For Quick Alerts
ALLOW NOTIFICATIONS  
For Daily Alerts

ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಬಂದಿದೆಯೇ?, ಹೀಗೆ ಪರಿಶೀಲನೆ ಮಾಡಿ

|

ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಆಗುತ್ತಿದ್ದಂತೆ ಜನರಿಗೆ ಕೇಂದ್ರ ಸರ್ಕಾರವು ಕೊಂಚ ರಿಲೀಫ್ ನೀಡಿದೆ. ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುವುದನ್ನು ಕೇಂದ್ರ ಸರ್ಕಾರ ಮತ್ತೆ ಆರಂಭ ಮಾಡಿದೆ. ಸರ್ಕಾರವು ಉಜ್ವಲ ಯೋಜನೆ ಆರಂಭ ಮಾಡಿದ ಬಳಿಕ ಸಬ್ಸಿಡಿಯನ್ನು ಆರಂಭ ಮಾಡಿದೆ.

ಎಲ್‌ಪಿಜಿ ಸಬ್ಸಿಡಿಯನ್ನು ಆರಂಭ ಮಾಡಿದ್ದ ಸರ್ಕಾರ ಬಳಿಕ ಜನರು ಎಲ್‌ಪಿಜಿ ಸಬ್ಸಿಡಿಯನ್ನು ತಾವಾಗಿಯೇ ಬಿಡುವಂತೆ ಹೇಳಿದ್ದರು. ಆದರೆ ಬಳಿಕ ಸಬ್ಸಿಡಿಯನ್ನು ನಿಲ್ಲಿಸಲಾಗಿದೆ. ಕೆಲವು ಜನರ ಖಾತೆಗೆ ಸಬ್ಸಿಡಿ ಬರುತ್ತಿದೆ ಎಂದು ಹೇಳಲಾದರೂ ಹಲವಾರು ಮಂದಿಗೆ ಸಬ್ಸಿಡಿ ಲಭ್ಯವಾಗುತ್ತಿಲ್ಲ.

 ಎಲ್‌ಪಿಜಿ ಸಬ್ಸಿಡಿ ನಿಯಮ ಬದಲಾವಣೆ: ಇನ್ಮುಂದೆ ಯಾರು ಅರ್ಹರು? ಎಲ್‌ಪಿಜಿ ಸಬ್ಸಿಡಿ ನಿಯಮ ಬದಲಾವಣೆ: ಇನ್ಮುಂದೆ ಯಾರು ಅರ್ಹರು?

ಜನರು ಸಬ್ಸಿಡಿ ಲಭ್ಯವಾಗುತ್ತಿಲ್ಲ ಎಂದು ದೂರು ನೀಡಲು ಆರಂಭ ಮಾಡಿದ ಬಳಿಕ ಸಬ್ಸಿಡಿಯನ್ನು ಮತ್ತೆ ಆರಂಭ ಮಾಡಲಾಗಿದೆ. ಎಲ್ ಪಿಜಿ ಸಿಲಿಂಡರ್ ಮೇಲೆ ನೀಡುತ್ತಿದ್ದ ಸಬ್ಸಿಡಿ ಮೊತ್ತವನ್ನು ಈ ಬಾರಿ ಕಡಿಮೆ ಮಾಡಲಾಗಿದೆ. ನಮಗೆ ಬರೀ ಸಿಲಿಂಡರ್‌ಗೆ 72.57 ರೂಪಾಯಿ ಮಾತ್ರ ಸಿಗುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

 ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಬಂದಿದೆಯೇ?, ಹೀಗೆ ಪರಿಶೀಲನೆ ಮಾಡಿ

ಮೂಲಗಳ ಪ್ರಕಾರ ಕೆಲವರ ಖಾತೆಗೆ ರೂ.72.57 ಬರುತ್ತಿದ್ದು, ಇನ್ನು ಕೆಲವರಿಗೆ ರೂ.158.52 ಅಥವಾ ರೂ.237.78 ಸಬ್ಸಿಡಿ ಹಂಚಿಕೆ ಆಗುತ್ತಿದೆ ಎಂದು ಜನರು ಹೇಳಿಕೊಳ್ಳುತ್ತಿದ್ದಾರೆ. ಹಾಗಾದರೆ ನಿಮ್ಮ ಬ್ಯಾಂಕ್ ಖಾತೆಗೆ ಎಷ್ಟು ಸಬ್ಸಿಡಿ ಬಂದಿದೆ ಎಂದು ನೀವು ಹೇಗೆ ಪರಿಶೀಲನೆ ಮಾಡುವುದು ಎಂದು ತಿಳಿಯಲು ಮುಂದೆ ಓದಿ...

ಎಲ್‌ಪಿಜಿ ಸಬ್ಸಿಡಿ ಪರಿಶೀಲನೆ ಹೇಗೆ?

* ಸಬ್ಸಿಡಿ ವಿವರಗಳನ್ನು ನೋಡಲು, ಈ ಲಿಂಕ್ ಗೆ ಭೇಟಿ ನೀಡಿ
* ಗ್ಯಾಸ್ ಸಿಲಿಂಡರ್ ಚಿತ್ರದ ಮೇಲೆ ಕ್ಲಿಕ್ ಮಾಡಿ
* ಸೇವಾ ಪೂರೈಕೆದಾರರ ವಿವರಗಳಿಗಾಗಿ ಲಾಗಿನ್ ಮಾಡಿ
* ಗ್ಯಾಸ್ ಪೂರೈಕೆದಾರರ ಸಂಪೂರ್ಣ ವಿವರ ಇರಲಿದೆ
* ಹೊಸ ಬಳಕೆದಾರರಿಗೆ ಬೇರೆಯೇ ಆಯ್ಕೆ ಲಭ್ಯವಾಗಲಿದೆ
* ಸಿಲಿಂಡರ್ ಬುಕ್ಕಿಂಗ್ ಹಿಸ್ಟರಿ ಪರಿಶೀಲನೆ ಮಾಡಿ
* ಈ ಹಿಸ್ಟರಿಯಲ್ಲಿ ನೀವು ಪಡೆಯುವ ಸಬ್ಸಿಡಿ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

English summary

LPG Gas Subsidy Resumes : Know How to Check for Subsidy Amount in Kannada

LPG Gas Subsidy Resumes; Have you received your LPG Gas subsidy? Here is how to check for Subsidy Amount in Kannada. Read on.
Story first published: Friday, June 10, 2022, 13:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X