For Quick Alerts
ALLOW NOTIFICATIONS  
For Daily Alerts

ಎಲ್‌ಐಸಿ ಐಪಿಒಗೆ ಏಕೆ ಅರ್ಜಿ ಸಲ್ಲಿಸಬೇಕು? ಇಲ್ಲಿದೆ ಐದು ಕಾರಣ

|

ಭಾರತೀಯ ಜೀವ ವಿಮಾ ನಿಗಮದ ಬಹು ನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೇ 4 ರಿಂದ ಆರಂಭ ಆಗಲಿದೆ ಹಾಗೂ ಆಫರ್ ಬೆಲೆ 902 ರು ನಿಂದ 949 ರು ಎಂದು ನಿಗದಿ ಪಡಿಸಲಾಗಿದೆ.

 

ಮೇ 4-9 ರಿಂದ 3.5% ಈಕ್ವಿಟಿಯೊಂದಿಗೆ ಚಂದಾದಾರಿಕೆ ಮತ್ತು ಪಾಲಿಸಿದಾರರಿಗೆ ಮತ್ತು ಚಿಲ್ಲರೆ ಹೂಡಿಕೆದಾರರಿಗೆ ರಿಯಾಯಿತಿಗಳನ್ನು ನೀಡಲಾಗುತ್ತದೆ ಎಂದು ಭಾರತೀಯ ಜೀವ ವಿಮಾ ನಿಗಮದ ಮಹತ್ವದ ಸುದ್ದಿಗೋಷ್ಠಿಯಲ್ಲಿ DIPAM ಕಾರ್ಯದರ್ಶಿ ತುಹಿಂ ಕಾಂತಾ ಪಾಂಡೆ ಹೇಳಿದ್ದಾರೆ.

ಈ ಹಿಂದೆ ಎಲ್‌ಐಸಿ ಐಪಿಒ ಅನ್ನು ಮಾರ್ಚ್ 2022 ರಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಎಲ್‌ಐಸಿ ಐಪಿಒ ಅನ್ನು ಮುಂದೂಡಬೇಕಾಯಿತು. ನೀವು ಎಲ್‌ಐಸಿ ಐಪಿಒಗೆ ಏಕೆ ಅರ್ಜಿ ಸಲ್ಲಿಸಬೇಕು ಎಂಬುವುದಕ್ಕೆ ಇಲ್ಲಿದೆ ಪ್ರಮುಖ ಐದು ಕಾರಣಗಳು ಮುಂದೆ ಓದಿ....

 ಭಾರತದ ಅತಿ ದೊಡ್ಡ ಐಪಿಒ ನಿರೀಕ್ಷೆ

ಭಾರತದ ಅತಿ ದೊಡ್ಡ ಐಪಿಒ ನಿರೀಕ್ಷೆ

ಎಲ್‌ಐಸಿ ಐಪಿಒ ಭಾರತದ ಅತಿ ದೊಡ್ಡ ಐಪಿಒ ಆಗುವ ನಿರೀಕ್ಷೆ ಇದೆ. ಕಳೆದ ವರ್ಷ ಪ್ರಾರಂಭವಾದ ಪೇಟಿಎಂ ಐಪಿಒ ಅನ್ನು ಈ ಎಲ್‌ಐಸಿ ಐಪಿಒ ಮೀರಿಸುತ್ತದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಎಲ್‌ಐಸಿಯಲ್ಲಿ 100 ಶೇಕಡ ಪಾಲನ್ನು ಹೊಂದಿದೆ ಭಾರತ ಸರ್ಕಾರವು ಸರಿಸುಮಾರು 21,000 ಕೋಟಿ ರೂಪಾಯಿ ಅಂದರೆ ಶೇಕಡ 3.5 ಪಾಲನ್ನು ಮಾರಾಟ ಮಾಡಲು ಮುಂದಾಗಿದೆ. ಈ ಹಿಂದೆ ಸಂಸ್ಥೆಯ ಶೇಕಡ ಐದರಷ್ಟು ಪಾಲನ್ನು ಐಪಿಒ ಮೂಲಕ ಮಾರಾಟ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ ಬಳಿಕ ಈ ಮಾರಾಟದ ಪಾಲನ್ನು ಇಳಿಕೆ ಮಾಡಲಾಯಿತು. ಆದರೂ ಕೂಡಾ ಇದು ದೊಡ್ಡ ಐಪಿಒ ಆಗುವ ನಿರೀಕ್ಷೆ ಇದೆ. ಈವರೆಗೆ ಪೇಟಿಎಂ ಐಪಿಒ ಅತಿ ದೊಡ್ಡ ಐಪಿಒ ಆಗಿದೆ. ಇದರ ಗಾತ್ರ 18,300 ಕೋಟಿ ಆಗಿದೆ. ಅತೀ ದೊಡ್ಡ ಐಪಿಒ ಆದ್ದರಿಂದ ಹೂಡಿಕೆ ಕೊಂಚ ಲಾಭದಾಯಕವಾದೀತು.

 ಭಾರತದ ಅತಿ ದೊಡ್ಡ ಜೀವ ವಿಮಾ ಕಂಪನಿ
 

ಭಾರತದ ಅತಿ ದೊಡ್ಡ ಜೀವ ವಿಮಾ ಕಂಪನಿ

ಈ ಐಪಿಒ ನೀಡುವ ಕಂಪನಿಯು ಭಾರತದ ಜೀವ ವಿಮಾ ನಿಗಮ ಅಥವಾ ಎಲ್‌ಐಸಿ ಭಾರತದಲ್ಲಿನ ಅತಿದೊಡ್ಡ ಜೀವ ವಿಮಾ ಕಂಪನಿಯಾಗಿದೆ ಮತ್ತು ಜಾಗತಿಕವಾಗಿ ಐದನೇ ಅತಿದೊಡ್ಡ ಜೀವ ವಿಮಾ ಕಂಪನಿಯಾಗಿದೆ. ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (DRHP) ಪ್ರಕಾರ, ಎಲ್‌ಐಸಿಯ ಎಂಬೆಡೆಡ್ ಮೌಲ್ಯವು ಸರಿಸುಮಾರು ರೂ. 5.4 ಲಕ್ಷ ಕೋಟಿ ಆಗಿದೆ. ಕಂಪನಿಯ ಮೌಲ್ಯವು ಆರು ಲಕ್ಷ ಕೋಟಿಗಿಂತ ಅಧಿಕವಾಗಿದೆ. ಎಲ್‌ಐಸಿ ಮಾರುಕಟ್ಟೆಯಲ್ಲಿ ಶೇಕಡ 66.2ರಷ್ಟು ದೈತ್ಯ ಪಾಲನ್ನು ಹೊಂದಿದೆ. ನೀವು ಈ ಐಪಿಒಗೆ ಅರ್ಜಿ ಸಲ್ಲಿಸಿದರೆ ದೇಶದ ದೊಡ್ಡ ಕಂಪನಿಯಲ್ಲಿ ಪಾಲುದಾರರಾಗುವ ಅವಕಾಶ ದೊರೆಯಲಿದೆ.

 ಆರ್ಥಿಕತೆಗೆ ಉತ್ತೇಜನ

ಆರ್ಥಿಕತೆಗೆ ಉತ್ತೇಜನ

ಕೊರೊನಾವೈರಸ್ ಸಾಂಕ್ರಾಮಿಕದ ಬಳಿಕ ಸದ್ಯ ದೇಶದ ಆರ್ಥಿಕತೆಯು ಕೊಂಚ ಸುಧಾರಣೆ ಕಾಣುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಸ್ವಾತಂತ್ರ್ಯದ ನಂತರದ ಕೆಟ್ಟ ಆರ್ಥಿಕ ಹಿಂಜರಿತದ ಅವಧಿಯನ್ನು ನಾವು ಈಗಾಗಲೇ ನೋಡಿದ್ದೇವೆ. ಕೊರೊನಾ ಕಾರಣದಿಂದಾಗಿ ಆದ ಲಾಕ್‌ಡೌನ್‌ ನಿಂದ ಭಾರತದ ಜನರು ಬಡತನ ಮತ್ತು ನಿರುದ್ಯೋಗಕ್ಕೆ ತಳ್ಳಲ್ಪಟ್ಟಿದ್ದಾರೆ. ಈಗ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ ಸರ್ಕಾರವು ಖಾಸಗೀಕರಣದತ್ತ ಮುಖ ಮಾಡಿದ್ದೇವೆ ಎಂದು ಸರ್ಕಾರ ಹೇಳಿಕೊಂಡಿದೆ.

 ಕಂಪನಿಗೆ ಹೆಚ್ಚಿನ ಬೆಳವಣಿಗೆಯ ನಿರೀಕ್ಷೆ

ಕಂಪನಿಗೆ ಹೆಚ್ಚಿನ ಬೆಳವಣಿಗೆಯ ನಿರೀಕ್ಷೆ

ಭಾರತದಲ್ಲಿ ಜೀವ ವಿಮೆ ಚಂದಾದಾರನ್ನು ಹೆಚ್ಚಳ ಮಾಡಲು ಸರ್ಕಾರವು ಕೇಂದ್ರೀಕೃತ ಪ್ರಯತ್ನಗಳನ್ನು ಮಾಡಿದೆ. ಅದರ ಹೊರತಾಗಿಯೂ ದೇಶದ ನಸಂಖ್ಯೆಯ ಒಂದು ದೊಡ್ಡ ಭಾಗವು ವಿಮೆಯಿಲ್ಲದೆ ಉಳಿದಿದೆ. ಭಾರತದಲ್ಲಿ ವಿಮಾ ಪ್ರೀಮಿಯಂ ಮತ್ತು ಜಿಡಿಪಿ ಅನುಪಾತವು ಪ್ರಸ್ತುತ ಶೇಕಡ 3.7ರಷ್ಟಿದೆ. ಇದು ಜಾಗತಿಕ ಸರಾಸರಿ ಶೇಕಡ 7.23 ಕ್ಕಿಂತ ಕಡಿಮೆಯಾಗಿದೆ. ಅಂದರೆ ಭಾರತದಲ್ಲಿ ವಿಮಾ ಕಂಪನಿಗಳಿಗೆ ವ್ಯಾಪಾರಕ್ಕೆ ದೊಡ್ಡ ಅವಕಾಶವಿದೆ. ಇದಲ್ಲದೆ, ಮಾರುಕಟ್ಟೆಯ ಪ್ರಮುಖ ಸಂಸ್ಥೆಯಾದ ಎಲ್‌ಐಸಿ ಈ ಬೆಳವಣಿಗೆಯನ್ನು ಸಾಧಿಸಲು ದೊಡ್ಡ ಪ್ರಚೋದನೆಯನ್ನು ನೀಡುತ್ತದೆ. ಎಲ್‌ಐಸಿ ಐಪಿಒದಿಂದಾಗಿ ಕಂಪನಿಯ ಭವಿಷ್ಯ ಉತ್ತಮವಾಗಲಿದೆ ಎಂದು ಸರ್ಕಾರದ ವಾದವಾಗಿದೆ.

 ಹಂಚಿಕೆಯ ಹೆಚ್ಚಿನ ಅವಕಾಶಗಳು

ಹಂಚಿಕೆಯ ಹೆಚ್ಚಿನ ಅವಕಾಶಗಳು

ನಿಮಗೆ ಯಾವುದೇ ಷೇರುಗಳನ್ನು ನೀಡಲಾಗಿಲ್ಲ ಎಂದು ತಿಳಿಯಲು ಹಲವು ಐಪಿಒಗಳಿಗೆ ಅರ್ಜಿ ಸಲ್ಲಿಸಿದ ಬಳಿಕ ನೀವು ಬೇಸರಗೊಂಡಿದ್ದರೆ ನೀವು ಎಲ್‌ಐಸಿ ಐಪಿಒಗೆ ಅರ್ಜಿ ಸಲ್ಲಿಸಬಹುದು. ಈ ಐಪಿಒ ಅತಿ ದೊಡ್ಡದಾದ್ದುದ್ದರಿಂದಾಗಿ ನೀವು ಕನಿಷ್ಟ ಒಂದು ಷೇರನ್ನಾದರೂ ಪಡೆಯಬಹುದು. ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಗೆ ಎಲ್‌ಐಸಿ ಸಲ್ಲಿಸಿದ DRHP ಪ್ರಕಾರ, ಈ ಐಪಿಒ 31,62,49,885 ಈಕ್ವಿಟಿ ಷೇರುಗಳನ್ನು ಒಳಗೊಂಡಿರುತ್ತದೆ.

ಗಮನಿಸಿ: ಸ್ಟಾಕ್ ಮಾರುಕಟ್ಟೆಯು ಎಂದಿಗೂ ಕೂಡಾ ಅಪಾಯಕಾರಿ. ನೀವು ಎಲ್ಐಸಿಗೆ ಅರ್ಜಿ ಸಲ್ಲಿಸಲು ಬಯಸಿದರೆ, ನೀವು ಐಸಿಐಸಿಐ ಡೈರೆಕ್ಟ್‌ನ ಡಿಮ್ಯಾಟ್ ಖಾತೆಯನ್ನು ತೆರೆಯಬಹುದು. ನಿಮ್ಮ ನಿರ್ದಿಷ್ಟ ಅವಶ್ಯಕತೆಗಳಿಗೆ ಅನುಗುಣವಾಗಿ ನಿಮ್ಮ ಬ್ರೋಕರೇಜ್ ರಚನೆಯನ್ನು ಸಹ ನೀವು ಆಯ್ಕೆ ಮಾಡಬಹುದು.

English summary

LIC IPO: Reasons Why You Should Apply for the LIC IPO in kannada

LIC IPO: Here we talking about the reasons Why You Should Apply for the LIC IPO in kannada. Read on.
Story first published: Monday, May 2, 2022, 18:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X