For Quick Alerts
ALLOW NOTIFICATIONS  
For Daily Alerts

ಎಲ್‌ಐಸಿ ಐಪಿಒ: ರೆಪೋ ದರ ಏರಿಕೆ ಬೆನ್ನಲ್ಲೇ ಗ್ರೇ ಮಾರ್ಕೆಟ್ ಶೇ.30 ಡೌನ್

|

ಎಲ್‌ಐಸಿ ಐಪಿಒ ಮೇ 4ರಂದು ಆರಂಭವಾಗಿದೆ. ಎಲ್‌ಐಸಿ ಐಪಿಒ ನಡೆಯುತ್ತಿರುವಾಗಲೇ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಮೀಮ್‌ಗಳು ಹರಿದಾಡಲು ಆರಂಭವಾಗಿದೆ. ಎಲ್‌ಐಸಿ ಐಪಿಒ ನಡುವೆ ರೆಪೋ ದರ ಏರಿಕೆ ಆಗುತ್ತಿದ್ದಂತೆ ಗ್ರೇ ಮಾರ್ಕೆಟ್ ಶೇಕಡ 30ರಷ್ಟು ಪಾತಾಳಕ್ಕೆ ಕುಸಿತ ಕಂಡಿದೆ.

ಹೌದು, ಸೂಪರ್‌ ಹಿಟ್ ಚಲನಚಿತ್ರ ಬಾಹುಬಲಿಯಲ್ಲಿ ಇಂದಿಗೂ ಜನ ಮಾತನಾಡುವ ದೃಶ್ಯ ಒಂದಿದೆ. ಅದುವೇ ನಂಬಿಕಸ್ಥ ಗೆಳೆಯ ಕಟ್ಟಪ್ಪ ನಾಯಕ ಬಾಹುಬಲಿ ಬೆನ್ನಿಗೆ ಚೂರಿ ಹಾಕುವುದು. ಇದೇ ರೀತಿಯ ಕಾರ್ಯವನ್ನು ಎಲ್‌ಐಸಿ ಐಪಿಒ ಸಂದರ್ಭದಲ್ಲಿ ಆರ್‌ಬಿಐ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಈ ರೆಪೋ ದರ ಏರಿಕೆಯು ಬೂದು ಮಾರುಕಟ್ಟೆ ಅಥವಾ ಗ್ರೇ ಮಾರ್ಕೆಟ್ ಮೇಲೆ ಭಾರೀ ಪರಿಣಾಮ ಉಂಟು ಮಾಡಿದೆ.

ರೆಪೋ ದರ ತಕ್ಷಣದಿಂದ ಏರಿಕೆ, ಸೆನ್ಸೆಕ್ಸ್, ನಿಫ್ಟಿ ಭಾರಿ ಇಳಿಕೆರೆಪೋ ದರ ತಕ್ಷಣದಿಂದ ಏರಿಕೆ, ಸೆನ್ಸೆಕ್ಸ್, ನಿಫ್ಟಿ ಭಾರಿ ಇಳಿಕೆ

ಎಲ್‌ಐಸಿ ಷೇರುಗಳ ಗ್ರೇ ಮಾರ್ಕೆಟ್ ಪ್ರೀಮಿಯಂ (ಜಿಎಂಪಿ) ಐಪಿಒಗೂ ಮುಂಚಿನ ದಿನ (ಮೇ 3) ಸ್ಥಿರ ಏರಿಕೆಯಲ್ಲಿತ್ತು. ರೂ.72ರಿಂದ ರೂ.85, ಆ ಬಳಿಕ ರೂ.105ಕ್ಕೆ ಏರಿಕೆ ಆಗಿದೆ. ಆದರೆ ಬಳಿಕ ಎಲ್‌ಐಸಿ ಐಪಿಒ ಮೊದಲ ದಿನವಾದ ಮೇ 4ರಂದು ರೂ.125ಕ್ಕೆ ತಲುಪಿದೆ.

 ಗ್ರೇ ಮಾರ್ಕೆಟ್ ಎಂದರೇನು?

ಗ್ರೇ ಮಾರ್ಕೆಟ್ ಎಂದರೇನು?

ಗ್ರೇ ಮಾರ್ಕೆಟ್ ಎಂಬುವುದು ಅನಧಿಕೃತ ಪ್ಲಾಟ್‌ಫಾರ್ಮ್ ಆಗಿದೆ. ಐಪಿಒ ಘೋಷಣೆ ಮಾಡಿದ ಕಂಪೆನಿಗಳು ವಹಿವಾಟು ನಡೆಸುತ್ತದೆ. ಇನ್ನು ಹೆಸರೇ ಸೂಚಿಸುವಂತೆ ಇದು ಕಾನೂನು ಬದ್ಧವಾದ ಪ್ಲಾಟ್‌ಫಾರ್ಮ್ ಅಲ್ಲ. ಹಾಗೆಯೇ ಅದರ ಮೇಲೆ ನಡೆಯುವ ಯಾವುದೇ ವಹಿವಾಟನ್ನು ಹೂಡಿಕೆದಾರರು ತಮ್ಮದೇ ಅಪಾಯದ ಮೇಲೆ ಮಾಡಬೇಕಾಗುತ್ತದೆ. ಇನ್ನು ಕಂಪೆನಿಯ ಷೇರುಗಳ ಗ್ರೇ ಮಾರ್ಕೆಟ್ ಪ್ರೀಮಿಯಂ ಮುಂಬರುವ ಐಪಿಒ ಬೇಡಿಕೆ ಅಥವಾ ಜನಪ್ರಿಯತೆಯ ಬಗ್ಗೆ ಸೂಚನೆಯನ್ನು ನೀಡುತ್ತದೆ.

 ರೆಪೋ ದರ ಏರಿಕೆ ಬೆನ್ನಲ್ಲೇ ಕುಸಿದ ಗ್ರೇ ಮಾರ್ಕೆಟ್

ರೆಪೋ ದರ ಏರಿಕೆ ಬೆನ್ನಲ್ಲೇ ಕುಸಿದ ಗ್ರೇ ಮಾರ್ಕೆಟ್

ಕೇಂದ್ರ ಬ್ಯಾಂಕ್ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಗ್ರೇ ಮಾರ್ಕೆಟ್ ಪಾತಾಳಕ್ಕೆ ಕುಸಿದಿದೆ. ಆರ್‌ಬಿಐ ರೆಪೋ ದರದಲ್ಲಿ 40 ಮೂಲಾಂಕವನ್ನು ಹೆಚ್ಚಳ ಮಾಡಿದೆ. ಇದರಿಂದಾಗಿ ರೆಪೋ ದರವು ಶೇಕಡ 4ರಿಂದ ಶೇಕಡ 4.40ಗೆ ಏರಿಕೆ ಕಂಡಿದೆ. ಎಲ್‌ಐಸಿ ಐಪಿಒ ನಡುವೆ ನಡೆದ ಈ ಬೆಳವಣಿಗೆಯ ಬೆನ್ನಲ್ಲೇ ಗ್ರೇ ಮಾರ್ಕೆಟ್‌ನಲ್ಲಿ ಎಲ್‌ಐಸಿ ಐಪಿಒ ಮೌಲ್ಯ ರೂ.125ರಿಂದ ಒಮ್ಮೆಲೇ ರೂ 86 ಕ್ಕೆ ಕುಸಿದಿದೆ.

 ಸೆನ್ಸೆಕ್ಸ್, ನಿಫ್ಟಿ ಭಾರೀ ಇಳಿಕೆ

ಸೆನ್ಸೆಕ್ಸ್, ನಿಫ್ಟಿ ಭಾರೀ ಇಳಿಕೆ

ಸುಮಾರು ನಾಲ್ಕು ವರ್ಷಗಳ ನಂತರ, ಏಪ್ರಿಲ್‌ನಲ್ಲಿ ನಡೆದ ಹಣಕಾಸು ನೀತಿ ಸಮಿತಿ ಸಭೆಯ ನಂತರ ರೆಪೋ ದರದಲ್ಲಿ ಏರಿಕೆ ಮಾಡಲಾಗಿದೆ. ರೆಪೋ ದರ ಏರಿಕೆ ಬೆನ್ನಲ್ಲೇ ಸೆನ್ಸೆಕ್ಸ್, ನಿಫ್ಟಿ ಕೂಡಾ ಭಾರೀ ಇಳಿಕೆ ಕಂಡಿದೆ. ರೆಪೋ ದರ ಏರಿಕೆ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಶಕ್ತಿಕಾಂತ ದಾಸ್ ಪ್ರಕಟಿಸಿದರು. ಈ ಸುದ್ದಿ ಹೊರ ಬರುತ್ತಿದ್ದಂತೆ ಸೆನ್ಸೆಕ್ಸ್ 900 ಅಂಕಗಳಿಗಿಂತ ಹೆಚ್ಚು ಕುಸಿದಿದೆ, ನಿಫ್ಟಿ 16,800 ಕೆಳಗೆ ಇಳಿದಿದೆ.

 ಗ್ರೇ ಮಾರ್ಕೆಟ್ ಚೇತರಿಕೆ ಕಾಣಲಿದೆ ಎಂದ ತಜ್ಞರು

ಗ್ರೇ ಮಾರ್ಕೆಟ್ ಚೇತರಿಕೆ ಕಾಣಲಿದೆ ಎಂದ ತಜ್ಞರು

ರೆಪೋ ದರವು ಏರಿಕೆಯು ಮಾರುಕಟ್ಟೆಯ ಭಾವನೆಯನ್ನು ಕೆರಳಿಸಿದೆ. ಆದರೆ ಎಲ್‌ಐಸಿಯ ಬೆಲೆಗಳು ಹೆಚ್ಚು ಕಾಲ ಕೆಳಗಿಳಿಯುವ ನಿರೀಕ್ಷೆಯಿಲ್ಲ ಎಂದು ತಜ್ಞರು ಹೇಳುತ್ತಾರೆ. ಈ ಬಗ್ಗೆ ಮಾಹಿತಿ ನೀಡಿದ ಐಐಎಫ್ಎಲ್ ಸೆಕ್ಯುರಿಟೀಸ್‌ನ ಮುಖ್ಯಸ್ಥ ಸುವಾಜಿತ್ ರೇ, "ಬೆಲೆಗಳು ಚೇತರಿಸಿಕೊಳ್ಳಲು ಪ್ರಾರಂಭಿಸುತ್ತವೆ. ಸಾಂಸ್ಥಿಕ ಖರೀದಿದಾರರು ಸಾಮಾನ್ಯವಾಗಿ ಎರಡು ದಿನಗಳ ನಂತರ ಚಂದಾದಾರಿಕೆ ಆರಂಭ ಮಾಡುತ್ತಾರೆ. ಈಗಾಗಲೇ 33 ಪ್ರತಿಶತದಷ್ಟು ಚಂದಾದಾರಿಕೆಯಾಗಿದೆ. ಅದು ದೊಡ್ಡದು. ಶುಕ್ರವಾರ ಶನಿವಾರದ ವೇಳೆಗೆ ಗ್ರೇ ಮಾರ್ಕೆಟ್ ಚೇತರಿಕೆ ಕಾಣಲಿದೆ," ಅದು ರೂ 130 ಕ್ಕೆ ಏರಬಹುದು," ಎಂದು ತಿಳಿಸಿದ್ದಾರೆ.

English summary

LIC IPO: Repo Rate hike causes grey market premium to Decrease by 30%

LIC IPO: Repo Rate hike causes grey market premium to Decrease by 30%.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X