For Quick Alerts
ALLOW NOTIFICATIONS  
For Daily Alerts

ಡಿಜಿಟಲ್ ಬ್ಯಾಂಕಿಂಗ್ ಎಂದರೇನು? ಈಗ ಸ್ಥಾಪಿಸಿರುವ ಡಿಬಿಯುಗಳಿಂದ ಏನು ಪ್ರಯೋಜನ?

|

ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರವನ್ನು ಸುದೃಢಗೊಳಿಸುವ ಮತ್ತು ಗ್ರಾಹಕೀಯ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ದೃಷ್ಟಿಯಿಂದ ಸಂಪೂರ್ಣವಾಗಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಭಾನುವಾರ ಗಮನಾರ್ಹ ಹೆಜ್ಜೆ ಇಟ್ಟಿದೆ. ಸ್ವಾತಂತ್ರ್ಯದ ಅಮೃತಮಹೋತ್ಸವದ ವೇಳೆ 75 ಡಿಜಿಟಲ್ ಬ್ಯಾಂಕಿಂಗ್ ಯೂನಿಟ್‌ಗಳನ್ನು (DBU- Digital Banking Unit) ಸ್ಥಾಪಿಸುವ ನರೇಂದ್ರ ಮೋದಿ ಕನಸು ಸಾಕಾರಗೊಂಡಿದೆ.

ಅಕ್ಟೋಬರ್ 16ರಂದು ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 75 ಜಿಲ್ಲೆಗಳಲ್ಲಿ ಒಂದೊಂದು ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕವೇ ಉದ್ಘಾಟನೆ ಮಾಡಿದ್ದಾರೆ. ಸರಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳ ಡಿಬಿಯುಗಳೂ ಇದರಲ್ಲಿವೆ. ಕರ್ನಾಟಕದಲ್ಲಿ ದೇವನಹಳ್ಳಿಯಲ್ಲಿ ಕೆನರಾ ಬ್ಯಾಂಕ್‌ನಿಂದ ಡಿಬಿಯು ಸ್ಥಾಪನೆಯಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಈ ಡಿಬಿಯು ಘಟಕದ ಉದ್ಘಾಟನೆ ಮಾಡಿದರು.

75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ ಪ್ರಧಾನಿ ಮೋದಿ ಚಾಲನೆ75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿಗೆ ಪ್ರಧಾನಿ ಮೋದಿ ಚಾಲನೆ

ಸಾರ್ವಜನಿಕ ವಲಯದ 11 ಬ್ಯಾಂಕುಗಳು, ಖಾಸಗಿ ವಲಯದ 12 ಬ್ಯಾಂಕುಗಳು ಮತ್ತು ಒಂದು ಕಿರು ಹಣಕಾಸು ಬ್ಯಾಂಕ್ ಸೇರಿ ಒಟ್ಟು 24 ಬ್ಯಾಂಕುಗಳು ಈ 75 ಡಿಬಿಯುಗಳನ್ನು ಸ್ಥಾಪಿಸಿವೆ.

ಮುಂದಿನ ದಿನಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಹೆಚ್ಚು ಸಂಖ್ಯೆಯಲ್ಲಿ ಸ್ಥಾಪನೆಯಾಗಲಿವೆ. ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಹಳ ಸರಳೀಕರಣಗೊಳಿಸಲು ಮತ್ತು ಪರಿಣಾಮಕಾರಿಯಾಗಿಸಲು ಡಿಬಿಯು ಬಹಳ ಸಹಕಾರಿಯಾಗಲಿದೆ.

ಫೋನ್ ಬ್ಯಾಂಕಿಂಗ್‌ನಿಂದ ಡಿಜಿಟಲ್ ಬ್ಯಾಂಕಿಂಗ್‌ ಕಡೆಗೆ

ಫೋನ್ ಬ್ಯಾಂಕಿಂಗ್‌ನಿಂದ ಡಿಜಿಟಲ್ ಬ್ಯಾಂಕಿಂಗ್‌ ಕಡೆಗೆ

ಯಾವುದೇ ಆರ್ಥಿಕತೆ ಪ್ರಬಲವಾಗಿರಬೇಕಾದರೆ ಅದರ ಬ್ಯಾಂಕಿಂಗ್ ವ್ಯವಸ್ಥೆ ದೃಢವಾಗಿರಬೇಕು ಎಂದು ಹೇಳಿರುವ ಪ್ರಧಾನಿ ಮೋದಿ, ಫೋನ್ ಬ್ಯಾಂಕಿಂಗ್‌ನಿಂದ ಡಿಜಿಟಲ್ ಬ್ಯಾಂಕಿಂಗ್‌ಗೆ ಆಗಿರುವ ಪರಿವರ್ತನೆಯಿಂದ ಆರ್ಥಿಕತೆಗೆ ಪುಷ್ಟಿ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಂಕಿಂಗ್ ವಲಯದ ಸುಧಾರಣೆಯಿಂದಾಗಿ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (ಡಿಬಿಟಿ) ನಂತಹ ತಂತ್ರಜ್ಞಾನದ ಮೂಲಕ ಸರಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಸಾಧ್ಯವಾಗಿದೆ. ಡಿಬಿಟಿ ಮೂಲಕ ಸರಕಾರ ಈವರೆಗೂ 25 ಲಕ್ಷ ಕೋಟಿ ರೂ ಹಣವನ್ನು ಜನರ ಖಾತೆಗಳಿಗೆ ನೇರವಾಗಿ ತಲುಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

 

ಏನಿದು ಡಿಜಿಟಲ್ ಬ್ಯಾಂಕಿಂಗ್?
 

ಏನಿದು ಡಿಜಿಟಲ್ ಬ್ಯಾಂಕಿಂಗ್?

ಭಾರತ ಈಗ್ಗೆ ಕೆಲವಾರು ವರ್ಷಗಳಿಂದ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯತ್ತ ಸಾಗುತ್ತಾ ಹೋಗುತ್ತಿದೆ. ಮೊದಲಾದರೆ ಪ್ರತಿಯೊಂದು ಬ್ಯಾಂಕ್ ಕೆಲಸಕ್ಕೂ ಖುದ್ದಾಗಿ ಬ್ಯಾಂಕ್ ಕಚೇರಿಗೆ ಹೋಗಬೇಕಿತ್ತು. ಡಿಜಿಟಲ್ ಬ್ಯಾಂಕಿಂಗ್‌ನ ಪ್ರಮುಖ ಕ್ರಾಂತಿಯಾಗಿ ಎಟಿಎಂ ಮೆಷಿನ್‌ಗಳು ಬಂದವು. ಬ್ಯಾಂಕ್‌ನ ದೊಡ್ಡ ಹೊರೆ ತಗ್ಗಿತ್ತು, ಗ್ರಾಹಕರ ಸಮಯವೂ ಉಳಿಯಿತು. ಫೋನ್ ಬ್ಯಾಂಕಿಂಗ್ ಅವಕಾಶ ಬಂದಿತು. ನಂತರ ವಿವಿಧ ಬ್ಯಾಂಕ್‌ಗಳ ಆ್ಯಪ್‌ಗಳು ಬಂದವು. ಯುಪಿಐ ವಹಿವಾಟಿನ ವ್ಯವಸ್ಥೆ ಬಂದು ದೊಡ್ಡ ಕ್ರಾಂತಿಯೇ ಆಗಿಹೋಗಿದೆ. ಆದರೂ ಈಗಲೂ ಕೆಲ ಬ್ಯಾಂಕಿಂಗ್ ಸೇವೆಗೆ ಕಚೇರಿಗಳಿಗೆ ಹೋಗುವುದು ತಪ್ಪಿಲ್ಲ.

ಭೌತಿಕ ಕಚೇರಿಗೆ ಹೋಗುವ ಅಗತ್ಯತೆ ಇಲ್ಲೇ ಸಂಪೂರ್ಣವಾಗಿ ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸುವುದೇ ಡಿಜಿಟಲ್ ಬ್ಯಾಂಕಿಂಗ್‌ನ ಆಶಯ. ಬ್ಯಾಂಕ್ ಕಚೇರಿಯಲ್ಲಿ ಕೊಡಲಾಗುವ ಎಲ್ಲಾ ರೀತಿಯ ಸೇವೆಗಳೂ ಆನ್‌ಲೈನ್‌ನಲ್ಲಿ ಲಭ್ಯ ಇರಬೇಕು ಎಂಬುದು ಗುರಿ. ನಗದು ಹಣವನ್ನೂ ನಿಲ್ಲುವ ಐಡಿಯಾ ಕೂಡ ಡಿಜಿಟಲ್ ಬ್ಯಾಂಕಿಂಗ್‌ನ ಮೇಲಿದೆ. ಆದರೆ, ಕೆಲ ಕಾರ್ಯಗಳಿಗೆ ವಹಿವಾಟು ನಡೆಸಲು ನಗದು ಹಣದ ಮೇಲೆ ಅವಲಂಬನೆ ತಪ್ಪಿದ್ದಲ್ಲ. ಹೀಗಾಗಿ, ಕಡಿಮೆ ನಗದು ಹಣ ವಹಿವಾಟು ಪ್ರಮಾಣವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವ ಆಶಯ ಇದೆ.

 

ಡಿಜಿಟಲ್ ಬ್ಯಾಂಕಿಂಗ್ ಉಪಯೋಗ?

ಡಿಜಿಟಲ್ ಬ್ಯಾಂಕಿಂಗ್ ಉಪಯೋಗ?

ಡಿಜಿಟಲ್ ಬ್ಯಾಂಕಿಂಗ್‌ನಿಂದ ಗ್ರಾಹಕ ಸೇವೆಗೆ ವೆಚ್ಚ ತೀರಾ ತಗ್ಗುವುದಲ್ಲದೇ, ಹೆಚ್ಚು ಪರಿಣಾಮಕಾರಿಯಾಗಿ ಮತ್ತು ನಿಖರವಾಗಿ ಸೇವೆ ನೀಡಲು ಸಾಧ್ಯವಾಗುತ್ತದೆ. ತಂತ್ರಜ್ಞಾವನ್ನು ಪರಿಣಾಮಕಾರಿ ಅಳವಡಿಸುವುದರಿಂದ ಬ್ಯಾಂಕಿಂಗ್ ಪ್ರಕ್ರಿಯೆಗಳೂ ಸರಳಗೊಳ್ಳುತ್ತವೆ. ಸುರಕ್ಷತೆಯೂ ಹೆಚ್ಚುತ್ತದೆ.

ಅತ್ಯುತ್ತಮ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ರೂಪುಗೊಂಡರೆ ನಗದು ಹಣದ ಬಳಕೆಯನ್ನು ತೀರಾ ಕಡಿಮೆ ಮಾಡುವುದು. ಎಲ್ಲಾ ವಹಿವಾಟು ಆನ್‌ಲೈನ್‌ನಲ್ಲೇ ನಡೆದರೆ ಹಣದ ಹರಿವಿನ ಮೇಲೆ ನಿಗಾ ಇರಿಸಬಹುದು.

 

ಡಿಜಿಟಲ್ ಬ್ಯಾಂಕಿಂಗ್ ಘಟಕಗಳೇನು?

ಡಿಜಿಟಲ್ ಬ್ಯಾಂಕಿಂಗ್ ಘಟಕಗಳೇನು?

ಒಂದು ಬ್ಯಾಂಕ್‌ನ ಮುಖ್ಯ ಕಚೇರಿ, ಶಾಖಾ ಕಚೇರಿ, ಆನ್‌ಲೈನ್ ಸೇವೆ, ಎಟಿಎಂ, ಪಿಒಎಸ್ ಮೆಷೀನ್ ಇತ್ಯಾದಿ ಕಾರ್ಯಗಳೆಲ್ಲವನ್ನೂ ಒಂದು ಡಿಜಿಟಲ್ ಬ್ಯಾಂಕ್ ಒಳಗೊಂಡಿರಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ. ಅದೇ ಹಾದಿಯಲ್ಲಿ ಈಗ ಡಿಜಿಟಲ್ ಬ್ಯಾಂಕಿಂಗ್ ಯೂನಿಟ್‌ಗಳನ್ನು ಸ್ಥಾಪಿಸಲಾಗಿದೆ.

ಈ ಡಿಬಿಯುಗಳಲ್ಲಿ ಬ್ಯಾಂಕ್ ಖಾತೆ ತೆರೆಯುವುದು, ಅಕೌಂಟ್ ಬ್ಯಾಲೆನ್ಸ್ ಪರಿಶೀಲಿಸುವುದು, ಪಾಸ್‌ಬುಕ್ ಪ್ರಿಂಟಿಂಗ್, ಫಂಡ್ ಟ್ರಾನ್ಸ್‌ಫರ್, ಎಫ್‌ಡಿ, ಸಾಲದ ಅರ್ಜಿ, ಬ್ಯಾಂಕ್ ಕಾರ್ಡ್‌ಗಳಿಗೆ ಅರ್ಜಿ ಇತ್ಯಾದಿ ಹಲವು ಸೇವೆಗಳನ್ನು ಪಡೆಯಬಹುದು. ಈ ಡಿಬಿಯುಗಳ ವರ್ಷಕ್ಕೆ 365 ದಿನಗಳೂ ತೆರೆದಿರುತ್ತವೆ.

ಇದು ರುಪಾಯಿ ಕುಸಿತ ಅಲ್ಲ, ಡಾಲರ್ ಬಲವರ್ಧನೆ ಅಷ್ಟೇ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಇದು ರುಪಾಯಿ ಕುಸಿತ ಅಲ್ಲ, ಡಾಲರ್ ಬಲವರ್ಧನೆ ಅಷ್ಟೇ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಐಸಿಐಸಿಐ ಬ್ಯಾಂಕ್‌ನ ಡಿಬಿಯುನಲ್ಲಿ ಸೆಲ್ಫ್ ಸರ್ವಿಸ್ ಮತ್ತು ಡಿಜಿಟಲ್ ಅಸಿಸ್ಟೆನ್ಸ್ ಎಂಬ ಎರಡು ವಲಯಗಳನ್ನು ಸ್ಥಾಪಿಸಲಾಗಿದೆ. ಸೆಲ್ಫ್ ಸರ್ವಿಸ್ ಝೋನ್‌ನಲ್ಲಿ ಗ್ರಾಹಕರೇ ಸ್ವತಃ ಖುದ್ದಾಗಿ ಸೇವೆ ಪಡೆದುಕೊಳ್ಳಬಹುದು. ಪಾಸ್‌ಬುಕ್ ಎಂಟ್ರಿ, ಚೆಕ್ ಡೆಪಾಸಿಟ್ ಮಾಡಲು, ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಲಭ್ಯ ಇರುತ್ತದೆ. ಇಂಥ ಕಿಯೋಸ್ಕ್‌ಗಳು ಈಗಾಗಲೇ ಹಲವು ಬ್ಯಾಂಕ್ ಕಚೇರಿಗಳಲ್ಲಿ ಲಭ್ಯ ಇರುವುದು ಹೌದು. ಆದರೆ, ಬ್ಯಾಂಕಿಂಗ್ ಆ್ಯಪ್‌ಗಳಿಂದ ಮಾಡಲಾಗುವ ಎಲ್ಲಾ ಸೇವೆಗಳನ್ನು ಡಿಬಿಯುನಲ್ಲಿರುವ ಸೆಲ್ಫ್ ಸರ್ವಿಸ್ ಝೋನ್‌ನಲ್ಲಿ ಪಡೆಯಬಹುದು.

ಡಿಜಿಟಲ್ ಅಸಿಸ್ಟೆನ್ಸ್ ವಲಯದಲ್ಲಿ ಸಿಬ್ಬಂದಿಯನ್ನು ಸಹಾಯಕ್ಕಾಗಿ ನಿಯೋಜಿಸಲಾಗಿರುತ್ತದೆ. ಆದರೆ, ಪ್ರತಿಯೊಂದು ವಹಿವಾಟೂ ಕೂಡ ಡಿಜಿಟಲ್ ಆಗಿಯೇ ನಡೆಯುತ್ತದೆ. ಗ್ರಾಹಕರಿಗೆ ಸಹಾಯವಾಗಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಡಿಜಿಟಲ್ ಬ್ಯಾಂಕಿಂಗ್ ಘಟಕದಲ್ಲೂ ಅನೇಕ ಸೇವೆಗಳನ್ನು ಲಭ್ಯ ಮಾಡಲಾಗಿದೆ. ಕಿಯೋಸ್ಕ್ ಮೂಲಕವೇ ಖಾತೆ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಂಟ್ ಬ್ಯಾಂಕಿಂಗ್, ಡೆಬಿಟ್ ಕ್ರೆಡಿಟ್ ಕಾರ್ಡ್, ಎಂಟಿಎಸ್ ಕಾರ್ಡ್ ಒಳಗೊಂಡ ಡಿಜಿಟಲ್ ಕಿಟ್ ಅನ್ನು ಇಲ್ಲಿ ಪಡೆಯಬಹುದು. ವ್ಯಾಪಾರಿಗಳಿಗೆ ಯುಪಿಐ ಕ್ಯೂಆರ್ ಕೋಡ್, ಪಿಒಎಸ್ ಮೆಷೀನ್ ಇತ್ಯಾದಿ ಡಿಜಿಟಲ್ ಕಿಟ್ ಇಲ್ಲಿ ಸಿಗುತ್ತದೆ.

ಎಂಎಸ್‌ಎಂಇ ಸಾಲಗಳು, ನ್ಯಾಷನಲ್ ಪೋರ್ಟಲ್‌ನ ಅಡಿಯಲ್ಲಿ ಬರುವ ಸರಕಾರಿ ಯೋಜನೆಗಳ ವಿಲೇವಾರಿ, ಪಿಂಚಣಿ ಯೋಜನೆ ಇತ್ಯಾದಿ ಹಲವು ಸೇವೆಗಳು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಡಿಬಿಯುಗಳಲ್ಲಿ ಲಭ್ಯ ಇರುತ್ತವೆ.

 

English summary

Know What Is Digital Banking And Specialty of DBUs in India

Central government has facilitated the start of 75 DBUs across India, as another step towards implementing complete digital banking system in the country.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X