For Quick Alerts
ALLOW NOTIFICATIONS  
For Daily Alerts

54 ವಯಸ್ಸಲ್ಲಿ ಉದ್ಯಮ ಆರಂಭ, 16,800 ಕೋಟಿ ಆಸ್ತಿ ಒಡೆಯ ಅಶೋಕ್ ಬೂಬ್ ಯಾರು?

|

ಭಾರತದ 100 ಶ್ರೀಮಂತ ವ್ಯಕ್ತಿಗಳ ಫೋರ್ಬ್ಸ್‌ನ ಪಟ್ಟಿಯಲ್ಲಿ ತನ್ನ 54 ವರ್ಷದಲ್ಲಿ ಅಂದರೆ ನಿವೃತ್ತಿಗೆ ಸಮೀಪವಾಗುತ್ತಿದ್ದ ವಯಸ್ಸಲ್ಲಿ ಉದ್ಯೋಗ ತೊರೆದು ಉದ್ಯಮ ಆರಂಭ ಮಾಡಿದ ಅಶೋಕ್ ಬೂಬ್ ಇದ್ದಾರೆ. ಸುಮಾರು 2.09 ಬಿಲಿಯನ್ ಡಾಲರ್ ಅಥವಾ 16,800 ಕೋಟಿ ರೂಪಾಯಿ ನಿವ್ವಳ ಆದಾಯ ಹೊಂದಿರುವ ಅಶೋಕ್ ಬೂಬ್ ಈ ಪಟ್ಟಿಯಲ್ಲಿ 94ನೇ ಸ್ಥಾನದಲ್ಲಿ ಇದ್ದಾರೆ.

ತನ್ನ 54 ವಯಸ್ಸಿನಲ್ಲಿ ಅಶೋಕ್ ಬೂಬ್ ಉದ್ಯೋಗದಿಂದ ನಿವೃತ್ತಿಯನ್ನು ಪಡೆದುಕೊಂಡದರು. 2006ರಲ್ಲಿ 54 ವಯಸ್ಸಾಗುತ್ತಿದ್ದಂತೆ ಅಶೋಕ್ ಬೂಬ್ ತನ್ನದೇ ಆದ ಉದ್ಯೋಗವನ್ನು ಆರಂಭ ಮಾಡಿ, ಉದ್ಯಮಿ ಎನಿಸಿಕೊಂಡಿದ್ದಾರೆ.

ಅತಿಹೆಚ್ಚು ಶತಕೋಟ್ಯಾಧಿಪತಿಗಳಿರುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನಅತಿಹೆಚ್ಚು ಶತಕೋಟ್ಯಾಧಿಪತಿಗಳಿರುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನ

ತನ್ನ 30 ವರ್ಷಗಳ ಉದ್ಯೋಗ ಜೀವನಕ್ಕೆ ಬಾಯ್ ಹೇಳುವ ಮುನ್ನ ಅಶೋಕ್ ಬೂಬ್ ಮಂಗಲಂ ಡ್ರಗ್ಸ್ ಆಂಡ್ ಆರ್ಗನಿಕ್ ಸಂಸ್ಥೆಯಲ್ಲಿ ಪ್ರೋಮೊಟಿಂಗ್ ಡೈರೆಕ್ಟರ್ ಆಗಿದ್ದರು. ಆದರೆ ತನ್ನ ಮಾಲೀಕರ ಜೊತೆಗೆ ಕೆಲವು ಭಿನ್ನಾಭಿಪ್ರಾಯ ಬಂದ ಕಾರಣದಿಂದಾಗಿ ಸಂಸ್ಥೆಯನ್ನು ತೊರೆದಿದ್ದಾರೆ. ಅದಾದ ಬಳಿಕ ತನ್ನ ಉದ್ಯಮವನ್ನು ತಮ್ಮ ಸೋದರಳಿಯನೊಂದಿಗೆ ಆರಂಭಿಸಿದ್ದಾರೆ.

 ಉದ್ಯಮ ಆರಂಭ ಮಾಡಿದ ಸಮಯ

ಉದ್ಯಮ ಆರಂಭ ಮಾಡಿದ ಸಮಯ

ಅಶೋಕ್ ಬೂಬ್ ಉದ್ಯಮವನ್ನು ತೊರೆದ ಸಂದರ್ಭದಲ್ಲೇ ಅವರ ಸೋದರಳಿಯ ಸಿದ್ಧಾರ್ತ್ ಸಿಕ್ಚಿ ಆರ್ಗನಿಕ್ ಕೆಮೆಸ್ಟ್ರೀಯಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು. ಅಂದರೆ ಮೇ 2006ರಲ್ಲಿ. ಬೂಬ್ ಹಾಗೂ ಸಿದ್ಧಾರ್ತ್ ಇಬ್ಬರೂ ಮುಂಬೈನ ಇನ್ಸಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಲ್ಲಿ ಪದವಿಯನ್ನು ಪಡೆದವರು. ಇಬ್ಬರಿಗೂ ಕೆಮಿಕಲ್ ಅಥವಾ ರಾಸಾಯನಿಕಗಳ ಬಗ್ಗೆ ಉತ್ತಮ ಅರಿವಿತ್ತು. ಅವರಿಬ್ಬರೂ ಜೊತೆಯಾಗಿ ಉದ್ಯಮವನ್ನು ಆರಂಭ ಮಾಡುವ ನಿರ್ಧಾರವನ್ನು ಮಾಡಿ ಗುಜರಾತ್‌ನ ವಾಪಿಯಲ್ಲಿ 300 ಚದರ ಮೀಟರ್‌ನ ಲ್ಯಾಬ್ ಅನ್ನು ತೆರೆದರು. ಲ್ಯಾಬ್ ತೆರೆದ ಬಳಿಕವೂ ಬಂಡವಾಳದ ಕೊರತೆ ಇತ್ತು ಹಾಗೂ ಯೋಜನೆಯನ್ನು ಸಂಪೂರ್ಣವಾಗಿ ಮಾಡಿರಲಿಲ್ಲ.

(image credit to forbes)

 ಪರಿಸರ ಕಲುಷಿತ: ಅಶೋಕ್ ನಡೆ

ಪರಿಸರ ಕಲುಷಿತ: ಅಶೋಕ್ ನಡೆ

ತಾನು 30 ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ದುಡಿದ ಕಾರಣದಿಂದಾಗಿ ಈ ಉದ್ಯಮದ ಮುಂದಿನ ಹಂತವು ಉತ್ತಮವಾಗಿರಬೇಕು ಎಂಬ ದೃಢ ನಿರ್ಧಾರವನ್ನು ಅಶೋಕ್ ಬೂಬ್ ಮಾಡಿಕೊಂಡಿದ್ದರು. ಆದರೆ ಭಾರತದಲ್ಲಿ ಹಲವಾರು ಪರಿಸರ ಸಂಬಂಧಿ ವಿಚಾರಗಳಿಂದಾಗಿ ವಾಪಿಯಲ್ಲಿನ ಲ್ಯಾಬ್‌ಗಳು ಮುಚ್ಚುವ ಪ್ರಕ್ರಿಯೆ ಆರಂಭವಾಗಿತ್ತು. ಈ ಸಂದರ್ಭದಲ್ಲೇ ಚೀನಾದಲ್ಲಿ ಲ್ಯಾಬ್‌ಗಳ ನೀರು ಬಿಡುಗಡೆಯಿಂದಾಗಿ ನದಿ ಕಲುಷಿತವಾಗಿರುವ ಸುದ್ದಿಯನ್ನು ನೋಡಿದ ಅಶೋಕ್ ಬೂಬ್ ಸಸ್ಟೆನೇಬಲ್ ಟೆಕ್ನಾಲಜಿಯತ್ತ ಚಿತ್ತ ಹರಿಸಿದರು. ಹಾಗೆಯೇ ತನ್ನ ಈ ಹಿಂದಿನ ಮಾಲೀಕರ ಸಂಸ್ಥೆಯೊಂದಿಗೆ ಸ್ಪರ್ಧಿಸುವ ಯಾವುದೇ ಉದ್ದೇಶವೂ ನನಗೆ ಇಲ್ಲ ಎಂದು ಕೂಡಾ ಹೇಳಿಕೊಂಡರು.

 ಸಂಸ್ಥೆಯ ಬೆಳವಣಿಗೆ ಹೇಗಿದೆ?

ಸಂಸ್ಥೆಯ ಬೆಳವಣಿಗೆ ಹೇಗಿದೆ?

ಅಶೋಕ್ ಬೂಬ್ ಹಾಗೂ ಸಿದ್ಧಾರ್ತ್ ಸಿಕ್ಚಿ ವಿಶೇಷ ರಾಸಾಯನಿಕಗಳನ್ನು ಉತ್ಪಾದನೆ ಮಾಡುವ ತಂತ್ರಜ್ಞಾನದ ಬೆಳವಣಿಗೆ ಕಾರ್ಯವನ್ನು ಆರಂಭ ಮಾಡಿದರು. ಪ್ರಸ್ತುತ ಕೆಲವೇ ಕೆಲವೂ ಸಂಸ್ಥೆಗಳು ಈ ರಾಸಾಯನಿಕ ಉತ್ಪಾದನೆ ಮಾಡುತ್ತದೆ. ಇದಕ್ಕೆ ಸಾಕಷ್ಟು ಸಮಯ ಹಾಗೂ ಸಂಶೋದನೆ ಅಗತ್ಯವಾಗಿದೆ. ಅದಾದ ಬಳಿಕ ಅಶೋಕ್, ಸಿಕ್ಚಿ ಹೈಡ್ರೋಕ್ಸೈಲೇಷನ್ ಟೆಕ್ನಾಲಜಿಯತ್ತ ಗಮನಹರಿಸಿದರು. 2009-2010ರ ಅವಧಿಗೆ ಈ ಉದ್ಯಮವು ಸುಮಾರು 10 ಕೋಟಿ ಆದಾಯವನ್ನು ಹೊಂದಿರುವ ಉದ್ಯಮವಾಗಿ ಬೆಳವಣಿಗೆ ಹೊಂದಿತು.

 ದೇಶಕ್ಕೆ ಸಂಸ್ಥೆಯ ಕೊಡುಗೆ

ದೇಶಕ್ಕೆ ಸಂಸ್ಥೆಯ ಕೊಡುಗೆ

ರಾಸಾಯನಿಕಗಳ ಉತ್ಪಾದನೆ ಮೂಲಕ ಅಶೋಕ್ ಬೂಬ್ ಹಾಗೂ ಸಿದ್ಧಾರ್ತ್ ಸಿಕ್ಚಿ ಭಾರತವು ಜಾಗತಿಕ ನಾಯಕತ್ವದ ರಾಷ್ಟ್ರವಾಗಿ ಮಾರ್ಪಡಾಗಲು ಸಹಾಯ ಮಾಡಿದ್ದಾರೆ. ಈ ಸಂಸ್ಥೆಯು ಕಳೆದ ಐದು ವರ್ಷಗಳಿಂದ ಉತ್ತಮ ಬೆಳವಣಿಗೆಯನ್ನು ಕಾಣುತ್ತಿದೆ. ಹಾಗೆಯೇ ಉತ್ತಮ ಹಣಕಾಸು ಸ್ಥಿತಿಯನ್ನು ಹೊಂದಿದೆ. ಇನ್ನು ಅಶೋಕ್ ಬೂಬ್ ಮಾಲೀಕತ್ವದ ಸಂಸ್ಥೆಗಳು ಕೋಟ್ಯಾಂತರ ರೂಪಾಯಿ ಆದಾಯವನ್ನು ಹೊಂದಿದೆ.

English summary

Meet Ashok Boob who Left Job at 54 to Start Own Business, Now Among the Top 100 Richest Indians

Ashok Boob is one of the top 100 richest Indians as per the list by Forbes. Meet Ashok Boob who Left Job at 54 to Start Own Business.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X