For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್‌, ಡೀಸೆಲ್‌ನಿಂದ ತೈಲ ಸಂಸ್ಥೆಗೆ ಎಷ್ಟು ಲಾಭ ಗೊತ್ತಾ?

|

ಜಾಗತಿಕವಾಗಿ ಕಚ್ಚಾ ತೈಲ ದರವು ಹೆಚ್ಚಳವಾದಾಗ ಹಲವಾರು ಬಾರಿ ಭಾರತದ ತೈಲ ಸಂಸ್ಥೆಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಸಿದೆ. ಆದರೆ ಕಚ್ಚಾ ತೈಲ ದರ ಇಳಿಕೆಯಾದಾಗ, ಸಂಸ್ಥೆಗಳು ಇಂಧನ ಬೆಲೆಯನ್ನು ಕುಗ್ಗಿಸಿಲ್ಲ. ಈಗ ಪೆಟ್ರೋಲ್‌ನಿಂದ ತೈಲ ಸಂಸ್ಥೆಗಳು ಲಾಭವನ್ನು ಪಡೆಯುತ್ತಿದೆ. ಆದರೆ ಡೀಸೆಲ್‌ ಮಾರಾಟದಿಂದ ತೈಲ ಸಂಸ್ಥೆಗೆ ಆಗುವ ನಷ್ಟವನ್ನು ನಾವು ಅಲ್ಲಗಳೆಯುವಂತಿಲ್ಲ.

ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ ಭಾರತದ ತೈಲ ಸಂಸ್ಥೆಗಳು ಪ್ರತಿ ಲೀಟರ್‌ ಪೆಟ್ರೋಲ್‌ನಿಂದ 10 ರೂಪಾಯಿ ಲಾಭವನ್ನು ಪಡೆಯುತ್ತಿದೆ. ಅದೇ ಸಂದರ್ಭದಲ್ಲಿ ಪ್ರತಿ ಲೀಟರ್‌ ಡೀಸೆಲ್‌ನಿಂದ 6.5 ರೂಪಾಯಿ ನಷ್ಟವನ್ನು ಕಾಣುತ್ತಿದೆ. ಪೆಟ್ರೋಲ್‌ನಿಂದ ಪ್ರತಿ ಲೀಟರ್‌ಗೂ 10 ರೂಪಾಯಿ ಲಾಭವಾದರೂ ಕೂಡಾ ಸಂಸ್ಥೆಯು ಈವರೆಗೂ ಪೆಟ್ರೋಲ್ ದರವನ್ನು ಇಳಿಸಿಲ್ಲ.

ವಾಹನ ಸವಾರರಿಗೆ ಗುಡ್‌ ನ್ಯೂಸ್‌ : ಕಚ್ಚಾತೈಲ ಬೆಲೆ ಇಳಿಕೆ: ಇಂಧನ ದರ 14 ರೂ ಕಡಿತ?ವಾಹನ ಸವಾರರಿಗೆ ಗುಡ್‌ ನ್ಯೂಸ್‌ : ಕಚ್ಚಾತೈಲ ಬೆಲೆ ಇಳಿಕೆ: ಇಂಧನ ದರ 14 ರೂ ಕಡಿತ?

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಮ್ ಕಾರ್ಪೋರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಕಳೆದ 15 ತಿಂಗಳಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪರಿಷ್ಕರಣೆ ಮಾಡಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೆಸ್, ಸುಂಕ ಇಳಿಕೆ ಮಾಡಿ ಇಂಧನ ದರವು ಕೊಂಚ ಇಳಿದಿದೆ. ಆದರೆ ಈಗಲೂ ಪೆಟ್ರೋಲ್ ನಮ್ಮ ಕೈಸುಡದಿರದು. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

 ಐಸಿಐಸಿಐ ಸೆಕ್ಯುರಿಟೀಸ್ ಹೇಳುವುದೇನು?

ಐಸಿಐಸಿಐ ಸೆಕ್ಯುರಿಟೀಸ್ ಹೇಳುವುದೇನು?

ಐಸಿಐಸಿಐ ಸೆಕ್ಯುರಿಟೀಸ್ ಪ್ರಕಾರ, "ಈ ಹಿಂದೆ ಪೆಟ್ರೋಲ್‌ನಿಂದ ತೈಲ ಸಂಸ್ಥೆಗೆ ಪ್ರತಿ ಲೀಟರ್‌ಗೆ 17.4 ರೂಪಾಯಿ ಹಾಗೂ ಡೀಸೆಲ್‌ ಪ್ರತಿ ಲೀಟರ್‌ಗೆ 27.7 ರೂಪಾಯಿ ನಷ್ಟ ಉಂಟಾಗಿತ್ತು. ಇದು ಈವರೆಗಿನ ಅತೀ ಅಧಿಕ ನಷ್ಟವಾಗಿದೆ. 2022ರ ಜೂನ್ 24ರವರೆಗೆ ಇಷ್ಟು ನಷ್ಟ ಉಂಟಾಗಿದೆ. ಆದರೆ ಮೂರನೇ ತ್ರೈಮಾಸಿಕವಾದ 2022ರ ಅಕ್ಟೋಬರ್ ಡಿಸೆಂಬರ್‌ನಲ್ಲಿ ತೈಲ ಸಂಸ್ಥೆಗಳಿಗೆ ಲಾಭ ಉಂಟಾಗಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 10 ರೂಪಾಯಿ ಲಾಭ, ಡೀಸೆಲ್ ಪ್ರತಿ ಲೀಟರ್‌ಗೆ 6.5 ರೂಪಾಯಿ ನಷ್ಟ ಉಂಟಾಗಿದೆ," ಎಂದು ತಿಳಿಸಿದೆ. ಒಟ್ಟಾರೆಯಾಗಿ ನಾವು ನೋಡಿದರೆ ಲಾಭ ನಷ್ಟವನ್ನು ಸರಿದೂಗಿಸಿದಾಗ ಸಂಸ್ಥೆಗಳಿಗೆ ಕೊಂಚ ಲಾಭವೇ ಉಂಟಾಗುತ್ತಿದೆ.

ಪೆಟ್ರೋಲ್ ಬೆಲೆ 40 ಪೈಸೆ ಇಳಿಸುವ ನಿರ್ಧಾರ ವಾಪಸ್; ವಿವಿಧ ನಗರಗಳಲ್ಲಿ ದರ ಎಷ್ಟಿದೆ ಪರಿಶೀಲಿಸಿಪೆಟ್ರೋಲ್ ಬೆಲೆ 40 ಪೈಸೆ ಇಳಿಸುವ ನಿರ್ಧಾರ ವಾಪಸ್; ವಿವಿಧ ನಗರಗಳಲ್ಲಿ ದರ ಎಷ್ಟಿದೆ ಪರಿಶೀಲಿಸಿ

 ಕಚ್ಚಾ ತೈಲ ದರ ಇಳಿದರೂ ಇಂಧನ ಬೆಲೆ ಇಳಿದಿಲ್ಲ

ಕಚ್ಚಾ ತೈಲ ದರ ಇಳಿದರೂ ಇಂಧನ ಬೆಲೆ ಇಳಿದಿಲ್ಲ

ಏಪ್ರಿಲ್ 6ರಿಂದ ಈ ಮೂರು ತೈಲ ಸಂಸ್ಥೆಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಹೆಚ್ಚಿಸಿಲ್ಲ. ಏಪ್ರಿಲ್‌ನಲ್ಲಿ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ 102.97 ಯುಎಸ್ ಡಾಲರ್ ಆಗಿತ್ತು. ಆದರೆ ಜೂನ್‌ನಲ್ಲಿ 116.01 ಯುಎಸ್ ಡಾಲರ್ ಆಗಿತ್ತು. ಆದರೆ ಈ ತಿಂಗಳಿನಲ್ಲಿ ಅಂದರೆ ಹೊಸ ವರ್ಷದಲ್ಲಿ ಕಚ್ಚಾ ತೈಲ ದರವು ಭಾರೀ ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ 78.09ರಿಂದ 85ರ ಯುಎಸ್ ಡಾಲರ್ ಆಸುಪಾಸಿನಲ್ಲಿದೆ. ಈ ಹಿಂದಿನ ಬೆಲೆಗೆ ಹೋಲಿಕೆ ಮಾಡಿದರೆ, ಪ್ರಸ್ತುತ ದರವು ಭಾರೀ ಇಳಿದಿದೆ.

 ಸಂಸ್ಥೆಗಳಿಗೆ ಈ ಹಿಂದೆ ಆಗಿರುವ ನಷ್ಟವೆಷ್ಟು?

ಸಂಸ್ಥೆಗಳಿಗೆ ಈ ಹಿಂದೆ ಆಗಿರುವ ನಷ್ಟವೆಷ್ಟು?

ಈ ಪ್ರಮುಖ ಮೂರು ಸಂಸ್ಥೆಗಳಿಗೆ ಈ ಹಿಂದೆ ಕಚ್ಚಾ ತೈಲ ದರ ಹೆಚ್ಚಳವಾದಾಗ ಭಾರೀ ನಷ್ಟ ಉಂಟಾಗಿದೆ. ಮೂರು ಸಂಸ್ಥೆಗಳಿಗೆ ಒಟ್ಟಾಗಿ ಏಪ್ರಿಲ್-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 21,201.18 ಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿದೆ. ಸರ್ಕಾರವು ಘೋಷಣೆ ಮಾಡಿ ಈವರೆಗೂ ಪಾವತಿ ಮಾಡದ 22,000 ಕೋಟಿ ಎಲ್‌ಪಿಜಿ ಸಬ್ಸಿಡಿಯನ್ನು ಹೊರತುಪಡಿಸಿ ಇಷ್ಟೊಂದು ನಷ್ಟ ಉಂಟಾಗಿದೆ. ಇನ್ನು ಈ ಹಿಂದೆ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಬಡ್ಡಿ, ತೆರಿಗೆ ಮೊದಲಾದವುಗಳ ಕಡಿತಕ್ಕೂ ಮುನ್ನ ಐಒಸಿಗೆ 2,400 ಕೋಟಿ ರೂಪಾಯಿಗಳ ಗಳಿಕೆಯನ್ನು ಅಂದಾಜು ಮಾಡಲಾಗಿತ್ತು. ಬಿಪಿಸಿಎಲ್‌ 1,800 ಕೋಟಿ ರೂಪಾಯಿ ಮತ್ತು ಎಚ್‌ಪಿಸಿಎಲ್‌ 800 ಕೋಟಿ ರೂಪಾಯಿ ಗಳಿಕೆ ಅಂದಾಜು ಮಾಡಲಾಗಿತ್ತು. ಆದರೆ ನಷ್ಟ ಉಂಟಾಗುವ ಸಾಧ್ಯತೆ ಪ್ರಸ್ತುತ ಕಂಡು ಬಂದಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ (ಐಒಸಿ) 1300 ಕೋಟಿ ನಷ್ಟ, ಹಿಂದೂಸ್ತಾನ್ ಪೆಟ್ರೋಲಿಯಮ್ ಕಾರ್ಪೋರೇಷನ್ ಲಿಮಿಟೆಡ್‌ಗೆ (ಎಚ್‌ಪಿಸಿಎಲ್) 600 ಕೋಟಿ ನಷ್ಟ ಉಂಟಾಗುವ ಸಾಧ್ಯತೆಯಿದೆ. ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ಗೆ (ಬಿಪಿಸಿಎಲ್) ಮತ್ತಷ್ಟು ಅಧಿಕ ನಷ್ಟ ಉಂಟಾಗುವ ಸಾಧ್ಯತೆಯಿದೆ.

English summary

Oil companies making Rs 10 per litre profit on petrol, Rs 6.5 loss on diesel, Details in kannada

Oil companies are selling petrol at a profit of Rs 10 per litre but retail prices haven't been reduced as they recoup past losses and make up for a Rs 6.5 a litre loss on diesel.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X