For Quick Alerts
ALLOW NOTIFICATIONS  
For Daily Alerts

2023ರ ಜನವರಿಯಲ್ಲಿ ಪ್ರತಿದಿನ ಬರೋಬ್ಬರಿ 1600 ಟೆಕ್‌ ಉದ್ಯೋಗಿಗಳು ಸಂಸ್ಥೆಗಳಿಂದ ಹೊರಕ್ಕೆ!

|

ಜಾಗತಿಕವಾಗಿ ಈಗ ಹಲವಾರು ಸಂಸ್ಥೆಗಳು ತಮ್ಮ ಸಂಸ್ಥೆಯಿಂದ ಉದ್ಯೋಗಿಗಳನ್ನು ತೆಗೆದುಹಾಕುತ್ತಿದೆ. ಪ್ರಮುಖವಾಗಿ ಟೆಕ್ ಸಂಸ್ಥೆಗಳು, ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಪ್ರಸ್ತುತ ಲಭ್ಯವಾಗಿರು ಮಾಹಿತಿ ಪ್ರಕಾರ 2023ರ ಜನವರಿಯಲ್ಲಿ ಈವರೆಗೆ ಜಾಗತಿಕವಾಗಿ ಟೆಕ್‌ ಸಂಸ್ಥೆಗಳು ಪ್ರತಿ ದಿನ ಸರಾಸರಿ 1600 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದೆ.

ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಪ್ರತಿ ದಿನ 1600 ಮಂದಿ ಟೆಕ್ ಉದ್ಯೋಗಿಗಳು ಪ್ರತಿ ದಿನ ತಮ್ಮ ಸಂಸ್ಥೆಯಿಂದ ಹೊರಬೀಳುತ್ತಿದ್ದಾರೆ. ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು, ಆರ್ಥಿಕ ಹಿಂಜರಿತದ ಆತಂಕದ ನಡುವೆ ಈಗಾಗಲೇ ಹಲವು ಸಂಸ್ಥೆಗಳು ತಮ್ಮ ಸಂಸ್ಥೆಯ ವೆಚ್ಚ ಕಡಿತದ ಬಗ್ಗೆ ಚಿಂತನೆ ನಡೆಸುತ್ತಿದೆ. ಇದರಿಂದಾಗಿ ಸಂಸ್ಥೆಗಳು ಉದ್ಯೋಗ ಕಡಿತವನ್ನು ಆರಂಭಿಸಿದೆ.

ಸಂಸ್ಥೆಗಳಲ್ಲಿ ನಡೆಸಲಾಗುವ ಉದ್ಯೋಗ ಕಡಿತದ ಬಗ್ಗೆ ಲಭ್ಯವಾಗಿರುವ ವರದಿ ಪ್ರಕಾರ 2022ರಲ್ಲಿ ಸುಮಾರು 1 ಸಾವಿರ ಸಂಸ್ಥೆಗಳು ಒಟ್ಟಾಗಿ 1,54,336 ಉದ್ಯೋಗಿಗಳನ್ನು ಉದ್ಯೋಗದಿಂದ ತೆಗೆದುಹಾಕಿದೆ. ಹೊಸ ವರ್ಷ 2023 ಆರಂಭವಾದ ಬಳಿಕವೂ ಸಂಸ್ಥೆಗಳಲ್ಲಿ ನಡೆಯುತ್ತಿದ್ದ ಉದ್ಯೋಗ ಕಡಿತ ಪ್ರಕ್ರಿಯೆ ಮುಂದುವರಿದಿದೆ. ಇನ್ನು ಪ್ರಮುಖವಾಗಿ ಹಲವಾರು ಸ್ಟಾರ್ಟ್‌ಅಪ್ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ.

 ಪ್ರತಿದಿನ ಬರೋಬ್ಬರಿ 1600 ಟೆಕ್‌ ಉದ್ಯೋಗಿಗಳು ಸಂಸ್ಥೆಯಿಂದ ಹೊರಕ್ಕೆ!

ಶೇರ್‌ಚಾಟ್‌ನಲ್ಲಿ ಶೇಕಡ 20ರಷ್ಟು ಉದ್ಯೋಗ ಕಡಿತ

ಸಾಮಾಜಿಕ ಜಾಲತಾಣ ಸಂಸ್ಥೆಯಾದ ಶೇರ್‌ಚಾಟ್ ಸುಮಾರು ಶೇಕಡ 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಘೋಷಣೆ ಮಾಡಿದೆ. ಇದು ಸುಮಾರು 500ಕ್ಕೂ ಅಧಿಕ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತ ಘೋಷಿಸಿದೆ. ಟ್ವಿಟ್ಟರ್‌, ಗೂಗಲ್, ಸ್ನಾಪ್‌, ಟಿಗರ್ ಗ್ಲೋಬಲ್ ನೇತೃತ್ವದಲ್ಲಿರುವ ಈ ಶೇರ್‌ಚಾಟ್‌ ಒಟ್ಟು ಸುಮಾರು 2300 ಉದ್ಯೋಗಿಗಳನ್ನು ಹೊಂದಿದೆ.

ಮುಂದುವರಿದ ಉದ್ಯೋಗ ನಷ್ಟ: ಓಲಾ, ಕ್ರಿಪ್ಟೋ ಡಾಟ್‌ ಕಾಮ್‌ನಲ್ಲಿ ಉದ್ಯೋಗ ಕಡಿತಮುಂದುವರಿದ ಉದ್ಯೋಗ ನಷ್ಟ: ಓಲಾ, ಕ್ರಿಪ್ಟೋ ಡಾಟ್‌ ಕಾಮ್‌ನಲ್ಲಿ ಉದ್ಯೋಗ ಕಡಿತ

2022ರ ಡಿಸೆಂಬರ್‌ನಲ್ಲಿ ಶೇರ್‌ಚಾಟ್‌ ಸುಮಾರು ಶೇಕಡ 5ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ತನ್ನ ಫ್ಯಾಂಟಸಿ ಪ್ಲಾಟ್‌ಫಾರ್ಮ್ ಜೀತ್11 ಸ್ಥಗಿತವಾದ ಬಳಿಕ ಶೇಕಡ 5ರಷ್ಟು ಉದ್ಯೋಗ ಕಡಿತವನ್ನು ಸಂಸ್ಥೆ ಮಾಡಿದೆ.

ಇತರೆ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ

ಇನ್ನು ಓಲಾ ಸುಮಾರು 200 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದ್ದರೆ, ಸ್ಟಾರ್ಟ್‌ಅಪ್ ಸಂಸ್ಥೆ Skit.ai ಕೂಡಾ ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ಸುದ್ದಿಯಾಗಿದೆ. ದೇಶದ ಹಲವಾರು ಪ್ರಮುಖ ನಗರಗಳಲ್ಲಿ ದಿನಸಿ, ಅಗತ್ಯ ವಸ್ತುಗಳನ್ನು ಡೆಲಿವರಿ ಮಾಡುವ ಸಂಸ್ಥೆಯಾದ ಡುನ್ಜೋ ಕೂಡಾ ಶೇಕಡ 3ರಷ್ಟು ಉದ್ಯೋಗ ಕಡಿತ ಮಾಡಿದೆ.

2023 ಟೆಕ್ ಉದ್ಯೋಗಿಗಳಿಗೆ ಅತೀ ಕೆಟ್ಟ ವರ್ಷವಾಗಿಯೇ ಆರಂಭವಾಗಿದೆ. ಜಾಗತಿಕವಾಗಿ 91 ಸಂಸ್ಥೆಗಳು 24 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಮೊದಲ 15 ದಿನದಲ್ಲೇ ವಜಾ ಮಾಡಿದೆ. ಅಮೆಜಾನ್ ಭಾರತದಲ್ಲಿ 1000 ಮಂದಿಯನ್ನು ಸೇರಿದಂತೆ ಜಾಗತಿಕವಾಗಿ 18 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವ ಘೋಷಣೆ ಮಾಡಿದೆ.

English summary

Layoff Wagon: More than 1,600 tech employees are being laid off per day in January

Layoff Wagon: More than 1,600 tech employees are being laid off per day on average in 2023 globally including in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X