆದೇಶ

|

ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡುವಾಗ ಐಎಂಪಿಎಸ್ ಬಳಸುವ ಗ್ರಾಹಕರಿಗೆ ವರ್ಗಾವಣೆ ಮಿತಿ ತೊಂದರೆಯಾಗುತ್ತಿತ್ತು. ಈಗ IMPS ವರ್ಗಾವಣೆ ಮಿತಿ ಏರಿಕೆ ಮಾಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಗ್ರಾಹಕರು ಫೆಬ್ರವರಿ 1 ರಿಂದ ಹೊಸ ವಹಿವಾಟು ದರಗಳ ಪ್ರಕಾರ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ಬ್ಯಾಂಕಿಂಗ್ ವಲಯ ಹೆಚ್ಚಿನ ಅನುದಾನ, ಡಿಜಿಟಲ್ ಸೌಕರ್ಯ ಹಾಗೂ ಸೌಲಭ್ಯಗಳನ್ನು ನಿರೀಕ್ಷಿಸಿದೆ. ಅದಕ್ಕೆ ತಕ್ಕಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ತನ್ನ ಗ್ರಾಹಕರಿಗೆ ಸೇವೆ ಒದಗಿಸುತ್ತಿವೆ.

ಬ್ಯಾಂಕ್ ಗ್ರಾಹಕರು IMPS ಮೂಲಕ ಈ ಸೌಲಭ್ಯದಲ್ಲಿ ಕನಿಷ್ಠ ಒಂದು ರೂಪಾಯಿಯಿಂದ
5 ಲಕ್ಷ ರೂ ವರ್ಗಾವಣೆ ಮಾಡಬಹುದಾಗಿದೆ. ರಜಾ ದಿನಗಳಲ್ಲಿ ಕೂಡ ನೀವು ಹಣ ವರ್ಗಾವಣೆ ಮಾಡಬಹುದಾಗಿದೆ. ಎಸ್‌ಬಿಐ ಗ್ರಾಹಕರು ಆನ್ ಲೈನ್ ಹಾಗೂ ಆಫ್ ಲೈನ್ ಎರಡು ಮಾದರಿಯಲ್ಲೂ ಐಎಂಪಿಎಸ್ ಸೌಲಭ್ಯ ಬಳಸಬಹುದು.

ಇನ್ನು ಸರ್ಕಾರಿ ಸ್ವಾಮ್ಯದ ದೊಡ್ಡ ಹಣಕಾಸು ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಗ್ರಾಹಕರು ಆಫ್ ಲೈನ್ ಐಎಂಪಿಎಸ್ ಮೂಲಕ 1001 ರೂಪಾಯಿ ಇಂದ 10 ಸಾವಿರ ರೂಪಾಯಿಯವರೆಗೆ ಹಣ ವರ್ಗಾವಣೆ ಮಾಡಿದಲ್ಲಿ 2 ರೂಪಾಯಿ ಪ್ಲಸ್ ಜಿಎಸ್‌ಟಿ ಯನ್ನು ಬ್ಯಾಂಕಿಗೆ ಶುಲ್ಕ ರೂಪದಲ್ಲಿ ನೀಡಬೇಕಾಗುತ್ತದೆ. 10 ಸಾವಿರದಿಂದ 1 ಲಕ್ಷದವರೆಗೆ ಹಣ ವರ್ಗಾವಣೆ ಮಾಡಲು 4 ರೂಪಾಯಿ ಪ್ಲಸ್ ಜಿಎಸ್‌ಟಿ ಕಡಿತವಾಗಲಿದೆ.

IMPS ವರ್ಗಾವಣೆ ಮಿತಿ ಏರಿಕೆ ಬಗ್ಗೆ ಎಸ್‌ಬಿಐ ಆದೇಶ

1,00,000 ರು ನಿಂದ 2,00,000ರು ತನಕದ ಹಣ ವರ್ಗಾವಣೆಗೆ 12 ರೂಪಾಯಿ ಪ್ಲಸ್ ಜಿಎಸ್‌ಟಿ ಕಡಿತವಾಗಲಿದೆ. ಇದೇ ರೀತಿ 2,00,000 ರು ನಿಂದ 5,00,000ರು ತನಕದ ಹಣ ವರ್ಗಾವಣೆಗೆ 12 ರೂಪಾಯಿ ಪ್ಲಸ್ ಜಿಎಸ್‌ಟಿ ಕಡಿತವಾಗಲಿದೆ. ಆನ್ ಲೈನ್, ಯೋನೋ ಆಪ್, ಇಂಟರ್‌ನೆಟ್ ಬ್ಯಾಂಕ್ ಮೂಲಕ ಈ ಸೌಲಭ್ಯ ಉಚಿತವಾಗಿ ಬಳಸಬಹುದು.

2010ರಲ್ಲಿ ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ಜಾರಿಗೆ ತಂದ ಐಎಂಪಿಎಸ್ ಅಥವಾ ತ್ವರಿತ ಪೇಮೆಂಟ್ ಸೇವೆ ಸುರಕ್ಷಿತವಾಗಿದ್ದು, ಸುಲಭವಾಗಿ ಭಾರತದೆಲ್ಲೆಡೆ ಬಳಕೆಯಲ್ಲಿದೆ. ಮೊಬೈಲ್ ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಬಲಗೊಳಿಸಲು ಇದು ಪ್ರಮುಖ ವಿಧಾನವಾಗಿದೆ.

"ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ, ಎಸ್‌ಬಿಐ IMPS ವಹಿವಾಟುಗಳ ಮೇಲೆ ಯಾವುದೇ ಸೇವಾ ಶುಲ್ಕವನ್ನು ವಿಧಿಸಿಲ್ಲ. YONO ಸೇರಿದಂತೆ ಇಂಟರ್ನೆಟ್ ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್ ಮೂಲಕ ಮಾಡಲಾಗುತ್ತದೆ. ಬ್ರಾಂಚ್ ಗಳ ಮೂಲಕ ಆಫ್ ಲೈನ್ ಸೌಲಭ್ಯ ಬಳಸಿದರೆ ಮೇಲ್ಕಂಡ ಸ್ಲ್ಯಾಬ್‌ಗಳಲ್ಲಿ ಸೇವಾ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ,'' ಎಂದು ಎಸ್ ಬಿಐ ತಿಳಿಸಿದೆ.

ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು, ಆರ್‌ಟಿಜಿಎಸ್‌ ಮೂಲಕ ಡಿಜಿಟಲ್ ವಹಿವಾಟುಗಳಿಗಾಗಿ ಆರ್‌ಬಿಐ ಬ್ಯಾಂಕುಗಳಿಗೆ ವಿಧಿಸುವ ಸಂಸ್ಕರಣಾ ಶುಲ್ಕಗಳು ಮತ್ತು ಸಮಯ-ಬದಲಾಗುವ ಶುಲ್ಕಗಳನ್ನು ತೆಗೆದುಹಾಕಲು ನಿರ್ಧರಿಸಿದ್ದನ್ನು ಗ್ರಾಹಕರು ಸ್ವಾಗತಿಸಿದ್ದಾರೆ.

English summary

Know more about SBI new IMPS transaction limit, bank charges to change from February 1

SBI will be implementing some new charges for transactions made via Immediate Payment Service (IMPS). The bank account holders will have to pay the charges according to the new transactions rates from February 1.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X