For Quick Alerts
ALLOW NOTIFICATIONS  
For Daily Alerts

ಎಲ್‌ಐಸಿ ಪಾಲಿಸಿಗೆ ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ?

|

ದೇಶದಲ್ಲಿ ಆಧಾರ್‌ ಕಾರ್ಡ್ ಹೇಗೆ ಎಲ್ಲಾ ವಿಭಾಗದಲ್ಲಿ ಕಡ್ಡಾಯವಾಗುತ್ತಲಿದೆಯೋ ಹಾಗೆಯೇ ಪ್ಯಾನ್‌ ಕಾರ್ಡ್ ಅನ್ನು ಕೂಡಾ ಕಡ್ಡಾಯಗೊಳಿಸಿದೆ. ಹೂಡಿಕೆ, ಉಳಿತಾಯ ಹಾಗೂ ಆನ್‌ಲೈನ್‌ ವಹಿವಾಟಿಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌) ಕಡ್ಡಾಯವಾಗಿದೆ.

 

ಕೇಂದ್ರ ಸರ್ಕಾರವು ಈ ಪ್ಯಾನ್‌ ಸಂಖ್ಯೆಯನ್ನು ಎಲ್ಲಾ ಹೂಡಿಕೆ, ಉಳಿತಾಯದಲ್ಲಿ ಲಿಂಕ್‌ ಮಾಡಿಕೊಳ್ಳಲು ಒತ್ತಿ ಹೇಳುತ್ತಿದೆ. ಹಾಗೆಯೇ ಪ್ಯಾನ್‌ಗೆ ಆಧಾರ್‌ ಲಿಂಕ್‌ ಮಾಡುವುದನ್ನು 2022, ಮಾರ್ಚ್ 31 ರ ವರೆಗೆ ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ.

 

ಗಮನಿಸಿ: ಆಧಾರ್‌ ಅಪ್‌ಡೇಟ್‌, ವೇರಿಫಿಕೇಶನ್‌ಗೆ ಯಾವ ದಾಖಲೆ ಬೇಕು?ಗಮನಿಸಿ: ಆಧಾರ್‌ ಅಪ್‌ಡೇಟ್‌, ವೇರಿಫಿಕೇಶನ್‌ಗೆ ಯಾವ ದಾಖಲೆ ಬೇಕು?

ಇನ್ನು ಪ್ಯಾನ್‌ ಸಂಖ್ಯೆಯನ್ನು ಕೇಂದ್ರ ಸರ್ಕಾರ ಎಲ್ಲಾ ವಿಭಾಗಗಳಲ್ಲಿ ಕಡ್ಡಾಯಗೊಳಿಸಿರುವ ಹಿನ್ನೆಲೆ ಈಗ ಜೀವ ವಿಮಾ ನಿಗಮ (ಎಲ್‌ಐಸಿ) ಯು ಪ್ಯಾನ್‌ ಸಂಖ್ಯೆ ಲಿಂಕ್‌ ಮಾಡುವುದನ್ನು ಕಡ್ಡಾಯಗೊಳಿಸಿದೆ. ತಮ್ಮ ಗ್ರಾಹಕರಿಗೆ ಎಲ್‌ಐಸಿ ಪಾಲಿಸಿಯಲ್ಲಿ ಶೀಘ್ರವೇ ಪ್ಯಾನ್‌ ನಂಬರ್‌ ಅನ್ನು ಲಿಂಕ್‌ ಮಾಡುವಂತೆ ಎಲ್‌ಐಸಿ ತಿಳಿಸಿದೆ. ಹಾಗಾದರೆ ಪ್ಯಾನ್‌ ಅನ್ನು ಎಲ್‌ಐಸಿಗೆ ಹೇಗೆ ಲಿಂಕ್‌ ಮಾಡುವುದು ತಿಳಿಯಲು ಮುಂದೆ ಓದಿ.

ಎಲ್‌ಐಸಿ ಪಾಲಿಸಿಗೆ ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ?

ಎಲ್‌ಐಸಿಯೊಂದಿಗೆ ಪ್ಯಾನ್‌ ಸಂಖ್ಯೆಯನ್ನು ಲಿಂಕ್‌ ಮಾಡುವುದು ಹೇಗೆ?

ತಮ್ಮ ಪಾಲಿಸಿಯೊಂದಿಗೆ ಪ್ಯಾನ್‌ ಅನ್ನು ಲಿಂಕ್‌ ಮಾಡಲು ಹೂಡಿಕೆದಾರರು ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ಗೆ (licindia.in.) ಭೇಟಿ ನೀಡಬಹುದು. ಎಲ್ಲಾ ಗ್ರಾಹಕರಿಗೆ ಹಾಗೂ ಏಜೆಂಟ್‌ಗಳಿಗೆ ಯಾವುದೇ ತೊಂದರೆ ಉಂಟಾಗದಿರಲಿ ಎಂಬ ಕಾರಣಕ್ಕೆ ಎಲ್‌ಐಸಿಯು ಈ ಪಾಲಿಸಿಯೊಂದಿಗೆ ಪ್ಯಾನ್‌ ಅನ್ನು ಲಿಂಕ್‌ ಮಾಡುವ ಪ್ರಕ್ರಿಯೆಯನ್ನು ಬಹಳ ಸರಳವನ್ನಾಗಿಸಿದೆ. ಹಾಗಾದರೆ ಲಿಂಕ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

* ನಿಮ್ಮ ಪಾಲಿಸಿಯ ಎಲ್ಲಾ ದಾಖಲೆಗಳು ಹಾಗೂ ಪ್ಯಾನ್‌ ಕಾರ್ಡ್‌ ಅನ್ನು ಜೊತೆಯಾಗಿ ಇರಿಸಿಕೊಳ್ಳಿ
* ಎಲ್‌ಐಸಿ ಪಾಲಿಸಿಗೆ ನಿಮ್ಮ ಪ್ಯಾನ್‌ ಅನ್ನು ಲಿಂಕ್‌ ಮಾಡಲು, ಎಲ್‌ಐಸಿ ಯ ಅಧಿಕೃತ ವೆಬ್‌ಸೈಟ್‌ licindia.in. ಗೆ ನೀವು ಲಾಗ್‌ ಇನ್‌ ಆಗಬೇಕು
* ಅಲ್ಲಿ ನಿಮಗೆ ಆನ್‌ಲೈನ್‌ ಪ್ಯಾನ್‌ ರಿಜಿಸ್ಟ್ರೇಶನ್‌ (Online PAN Registration) ಆಯ್ಕೆಯು ಎಡ ಬದಿಯಲ್ಲಿ ಲಭ್ಯವಿದೆ. ಅದನ್ನು ಕ್ಲಿಕ್‌ ಮಾಡಿ
* ಆನ್‌ಲೈನ್‌ ಪ್ಯಾನ್‌ ರಿಜಿಸ್ಟ್ರೇಶನ್‌ ಮೇಲೆ ನೀವು ಕ್ಲಿಕ್‌ ಮಾಡಿದ ಬಳಿಕ 'Proceed' ಎಂಬ ಆಯ್ಕೆಯನ್ನು ನೀವು ಕ್ಲಿಕ್‌ ಮಾಡಬೇಕು
* ನಿಮ್ಮ ಇಮೇಲ್‌ ಐಡಿ, ಪ್ಯಾನ್‌, ಮೊಬೈಲ್‌ ನಂಬರ್‌ ಹಾಗೂ ಪಾಲಿಸಿ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ
* ಬಳಿಕ ಕಾಪ್ಚಾ (Captcha) ವನ್ನು ಸರಿಯಾಗಿ ಗಮನಿಸಿ ಹಾಕಿ
* ಬಳಿಕ ಒಟಿಪಿಗಾಗಿ ರಿಕ್ವೇಸ್‌ ಆಯ್ಕೆ ಒತ್ತಿ, ಅದು ನಿಮ್ಮ ಪಾಲಿಸಿಯೊಂದಿಗೆ ಲಿಂಕ್‌ ಆಗಿರುವ ಮೊಬೈಲ್‌ ಸಂಖ್ಯೆಗೆ ಬರಲಿದೆ
* ಬಳಿಕ ಈ ಒಟಿಪಿಯನ್ನು ನಿಮ್ಮ ಪೋರ್ಟಲ್‌ನಲ್ಲಿ ಸರಿಯಾಗಿ ನಮೂದಿಸಿ
* ಬಳಿಕ Submit ಆಯ್ಕೆಯನ್ನು ಒತ್ತಿ, ಆ ಬಳಿಕ ಪೇಜ್‌ನಲ್ಲಿ ನಿಮ್ಮ ಪ್ಯಾನ್‌ ರಿಜಿಸ್ಟ್ರೇಶನ್‌ ಯಶಸ್ವಿಯಾಗಿ ಆಗಿದೆ ಎಂದು ಬರಲಿದೆ.

ಎಲ್‌ಐಸಿ ಪಾಲಿಸಿಗೆ ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ?

ಈ ರೀತಿ ಬಹಳ ಸರಳವಾಗಿ ನೀವು ಎಲ್‌ಐಸಿ ಪಾಲಿಸಿಗೆ ನಿಮ್ಮ ಪ್ಯಾನ್‌ ಅನ್ನು ಲಿಂಕ್‌ ಮಾಡಬಹುದು.

ಏನಿದು ಸೈಬರ್‌ ವಿಮೆ, ನಿಮಗೇನು ಪ್ರಯೋಜನ?ಏನಿದು ಸೈಬರ್‌ ವಿಮೆ, ನಿಮಗೇನು ಪ್ರಯೋಜನ?

ಈ ಪ್ಯಾನ್‌ ಲಿಂಕ್‌ ಯಾಕೆ ಇಷ್ಟು ಅತ್ಯಗತ್ಯ?

ಕೇಂದ್ರ ಸರ್ಕಾರವು ಪ್ಯಾನ್‌ ಬಗ್ಗೆ ಈಗ ಅಧಿಕವಾಗಿ ಗಮನ ಹರಿಸುತ್ತಿದೆ. ಅದರಂತೆ ಎಲ್‌ಐಸಿಯು ಕೂಡಾ ತನ್ನ ಗ್ರಾಹಕರು ತಮ್ಮ ಪಾಲಿಸಿಯಲ್ಲಿ ಪ್ಯಾನ್‌ ಅನ್ನು ಲಿಂಕ್‌ ಮಾಡುವುದು ಉತ್ತಮ ಎಂದು ನಿರ್ಧರಿಸಿದೆ. ಇದಕ್ಕಾಗಿ ಆನ್‌ಲೈನ್‌ ಮೂಲಕವೇ ಬಹಳ ಸರಳವಾಗಿ ಪ್ಯಾನ್‌ ಅನ್ನು ಲಿಂಕ್‌ ಮಾಡುವ ಅವಕಾಶವನ್ನು ಎಲ್‌ಐಸಿ ನೀಡಿದೆ. ಪ್ಯಾನ್‌ನೊಂದಿಗೆ ಲಿಂಕ್‌ ಮಾಡಿದ ಬಳಿಕ ಹೊಸ ಎಲ್‌ಐಸಿ ಪಾಲಿಸಿಯನ್ನು ಕೂಡಾ ಮಾಡಬಹುದಾಗಿದೆ.

ಸರ್ಕಾರವು ನಿಮ್ಮ ಎಲ್ಲಾ ಹೂಡಿಕೆ, ಉಳಿತಾಯದ ಬಗ್ಗೆ ಬಹಳ ಪಾರದರ್ಶಕವಾಗಿ ತಿಳಿಯಲು ಸಾಧ್ಯವಾಗಲು ಪ್ಯಾನ್‌ ಸಹಕಾರಿಯಾಗಿದೆ. ಎಲ್‌ಐಸಿ ಪಾಲಿಸಿಗಳು ತೆರಿಗೆ ವಿನಾಯಿತಿ ಪಾಲಿಸಿಗಳು ಆಗಿದೆ. ಆದ್ದರಿಂದ ಪ್ಯಾನ್‌ ಈ ಎಲ್‌ಐಸಿ ಪಾಲಿಸಿಗೂ ಲಿಂಕ್‌ ಮಾಡುವುದು ಅತೀ ಮುಖ್ಯವಾಗಿದೆ. ಈ ಹಿನ್ನೆಲೆಯಿಂದಾಗಿ ಎಲ್‌ಐಸಿಯು ತಮ್ಮ ಗ್ರಾಹಕರು ತಮ್ಮ ಪಾಲಿಸಿಗೆ ಪ್ಯಾನ್‌ ಲಿಂಕ್‌ ಮಾಡುವಂತೆ ಮನವಿ ಮಾಡಿದ್ದಾರೆ. ಎಲ್ಲಾ ವಿಮೆ ಪಾಲಿಸಿ, ಹೂಡಿಕೆಗಳನ್ನು ಸರ್ಕಾರ ಹಾಗೂ ಹೂಡಿಕೆದಾರರ ನಡುವೆ ಪಾರದರ್ಶಕವಾಗಿ ಇರಿಸಲು ಎಲ್‌ಐಸಿ ಈ ನಿರ್ಧಾರವನ್ನು ಕೈಗೊಂಡಿದೆ.

English summary

LIC Urges Customers To Link PAN With LIC Policies: Check How, Explained process in Kannada

LIC Urges Customers To Link PAN With LIC Policies: Check How, Explained process in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X