For Quick Alerts
ALLOW NOTIFICATIONS  
For Daily Alerts

ಎಲ್‌ಐಸಿ ಐಪಿಒ ಷೇರು ಹಂಚಿಕೆ ದಿನ: ಪರಿಶೀಲನೆ ಮಾಡುವುದು ಹೇಗೆ?

|

ಭಾರತೀಯ ಜೀವ ವಿಮಾ ನಿಗಮದ ದೇಶದ ಅತಿದೊಡ್ಡ ಸಾರ್ವಜನಿಕ ವಿತರಣೆಯು ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿದೆ. ಅಂತಿಮ ಬಿಡ್ಡಿಂಗ್ ದಿನದಂದು, ಒಟ್ಟು ಚಂದಾದಾರಿಕೆಯು 2.95 ಪಟ್ಟು ಹೆಚ್ಚಾಗಿದೆ, ಪಾಲಿಸಿದಾರರ ಚಂದಾದಾರಿಕೆಯು ಗರಿಷ್ಠ 6.11 ಪಟ್ಟು, ನಂತರ ಉದ್ಯೋಗಿ ಬಿಡ್ 4.4 ಪಟ್ಟು ಅಧಿಕವಾಗಿದೆ.

 

ಎಚ್‌ಎನ್‌ಐ ಕೋಟಾ ಚಂದಾದಾರಿಕೆಯು ನಂತರ 2.91 ಬಾರಿ ಬಿಡ್‌ ಆಗಿದೆ. ಕ್ಯೂಐಬಿ ಭಾಗವು 2.83 ಬಾರಿ ಚಂದಾದಾರಿಕೆ ಮಾಡಲಾಗಿದೆ. ಇದಲ್ಲದೆ, ಚಿಲ್ಲರೆ ಕೋಟಾವು 1.99 ಬಾರಿ ಚಂದಾದಾರಿಕೆಯನ್ನು ಹೊಂದಿದೆ. ಜಾಗತಿಕವಾಗಿ ಅನಿಶ್ಚಿತತೆಯ ನಡುವೆ ಎಲ್‌ಐಸಿ ಐಪಿಒ ಮೇಲೆ ವಿದೇಶಿ ಹೂಡಿಕೆದಾರರು ಹೆಚ್ಚು ಹೂಡಿಕೆ ಮಾಡಿರಲಿಲ್ಲ. ಹಲವಾರು ಅಂಶಗಳು ಎಲ್‌ಐಸಿ ಹೂಡಿಕೆದಾರರ ಮೇಲೆ ಪ್ರಭಾವ ಬೀರಿದ್ದವು. ಆದರೆ ಕೊನೆಯ ಕ್ಷಣದಲ್ಲಿ ವಿದೇಶಿ ಹೂಡಿಕೆದಾರರು ಎಲ್‌ಐಸಿ ಐಪಿಒ ಮೇಲೆ ಹೂಡಿಕೆ ಮಾಡಿದ್ದಾರೆ.

ಕೊನೆಯ ಕ್ಷಣದಲ್ಲಿ ಹರಿದು ಬಂತು ಎಲ್‌ಐಸಿ ಐಪಿಒಗೆ ವಿದೇಶಿ ಹೂಡಿಕೆಕೊನೆಯ ಕ್ಷಣದಲ್ಲಿ ಹರಿದು ಬಂತು ಎಲ್‌ಐಸಿ ಐಪಿಒಗೆ ವಿದೇಶಿ ಹೂಡಿಕೆ

ಈಗ ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಎಲ್‌ಐಸಿ ಐಪಿಒದಲ್ಲಿ ಹೂಡಿಕೆ ಮಾಡಿದ ಬಳಿಕ, ಎಲ್ಐಸಿ ಷೇರು ಹಂಚಿಕೆ ಯಾವಾಗ ಸಂಭವಿಸುತ್ತದೆ ಮತ್ತು ಅದರ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು ಎಂದು ತಿಳಿಯುವ ಕುತೂಹಲವಿಲ್ಲವೇ? ಇಲ್ಲಿದೆ ಸಂಪೂರ್ಣ ವಿವರ ಮುಂದೆ ಓದಿ...

 ಎಲ್‌ಐಸಿ ಐಪಿಒ ಷೇರು ಹಂಚಿಕೆ ದಿನಾಂಕ

ಎಲ್‌ಐಸಿ ಐಪಿಒ ಷೇರು ಹಂಚಿಕೆ ದಿನಾಂಕ

ಎಲ್‌ಐಸಿ ಐಪಿಒ ಷೇರುಗಳ ಹಂಚಿಕೆಯು ಮೇ 12, 2022 ರಂದು ಸಂಭವಿಸುತ್ತದೆ. "ಮೇ 4 ರಂದು ಪ್ರಾರಂಭವಾದ ಎಲ್‌ಐಸಿ ಐಪಿಒ ಅಂತಿಮ ದಿನದಂದು 2.95 ಬಾರಿ ಚಂದಾದಾರಿಕೆಯನ್ನು ಕಂಡಿದೆ. 16.20 ಕೋಟಿ ಷೇರುಗಳಿದ್ದು, 47.83 ಕೋಟಿ ಈಕ್ವಿಟಿ ಷೇರುಗಳಿಗೆ ಬಿಡ್‌ಗಳನ್ನು ಎಲ್‌ಐಸಿ ಐಪಿಒ ಸ್ವೀಕರಿಸಿದೆ. ಎಲ್‌ಐಸಿ ಐಪಿಒ ಕಾರಣದಿಂದಾಗಿ ಅನೇಕ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ. ಎಲ್ಐಸಿ ಐಪಿಒ ಹಂಚಿಕೆ ಮೇ 12 ರಂದು ನಡೆಯಲಿದೆ ಎಂದು ದೀಪಂ ಕಾರ್ಯದರ್ಶಿ ಪಾಂಡೆ ತಿಳಿಸಿದ್ದಾರೆ.

 ಬಿಎಸ್‌ಇ ಮೂಲಕ ಪರಿಶೀಲನೆ ಹೇಗೆ?

ಬಿಎಸ್‌ಇ ಮೂಲಕ ಪರಿಶೀಲನೆ ಹೇಗೆ?

ಹಂತ 1: ನೀವು ಬಿಎಸ್‌ಇ ಲಿಂಕ್ ಗೆ ಭೇಟಿ ನೀಡಬೇಕು
ಹಂತ 2: 'Equity' ಯನ್ನು ಆಯ್ಕೆ ಮಾಡಿಕೊಳ್ಳಬೇಕು
ಹಂತ 3: ಡ್ರಾಪ್‌ಡೌನ್‌ನಿಂದ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾವನ್ನು ಆಯ್ಕೆ ಮಾಡಿಕೊಳ್ಳಬೇಕು
ಹಂತ 4: ಅರ್ಜಿ ಸಂಖ್ಯೆ ಅಥವಾ ಪ್ಯಾನ್ ಸಂಖ್ಯೆ ನಮೂದಿಸಿ.
ಹಂತ 5: I'm not a robot ಎಂದು ಹೇಳುವ ಬಾಕ್ಸ್‌ನಲ್ಲಿ ಚೆಕ್ ಮಾಡಿ
ಹಂತ 6: ಹುಡುಕಾಟ ಆಯ್ಕೆಯ ಮೇಲೆ ಕೊನೆಯ ಕ್ಲಿಕ್ ಮಾಡಿದರೆ ನಿಮಗೆ ಮಾಹಿತಿ ಲಭ್ಯವಾಗಲಿದೆ

 ಕೆಫಿನ್ ಟೆಕ್ನಾಲಜೀಸ್ ಮೂಲಕ ಪರಿಶೀಲಿಸುವುದು ಹೇಗೆ?
 

ಕೆಫಿನ್ ಟೆಕ್ನಾಲಜೀಸ್ ಮೂಲಕ ಪರಿಶೀಲಿಸುವುದು ಹೇಗೆ?

ಹಂತ 1: ಕೆಫಿನ್‌ನಲ್ಲಿ ಎಲ್‌ಐಸಿ ಐಪಿಒ ಸ್ಥಿತಿಯನ್ನು ಪರಿಶೀಲನೆ ಮಾಡಲು https://kprism.kfintech.com/ipostatus ಅಥವಾ https://kcas.kfintech.com/ipostatus ಲಿಂಕ್‌ಗಳಲ್ಲಿ ಒಂದನ್ನು ಕ್ಲಿಕ್ ಮಾಡಬೇಕು
ಹಂತ 2: ಪ್ರಸ್ತುತ IPO Allotment Status ಮೇಲೆ ಕ್ಲಿಕ್ ಮಾಡಿ. ಎಲ್‌ಐಸಿ ಐಪಿಒ ಷೇರು ಹಂಚಿಕೆ ಸ್ಥಿತಿ ಅಂತಿಮಗೊಂಡ ಬಳಿಕ ನಿಮಗೆ ಈ ಆಯ್ಕೆ ಲಭ್ಯವಾಗಲಿದೆ
ಹಂತ 3: ಪ್ಯಾನ್ ಐಡಿ, ಅಪ್ಲಿಕೇಶನ್ ಸಂಖ್ಯೆ ಅಥವಾ ಕ್ಲೈಂಟ್ ಐಡಿ ಎಂದಿರುವ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 4: ವಿವರಗಳನ್ನು ನಮೂದಿಸಿ ಮತ್ತು ಕ್ಯಾಪ್ಚಾ ಮೇಲೆ ಕ್ಲಿಕ್ ಮಾಡಿ, ನಿಮ್ಮ ವಿವರ ಪರಿಶೀಲನೆ ಬಳಿಕ ನಿಮಗೆ ಮಾಹಿತಿ ಲಭ್ಯವಾಗಲಿದೆ

 ಗ್ರೇ ಮಾರ್ಕೆಟ್‌ನಲ್ಲಿ ಕುಸಿದ ಪ್ರೀಮಿಯಂ

ಗ್ರೇ ಮಾರ್ಕೆಟ್‌ನಲ್ಲಿ ಕುಸಿದ ಪ್ರೀಮಿಯಂ

ಎಲ್ಐಸಿ ಐಪಿಒ ಗ್ರೇ ಮಾರ್ಕೆಟ್ ಪ್ರೀಮಿಯಂನಲ್ಲಿ ಕುಸಿತ ಕಂಡಿದೆ. ಇಂದಿಗೆ ಗ್ರೇ ಮಾರ್ಕೆಟ್‌ನಲ್ಲಿ ಎಂಟು ರೂಪಾಯಿ ರಿಯಾಯಿತಿಗೆ ಎಲ್‌ಐಸಿ ಷೇರು ಬೆಲೆ ಇದೆ. ಸತತ ಒಂದು ವಾರದಿಂದ ಗ್ರೇ ಮಾರ್ಕೆಟ್‌ನಲ್ಲಿ ಎಲ್‌ಐಸಿ ಐಪಿಒ ಕುಸಿತ ಕಾಣುತ್ತಿದೆ. ಇದೀಗ ವಿತರಣೆ ಬೆಲೆಗಿಂತ ಕಡಿಮೆಯಾಗಿದೆ. ಎಲ್ಐಸಿ ಐಪಿಒಗೂ ಮುನ್ನ ಸುಮಾರು 92 ರೂಪಾಯಿವರೆಗೂ ಬೆಲೆ ಇತ್ತು. ಆದರೆ ನಂತರದಲ್ಲಿ ಬೆಲೆ ಕುಸಿದಿದೆ.

English summary

LIC IPO Shares Allotment Date: Know When & How To Check Status, GMP Ahead Of Listing

LIC IPO Shares Allotment Date: Know When & How To Check Status, GMP Ahead Of Listing.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X