For Quick Alerts
ALLOW NOTIFICATIONS  
For Daily Alerts

ವಿಶ್ವದಲ್ಲೇ ದುಬಾರಿ ಮಾವಿನ ಹಣ್ಣು: ಕೆಜಿಗೆ 2.7 ಲಕ್ಷ ರೂಪಾಯಿ, ಯಾಕಿಷ್ಟು ಬೆಲೆ?

|

ವಿಶ್ವದಲ್ಲೇ ಅತೀ ದುಬಾರಿಯಾದ ಮಾವಿನ ಹಣ್ಣು ಮಿಯಝಾಕಿಯನ್ನು ಮಧ್ಯ ಪ್ರದೇಶದಲ್ಲಿ ರೈತ ದಂಪತಿ ಬೆಳೆಸುತ್ತಿದ್ದಾರೆ. ಈ ಮಾವಿನ ಹಣ್ಣಿಗೆ ಕೆಜಿಗೆ ಸುಮಾರು 2.7 ಲಕ್ಷ ರೂಪಾಯಿ ಆಗಿದೆ. ಈ ನಡುವೆ ಈ ಮಾವಿನ ಹಣ್ಣಿಗೆ ಇಷ್ಟು ಬೆಲೆ ಯಾಕೆ ಎಂಬ ಪ್ರಶ್ನೆಯೂ ಕೂಡಾ ನಮ್ಮ ಮುಂದೆ ಬರುತ್ತದೆ.

ಜಪಾನೀಸ್ ತಳಿಯ ಮಾವಿನ ಹಣ್ಣು ವಿಶ್ವದಲ್ಲೇ ಅತೀ ದುಬಾರಿ ಮಾವಿನ ಹಣ್ಣು ಆಗಿದೆ. ಈ ತಳಿಯು ಬೆಳೆಯುತ್ತಿರುವಾಗ ಕಾವಲಿಗಾಗಿ ಮೂವರನ್ನು ಹಾಗೂ ಆರು ನಾಯಿಗಳನ್ನು ಇರಿಸಲಾಗಿದೆ. ಈ ಚಿತ್ರವನ್ನು ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕ ಹಂಚಿಕೊಂಡಿದ್ದಾರೆ. ಮಿಯಝಾಕಿ ಮಾವಿನ ಹಣ್ಣು ಸಮಾರು ಕೆಜಿಗೆ 2.7ಲಕ್ಷ ರೂಪಾಯಿ ಆಗಿದೆ.

ಈ ಮಾವಿನ ಹಣ್ಣು ಒಂದಕ್ಕೇ 500 ರುಪಾಯಿ; ಏನಿದರ ವಿಶೇಷ ಗೊತ್ತೆ?ಈ ಮಾವಿನ ಹಣ್ಣು ಒಂದಕ್ಕೇ 500 ರುಪಾಯಿ; ಏನಿದರ ವಿಶೇಷ ಗೊತ್ತೆ?

ಇನ್ನು ವಿಶ್ವದ ದುಬಾರಿ ಮಾವಿನ ಹಣ್ಣು ಎರಡು ಮರಗಳಲ್ಲಿ ಬೆಳೆಯುತ್ತಿದ್ದು ಇದ್ದಕ್ಕೆ ಭಾರೀ ಕಾವಲು ನಿಯೋಜನೆ ಮಾಡಲಾಗಿದೆ. ಸಂಕಲ್ಪ್ ಪರಿಹಾರ್ ಹಾಗೂ ಪತ್ನಿ ರಾಣಿ ಮಾವಿನ ಗಿಡವನ್ನು ಮೂರು ವರ್ಷಗಳ ಹಿಂದೆ ನೆಟ್ಟಿದ್ದು, ಅದು ಕೊನೆಗೂ ಫಲ ನೀಡಿದೆ.

 ಜಪಾನೀಸ್ ತಳಿಯ ಮಾವಿನ ಹಣ್ಣು

ಜಪಾನೀಸ್ ತಳಿಯ ಮಾವಿನ ಹಣ್ಣು

ಈ ದಂಪತಿ ಈ ಗಿಡವನ್ನು ನೆಟ್ಟು ಸಾಕಿದ್ದಾರೆ, ಆದರೆ ಇದು ಜಪಾನೀಸ್ ಮಾವಿನ ಹಣ್ಣಿನ ತಳ್ಳಿಯದ್ದು ಎಂದು ತಿಳಿದಿರಲಿಲ್ಲ. ಇದು ಬಹಳ ವಿರಳವಾಗಿ ಲಭ್ಯವಾಗುವ ಮಾವಿನ ಹಣ್ಣಿನ ವಿಚಾರ ಜನರಿಗೆ ತಿಳಿಯುತ್ತಿದ್ದಂತೆ ಕಳ್ಳರು ಈ ಗಿಡ ಕದಿಯಲು ಪ್ರಯತ್ನ ಮಾಡಿದ್ದರು. ಆದರೆ ಅದನ್ನು ತಡೆಯಲೆಂದು ಈ ಜೋಡಿಯು ಕಾವಲುಗಾರರನ್ನು ನಿಲ್ಲಿಸಿದ್ದಾರೆ. ಈ ಮಿಯಝಾಕಿ ದುಬಾರಿ ತಳಿಯನ್ನು ಬೆಳೆಸುವುದರಲ್ಲಿ ದೇಶದಲ್ಲಿ ಕೆಲವೇ ಕೆಲವು ರೈತರು ಯಶಸ್ವಿಯಾಗಿದ್ದಾರೆ. ಈ ರೈತರುಗಳಲ್ಲಿ ಸಂಕಲ್ಪ್ ಪರಿಹಾರ್ ಹಾಗೂ ರಾಣಿ ದಂಪತಿ ಕೂಡಾ ಒಬ್ಬರಾಗಿದ್ದಾರೆ.

ಮನೆಗೆ ಮಾವಿನ ಹಣ್ಣು ಡೆಲಿವರಿ ತಂದು, ಜಾಲಿ ರೈಡ್ ಮಾಡಿಸುವ ಲ್ಯಾಂಬೋರ್ಗಿನಿಮನೆಗೆ ಮಾವಿನ ಹಣ್ಣು ಡೆಲಿವರಿ ತಂದು, ಜಾಲಿ ರೈಡ್ ಮಾಡಿಸುವ ಲ್ಯಾಂಬೋರ್ಗಿನಿ

 ಈ ಮಾವಿನ ಹಣ್ಣು ಯಾಕಿಷ್ಟು ದುಬಾರಿ?

ಈ ಮಾವಿನ ಹಣ್ಣು ಯಾಕಿಷ್ಟು ದುಬಾರಿ?

ಮಿಯಝಾಕಿ ಮಾವಿನ ಹಣ್ಣು ಎಲ್ಲಾ ಮಾವಿನ ಹಣ್ಣಿಗಿಂತ ಅತೀ ಸಿಹಿಯಾದ ಮಾವಿನ ಹಣ್ಣಾಗಿದೆ. ಮಿಯಝಾಕಿ ಮಾವಿನ ಹಣ್ಣಿನಲ್ಲಿ ಸುಮಾರು ಶೇಕಡ 15ರಷ್ಟು ಸಕ್ಕರೆ ಪ್ರಮಾಣವಿದೆ. ಈ ಮಾವಿನ ಹಣ್ಣಿನ ಗಿಡವನ್ನು ಮರವಾಗಿ ಬೆಳೆಸುವುದು ಅತೀ ಕಷ್ಟದ ಕೆಲಸ ಎಂದು ನಂಬಲಾಗಿದೆ. ಇದಕ್ಕೆ ಅತೀ ಬೆಚ್ಚಗಿನ ವಾತಾವರಣ ಹಾಗೂ ಅತೀ ಹೆಚ್ಚಿನ ಸೂರ್ಯನ ಶಾಖ ಬೇಕಾಗುತ್ತದೆ. ಜಪಾನಿನಲ್ಲಿ ಈ ಹಣ್ಣನ್ನು ಪ್ಲಾಸ್ಟಿಕ್‌ ಕವಚ ಹೊದಿಸಿ ಬೆಳೆಸಲಾಗುತ್ತದೆ. ಇನ್ನು ಈ ಮಾವಿನ ಹಣ್ಣಿನ ಗಿಡಕ್ಕೆ ಎರಡು ಸಾವಿರ ರೂಪಾಯಿಯಷ್ಟಿದೆ.

 ಒಡಿಶಾದಲ್ಲಿ ಮಿಯಝಾಕಿ ಮಾವಿನ ಹಣ್ಣು ಬೆಳೆ

ಒಡಿಶಾದಲ್ಲಿ ಮಿಯಝಾಕಿ ಮಾವಿನ ಹಣ್ಣು ಬೆಳೆ

ಒಡಿಶಾದಲ್ಲಿಯೂ ಒಬ್ಬರು ರೈತರು ಈ ತಳಿಯನ್ನು ಬೆಳೆಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಒಡಿಶಾದ ಚಂದ್ರು ಸತ್ಯ ನಾರಾಯಣ ಸುಮಾರು ಮೂರು ವರ್ಷದ ಹಿಂದೆ ಬಾಂಗ್ಲಾ ದೇಶದಿಂದ ಈ ತಳಿಯನ್ನು ತಂದು ಸಾಕಿದ್ದು, ಅದು ಫಲ ನೀಡಿದೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಚಂದ್ರು ಸತ್ಯ ನಾರಾಯಣ, "ನಾನು ಇದನ್ನು ಬಾಂಗ್ಲಾದೇಶದಿಂದ ಖರೀದಿ ಮಾಡಿದ್ದೇನೆ. ನಾನು ಈ ಮರವನ್ನು ಬೆಳೆಸಲು ಸಾಧ್ಯವಾಗಿದೆ ಎಂಬ ಬಗ್ಗೆ ನನಗೆ ಸಂತೋಷವಿದೆ. ರಾಜ್ಯ ಸರ್ಕಾರ ಈ ಮಾವಿನ ಹಣ್ಣಿನ ಮಾರುಕಟ್ಟೆ ಮಾಡಬೇಕು," ಎಂದು ಮನವಿ ಮಾಡಿದ್ದಾರೆ.

 ಬರಪೀಡಿತ ಪ್ರದೇಶದಲ್ಲಿ ಮಾವಿನ ಹಣ್ಣು

ಬರಪೀಡಿತ ಪ್ರದೇಶದಲ್ಲಿ ಮಾವಿನ ಹಣ್ಣು

ಇನ್ನು ಈ ಬಗ್ಗೆ ಮಾತನಾಡಿದ ಸಹ ಕೃಷಿ ನಿರ್ದೇಶಕ ಬಸುದೇವ ಪ್ರಧಾನ, "ಇದು ಬರಪೀಡಿತ ಪ್ರದೇಶವಾಗಿದೆ. ಆದರೂ ಕೂಡಾ ಚಂದ್ರು ಈ ಪ್ರದೇಶದಲ್ಲಿ ಮಾವಿನ ಹಣ್ಣನ್ನು ಬೆಳೆಯುವಲ್ಲಿ ಸಫಲರಾಗಿದ್ದಾರೆ. ವಿಶ್ವದಲ್ಲೇ ಅತೀ ದುಬಾರಿಯಾದ ಮಾವಿನ ಹಣ್ಣನ್ನು ನಮ್ಮ ರಾಜ್ಯದಲ್ಲಿ ಬೆಳೆಯಲಾಗುತ್ತಿದೆ ಎಂಬುವುದು ನಮಗೆ ಹೆಮ್ಮೆಯ ವಿಚಾರವಾಗಿದೆ," ಎಂದು ತಿಳಿಸಿದ್ದಾರೆ.

English summary

Miyazaki Mangoes Worth Rs 2.7 lakh per kg, Why These Mango is so expensive?

Miyazaki Mangoes Worth Rs 2.7 lakh per kg, Why These Mango is so expensive?. Here's a Reason Know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X