For Quick Alerts
ALLOW NOTIFICATIONS  
For Daily Alerts

ವಿದೇಶದಲ್ಲಿ ದುಡಿಯುತ್ತಿರುವ ಭಾರತೀಯರು ಭಾರತದಲ್ಲಿ ಕಟ್ಟಬೇಕು ತೆರಿಗೆ

|

ಭಾರತದ ಹೊರಗೆ ಇದ್ದು ಹಣ ಗಳಿಸುತ್ತಿರುವವರು ಈ ಎರಡು ಹೊಸ ನಿಯಮಗಳನ್ನು ಖಂಡಿತಾ ಗಮನಿಸಬೇಕು.

ಅನಿವಾಸಿ ಭಾರತೀಯ ಎಂದು ಇನ್ನು ಮುಂದೆ ಕರೆಸಿಕೊಳ್ಳಬೇಕಾದರೆ ಭಾರತೀಯರು 240 ಮತ್ತು ಅದಕ್ಕಿಂತ ಹೆಚ್ಚು ದಿನ ವಿದೇಶದಲ್ಲಿ ಇರಬೇಕು. ಈ ಹಿಂದೆ 182 ದಿನಗಳು ಇದ್ದಲ್ಲಿ ಅನಿವಾಸಿ ಎನ್ನಲಾಗುತ್ತಿತ್ತು. ಒಂದು ವರ್ಷದಲ್ಲಿ 120 ದಿನ ಮತ್ತು ಅದಕ್ಕಿಂತ ಹೆಚ್ಚು ಅವಧಿಗೆ ಭಾರತದಲ್ಲಿ ಇದ್ದಲ್ಲಿ ಅನಿವಾಸಿ ಎಂದು ಗುರುತಿಸಿಕೊಳ್ಳಲು ಸಾಧ್ಯವಿಲ್ಲ.

ಈ ಬಗ್ಗೆ ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಶನಿವಾರ ಮಾತನಾಡಿದ್ದಾರೆ. "ನಾವು ಆದಾಯ ತೆರಿಗೆ ಕಾಯ್ದೆಯಲ್ಲಿ ಬದಲಾವಣೆ ಮಾಡಿದ್ದೀವಿ. ವಿದೇಶದಲ್ಲಿ 182 ಮತ್ತು ಅದಕ್ಕಿಂತ ಹೆಚ್ಚು ದಿನ ಭಾರತೀಯರು ಇದ್ದಲ್ಲಿ ಅನಿವಾಸಿ ಆಗುತ್ತಿದ್ದರು. ಈಗ ಅನಿವಾಸಿ ಆಗಬೇಕಿದ್ದರೆ 240 ದಿನಗಳ ಕಾಲ ದೇಶದಿಂದ ಹೊರಗೆ ಇರಬೇಕು" ಎಂದಿದ್ದಾರೆ.

ವಿದೇಶದಲ್ಲಿ ದುಡಿಯುತ್ತಿರುವ ಭಾರತೀಯರು ಭಾರತದಲ್ಲಿ ಕಟ್ಟಬೇಕು ತೆರಿಗೆ

ಇನ್ನೂ ಒಂದು ನಿಯಮ ಬಂದಿದ್ದು, ಅನಿವಾಸಿ ಭಾರತೀಯರಾಗಿದ್ದು, ಅವರಿರುವ ದೇಶದಲ್ಲಿ ತೆರಿಗೆ ಹಾಕುತ್ತಿಲ್ಲ ಎಂದಾದಲ್ಲಿ ಭಾರತದಲ್ಲಿ ತೆರಿಗೆ ಬೀಳಲಿದೆ. ಯಾವುದೇ ಭಾರತೀಯ ಪ್ರಜೆಯು ವಿಶ್ವದ ಯಾವುದೇ ದೇಶದ ನಿವಾಸಿಯಲ್ಲದಿದ್ದಲ್ಲಿ ಅವರನ್ನು ಭಾರತದ ನಿವಾಸಿ ಎಂದು ಪರಿಗಣಿಸಿ, ವಿಶ್ವದಾದ್ಯಂತದ ಆದಾಯಕ್ಕೆ ತೆರಿಗೆ ಹಾಕಲಾಗುವುದು ಎಂದು ಪಾಂಡೆ ತಿಳಿಸಿದ್ದಾರೆ.

ಹಲವು ಭಾರತೀಯರು ವಿದೇಶಗಳಲ್ಲಿ ನೆಲೆಸಿದ್ದು, ದುಬೈನಂಥ ದೇಶಗಳಲ್ಲಿ ಆದಾಯ ತೆರಿಗೆ ಕಡಿಮೆ ಅಥವಾ ಇಲ್ಲವೇ ಇಲ್ಲ. ಈಗ, ಅವರು ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರುವಂತಿದ್ದರೆ ಭಾರತದಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ ಎಂದು ತೆರಿಗೆ ತಜ್ಞರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2020ರ ಕಂಪ್ಲೀಟ್ ಹೈಲೈಟ್ಸ್ಕೇಂದ್ರ ಬಜೆಟ್ 2020ರ ಕಂಪ್ಲೀಟ್ ಹೈಲೈಟ್ಸ್

ಇದೀಗ ಭಾರತೀಯರಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ತೆರಿಗೆ ಪದ್ಧತಿ ಪರಿಚಯಿಸಿದ್ದಾರೆ. ಅದರ ಪ್ರಕಾರ ಸೆಕ್ಷನ್ 80C ಅಡಿಯಲ್ಲಿ ಯಾವುದೇ ತೆರಿಗೆ ವಿನಾಯಿತಿ ಸಿಗಲ್ಲ. ಮನೆ ಸಾಲ ವಿನಾಯಿತಿ, ವಿಮೆ ವಿನಾಯಿತಿ, ಸ್ಟ್ಯಾಂಡರ್ಡ್ ಡಿಡಕ್ಷನ್ ಇದು ಕೂಡ ಹೊಸ ತೆರಿಗೆ ಪದ್ಧತಿಯಡಿ ದೊರೆಯುವುದಿಲ್ಲ.

ಹೊಸ ತೆರಿಗೆ ಪದ್ಧತಿಯು ತೆರಿಗೆ ಪಾವತಿದಾರರ ಆಯ್ಕೆಗೆ ಬಿಟ್ಟದ್ದು. ಹಳೇ ಪದ್ಧತಿ ಅಡಿ ವಿನಾಯಿತಿ ಹಾಗೂ ಕಡಿತದ ಪ್ರಯೋಜನ ಪಡೆಯಬಹುದು. ಅಥವಾ ಯಾವುದೇ ವಿನಾಯಿತಿ, ಕಡಿತ ಇಲ್ಲದೆ ಹೊಸದಾಗಿ ಪರಿಚಯಿಸಿದ ಕಡಿಮೆ ದರದ ತೆರಿಗೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

English summary

NRIs, Those Not Paying Taxes Abroad Will Be Now Taxed in India

A non-resident Indian who is not taxed in the foreign country where he or she lives will be taxed in India.
Story first published: Sunday, February 2, 2020, 17:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X