For Quick Alerts
ALLOW NOTIFICATIONS  
For Daily Alerts

Plastic Money: ಎಷ್ಟು ಕ್ರೆಡಿಟ್ ಕಾರ್ಡ್ ಸೂಕ್ತ, ಲಾಭ-ನಷ್ಟವೇನು?

|

ಸದ್ಯ ಕ್ರೆಡಿಟ್ ಕಾರ್ಡ್ ಅನ್ನು ಎಲ್ಲರೂ ಬಯಸುತ್ತಾರೆ. ಇದು ಹಲವಾರು ಮಂದಿಗೆ ಜೀವನದ ಪ್ರಮುಖ ಸೌಕರ್ಯಗಳಲ್ಲಿ ಒಂದು ಎಂಬಂತಾಗಿದೆ. ಈ ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳನ್ನು ಪ್ಲಾಸ್ಟಿಕ್ ಮನಿ ಎಂದು ಕೂಡಾ ಕರೆಯಲಾಗುತ್ತದೆ. ಈ ನಡುವೆ ನಾವು ಕ್ರೆಡಿಟ್ ಕಾರ್ಡ್ ಅನ್ನು ಯೋಚಿಸಿ ಬಳಕೆ ಮಾಡಿದರೆ, ಹಲವಾರು ಡಿಸ್ಕೌಂಟ್ ಪಡೆಯಲು ಸಾಧ್ಯವಾಗಲಿದೆ. ಇದರಿಂದಾಗಿ ನಾವು ಪ್ರತಿ ದಿನ ಮಾಡುವ ಖರ್ಚಿನಲ್ಲಿ ಉಳಿತಾಯ ಮಾಡಿಕೊಳ್ಳಬಹುದು.

 

ನಾವು ಒಂದು ಕ್ರೆಡಿಟ್ ಕಾರ್ಡ್ ಅನ್ನು ಹೊಂದಿದ್ದರೆ ಕೆಲವೊಮ್ಮೆ ಅದು ಸಾಕಾಗಲಾರದು. ಈ ಸಂದರ್ಭದಲ್ಲಿ ನಾವು ಇನ್ನೊಂದು ಕ್ರೆಡಿಟ್ ಕಾರ್ಡ್ ಬೇಕಾಗಿತ್ತು ಅಂದುಕೊಳ್ಳಬಹುದು. ಆದರೆ ನಾವು ಎಷ್ಟು ಕ್ರೆಡಿಟ್ ಕಾರ್ಡ್ ಅನ್ನು ಹೊಂದಿರಬಹುದು ಎಂಬುವುದು ಹಲವಾರು ಮಂದಿಗೆ ಗೊಂದಲವಿದೆ.

ಕ್ರೆಡಿಟ್ ಕಾರ್ಡ್ ಪಡೆಯುವಾಗ ಈ 7 ತಪ್ಪು ಮಾಡಬೇಡಿ

ನಾವು ಒಂದಕ್ಕಿಂತ ಅಧಿಕ ಕ್ರೆಡಿಟ್ ಕಾರ್ಡ್ ಅನ್ನು ಹೊಂದಬಹುದು, ಯಾರು ಒಂದಕ್ಕಿಂತ ಅಧಿಕ ಕ್ರೆಡಿಟ್ ಕಾರ್ಡ್ ಅನ್ನು ಹೊಂದಬಹುದು, ನಾವೆಷ್ಟು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಉತ್ತಮ, ಒಂದಕ್ಕಿಂತ ಅಧಿಕ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಅದರ ಪ್ರಯೋಜನವೇನು, ನಷ್ಟವೇನು ಎಂಬುವುದರ ಬಳಕೆ ಇಲ್ಲಿದೆ ಸ್ಪಷ್ಟತೆ ಮುಂದೆ ಓದಿ....

 ಒಂದು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ....

ಒಂದು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ....

ನೀವು ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್ ಅನ್ನು ಬಳಕೆ ಮಾಡುವುದಾದರೆ ನಿಮಗೆ ಯಾವುದೆ ಕ್ರೆಡಿಟ್ ಹಿಸ್ಟರಿ ಇರುವುದಿಲ್ಲ. ಹಾಗಿರುವಾಗ ನಿಮ್ಮ ಆದಾಯ, ವೆಚ್ಚದ ಆಧಾರದಲ್ಲಿ ನಿಮಗೆ ಪ್ರೀಮಿಯಂ ಕ್ರೆಡಿಟ್ ಕಾರ್ಡ್‌ ಅನ್ನು ಪಡೆಯಲು ಸಾಧ್ಯವಾಗದು. ಈ ಸಂದರ್ಭದಲ್ಲಿ ನೀವು ಮೊದಲು ನಿಮ್ಮ ಆದಾಯ ಹಾಗೂ ವೆಚ್ಚ ಅವಶ್ಯಕತೆ ಆಧಾರದಲ್ಲಿ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಕ್ರೆಡಿಟ್ ಕಾರ್ಡ್‌ ಅನ್ನು ನಿರಂತರವಾಗಿ ಬಳಕೆ ಮಾಡಿ, ಬಿಲ್ ಅನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬಹುದು. ಈ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಬೆಳಿಸಿಕೊಳ್ಳಿ.

ಜು.1ರಿಂದ ಕ್ರೆಡಿಟ್, ಡೆಬಿಟ್ ಕಾರ್ಡ್ ನಿಯಮ ಬದಲಾವಣೆ: ಸಿಹಿಯೇ, ಕಹಿಯೇ?

 ಒಂದಕ್ಕಿಂತ ಅಧಿಕ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಏನು ಲಾಭ?

ಒಂದಕ್ಕಿಂತ ಅಧಿಕ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಏನು ಲಾಭ?

ಎಲ್ಲಾ ಕ್ರೆಡಿಟ್ ಕಾರ್ಡ್‌ಗಳು ಬೇರೆ ಬೇರೆಯದ್ದೇ ಪ್ರಯೋಜನ, ಷರತ್ತುಗಳನ್ನು ಹೊಂದಿರುತ್ತದೆ. ಕೆಲವು ಕ್ರೆಡಿಟ್ ಕಾರ್ಡ್‌ಗಳು ನೀವು ಪ್ರವಾಸಕ್ಕಾಗಿ ಟಿಕೆಟ್ ಬುಕ್ ಮಾಡಿದರೆ ಡಿಸ್ಕೌಂಟ್ ನೀಡಿದರೆ, ಇನ್ನೂ ಕೆಲವು ಕ್ರೆಡಿಟ್ ಕಾರ್ಡ್‌ಗಳು ಆನ್‌ ಲೈನ್ ಶಾಪಿಂಗ್ ಮೇಲೆ ರಿಯಾಯಿತಿ ನೀಡುತ್ತದೆ. ನೀವು ಈ ರೀತಿಯ ಪ್ರಯೋಜನವನ್ನು ಪಡೆಯಬೇಕಾದರೆ ನಿಮ್ಮಲ್ಲಿ ಒಂದಕ್ಕಿಂತ ಅಧಿಕ ಕ್ರೆಡಿಟ್ ಕಾರ್ಡ ಇರಬೇಕಾಗುತ್ತದೆ. ನೀವು ಒಂದಕ್ಕಿಂತ ಅಧಿಕ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿದ್ದರೆ ನಿಮ್ಮ ಕ್ರೆಡಿಟ್ ಮಿತಿ ಅಧಿಕವಾಗಲಿದೆ. ಇದರಿಂದಾಗಿ ನೀವು ಅಗತ್ಯ ವಸ್ತುಗಳನ್ನು ಖರೀದಿ ಮಾಡುವಾಗ ಕ್ರೆಡಿಟ್ ಮಿತಿ ಬರಲಾರದು.

 ಒಂದಕ್ಕಿಂತ ಅಧಿಕ ಕ್ರೆಡಿಟ್ ಕಾರ್ಡ್ ಆಯ್ಕೆ
 

ಒಂದಕ್ಕಿಂತ ಅಧಿಕ ಕ್ರೆಡಿಟ್ ಕಾರ್ಡ್ ಆಯ್ಕೆ

ನಿಮ್ಮ ಹಣಕಾಸು ಸ್ಥಿತಿ, ಜೀವನ ಶೈಲಿಗೆ ಅನುಗುಣವಾಗಿ ನೀವು ಒಂದಕ್ಕಿಂತ ಅಧಿಕ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಲು ಸಾಧ್ಯವಾಗಲಿದೆ. ನೀವು ಕ್ರೆಡಿಟ್ ಕಾರ್ಡ್ ಹಣವನ್ನು ಹೇಗೆ ಖರ್ಚು ಮಾಡುತ್ತೀರಿ ಎಂಬ ಆಧಾರದಲ್ಲಿ ನೀವು ಒಂದಕ್ಕಿಂತ ಅಧಿಕ ಕ್ರೆಡಿಟ್ ಕಾರ್ಡ್ ಅನ್ನು ಹೊಂದಲು ಸಾಧ್ಯವಾಗಲಿದೆ. ನೀವು ಅಧಿಕವಾಗಿ ವಿಮಾನ ಸಂಚಾರ ಮಾಡುವುದಾದರೆ ನೀವು ಏರ್ ಮೈಲ್ಸ್ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದು. ನೀವು ಹೆಚ್ಚಾಗಿ ಹೊಟೇಲ್‌ಗಳಲ್ಲಿ ಉಳಿದುಕೊಳ್ಳುವುದಾದರೆ ನೀವು ಟ್ರಾವೆಲ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಬಹುದು.

ನೀವು ಹೆಚ್ಚಾಗಿ ಆನ್‌ಲೈನ್ ಮೂಲಕ ಶಾಪಿಂಗ್ ಮಾಡುವುದಾದರೆ ನೀವು ಶಾಪಿಂಗ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಬಹುದು. ನೀವು ಹಲವು ಕ್ರೆಡಿಟ್ ಕಾರ್ಡ್ ಅನ್ನು ಪಡೆಯುವ ಸಂದರ್ಭದಲ್ಲಿ ನೀವು ಅಮೆಕ್ಸ್, ವಿಸಾ, ರುಪೇ, ಮಾಸ್ಟರ್ ಕಾರ್ಡ್‌ ವಿತರಕರಿಂದ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದು. ಇದರಿಂದಾಗಿ ನೀವು ಅಧಿಕ ರಿಯಾಯಿತಿ ಪಡೆಯಲು, ಆಫರ್ ಪಡೆಯಲು ಸಾಧ್ಯವಾಗಲಿದೆ.

ಆರ್‌ಬಿಐನ ಹೊಸ ಡೆಬಿಟ್, ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಏನಿದೆ?

 ಎಷ್ಟು ಕ್ರೆಡಿಟ್ ಕಾರ್ಡ್ ಹೊಂದಿರುವುದು ಸೂಕ್ತ?

ಎಷ್ಟು ಕ್ರೆಡಿಟ್ ಕಾರ್ಡ್ ಹೊಂದಿರುವುದು ಸೂಕ್ತ?

ನೀವು ಎಷ್ಟು ಕ್ರೆಡಿಟ್ ಕಾರ್ಡ್ ಅನ್ನು ಹೊಂದಿರಬಹುದು ಎಂಬುವುದು ನೀವು ಎಷ್ಟು ಹಾಗೂ ಯಾವ ರೀತಿ ಖರ್ಚು ಮಾಡುತ್ತೀರಿ ಎಂಬುವುದರ ಮೇಲೆ ನಿರ್ಧಾರ ಮಾಡಿಕೊಳ್ಳಬಹುದು. ನಿಮಗೆ ಅಧಿಕ ಖರ್ಚಿದ್ದರೆ ಒಂದಕ್ಕಿಂತ ಅಧಿಕ ಕ್ರೆಡಿಟ್ ಕಾರ್ಡ್ ಅನ್ನು ಹೊಂದಬಹುದು. ಆದರೆ ಅಧಿಕ ಖರ್ಚು ಇಲ್ಲವಾದರೆ ಒಂದಕ್ಕಿಂತ ಅಧಿಕ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿ ಯಾವುದೇ ಪ್ರಯೋಜನವಿಲ್ಲ. ನೀವು ಎಷ್ಟು ಕ್ರೆಡಿಟ್ ಕಾರ್ಡ್ ಹೊಂದಬೇಕಾಗುತ್ತದೆ ಎಂಬುವುದು ನಿಮ್ಮ ಜೀವನ ಶೈಲಿಯ ಮೇಲೆ ಅಲವಂಬಿತವಾಗಿದೆ.

English summary

Plastic Money : Benefits and Drawbacks of having ssmultiple credit cards in Kannada

Plastic Money : Here we talking about the advantages and disadvantages of having multiple credit cards. Know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X