For Quick Alerts
ALLOW NOTIFICATIONS  
For Daily Alerts

ಡಿ. 16ರಿಂದ ದಿನದ 24 ಗಂಟೆ, ವರ್ಷದ 365 ದಿನವೂ NEFT ವರ್ಗಾವಣೆ

|

ಇನ್ನು ಮುಂದೆ ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಮಾಡುವಾಗ ವಾಚ್, ಕ್ಯಾಲೆಂಡರ್ ನೋಡಿಕೊಳ್ಳುವ ಅಗತ್ಯ ಇಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು National Electronic Funds Transfer (NEFT) ಅನ್ನು ದಿನದ 24 ಗಂಟೆಯೂ ವರ್ಷದ 365 ದಿನವೂ ದೊರೆಯುವ ವ್ಯವಸ್ಥೆಯನ್ನು ಸೋಮವಾರದಿಂದ (ಡಿಸೆಂಬರ್ 16) ಜಾರಿಗೆ ತಂದಿದೆ.

ಈ ವರೆಗೆ ವ್ಯವಸ್ಥೆ ಹೇಗಿತ್ತು ಅಂದರೆ, ಬೆಳಗ್ಗೆ 8 ಗಂಟೆಯಿಂದ ಸಂಜೆ 6.30ರ ಮಧ್ಯೆ ಮಾತ್ರ ಆನ್ ಲೈನ್ ಹಣ ವರ್ಗಾವಣೆ ಮಾಡಬಹುದಿತ್ತು. ಅದು ಕೂಡ ಬ್ಯಾಂಕ್ ಗಳು ಕಾರ್ಯ ನಿರ್ವಹಿವ ದಿನ ಮಾತ್ರ ವರ್ಗಾವಣೆ ಸಾಧ್ಯವಿತ್ತು. ಇದೀಗ NEFT ವರ್ಗಾವಣೆಯನ್ನು ಪ್ರತಿ ಅರ್ಧ ಗಂಟೆ ಬ್ಯಾಚ್ ಗಳಂತೆ ವಿಭಾಗ ಮಾಡಿದ್ದು, ಮಧ್ಯರಾತ್ರಿ 12.30ರ ನಂತರ ಮೊದಲ ಬ್ಯಾಚ್ ಆರಂಭವಾಗುತ್ತದೆ. ಕೊನೆ ಬ್ಯಾಚ್ ರಾತ್ರಿ ಕೊನೆಯಾಗುತ್ತದೆ. ಈ NEFT ಸೌಲಭ್ಯ ದಿನವಿಡೀ ಕಾರ್ಯ ನಿರ್ವಹಿಸುತ್ತದೆ.

 

ಅಯಾ ದಿನದ ರಾತ್ರಿ ಸೌಲಭ್ಯ ಕೊನೆಯಾಗುವುದರಿಂದ ರಾತ್ರಿ 11.30ರ ನಂತರ ವ್ಯವಹಾರ ಸಾಧ್ಯವಾಗುವುದಿಲ್ಲ. ಮುಂದಿನ ಬ್ಯಾಚ್ ಶುರುವಾಗುವ ಮರು ದಿನದ 12.30ಕ್ಕೆ ಹಣ ವರ್ಗಾವಣೆ ಮಾಡಬಹುದು. ಬ್ಯಾಂಕ್ ಗಳ ರಜಾ ದಿನವೂ ಸೇರಿ ವರ್ಷದ ಎಲ್ಲ ದಿನವೂ ಈ ಸೌಲಭ್ಯ ಒದಗಿಸಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.

ರಜಾ ದಿನದಂದು NEFT ಸೌಲಭ್ಯ ಸಿಗುತ್ತಿರಲಿಲ್ಲ

ರಜಾ ದಿನದಂದು NEFT ಸೌಲಭ್ಯ ಸಿಗುತ್ತಿರಲಿಲ್ಲ

ಈ ವರೆಗೆ NEFT ಸೌಲಭ್ಯ ಬ್ಯಾಂಕ್ ಗಳ ರಜಾ ದಿನದಂದು ಸಿಗುತ್ತಿರಲಿಲ್ಲ. ಆನ್ ಲೈನ್ ಹಣ ವರ್ಗಾವಣೆಗೂ ಬ್ಯಾಂಕ್ ಗಳು ಬಾಗಿಲು ತೆರೆಯಲು ಗ್ರಾಹಕರು ಕಾಯುತ್ತಿರಬೇಕಿತ್ತು. ಆದ್ದರಿಂದ NEFT ವ್ಯವಹಾರಗಳನ್ನು ಸೋಮವಾರದಿಂದ ಶುಕ್ರವಾರದ ತನಕ ಬೆಳಗ್ಗೆ 8ರಿಂದ ರಾತ್ರಿ 7 ಗಂಟೆ ತನಕ ಹಾಗೂ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 1ರ ಮಧ್ಯೆ ತೀರುವಳಿ (ಸೆಟ್ಲ್ ಮೆಂಟ್) ಆಗುತ್ತಿತ್ತು. ಈಗಿನ ಆರ್ ಬಿಐ ನಡೆಯಿಂದಾಗಿ ದೇಶದಲ್ಲಿ ಡಿಜಿಟಲ್ ವ್ಯವಹಾರಗಳಿಗೆ ಉತ್ತೇಜನ ದೊರೆಯುತ್ತದೆ. ಈ ವರೆಗೆ IMPS ವ್ಯವಸ್ಥೆಯನ್ನು 24X7 ಆನ್ ಲೈನ್ ಹಣ ವರ್ಗಾವಣೆಗೆ ಬಳಸಲು ಅವಕಾಶ ಇತ್ತು. ಆದರೆ ಅದಕ್ಕೆ 2 ಲಕ್ಷ ರುಪಾಯಿ ಮಿತಿ ಇದೆ. ಬ್ಯಾಂಕಿಂಗ್ ಸಮಯದ ನಂತರ ಮಾಡಿದ NEFT ವ್ಯವಹಾರಗಳನ್ನು ಬ್ಯಾಂಕ್ ಗಳು 'Straight Through Processing (STP)' ವಿಧಾನ ಬಳಸಿ, ಆಟೋಮೇಟ್ ಮಾಡಲಾಗಿತ್ತು.

NEFT ಹಣ ವರ್ಗಾವಣೆಗೆ ಯಾವುದೇ ಶುಲ್ಕ ಇಲ್ಲ
 

NEFT ಹಣ ವರ್ಗಾವಣೆಗೆ ಯಾವುದೇ ಶುಲ್ಕ ಇಲ್ಲ

ಈಗಿರುವಂತೆಯೇ ಬೆನಿಫಿಷಿಯರೀಸ್ ಖಾತೆಗೆ ಹಣ ಹಾಕಲು ಅಥವಾ ಮೂಲ ಖಾತೆಗೆ ಹಣ ಹಿಂತಿರುಗಿಸುವ ವ್ಯವಹಾರ (2 ಗಂಟೆಯೊಳಗೆ ಆ ಬ್ಯಾಚ್ ನ ತೀರುವಳಿ) ಮುಂದುವರಿಯಲಿದೆ. ಎಲ್ಲ NEFT ಕ್ರೆಡಿಟ್ ಗಳಿಗೆ ಬ್ಯಾಂಕ್ ನಿಂದ ಖಾತ್ರಿ ಸಂದೇಶವೊಂದನ್ನು ಕಳುಹಿಸಬೇಕು. NEFTನ 24X7 ವ್ಯವಸ್ಥೆಯನ್ನು ಒದಗಿಸಲು ಎಲ್ಲ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಬ್ಯಾಂಕ್ ಗಳಿಗೆ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ನಂಥ ಹಲವು ಬ್ಯಾಂಕ್ ಗಳು ಆನ್ ಲೈನ್ NEFT ಹಣ ವರ್ಗಾವಣೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಕಳೆದ ಜುಲೈನಲ್ಲಿ ಆರ್ ಬಿಐನಿಂದ ಎಲ್ಲ NEFT ಹಾಗೂ RTGS ಶುಲ್ಕವನ್ನು ಮನ್ನಾ ಮಾಡಲಾಯಿತು. ಇದರ ಅನುಕೂಲವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಸೂಚನೆ ನೀಡಿತ್ತು. 2020ರ ಜನವರಿಯಿಂದ ಅನ್ವಯ ಆಗುವಂತೆ ಉಳಿತಾಯ ಖಾತೆ ಇರುವ ಎಲ್ಲರಿಗೂ NEFT ವ್ಯವಹಾರಗಳ ಶುಲ್ಕವನ್ನು ಮನ್ನಾ ಮಾಡಿ, ಉಚಿತವಾಗಿ ವ್ಯವಹಾರ ಮಾಡಲು ಅನುಕೂಲ ಒದಗಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಡ್ಡಾಯ ಮಾಡಿದೆ.

NEFT ಮೂಲಕ ಸಾಮಾನ್ಯವಾಗಿ 2 ಲಕ್ಷ ರುಪಾಯಿಯೊಳಗಿನ ವರ್ಗಾವಣೆ

NEFT ಮೂಲಕ ಸಾಮಾನ್ಯವಾಗಿ 2 ಲಕ್ಷ ರುಪಾಯಿಯೊಳಗಿನ ವರ್ಗಾವಣೆ

NEFT ವರ್ಗಾವಣೆಗೆ ಯಾವುದೇ ಕನಿಷ್ಠ ಮಿತಿ ಇಲ್ಲ. ಆದರೆ ಸಾಮಾನ್ಯವಾಗಿ 2 ಲಕ್ಷ ರುಪಾಯಿಯೊಳಗಿನ ವರ್ಗಾವಣೆ ಮಾಡಲಾಗುತ್ತದೆ. ಹೆಚ್ಚಿನ ಮೊತ್ತದ ವರ್ಗಾವಣೆಗೆ RTGS ಬಳಸಲಾಗುತ್ತದೆ. ಇನ್ನು NEFT ಮಿತಿಯು ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ಬದಲಾವಣೆ ಆಗುತ್ತದೆ. ಅದರಲ್ಲೂ ಗ್ರಾಹಕರು ಯಾವ ವರ್ಗಕ್ಕೆ ಸೇರುತ್ತಾರೆ ಎಂಬುದು ಕೂಡ ಮುಖ್ಯವಾಗುತ್ತದೆ.

10 ಲಕ್ಷದ ತನಕ ಹಣ ಆನ್ ಲೈನ್ ವರ್ಗಾವಣೆ

10 ಲಕ್ಷದ ತನಕ ಹಣ ಆನ್ ಲೈನ್ ವರ್ಗಾವಣೆ

ಉದಾಹರಣೆಗೆ, ಐಸಿಐಸಿಐ ಬ್ಯಾಂಕ್ ನಿಂದ NEFT ವರ್ಗಾವಣೆ 10 ಲಕ್ಷದ ತನಕ ಮಾಡಬಹುದು. ಹಲವರಿಗೆ ಇದೇ ನಿಯಮ ಅನ್ವಯಿಸುತ್ತದೆ. ಆದರೆ ಇತರರಿಗೆ NEFT ವರ್ಗಾವಣೆಯನ್ನು 25 ಲಕ್ಷ ರುಪಾಯಿ ತನಕ ಮಾಡಲು ಅವಕಾಶ ನೀಡುತ್ತದೆ. ಎಚ್ ಡಿಎಫ್ ಸಿ ಬ್ಯಾಂಕ್ ನಿಂದಲೂ ಆನ್ ಲೈನ್ NEFT ವರ್ಗಾವಣೆ 25 ಲಕ್ಷದ ಮಿತಿ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ರೀಟೇಲ್ ಗ್ರಾಹಕರಿಗೆ 10 ಲಕ್ಷದ ಮಿತಿ ವಿಧಿಸಿದೆ.

English summary

NEFT Transfer Available 24X7 From December 16th: Here Is The Complete Details

From December 16th NEFT transfer available 24X7. Here is the complete details.
Story first published: Monday, December 16, 2019, 15:47 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more