ಪಿಎನ್‌ಬಿ ಎಫ್‌ಡಿ ಬಡ್ಡಿದರ ಹೆಚ್ಚಳ: ಇಲ್ಲಿದೆ ನೂತನ ದರ ಪಟ್ಟಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಎರಡು ಕೋಟಿಗಿಂತ ಕಡಿಮೆ ಮೊತ್ತದ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಹೆಚ್ಚಳ ಮಾಡಿದ ಬಳಿಕ ಹಲವಾರು ಬ್ಯಾಂಕ್‌ಗಳು ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನೂತನ ಎಫ್‌ಡಿ ಬಡ್ಡಿದರವು ಜುಲೈ 4ರಿಂದಲೇ ಜಾರಿಗೆ ಬರಲಿದೆ. ಈ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಬಡ್ಡಿದರ ಏರಿಕೆಯ ಬಗ್ಗೆ ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಮಾಹಿತಿ ನೀಡಿದೆ.
ಸಾಲದ ಬಡ್ಡಿದರ ಹೆಚ್ಚಿಸಿದ ಎಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕ್: ಇಎಂಐ ಇನ್ನು ದುಬಾರಿ
ಪ್ರಮುಖವಾಗಿ ಬ್ಯಾಂಕ್ ಒಂದು ವರ್ಷದಿಂದ ಮೂರು ವರ್ಷದ ಅವಧಿಯಲ್ಲಿ ಮೆಚ್ಯೂರಿಟಿ ಆಗುವ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರದಲ್ಲಿ 10ರಿಂದ 20 ಮೂಲಾಂಕದಷ್ಟು ಹೆಚ್ಚಳ ಮಾಡಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ತಿಂಗಳು ಎರಡು ಬಾರಿ ರೆಪೋ ದರವನ್ನು ಒಟ್ಟು 90 ಮೂಲಾಂಕ ಹೆಚ್ಚಳ ಮಾಡಿದೆ. ಈ ಹಣದುಬ್ಬರದ ನಡುವೆ ಯುಎಸ್ ಡಾಲರ್ ಎದುರು ರೂಪಾಯಿ ದರವು ಇಳಿಕೆ ಕಾಣುತ್ತಿದೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಕೇಂದ್ರ ಬ್ಯಾಂಕ್ ಈ ಕ್ರಮವನ್ನು ಕೈಗೊಂಡಿದೆ.
ಐಸಿಐಸಿಐ ಬ್ಯಾಂಕ್ಗೆ 30 ಲಕ್ಷ, ಪಿಎನ್ಬಿಗೆ 1.8 ಕೋಟಿ ದಂಡ ವಿಧಿಸಿದ ಆರ್ಬಿಐ
ಸಾಮಾನ್ಯವಾಗಿ ರೆಪೋ ದರವು ಸಾಲದ ಬಡ್ಡಿದರ ಹಾಗೂ ಎಫ್‌ಡಿ ಬಡ್ಡಿದರದ ಮೇಲೆ ಪ್ರಭಾವ ಬೀರುತ್ತದೆ. ಈಗಾಗಲೇ ಹಲವಾರು ಬ್ಯಾಂಕ್‌ಗಳು ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಈಗ ಪಿಎನ್‌ಬಿ ಬ್ಯಾಂಕ್ ಕೂಡಾ ಬಡ್ಡಿದರ ಅಧಿಕ ಮಾಡಿದೆ. ನೂತನ ಬಡ್ಡಿದರ ಎಷ್ಟಾಗಿದೆ ಎಂಬ ವಿವರ ಈ ಕೆಳಗಿದೆ... ಮುಂದೆ ಓದಿ..
ಪಿಎನ್‌ಬಿ ನೂತನ ಬಡ್ಡಿದರ ಪಟ್ಟಿ
* 7-14 ದಿನ: ಶೇಕಡ 3 ಬಡ್ಡಿದರ
* 15-29 ದಿನ: ಶೇಕಡ 3 ಬಡ್ಡಿದರ
* 30-45 ದಿನ: ಶೇಕಡ 3 ಬಡ್ಡಿದರ
* 46-90 ದಿನ: ಶೇಕಡ 3.25 ಬಡ್ಡಿದರ
* 91-179 ದಿನ: ಶೇಕಡ 4 ಬಡ್ಡಿದರ
* 180-270 ದಿನ: ಶೇಕಡ 4.5 ಬಡ್ಡಿದರ
* 271 ದಿನದಿಂದ- 1 ವರ್ಷ: ಶೇಕಡ 4.5 ಬಡ್ಡಿದರ
* 1 ವರ್ಷ: ಶೇಕಡ 5.3 ಬಡ್ಡಿದರ
* 1-2 ವರ್ಷ: ಶೇಕಡ 5.3 ಬಡ್ಡಿದರ
* 2-3 ವರ್ಷ: ಶೇಕಡ 5.5 ಬಡ್ಡಿದರ
* 3-5 ವರ್ಷ: ಶೇಕಡ 5.5 ಬಡ್ಡಿದರ
* 5-10 ವರ್ಷ: ಶೇಕಡ 5.6 ಬಡ್ಡಿದರ
* 1111 ದಿನ: ಶೇಕಡ 5.5 ಬಡ್ಡಿದರ

ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡದರ ಎಷ್ಟಿದೆ?
* 7-14 ದಿನ: ಶೇಕಡ 3.5 ಬಡ್ಡಿದರ
* 15-29 ದಿನ: ಶೇಕಡ 3.5 ಬಡ್ಡಿದರ
* 30-45 ದಿನ: ಶೇಕಡ 3.5 ಬಡ್ಡಿದರ
* 46-90 ದಿನ: ಶೇಕಡ 3.75 ಬಡ್ಡಿದರ
* 91-179 ದಿನ: ಶೇಕಡ 4.5 ಬಡ್ಡಿದರ
* 180-270 ದಿನ: ಶೇಕಡ 5 ಬಡ್ಡಿದರ
* 271 ದಿನದಿಂದ- 1 ವರ್ಷ: ಶೇಕಡ 5 ಬಡ್ಡಿದರ
* 1 ವರ್ಷ: ಶೇಕಡ 5.8 ಬಡ್ಡಿದರ
* 1-2 ವರ್ಷ: ಶೇಕಡ 5.8 ಬಡ್ಡಿದರ
* 2-3 ವರ್ಷ: ಶೇಕಡ 6 ಬಡ್ಡಿದರ
* 3-5 ವರ್ಷ: ಶೇಕಡ 6 ಬಡ್ಡಿದರ
* 5-10 ವರ್ಷ: ಶೇಕಡ 6.1 ಬಡ್ಡಿದರ
* 1111 ದಿನ: ಶೇಕಡ 6 ಬಡ್ಡಿದರ