For Quick Alerts
ALLOW NOTIFICATIONS  
For Daily Alerts

ದುಬೈನಲ್ಲಿ ಅತೀ ದುಬಾರಿ ಮನೆ ಖರೀದಿಸಿದ ಅಂಬಾನಿ, ಹೀಗಿದೆ ನೋಡಿ!

|

ದೇಶದಲ್ಲಿ ಅತೀ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ದುಬೈದಲ್ಲಿ ಅತೀ ದುಬಾರಿ ಮನೆಯನ್ನು ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ತನ್ನ ಪುತ್ರನಿಗಾಗಿ ದುಬೈನಲ್ಲಿ ಸುಮಾರು 80 ಮಿಲಿಯನ್ ಡಾಲರ್ ಮೌಲ್ಯದ ಐಷಾರಾಮಿ ಮನೆಯನ್ನು ಖರೀದಿ ಮಾಡಿದ್ದಾರೆ. ಇದು ನಗರದ ಅತೀ ದೊಡ್ಡ ಪ್ರಾಪರ್ಟಿ ಡೀಲ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

ಈ ವರ್ಷದ ಆರಂಭದಲ್ಲಿ ಮುಕೇಶ್ ಅಂಬಾನಿ ಪಾಮ್ ಜುಮೇರಿಯಾದಲ್ಲಿ ಈ ಮನೆಯನ್ನು ತನ್ನ ಪುತ್ರ ಅನಂತ್ ಅಂಬಾನಿಗಾಗಿ ಖರೀದಿ ಮಾಡಿದ್ದಾರೆ. ಅತೀ ಶ್ರೀಮಂತ ವ್ಯಕ್ತಿಗಳಿಗೆ ಪ್ರಸ್ತುತ ದುಬೈ ನೆಚ್ಚಿನ ಸ್ಥಳವಾಗಿದೆ. ಹಲವಾರು ಮಂದಿ ದುಬೈನಲ್ಲಿ ಸಂಪತ್ತನ್ನು ಖರೀದಿ ಮಾಡಲು ಸಜ್ಜಾಗಿದ್ದಾರೆ. ಮುಕೇಶ್ ಅಂಬಾನಿ ದುಬೈನಲ್ಲಿ ಮನೆ ಖರೀದಿ ಮಾಡಿರುವ ಬಗ್ಗೆ ಅಂಬಾನಿ ಕುಟುಂಬ ಯಾವುದೇ ಮಾಹಿತಿಯನ್ನು ನೀಡಿಲ್ಲ.

ದುಬೈ ಸರ್ಕಾರವು ಪ್ರಸ್ತುತ ದೀರ್ಘಾವಧಿಯ ಗೋಲ್ಡನ್ ವೀಸಾಗಳನ್ನು ನೀಡುತ್ತಿದೆ. ವಿದೇಶಿಗರಿಗೆ ಸಂಪತ್ತು ಖರೀದಿಗೆ ಉತ್ತಮ ಅವಕಾಶ ದುಬೈನಲ್ಲಿ ಲಭ್ಯವಾಗುತ್ತಿದೆ. ಬ್ರಿಟಿಷ್ ಫುಟ್‌ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್, ಶಾರುಖ್‌ ಖಾನ್ ಕೂಡಾ ದುಬೈನಲ್ಲೇ ಮನೆಯನ್ನು ಖರೀದಿ ಮಾಡಿದ್ದಾರೆ. ಇನ್ನು ಅಂಬಾನಿ ಮನೆ ಹೇಗಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ದುಬೈನಲ್ಲಿರುವ ಅಂಬಾನಿ ಮನೆ ಹೇಗಿದೆ?

ದುಬೈನಲ್ಲಿರುವ ಅಂಬಾನಿ ಮನೆ ಹೇಗಿದೆ?

ದುಬೈನಲ್ಲಿ ಮುಕೇಶ್ ಅಂಬಾನಿ ತನ್ನ ಪುತ್ರ ಅನಂತ್ ಅಂಬಾನಿಗಾಗಿ ಖರೀದಿ ಮಾಡಿರುವ ಮನೆಯು ಸಮುದ್ರ ತೀರದಲ್ಲಿರುವ ಮನೆಯಾಗಿದೆ. ಇದು ಸುಮಾರು ಹತ್ತು ಬೆಡ್‌ರೂಮ್‌ಗಳನ್ನು ಹೊಂದಿದೆ. ಖಾಸಗೀ ಸ್ಪಾ ಕೂಡಾ ಇದರಲ್ಲಿ ಇದೆ. ಒಳಾಂಗಣ ಹಾಗೂ ಹೊರಾಂಗಣ ಪೂಲ್‌ಗಳು ಕೂಡಾ ಇದೆ. ಹಾಗೆಯೇ ಖಾಸಗಿ ಥಿಯೇಟರ್, ಜಿಮ್ ಸೇರಿದಂತೆ ಹಲವಾರು ಐಷಾರಾಮಿ ಸೌಕರ್ಯಗಳು ಇದೆ ಎಂದು ಮಾಹಿತಿ ಲಭ್ಯವಾಗಿದೆ.

 ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಹೆಚ್ಚಿಸುತ್ತಿರುವ ಅಂಬಾನಿ ಕುಟುಂಬ

ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಹೆಚ್ಚಿಸುತ್ತಿರುವ ಅಂಬಾನಿ ಕುಟುಂಬ

ಅಂಬಾನಿ ಕುಟುಂಬವು ರಿಯಲ್ ಎಸ್ಟೇಟ್‌ನಲ್ಲಿ ತನ್ನ ಹೂಡಿಕೆಯನ್ನು ಅಧಿಕ ಮಾಡುತ್ತಿದೆ. ಮುಕೇಶ್ ಅಂಬಾನಿಯ ಮೂವರು ಮಕ್ಕಳು ಕೂಡಾ ವಿದೇಶಗಳಲ್ಲಿ ತಮ್ಮ ಎರಡನೇ ಮನೆಯನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಕಳೆದ ವರ್ಷ ರಿಲಯನ್ಸ್ 79 ಮಿಲಿಯನ್ ಡಾಲರ್ ವೆಚ್ಚದಲ್ಲಿ ಯುಕೆಯಲ್ಲಿ ಸ್ಟೋಲ್ ಪಾರ್ಕ್ ಲಿಮಿಡೆಟ್ ಅನ್ನು ಖರೀದಿ ಮಾಡಿದೆ. ಈ ಮನೆಯು ಹಿರಿಯ ಪುತ್ರ ಆಕಾಶ್‌ಗಾಗಿ ಖರೀದಿ ಮಾಡಲಾಗಿದೆ ಎಂಬ ಮಾಹಿತಿಯಿದೆ. ಇನ್ನು ಆಕಾಶ್‌ನ ಅವಳಿ ಸಹೋದರಿ ಇಶಾ ನ್ಯೂಯಾರ್ಕ್‌ನಲ್ಲಿ ಮನೆ ಖರೀದಿ ಮಾಡಲು ಮುಂದಾಗಿದ್ದಾರೆ.

 ಅಂಬಾನಿಯ ಅಂಟಿಲಿಯಾ ಎಂಬ ಐಷಾರಾಮಿ ಮನೆ
 

ಅಂಬಾನಿಯ ಅಂಟಿಲಿಯಾ ಎಂಬ ಐಷಾರಾಮಿ ಮನೆ

ಪ್ರಸ್ತುತ ಮುಕೇಶ್ ಅಂಬಾನಿ ಕುಟುಂಬವು ಮುಂಬೈನಲ್ಲಿರುವ ಅಂಟಿಲಿಯಾದಲ್ಲಿ ವಾಸವಾಗಿದ್ದಾರೆ. 2012ರಿಂದ ಕುಟುಂಬ ಅಲ್ಲಿಯೇ ವಾಸವಾಗಿದೆ. ಅಂಟಿಲಿಯಾವು 27 ಮಹಡಿಯನ್ನು ಹೊಂದಿರುವ ಮನೆಯಾಗಿದ್ದು, ಇದು 40 ಸಾವಿರ ಚದರ ವಿಸ್ತ್ರೀರ್ಣದಲ್ಲಿದೆ. ಮನೆಯಲ್ಲಿ ಸುಮಾರು 168 ಕಾರುಗಳು ಇದ್ದು, 7 ಅಂತಸ್ತಿನ ಕಾರು ಗ್ಯಾರೇಜ್ ಇದೆ. ಈಜುಕೊಳ, ಆರೋಗ್ಯ ಕೇಂದ್ರ, ಥಿಯೇಟರ್ ಇದೆ. ಸುಮಾರು 600 ಉದ್ಯೋಗಿಗಳು ಇಲ್ಲಿ ಇದ್ದಾರೆ.

 ಮುಕೇಶ್ ಅಂಬಾನಿ ವೇತನ ಎಷ್ಟಿದೆ?

ಮುಕೇಶ್ ಅಂಬಾನಿ ವೇತನ ಎಷ್ಟಿದೆ?

ಇತ್ತೀಚೆಗೆ ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ, ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಆದರೆ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಏಷ್ಯಾದ ಎರಡನೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಆದರೆ ಮುಕೇಶ್ ಅಂಬಾನಿಯ ವೇತನವನ್ನು ಕೇಳಿದ್ರೆ ನೀವು ಶಾಕ್ ಆಗುವುದಂತೂ ಖಂಡಿತ. ಸತತ ಎರಡನೇ ವರ್ಷ ತನ್ನ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಯಾವುದೇ ವೇತನವನ್ನು ಪಡೆದಿಲ್ಲ. ಕಳೆದ ಹಣಕಾಸು ವರ್ಷದಲ್ಲಿ ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ಮುಕೇಶ್ ಅಂಬಾನಿ ತನ್ನ ಸಂಸ್ಥೆಯಿಂದ ಯಾವುದೇ ಸಂಬಳವನ್ನು ಪಡೆದುಕೊಂಡಿಲ್ಲ. ಈ ಹಣಕಾಸು ವರ್ಷದಲ್ಲೂ ವೇತನವನ್ನು ಪಡೆದಿಲ್ಲ.

English summary

Mukesh Ambani Buys Most Expensive Home in Dubai for Son

Mukesh Ambani-led Reliance Industries Ltd is the mystery buyer of a beach-side villa in Dubai worth $80 million, a report quoting sources said.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X