For Quick Alerts
ALLOW NOTIFICATIONS  
For Daily Alerts

ಆನ್‌ಲೈನ್‌ ಶಾಪಿಂಗ್‌ಗೆ ಬೇಕಾಗಿಲ್ಲ ಕ್ರೆಡಿಟ್‌, ಡೆಬಿಟ್‌ ಕಾರ್ಡ್: ಏನಿದು ಟೋಕನೈಜೇಶನ್‌?

|

ನಿಮ್ಮ ನೆಚ್ಚಿನ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ಗಳಾದ ಅಮೆಜಾನ್, ಮಿಂತ್ರಾ, ಫ್ಲಿಫ್‌ಕಾರ್ಟ್, ಬಿಗ್‌ ಬಾಸ್ಕೆಟ್‌ನಲ್ಲಿ ಹೊಸ ವರ್ಷದ ಆರಂಭದಿಂದಲೇ ಅಂದರೆ ಜನವರಿ 1, 2022 ರಿಂದಲೇ ಸುಲಭವಾಗಲಿದೆ. ಅದಕ್ಕಾಗಿ ನೀವು ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾಗೆ ಧನ್ಯವಾದ ಹೇಳಲೇಬೇಕು. ಈ ಹೊಸ ವಿಧಾನವು ನಿಮ್ಮ ಆನ್‌ಲೈನ್‌ ಶಾಪಿಂಗ್‌ ವ್ಯವಸ್ಥೆಯನ್ನು ಸುಲಭ ಮಾಡುವುದು ಮಾತ್ರವಲ್ಲದೆ ನಿಮ್ಮ ಗುಪ್ತ ಮಾಹಿತಿಯನ್ನು ಕೂಡಾ ಸುರಕ್ಷಿತವಾಗಿರಿಸುತ್ತದೆ.

ಹೊಸ ವರ್ಷಕ್ಕೆ ಇನ್ನೆನ್ನೂ ಕೆಲವೇ ದಿನಗಳು ಇದೆ. ಈ ನಡುವೆ ಆರ್‌ಬಿಐ ಹಾಗೂ ಬ್ಯಾಂಕುಗಳು ಹೊಸ ಬದಲಾವಣೆಗಳನ್ನು ಪ್ರಕಟ ಮಾಡುತ್ತಿದೆ. ಈಗಾಗಲೇ ವಿತ್‌ಡ್ರಾ ಶುಲ್ಕ ಹೆಚ್ಚಳ, ಜೊಮ್ಯಾಟೊ-ಸ್ವಿಗ್ಗಿಯ ಹೊಸ ನೀತಿ ಮೊದಲಾದವು ಹೊಸ ವರ್ಷದಲ್ಲಿ ಆರಂಭವಾಗಲಿದೆ. ಈ ನಡುವೆ ಆರ್‌ಬಿಐನ ಈ ವಿಧಾನವು ಆನ್‌ಲೈನ್‌ ಶಾಪಿಂಗ್‌ ವ್ಯವಸ್ಥೆಯನ್ನು ಸರಳೀಕರಿಸುವ ಕಾರ್ಯವನ್ನು ಮಾಡಿದೆ.

ಡಿ.22: ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರಡಿ.22: ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

ಇನ್ನು ಮುಂದೆ ನೀವು ಡಿಜಿಟಲ್‌ ವೇದಿಕೆಯಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವ ವೇಳೆ ನಿಮ್ಮ 16 ಅಂಕಿಗಳ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್ ಸಂಖ್ಯೆ ಹಾಗೂ ನಿಮ್ಮ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ನ ಕೊನೆಯ ದಿನಾಂಕ (expiration date) ಅನ್ನು ನೀಡಬೇಕಾಗಿ‌ಲ್ಲ. ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾದ ಆದೇಶದ ಪ್ರಕಾರ ನೀವು ಈಗ ತ್ವರಿತವಾಗಿ, ಸಂಪರ್ಕರಹಿತ ಪಾವತಿಯನ್ನು ಟೋಕನೈಜೇಶನ್‌ (Tokenization) ಮೂಲಕ ಮಾಡಬಹುದು. ಏನಿದು ಟೋಕನೈಜೇಶನ್‌, ಏನು ಪ್ರಯೋಜನ ಮೊದಲಾದ ಮಾಹಿತಿಯನ್ನು ತಿಳಿಯಲು ಮುಂದೆ ಓದಿ...

ಹೊಸ ಪಾವತಿ ವಿಧಾನ ಟೋಕನೈಜೇಶನ್‌ ಬಗ್ಗೆ ಇಲ್ಲಿದೆ ಮಾಹಿತಿ

ಹೊಸ ಪಾವತಿ ವಿಧಾನ ಟೋಕನೈಜೇಶನ್‌ ಬಗ್ಗೆ ಇಲ್ಲಿದೆ ಮಾಹಿತಿ

ಟೋಕನೈಜೇಶನ್‌ ಎಂಬುವುದು ಹೊಸ ಪಾವತಿ ವಿಧಾನವಾಗಿದೆ. ಕಾರ್ಡ್ ಮಾಹಿತಿಯನ್ನು ಟೋಕನ್‌ನೊಂದಿಗೆ ವಿನಿಮಯ ಮಾಡಿಕೊಳ್ಳುವ ತಂತ್ರವೇ ಟೋಕನೈಜೇಶನ್‌ ಆಗಿದೆ. ಹಾಗೆಯೇ ಈ ವಿಧಾನವು ಗ್ರಾಹಕರ ಯಾವುದೇ ವೈಯಕ್ತಿಕ ಮಾಹಿತಿ ಸೋರಿಕೆ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ನೀಡುತ್ತದೆ. ಆರ್‌ಬಿಐನ ಈ ಟೋಕನೈಜೇಶನ್‌ ನೀತಿಯು ಈ ವಿಧಾನವನ್ನು ಹೇಗೆ ಕಾರ್ಯಗತಗೊಳಿಸುವುದು ಎಂಬುವುದನ್ನು ವಿವರಿಸಿದೆ. ಇನ್ನು ಮುಂದೆ ಸಂಪರ್ಕರಹಿತ ಬ್ಯಾಂಕಿಂಗ್‌ಗೆ ಯಾವುದೇ ಸಿವಿವಿ (ಕಾರ್ಡ್ ವೆರಿಫಿಕೇಶನ್‌ ವಾಲ್ಯೂ) ಬೇಕಾಗಿಲ್ಲ. ಇದು ಸಂಪೂರ್ಣವಾಗಿ ನೆಟ್‌ವರ್ಕ್ ಅನ್ನು ಸುರಕ್ಷಿತಗೊಳಿಸಲಿದೆ.

ಶಾಪಿಂಗ್‌ ಮಾಡುವವರಿಗೆ ಟೋಕನೈಜೇಶನ್‌ನಿಂದ ಏನು ಪ್ರಯೋಜನ?

ಶಾಪಿಂಗ್‌ ಮಾಡುವವರಿಗೆ ಟೋಕನೈಜೇಶನ್‌ನಿಂದ ಏನು ಪ್ರಯೋಜನ?

ಈ ಟೋಕನೈಜೇಶನ್‌ ಡೇಟಾ ಕಳ್ಳತನವನ್ನು ಸಂಪೂರ್ಣವಾಗಿ ತಡೆಗಟ್ಟಲಾರದು, ಆದರೆ ಈ ಡೇಟಾ ಕಳ್ಳತನದ ಸಾಧ್ಯತೆಯನ್ನು ಹೆಚ್ಚು ಕಡಿಮೆ ಮಾಡುತ್ತದೆ. ಆಪ್‌ಗಳ ಮೂಲಕ ನೀವು ಶಾಪಿಂಗ್‌ ಮಾಡುವುದನ್ನು ಈ ಹೊಸ ವಿಧಾನ ಟೋಕನೈಜೇಶನ್‌ ನೀವು ಸುಲಭವಾಗಿ ಶಾಪಿಂಗ್‌ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ನಿಮ್ಮ ಆನ್‌ಲೈನ್‌ ಶಾಪಿಂಗ್‌ ಅನ್ನು ಸುರಕ್ಷಿತಗೊಳಿಸುತ್ತದೆ. ಟೋಕನೈಜ್‌ ಮಾಡಿದ ಕಾರ್ಡ್‌ಗಳನ್ನು ನಿರ್ವಹಣೆ ಮಾಡಲು ಬ್ಯಾಂಕ್‌ಗಳು ಪ್ರತ್ಯೇಕ ಇಂಟರ್ಫೇಸ್ ಅನ್ನು (ಅದರ ವೆಬ್‌ಸೈಟ್‌ನಲ್ಲಿ) ನೀಡುತ್ತದೆ. ಇನ್ನು ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ದಾರರು ಯಾವುದೇ ಸಮಯದಲ್ಲಿ ತಮ್ಮ ಟೋಕನ್‌ ಆಯ್ಕೆಯನ್ನು ರದ್ದು ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.

ಹಾಗಾದರೆ ಟೋಕನ್‌ಗಳನ್ನು ಬಳಸುವುದು ಹೇಗೆ?
 

ಹಾಗಾದರೆ ಟೋಕನ್‌ಗಳನ್ನು ಬಳಸುವುದು ಹೇಗೆ?

ಟೋಕನೈಜೇಶನ್‌ ಸಂಪೂರ್ಣವಾಗಿ ಉಚಿತವಾಗಿ ಮಾಡಲಾಗುತ್ತದೆ. ಜನರು ತಮ್ಮ ಎಷ್ಟೇ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳನ್ನುಟೋಕನೈಜೇಶನ್‌ ಮಾಡಬಹುದು. ಆದರೆ ಡೊಮೆಸ್ಟಿಕ್‌ ಕಾರ್ಡ್‌ಗಳಿಗೆ ಮಾತ್ರ ಕೆಲವು ನಿಯಮಗಳು ಇದೆ. ಓವರ್‌ಸೀಸ್‌ ಕಾರ್ಡ್‌ಗಳಿಗೆ ಟೋಕನೈಜೇಶನ್‌ ವಿಧಾನ ಅನ್ವಯ ಆಗುವುದಿಲ್ಲ. ನೀವು ಟೋಕನೈಜೇಶನ್‌ ಮಾಡಲು ಬಯಸಿದರೆ, ಮೊದಲು ತಮ್ಮ ಕಾರ್ಡ್ ಮಾಹಿತಿಯನ್ನು ನೀಡಬೇಕಾಗುತ್ತದೆ. ನೀವು ವೆಬ್‌ಸೈಟ್‌ ಮೂಲಕ ಯಾವುದೇ ಶಾಪಿಂಗ್‌ ಮಾಡುವ ಸಂದರ್ಭದಲ್ಲಿ ನೀವು ಟೋಕನೈಜೇಶನ್‌ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಎರಡೆರಡು ಬಾರಿ ಪಾವತಿ ಆಗುವ ಸಂದರ್ಭದಲ್ಲಿ ನೀವು ಮಾಹಿತಿಯನ್ನು ಪಡೆದುಕೊಳ್ಳಲು ಈ ಟೋಕನ್‌ಗಳು ಸಹಾಯಕವಾಗಿದೆ.

ಒಂದು ವೇಳೆ ವಂಚನೆ ನಡೆದರೆ...?

ಒಂದು ವೇಳೆ ವಂಚನೆ ನಡೆದರೆ...?

ಈ ಸುರಕ್ಷಿತ ವಿಧಾನದಲ್ಲೂ ಏನಾದರೂ ವಂಚನೆ ನಡೆದರೂ, ಹ್ಯಾಕರ್‌ಗಳಿಗೆ ಸುಲಭವಾಗಿ ಟೋಕನ್‌ನಿಂದ ವ್ಯಕ್ತಿಯ ಬ್ಯಾಂಕಿಂಗ್‌ ಸಂಬಂಧಿತ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಕಾರ್ಡ್‌ನ ನಿಜವಾದ ವಿವರಗಳನ್ನು ಈ ಟೋಕನ್‌ಗಳು ಸುಲಭದಲ್ಲಿ ಬಹಿರಂಗ ಪಡಿಸಲ್ಲ. ಅಂತಹ ಸುರಕ್ಷಿತ ತಂತ್ರಜ್ಞಾನ ವ್ಯವಸ್ಥೆ ಇದಾಗಿದೆ.

English summary

No credit, debit card required for online shopping from January 1, Here's Details

No credit, debit card required for online shopping from January 1, Here's Details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X