For Quick Alerts
ALLOW NOTIFICATIONS  
For Daily Alerts

ಆರ್‌ಬಿಐ ಹೊಸ ನಿಯಮ: ಡಿಜಿಟಲ್ ಸಾಲ ಪಡೆಯುವವರಿಗೆ ಸುರಕ್ಷತೆ

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಡಿಜಿಟಲ್ ಸಾಲಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಸಾಲ ಪಡೆಯುವವರ ಸುರಕ್ಷತೆಯ ದೃಷ್ಟಿಯಿಂದ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಯಾವುದೇ ಸಾಲ ನೀಡುವ ಪ್ಲಾಟ್‌ಫಾರ್ಮ್‌ಗಳು, ಆಪ್‌ಗಳಿಗೆ ಈ ನಿಯಮವು ಅನ್ವಯವಾಗುತ್ತದೆ.

 

ಡಿಜಿಟಲ್ ಸಾಲ ನೀಡುವ ಆಪ್‌ಗಳಲ್ಲಿ ಕೆಲವು ಅಕ್ರಮಗಳು ನಡೆಯುತ್ತಿರುವ ಕಾರಣದಿಂದಾಗಿ ಈ ಮಾನದಂಡವನ್ನು ಜಾರಿಗೆತ ತರಲಾಗಿದೆ. ಸಾಲವನ್ನು ನೇರವಾಗಿ ಸಾಲ ಪಡೆಯುವವರ ಖಾತೆಗೆ ಜಮೆ ಮಾಡಬೇಕು ಎಂದು ಈ ನಿಯಮವು ಹೇಳುತ್ತದೆ. ಕೆಲವು ಡಿಜಿಟಲ್ ಸಾಲದಲ್ಲಿ ಬೇರೊಬ್ಬರ ಖಾತೆಗೆ ಹಣ ಜಮೆ ಆದ ಬಳಿಕ ಆ ಹಣವನ್ನು ಸಾಲ ಪಡೆಯುವವರ ಖಾತೆಗೆ ಜಮೆ ಮಾಡಲಾಗುತ್ತದೆ.

 

ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಸುದ್ದಿ ಓದಿ...ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಸುದ್ದಿ ಓದಿ...

"ರಿಸರ್ವ್ ಬ್ಯಾಂಕ್ ಅಡಿಯಲ್ಲಿ ಅಧಿಕೃತವಾದ ಆಪ್‌ಗಳು ಅಥವಾ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮಾತ್ರ ಸಾಲವನ್ನು ನೀಡಲು ಅವಕಾಶವಿದೆ," ಎಂದು ಆರ್‌ಬಿಐ ಹೇಳಿದೆ. ಹಾಗಾದರೆ ಈ ಹೊಸ ನಿಯಮ ಏನು ಹೇಳುತ್ತದೆ ಎಂದು ತಿಳಿಯೋಣ ಮುಂದೆ ಓದಿ...

ಆರ್‌ಬಿಐ ಹೊಸ ನಿಯಮ: ಡಿಜಿಟಲ್ ಸಾಲ ಪಡೆಯುವವರಿಗೆ ಸುರಕ್ಷತೆ

ಹೊಸ ನಿಯಮ ಏನು ಹೇಳುತ್ತದೆ?

ಈ ಹೊಸ ನಿಯಮದ ಪ್ರಕಾರ ಸಾಲ ಪಡೆಯುವವರ ಅನುಮತಿಯಿಲ್ಲದೆ ಕ್ರೆಡಿಟ್ ಮಿತಿಯನ್ನು ಹೆಚ್ಚಳ ಮಾಡುವುದಕ್ಕೆ ಅವಕಾಶವಿಲ್ಲ. ಸಾಲ ನೀಡುವ ಎಲ್‌ಎಸ್‌ಪಿಗೆ ನೀಡುವ ಶುಲ್ಕವನ್ನು ಸಾಲಗಾರರು ಪಾವತಿ ಮಾಡುವಂತಿಲ್ಲ. ಅದನ್ನು ಸಾಲ ನೀಡುವ ಘಟಕಗಳೇ ಪಾವತಿ ಮಾಡಬೇಕು ಎಂದು ಹೊಸ ನಿಯಮ ಹೇಳುತ್ತದೆ.

ಇನ್ನು ಈ ಸಾಲದಲ್ಲಿ ಮೂರನೇ ವ್ಯಕ್ತಿಯ ಪಾತ್ರ ಇರುವಂತಿಲ್ಲ. ಎಲ್‌ಎಸ್‌ಪಿ ಅಥವಾ ಯಾವುದೇ ಮೂರನೇ ವ್ಯಕ್ತಿಯ ಖಾತೆಗೆ ಸಾಲವನ್ನು ಜಮೆ ಮಾಡದೆ ನೇರವಾಗಿ ಸಾಲವನ್ನು ಪಡೆಯುವ ವ್ಯಕ್ತಿಯ ಬ್ಯಾಂಕ್ ಖಾತೆಗೆ ಸಾಲವನ್ನು ಜಮೆ ಮಾಡಬೇಕಾಗುತ್ತದೆ. ಇನ್ನು ಸಾಲ ಪಡೆಯುವವರಿಗೆ ಕೆಎಫ್‌ಎಸ್ ಅನ್ನು (ಸಾಲದ ಪ್ರಕ್ರಿಯೆ ಯಶಸ್ವಿಯಾದ ಋಜುವಾತು) ನೀಡಬೇಕಾಗುತ್ತದೆ.

English summary

RBI's new digital lending rules : Safety Net for Borrowers of Digital Loans Via Online Platforms

The Reserve Bank of India (RBI) has rolled out a new regulatory framework for digital lending. It is Safety Net for Borrowers of Digital Loans Via Online Platforms, Mobile apps.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X