For Quick Alerts
ALLOW NOTIFICATIONS  
For Daily Alerts

Post Office scheme: ಮಾಸಿಕ 9,000 ರೂ ಆದಾಯ ಪಡೆಯುವುದು ಹೇಗೆ?

|

ನಾವು ಹೂಡಿಕೆ ವಿಚಾರಕ್ಕೆ ಬಂದಾಗ ಎಂದಿಗೂ ಸುರಕ್ಷಿತ ಹೂಡಿಕೆ ಯಾವುದು ಎಂದು ನೋಡುತ್ತೇವೆ. ಹಾಗೆಯೇ ನಾವು ಎಲ್ಲಿ ಹೂಡಿಕೆ ಮಾಡಿದರೆ ನಮ್ಮ ಹಣ ಸುರಕ್ಷಿತವಾಗಿರುತ್ತದೆ ಮತ್ತು ಅಧಿಕ ರಿಟರ್ನ್ ಲಭ್ಯವಾಗಲಿದೆ ಎಂದು ನೋಡುತ್ತೇವೆ. ಹಾಗಿರುವಾಗ ನಮ್ಮ ಮುಂದೆ ಬರುವ ಆಯ್ಕೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಅಂಚೆ ಕಚೇರಿಯಲ್ಲಿ ಮಾಡುವ ಯೋಜನೆಯಾಗಿದೆ.

ಅಂಚೆ ಕಚೇರಿ ಯೋಜನೆಗಳನ್ನು ನಾವು ಎಂದಿಗೂ ಕೂಡಾ ಅತೀ ನಂಬಿಕಾರ್ಹ ಯೋಜನೆ ಎಂದು ಹೇಳಬಹುದು. ಯಾಕೆಂದರೆ ಅಂಚೆ ಕಚೇರಿ ಯೋಜನೆಯು ಎಂದಿಗೂ ಸರ್ಕಾರದ ಸಹಭಾಗಿತ್ವದಲ್ಲಿರುತ್ತದೆ. ಅಂಚೆ ಕಚೇರಿಯು ಹಲವಾರು ಯೋಜನೆಗಳನ್ನು ಹೊಂದಿದೆ. ಈ ಯೋಜನೆಯಲ್ಲಿ ನಾವು ಹೂಡಿಕೆ ಮಾಡಿದರೆ ನಮಗೆ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗಲಿದೆ.

Post Office RD : ಪೋಸ್ಟ್ ಆಫೀಸ್ ಆರ್‌ಡಿ: 5,000 ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್?Post Office RD : ಪೋಸ್ಟ್ ಆಫೀಸ್ ಆರ್‌ಡಿ: 5,000 ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್?

ಅಂಚೆ ಕಚೇರಿಯಲ್ಲಿ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುವ ಹಲವಾರು ಯೋಜನೆಗಳು ಇದೆ. ಅದರಲ್ಲಿ ಒಂದು ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಖಾತೆ (ಎಂಐಎಸ್) ಆಗಿದೆ. ಈ ಯೋಜನೆಯಲ್ಲಿ ನಾವು ಮಾಸಿಕವಾಗಿ ಒಂದು ಬಾರಿ ಹೂಡಿಕೆಯನ್ನು ಮಾಡಿದರೆ ಬಳಿಕ ಮಾಸಿಕವಾಗಿ 9 ಸಾವಿರ ರೂಪಾಯಿ ಆದಾಯವನ್ನು ಪಡೆಯಲು ಸಾಧ್ಯವಾಗಲಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 9 ಸಾವಿರ ರೂಪಾಯಿ ಮಾಸಿಕ ಆದಾಯ

9 ಸಾವಿರ ರೂಪಾಯಿ ಮಾಸಿಕ ಆದಾಯ

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಅಡಿಯಲ್ಲಿ ನಾವು ಭಾರೀ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ. ಬಡ್ಡಿದರದ ಲೆಕ್ಕಾಚಾರದಲ್ಲಿ ನಿಮಗೆ ಮಾಸಿಕವಾಗಿ 9 ಸಾವಿರ ರೂಪಾಯಿ ಆದಾಯ ಲಭ್ಯವಾಗಲಿದೆ. 2023ರ ಜನವರಿ-ಮಾರ್ಚ್‌ನಲ್ಲಿ ಈ ಯೋಜನೆಯಲ್ಲಿ ಬಡ್ಡಿದರವನ್ನು ಶೇಕಡ 7.1ರಷ್ಟು ಇರಲಿದೆ. ಸರ್ಕಾರವು ಸಾಮಾನ್ಯವಾಗಿ ಬಡ್ಡಿದರವನ್ನು ನಿಗದಿಪಡಿಸುತ್ತದೆ. ಈ ಯೋಜನೆಯಲ್ಲಿ ಲಾಕ್‌-ಇನ್ ಅವಧಿ ಕೂಡಾ ಇದೆ. ಈ ಯೋಜನೆಯಲ್ಲಿ ಲಾಕ್‌-ಇನ್ ಅವಧಿ 5 ವರ್ಷವಾಗಿದೆ. ಮೆಚ್ಯೂರಿಟಿ ಬಳಿಕ ನಾವು ಈ ಹೂಡಿಕೆಯನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು, ಅಥವಾ ಮರು ಹೂಡಿಕೆಯನ್ನು ಮಾಡಬಹುದು.

 ಗರಿಷ್ಠ ಹೂಡಿಕೆ ಮಿತಿ ಏರಿಕೆ

ಗರಿಷ್ಠ ಹೂಡಿಕೆ ಮಿತಿ ಏರಿಕೆ

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಗರಿಷ್ಠ ಹೂಡಿಕೆಯ ಮಿತಿಯನ್ನು ಸಿಂಗಲ್ ಅಕೌಂಟ್‌ಗೆ 4.5 ಲಕ್ಷ ರೂಪಾಯಿಯಿಂದ 9 ಲಕ್ಷ ರೂಪಾಯಿಗೆ ಏರಿಸಲಾಗುತ್ತದೆ. ಹಾಗೆಯೇ ಜಾಯಿಂಟ್ ಅಕೌಂಟ್‌ಗೆ ಈ ಮಿತಿಯನ್ನು 15 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ತನ್ನ ಬಜೆಟ್ 2023ರ ಭಾಷಣದಲ್ಲಿ ಈ ಬಗ್ಗೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಅಂಚೆ ಕಚೇರಿ ವೆಬ್‌ಸೈಟ್‌ನಲ್ಲಿ ಹಳೆಯ ಮೊತ್ತವನ್ನು ಉಲ್ಲೇಖಿಸಲಾಗಿದೆ.

 9 ಸಾವಿರವರೆಗೆ ಆದಾಯ ಪಡೆಯುವುದು ಹೇಗೆ?

9 ಸಾವಿರವರೆಗೆ ಆದಾಯ ಪಡೆಯುವುದು ಹೇಗೆ?

ಗರಿಷ್ಠ ಹೂಡಿಕೆ ಮಿತಿಯನ್ನು 4.5 ಲಕ್ಷ ರೂಪಾಯಿಯಿಂದ 9 ಲಕ್ಷ ರೂಪಾಯಿಗೆ ಏರಿಕೆ ಮಾಡಿದ ಬಳಿಕ ನೀವು ಸರಿ ಸುಮಾರು 9,000 ರೂಪಾಯಿವರೆಗೆ ಮಾಸಿಕ ಆದಾಯವನ್ನು ಪಡೆಯಲು ಸಾಧ್ಯವಾಗಲಿದೆ. ನೀವು ಒಂದು ಬಾರಿಗೆ ಜಾಯಿಂಟ್ ಅಕೌಂಟ್‌ನಲ್ಲಿ 15 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ ಮಾಸಿಕವಾಗಿ 8,875 ರೂಪಾಯಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಬಳಿಕ ಎಲ್ಲ ಜಾಯಿಂಟ್ ಹೋಲ್ಡರ್‌ಗಳು ಹೂಡಿಕೆ ಮೇಲೆ ಸಮವಾದ ಷೇರನ್ನು ಹೊಂದುತ್ತಾರೆ. ನೀವು ಹೂಡಿಕೆಯನ್ನು ಮಾಡಿ ಒಂದು ತಿಂಗಳಾದ ಬಳಿಕ ನಿಮಗೆ ಬಡ್ಡಿದರವನ್ನು ಪಾವತಿ ಮಾಡಲಾಗುತ್ತದೆ. ಮೆಚ್ಯೂರಿಟಿವರೆಗೂ ಬಡ್ಡಿದರ ಪಾವತಿಸಲಾಗುತ್ತದೆ.

 ಸಿಂಗಲ್‌ ಅಕೌಂಟ್‌ಗೆ ಎಷ್ಟು ಮಾಸಿಕ ಆದಾಯ?

ಸಿಂಗಲ್‌ ಅಕೌಂಟ್‌ಗೆ ಎಷ್ಟು ಮಾಸಿಕ ಆದಾಯ?

ಸಿಂಗಲ್‌ ಅಕೌಂಟ್‌ಗೆ ನೀವು 9 ಲಕ್ಷ ರೂಪಾಯಿಯನ್ನು ಒಂದು ಬಾರಿ ಹೂಡಿಕೆ ಮಾಡಿದರೆ, ಮಾಸಿಕವಾಗಿ ಬಡ್ಡಿ ರೂಪದಲ್ಲಿ 5,325 ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ. ಜಾಯಿಂಟ್ ಅಕೌಂಟ್‌ನಲ್ಲಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಮಾಸಿಕವಾಗಿ 8,875 ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ವಯಸ್ಕರು ಹೂಡಿಕೆ ಮಾಡಬಹುದು. 10 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ಹೆಸರಿನಲ್ಲಿಯೇ ಖಾತೆಯನ್ನು ತೆರೆಯಲು ಸಾಧ್ಯವಾಗಲಿದೆ. ಈ ಫಿಕ್ಸಿಡ್ ಆದಾಯ ಯೋಜನೆಯಡಿಯಲ್ಲಿ ಮಾರುಕಟ್ಟೆಯ ಯಾವುದೇ ರಿಸ್ಕ್ ಇಲ್ಲ. ಹಾಗೆಯೇ ಸುರಕ್ಷಿತ ಹೂಡಿಕೆ ಇದಾಗಿದೆ.

English summary

PO Scheme: Invest once and get Rs 9,000 monthly income for 5 years, Here's Details in Kannada

Post Office Scheme: Post Office schemes are considered as one of the trusted schemes as they are backed by the government. Invest once and get Rs 9,000 monthly income for 5 years, Here's Details in Kannada.
Story first published: Monday, February 6, 2023, 14:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X