For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಜೀವನ್ ತರುಣ್: ಯುವ ಜನತೆಗಾಗಿ ಮನಿ- ಬ್ಯಾಕ್ ಪಾಲಿಸಿ

By ಶಾರ್ವರಿ
|

ವಿಶೇಷವಾಗಿ ಭಾರತದ ಯುವ ಜನತೆಗೆ ಅನುಕೂಲವಾಗುವಂತೆ ಎಲ್‌ಐಸಿಯ 'ಜೀವನ್ ತರುಣ್' ಮನಿ-ಬ್ಯಾಕ್ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯು ಬೆಳೆಯುತ್ತಿರುವ ಮಕ್ಕಳ ಶೈಕ್ಷಣಿಕ ಮತ್ತು ಇತರ ಅಗತ್ಯಗಳನ್ನು ಪೂರೈಸುತ್ತದೆ. ಅಂದರೆ ಮಕ್ಕಳು 20 ರಿಂದ 24 ವರ್ಷಕ್ಕೆ ಕಾಲಿಡುವ ಒಳಗೆ 'ವಾರ್ಷಿಕ ಸರ್ವೈವಲ್ ಬೆನಿಫಿಟ್' ಪಾವತಿಗಳನ್ನು ಪಡೆಯಲು ಅರ್ಹರಾಗುತ್ತಾರೆ.

 

ಮಕ್ಕಳು 25 ವರ್ಷ ಪೂರೈಸಿದ ತಕ್ಷಣ ಪಾಲಿಸಿ ಮೆಚ್ಯೂರಿಟಿ ಆಗುತ್ತದೆ ಮತ್ತು ಸಂಪೂರ್ಣ ಪ್ರಯೋಜನ ದೊರಕುತ್ತದೆ. ಪ್ರಸ್ತುತ ಈ ಲೇಖನವು ಮನಿ-ಬ್ಯಾಕ್ ಬಗ್ಗೆ ಚರ್ಚಿಸುತ್ತದೆ. ಜೊತೆಗೆ ಲಾಭದ ಲೆಕ್ಕಾಚಾರದೊಂದಿಗೆ, ನಿರ್ದಿಷ್ಟ ಪ್ರಮಾಣದ ಹೂಡಿಕೆಯಿಂದ ನೀವು ಎಷ್ಟು ಲಾಭ ಪಡೆಯುತ್ತೀರಿ ಎಂಬುದರ ಕುರಿತು ಒಂದಷ್ಟು ಮಾಹಿತಿಯನ್ನೂ ಒದಗಿಸುತ್ತದೆ.

‘ಜೀವನ್ ತರುಣ್’ ಮಾನದಂಡಗಳೇನು?

‘ಜೀವನ್ ತರುಣ್’ ಮಾನದಂಡಗಳೇನು?

ಎಲ್‌ಐಸಿಯ 'ಜೀವನ್ ತರುಣ್'ಗೆ ಅರ್ಜಿ ಸಲ್ಲಿಸಲು ಮಗುವಿಗೆ ಕನಿಷ್ಠ 90 ದಿನಗಳು ಮತ್ತು ಗರಿಷ್ಠ 12 ವರ್ಷ ತುಂಬಿರಬೇಕು. ಮಗುವಿನ ಪರವಾಗಿ ಪೋಷಕರೂ ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕನಿಷ್ಠ ಅಥವಾ ಗರಿಷ್ಠ ಮೆಚ್ಯೂರಿಟಿ ಅವಧಿ 25 ವರ್ಷಗಳಾಗಿರುತ್ತದೆ. ಕನಿಷ್ಠ ವಿಮಾ ಮೊತ್ತ 75 ಸಾವಿರ. ಗರಿಷ್ಠ ವಿಮಾ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಪ್ರೀಮಿಯಂ ಪಾವತಿ ಅವಧಿ 20 ವರ್ಷ ಆಗಿರುತ್ತದೆ. ಪಾಲಿಸಿಯು ಪೂರ್ಣ ಲಾಭ 25 ವರ್ಷ ಪೂರೈಸಿದ ನಂತರ ಸಿಗುತ್ತದೆ. ಮಕ್ಕಳಿಗಾಗಿ ಇರುವ ಜೀವ ವಿಮೆ ಉಳಿತಾಯ ಯೋಜನೆ ಇದಾಗಿದ್ದು, ರಕ್ಷಣೆ ಮತ್ತು ಉಳಿತಾಯ ಎರಡನ್ನೂ ನೀಡುತ್ತದೆ.

ಮೆಚ್ಯೂರಿಟಿ ಪ್ರಯೋಜನಗಳು
 

ಮೆಚ್ಯೂರಿಟಿ ಪ್ರಯೋಜನಗಳು

ಎಲ್‌ಐಸಿ ಜೀವನ್ ತರುಣ್ ಯೋಜನೆಯಲ್ಲಿ ಮೆಚ್ಯೂರಿಟಿ ಪ್ರಯೋಜನಗಳು ಸಾಕಷ್ಟು ಲಾಭದಾಯಕವಾಗಿವೆ. ಪಾಲಿಸಿಯ ಅಡಿಯಲ್ಲಿ ಮೆಚ್ಯೂರಿಟಿ ವಯಸ್ಸು 25 ವರ್ಷಗಳು ಎಂದು ಮೊದಲೇ ಉಲ್ಲೇಖಿಸಲಾಗಿದೆ. ಮೆಚ್ಯೂರಿಟಿಯ ಮೇಲೆ ವಿಮಾ ಮೊತ್ತದ ಜೊತೆಗೆ ಸಿಂಪಲ್ ರಿವರ್ಷನರಿ ಬೋನಸ್‌ಗಳು (ಅಂತಿಮ ಹೆಚ್ಚುವರಿ ಬೋನಸ್, ಮತ್ತೇನಾದರೂಇದ್ದರೆ) ಪಾಲಿಸಿದಾರರಿಗೆ ಮೆಚ್ಯೂರಿಟಿ ಪ್ರಯೋಜನಗಳ ಅಡಿಯಲ್ಲಿ ದೊರೆಯುತ್ತದೆ. ಮೆಚ್ಯೂರಿಟಿ ಪ್ರಯೋಜನಗಳಿಗಾಗಿ ವಿಮಾ ಮೊತ್ತವು 4 ವಿಭಿನ್ನ ಆಯ್ಕೆಗಳ ಮೇಲೆ ಬದಲಾಗುತ್ತದೆ.

ಆಯ್ಕೆ 1 ರ ಅಡಿಯಲ್ಲಿ ಮೆಚ್ಯೂರಿಟಿ ಪ್ರಯೋಜನಗಳು ವಿಮಾ ಮೊತ್ತದ 100% ಆಗಿರುತ್ತದೆ, ಆಯ್ಕೆ 2 ರ ಅಡಿಯಲ್ಲಿ ಮೆಚ್ಯೂರಿಟಿ ಪ್ರಯೋಜನಗಳು ವಿಮಾ ಮೊತ್ತದ 75% ಆಗಿರುತ್ತದೆ, ಆಯ್ಕೆ 3 ರ ಅಡಿಯಲ್ಲಿ ಮೆಚ್ಯೂರಿಟಿ ಪ್ರಯೋಜನಗಳು ವಿಮಾ ಮೊತ್ತದ 50% ಆಗಿರುತ್ತದೆ ಮತ್ತು ಆಯ್ಕೆ 4 ರ ಅಡಿಯಲ್ಲಿ, ಮುಕ್ತಾಯದ ಪ್ರಯೋಜನಗಳು ವಿಮಾ ಮೊತ್ತದ 25% ಆಗಿರುತ್ತದೆ.

ಕಂತುಗಳಲ್ಲಿ ಮೆಚ್ಯೂರಿಟಿ ಬೆನಿಫಿಟ್ ಅನ್ನು ಸ್ವೀಕರಿಸಲು ಕೆಲವೊಂದು ಆಯ್ಕೆಗಳಿವೆ. ನೀವು 5 ಅಥವಾ 10 ಅಥವಾ 15 ವರ್ಷಗಳ ಆಯ್ಕೆ ಅವಧಿ ಜೊತೆಗೆ ಒಟ್ಟಾರೆ ಪ್ರಯೋಜನಗಳನ್ನು ಪಡೆಯಬಹುದು. 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜೀವ ವಿಮಾದಾರರಿಂದ ಒಬ್ಬರು ಈ ಆಯ್ಕೆಯನ್ನು ಚಲಾಯಿಸಬಹುದು.

ಸಾವಿನ ನಂತರದ ಪ್ರಯೋಜನಗಳು

ಸಾವಿನ ನಂತರದ ಪ್ರಯೋಜನಗಳು

ಪಾಲಿಸಿ ಮೆಚ್ಯೂರಿಟಿ ಆಗುವ ಮೊದಲೇ ಪಾಲಿಸಿದಾರ ಮರಣವನ್ನಪ್ಪಿದರೆ ಯಾವುದೇ ತೆರಿಗೆ ಇಲ್ಲದೆ ಒಟ್ಟು ಪ್ರೀಮಿಯಂ ಹಣದ ಜೊತೆ ಕೆಲವೊಂದು ಬೋನಸ್ ಹೆಚ್ಚುವರಿ ಆಗಿ ಸೇರಿಸಿ ಕೊಡುತ್ತಾರೆ.

ಎಲ್ ಐಸಿ ಜೀವನ್ ತರುಣ್ ಯೋಜನೆಯಲ್ಲಿ ಡೆತ್ ಬೆನಿಫಿಟ್ಸ್ ಅಂದರೆ ಪಾಲಿಸಿದಾರ ಮೃತಪಟ್ಟರೆ ಸಿಗುವ ವಿಮಾ ಮೊತ್ತವಾಗಿದೆ. ಇದರ ಪ್ರಕಾರ, ಸಾವಿನ ಮೇಲಿನ ವಿಮಾ ಮೊತ್ತವು ವಾರ್ಷಿಕ ಪ್ರೀಮಿಯಂನ 7 ಪಟ್ಟು ಅಥವಾ ವಿಮಾ ಮೊತ್ತದ 125% ಕ್ಕಿಂತ ಹೆಚ್ಚಾಗಿರುತ್ತದೆ. ಈ ಡೆತ್ ಬೆನಿಫಿಟ್ ಸಾವಿನ ದಿನಾಂಕದವರೆಗೆ ಪಾವತಿಸಿದ ಒಟ್ಟು ಪ್ರೀಮಿಯಂಗಳ 105% ಕ್ಕಿಂತ ಕಡಿಮೆಯಿರುವುದಿಲ್ಲ.

ಪಾಲಿಸಿದಾರರ ಕುಟುಂಬಕ್ಕೆ ಒಟ್ಟು ಮೊತ್ತದ ಬದಲಿಗೆ 5 ಅಥವಾ 10 ಅಥವಾ 15 ವರ್ಷಗಳವರೆಗೆ ಕಂತುಗಳಲ್ಲಿ ಮರಣ ಪ್ರಯೋಜನವನ್ನು ಪಡೆಯುವ ಆಯ್ಕೆಯೂ ಇದೆ.ಮಾಸಿಕ ಅವಧಿಗೆ ಇದು 5 ಸಾವಿರ, ತ್ರೈಮಾಸಿಕಕ್ಕೆ 15 ಸಾವಿರ, ಅರ್ಧ ವಾರ್ಷಿಕಕ್ಕೆ 25 ಸಾವಿರ ಮತ್ತು ವಾರ್ಷಿಕ ಅವಧಿಗೆ 50 ಸಾವಿರಗಳನ್ನು ಪಡೆಯಬಹುದು.
ಸರ್ವೈವಲ್ ಬೆನಿಫಿಟ್ಸ್

ಸರ್ವೈವಲ್ ಬೆನಿಫಿಟ್ಸ್

ಪಾಲಿಸಿಯ ಅವಧಿಯಲ್ಲಿ ಪಡೆಯಬೇಕಾದ ಸರ್ವೈವಲ್ ಬೆನಿಫಿಟ್‌ ಅನ್ನು ನೀವು 4 ರೀತಿಯಲ್ಲಿ ಆಯ್ಕೆ ಮಾಡಬಹುದು. ಆಯ್ಕೆ 1 ರ ಅಡಿಯಲ್ಲಿ, ಯಾವುದೇ ಸರ್ವೈವಲ್ ಪ್ರಯೋಜನವಿಲ್ಲ ಮತ್ತು ಮೆಚ್ಯೂರಿಟಿ ಪ್ರಯೋಜನವು ವಿಮಾ ಮೊತ್ತದ 100% ಆಗಿದೆ.

ಆಯ್ಕೆ 2 ರ ಅಡಿಯಲ್ಲಿ, ಸರ್ವೈವಲ್ ಬೆನಿಫಿಟ್ 5 ವರ್ಷಗಳವರೆಗೆ ಪ್ರತಿ ವರ್ಷ ವಿಮಾ ಮೊತ್ತದ 5% ಆಗಿರುತ್ತದೆ ಮತ್ತು ಮೆಚ್ಯೂರಿಟಿ ಲಾಭವು ವಿಮಾ ಮೊತ್ತದ 75% ಆಗಿದೆ.ಆಯ್ಕೆ 3 ರ ಅಡಿಯಲ್ಲಿ, ಸರ್ವೈವಲ್ ಬೆನಿಫಿಟ್ 5 ವರ್ಷಗಳವರೆಗೆ ಪ್ರತಿ ವರ್ಷ ವಿಮಾ ಮೊತ್ತದ 10%, ಮತ್ತು ಮೆಚ್ಯೂರಿಟಿ ಪ್ರಯೋಜನವು ವಿಮಾ ಮೊತ್ತದ 50% ಆಗಿದೆ.ಆಯ್ಕೆ 4 ರ ಅಡಿಯಲ್ಲಿ, ಸರ್ವೈವಲ್ ಬೆನಿಫಿಟ್ 5 ವರ್ಷಗಳವರೆಗೆ ಪ್ರತಿ ವರ್ಷ ವಿಮಾ ಮೊತ್ತದ 15% ಆಗಿರುತ್ತದೆ ಮತ್ತು ಮೆಚ್ಯೂರಿಟಿ ಲಾಭವು ವಿಮಾ ಮೊತ್ತದ 25% ಆಗಿದೆ.
 ಪ್ರಯೋಜನ, ಲೆಕ್ಕಾಚಾರಗಳು

ಪ್ರಯೋಜನ, ಲೆಕ್ಕಾಚಾರಗಳು

ಪ್ರತಿ ಪಾಲಿಸಿಯ ಮೇಲೆ, 20 ವರ್ಷಗಳು ಪೂರ್ಣಗೊಂಡ ನಂತರ ಅಥವಾ ವಾರ್ಷಿಕೋತ್ಸವ ಮತ್ತು ನಂತರದ ಪ್ರತಿ 4 ಪಾಲಿಸಿಯ ನಿಶ್ಚಿತ ಶೇಕಡಾವಾರು ಮೊತ್ತವನ್ನು ಪಾವತಿಸಲಾಗುತ್ತದೆ. ಎಲ್ಐಸಿ ಪ್ರಕಾರ, ಇದು ಸ್ಥಿರ ಶೇಕಡಾವಾರು ಆಯ್ಕೆ ಆಗಿರುತ್ತದೆ.

ಪಾಲಿಸಿ ಮೊತ್ತ ಪ್ರಯೋಜನ ಮನಿ ಬ್ಯಾಕ್ಬೋನಸ್ ಒಟ್ಟು ಅಂದಾಜು ಪ್ರಯೋಜನ
 100000 125000 5000 45500 145500
 500000 625000 25000 227500 727500

ಎಲ್ಐಸಿ ಅಧಿಕೃತ ಮಾಹಿತಿ ಪ್ರಕಾರ, ವಾರ್ಷಿಕ ಅಥವಾ ಅರ್ಧ-ವಾರ್ಷಿಕ ಅಥವಾ ತ್ರೈಮಾಸಿಕ ಪ್ರೀಮಿಯಂಗಳ ಪಾವತಿಗೆ 30 ದಿನಗಳ ಗ್ರೇಸ್ ಅವಧಿ ನೀಡಲಾಗಿದೆ. ಮೊದಲ ಪಾವತಿಸದ ಪ್ರೀಮಿಯಂನ ದಿನಾಂಕದಿಂದ ಮಾಸಿಕ ಪ್ರೀಮಿಯಂಗಳಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.

English summary

LIC Jeevan Tarun - New Children Plan / Policy - Details, Benefits, Features and How to Apply in Kannada

This article has discussed this money back plan by LIC, along with a benefit calculation, that you can have an approximate idea about how much will you benefit from a certain amount of investment.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X