For Quick Alerts
ALLOW NOTIFICATIONS  
For Daily Alerts

ಕೇವಲ ರೂ.5000 ಹೂಡಿಕೆ ಮಾಡಿ ಸ್ವಂತ ವ್ಯವಹಾರ ಆರಂಭ ಹೀಗೆ ಮಾಡಿ

|

ಅಂಚೆ ಕಚೇರಿಯ ಯೋಜನೆಗಳನ್ನು ಸುರಕ್ಷಿತ ಯೋಜನೆಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ. ಜನರು ತಾವು ಕಷ್ಟಪಟ್ಟು ಗಳಿಸಿದ ಉಳಿತಾಯದ ಹಣದಲ್ಲಿ ಉತ್ತಮ ಆದಾಯವನ್ನು ಗಳಿಸಲು ಬಯಸುವ ಭಾರತೀಯ ನಾಗರಿಕರಿಗೆ ಪೋಸ್ಟ್ ಆಫೀಸ್ ಹಲವಾರು ಯೋಜನೆಗಳನ್ನು ನೀಡುತ್ತದೆ.

ಇಂತಹ ಹೂಡಿಕೆ ಯೋಜನೆಗಳು ಜನರಲ್ಲಿ ಹೆಚ್ಚು ಜನಪ್ರಿಯವಾಗಿದ್ದರೂ, ಹೊಸ ಫ್ರ್ಯಾಂಚೈಸ್ ಅನ್ನು ಸ್ಥಾಪಿಸುವ ಮೂಲಕ ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವ ಅವಕಾಶವನ್ನು ಪೋಸ್ಟ್ ಆಫೀಸ್ ನೀಡುತ್ತದೆ. ಇದಕ್ಕಾಗಿ ನೀವು ಹೆಚ್ಚು ಹೂಡಿಕೆ ಮಾಡಬೇಕಾಗಿಲ್ಲ.

IPPB ಮೂಲಕ ಬ್ಯಾಂಕಿಂಗ್ ಸೇವೆ ಮನೆಯಲ್ಲೇ ಕೂತು ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?IPPB ಮೂಲಕ ಬ್ಯಾಂಕಿಂಗ್ ಸೇವೆ ಮನೆಯಲ್ಲೇ ಕೂತು ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?

ನೀವು ಕಡಿಮೆ ಮೊತ್ತವನ್ನು ಹೂಡಿಕೆ ಮಾಡಿ ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ಅನ್ನು ತೆರೆಯಬಹುದು. ಈ ಮೂಲಕ ನೀವು ಸ್ವಂತ ವ್ಯವಹಾರ ಆರಂಭ ಮಾಡಿ ಆದಾಯವನ್ನು ಗಳಿಸಬಹುದು. ನೀವು ಐದು ಸಾವಿರ ರೂಪಾಯಿ ಹೂಡಿಕೆ ಮಾಡಿ ಕೂಡಾ ನಿಮ್ಮದೇ ಆದ ಸ್ವಂತ ವ್ಯವಹಾರ ಆರಂಭ ಮಾಡಬಹುದು, ಹೇಗೆ ಎಂದು ತಿಳಿಯಲು ಮುಂದೆ ಓದಿ...

 ಪೋಸ್ಟ್ ಆಫೀಸ್ ನೀಡುವ ಫ್ರ್ಯಾಂಚೈಸ್ ಅವಕಾಶ

ಪೋಸ್ಟ್ ಆಫೀಸ್ ನೀಡುವ ಫ್ರ್ಯಾಂಚೈಸ್ ಅವಕಾಶ

ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ಯೋಜನೆಯೊಂದಿಗೆ ಕೇವಲ 5,000 ರೂಪಾಯಿಗಳ ಹೂಡಿಕೆಯೊಂದಿಗೆ ಉತ್ತಮ ಮೊತ್ತವನ್ನು ಪಡೆಯಬಹುದು. ಭಾರತದಾದ್ಯಂತ 1.56 ಲಕ್ಷ ಅಂಚೆ ಕಛೇರಿ ಶಾಖೆಗಳಿದ್ದರೂ, ಹೊಸ ಮಳಿಗೆಗಳಿಗೆ ಇನ್ನೂ ಬೇಡಿಕೆ ಇದೆ. ಪೋಸ್ಟ್ ಆಫೀಸ್‌ನಿಂದ ಎರಡು ರೀತಿಯ ಫ್ರ್ಯಾಂಚೈಸ್ ಮಾದರಿಗಳನ್ನು ಆರಂಭ ಮಾಡಲು ಅವಕಾಶ ನೀಡುತ್ತದೆ. ಅದುವೇ ಫ್ರ್ಯಾಂಚೈಸ್ ಔಟ್‌ಲೆಟ್‌ಗಳು ಮತ್ತು ಪೋಸ್ಟಲ್ ಏಜೆಂಟ್‌ಗಳು. ಅಗತ್ಯವಿರುವಲ್ಲಿ ಕೌಂಟರ್ ಸೇವೆಗಳನ್ನು ನೀಡಲು ಫ್ರ್ಯಾಂಚೈಸ್ ಔಟ್‌ಲೆಟ್‌ಗಳನ್ನು ತೆರೆಯಬಹುದು. ಆದರೆ ಶಾಖೆಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ಮತ್ತೊಂದೆಡೆ, ವ್ಯಕ್ತಿಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಚೀಟಿಗಳು ಮತ್ತು ಸ್ಟೇಷನರಿಗಳನ್ನು ಮಾರಾಟ ಮಾಡುವ ಪೋಸ್ಟಲ್ ಏಜೆಂಟ್ ಆಗಬಹುದು.

 ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ತೆಗೆದುಕೊಳ್ಳುವ ಅರ್ಹತೆ
 

ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ತೆಗೆದುಕೊಳ್ಳುವ ಅರ್ಹತೆ

ಒಬ್ಬ ವ್ಯಕ್ತಿಯು ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ಅನ್ನು ಪ್ರಾರಂಭಿಸಲು ಅರ್ಹರಾಗಿದ್ದಾರೆಯೇ ಎಂದು ನಿರ್ಧರಿಸಲು ಕೆಲವು ಅಂಶಗಳು ಇದೆ.

ವಯಸ್ಸಿನ ಮಾನದಂಡಗಳು: ಫ್ರಾಂಚೈಸ್ ತೆಗೆದುಕೊಳ್ಳುವ ವ್ಯಕ್ತಿಯು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
ರಾಷ್ಟ್ರೀಯತೆ: ಫ್ರ್ಯಾಂಚೈಸ್ ಅನ್ನು ಭಾರತದ ಯಾವುದೇ ನಾಗರಿಕರು ಆಯ್ಕೆ ಮಾಡಬಹುದು ಶೈಕ್ಷಣಿಕ ಅರ್ಹತೆ: ವ್ಯಕ್ತಿಯು ಮಾನ್ಯತೆ ಪಡೆದ ಶಾಲೆಯಿಂದ 8 ನೇ ತರಗತಿಯನ್ನು ತೇರ್ಗಡೆ ಹೊಂದಿರಬೇಕು.

ಸೇವೆಯಲ್ಲಿರುವ ಅಂಚೆ ನೌಕರರ ಕುಟುಂಬದ ಸದಸ್ಯರು ಫ್ರಾಂಚೈಸ್ ಯೋಜನೆಯನ್ನು ಪಡೆಯಲು ಸಾಧ್ಯವಿಲ್ಲ. ಮತ್ತೊಂದೆಡೆ, ವ್ಯಕ್ತಿಗಳು ಅಥವಾ ವಿವಿಧ ಸಂಸ್ಥೆಗಳು ಮತ್ತು ಘಟಕಗಳು ಯೋಜನೆಯನ್ನು ತೆಗೆದುಕೊಳ್ಳಬಹುದು. ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಮೂಲೆಯ ಅಂಗಡಿಗಳು, ಪಾನ್‌ ಅಂಗಡಿ ಹೊಂದಿರುವವರು, ದಿನಸಿ ಅಂಗಡಿ ಹೊಂದಿರುವವರು, ಸ್ಟೇಷನರಿ ಅಂಗಡಿಗಳು, ಸಣ್ಣ ಅಂಗಡಿಕಾರರು, ವಿಶೇಷ ಆರ್ಥಿಕ ವಲಯಗಳು, ಪ್ರಮುಖ ಹೆದ್ದಾರಿ ಯೋಜನೆಗಳು, ಮುಂಬರುವ ಹೊಸ ಕೈಗಾರಿಕಾ ಕೇಂದ್ರಗಳು, ಕಾಲೇಜುಗಳು, ಪಾಲಿಟೆಕ್ನಿಕ್‌ಗಳು, ವಿಶ್ವವಿದ್ಯಾಲಯಗಳು, ವೃತ್ತಿಪರ ಕಾಲೇಜುಗಳು ವಿವಿಧ ಸಂಸ್ಥೆಗಳು ಮತ್ತು ಘಟಕಗಳಲ್ಲಿ ಒಳಗೊಂಡಿದೆ.

 

 ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ಯೋಜನೆಯಿಂದ ಎಷ್ಟು ಗಳಿಕೆ ಪಡೆಯುತ್ತಾರೆ?

ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ಯೋಜನೆಯಿಂದ ಎಷ್ಟು ಗಳಿಕೆ ಪಡೆಯುತ್ತಾರೆ?

ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ವ್ಯವಹಾರದೊಂದಿಗೆ, ಜನರು ಕಮಿಷನ್ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು. ಇದನ್ನು ಕೆಳಗಿನಂತೆ ವಿವಿಧ ಸೇವೆಗಳಿಗೆ ನಿಗದಿಪಡಿಸಲಾಗಿದೆ:

* ರಿಜಿಸ್ಟರ್ಡ್ ಪೋಸ್ಟ್ ಬುಕಿಂಗ್ ಮಾಡಲು, ಪ್ರತಿ ವಹಿವಾಟಿಗೆ ರೂ 3 ಕಮಿಷನ್ ಪಡೆಯಬಹುದು
* ಸ್ಪೀಡ್ ಪೋಸ್ಟ್ ಬುಕಿಂಗ್ ಮಾಡಲು, ಪ್ರತಿ ವಹಿವಾಟಿಗೆ ಕಮಿಷನ್ 5 ರೂ
* ರೂ 100 ರಿಂದ ರೂ 200 ರ ನಡುವಿನ ಮನಿ ಆರ್ಡರ್‌ಗಳ ಬುಕಿಂಗ್‌ನಲ್ಲಿ ರೂ 3.50 ಕಮಿಷನ್ ಗಳಿಸಬಹುದು. ಆದರೆ ರೂ 200 ಕ್ಕಿಂತ ಹೆಚ್ಚಿನ ಮನಿ ಆರ್ಡರ್ ಪ್ರತಿ ವಹಿವಾಟಿಗೆ ರೂ 5 ಕಮಿಷನ್ ಇರಲಿದೆ. ಫ್ರಾಂಚೈಸ್ ಏಜೆಂಟ್‌ಗಳು 100 ರೂ.ಗಿಂತ ಕಡಿಮೆ ಮನಿ ಆರ್ಡರ್‌ಗಳನ್ನು ಬುಕ್ ಮಾಡಲಾಗದು.
* 1000 ರಿಜಿಸ್ಟರ್ಡ್ ಮತ್ತು ಸ್ಪೀಡ್ ಪೋಸ್ಟ್ ಬುಕಿಂಗ್‌ಗಳ ಮಾಸಿಕ ಗುರಿಯನ್ನು ಸಾಧಿಸಿದರೆ ಶೇಕಡ 20 ಹೆಚ್ಚುವರಿ ಕಮಿಷನ್ ಲಭ್ಯವಾಗಲಿದೆ.
* ಅಂಚೆ ಚೀಟಿಗಳು ಮತ್ತು ಇತರೆ ಸಾಮಗ್ರಿಗಳ ಮಾರಾಟದಲ್ಲಿ, ಮಾರಾಟದ ಮೊತ್ತ ಶೇಕಡ ಐದರಷ್ಟು ಕಮಿಷನ್ ನಿಗದಿ
* ರೆವಿನ್ಯೂ ಸ್ಟ್ಯಾಂಪ್‌ಗಳು, ಕೇಂದ್ರೀಯ ನೇಮಕಾತಿ ಶುಲ್ಕ ಸ್ಟ್ಯಾಂಪ್‌ಗಳು ಇತ್ಯಾದಿಗಳ ಮಾರಾಟ ಸೇರಿದಂತೆ ಚಿಲ್ಲರೆ ಸೇವೆಗಳಿಗೆ, ಅಂಚೆ ಇಲಾಖೆಯಿಂದ ಗಳಿಸಿದ ಗಳಿಕೆಯ ಶೇಕಡ 40ರಷ್ಟು ಕಮಿಷನ್ ಲಭ್ಯ. ಈ ಕಮಿಷನ್ ಶೇಕಡ 40 ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ.
* ರಿಜಿಸ್ಟರ್ಡ್ ಪಾರ್ಸೆಲ್ ಮತ್ತು ಸ್ಪೀಡ್ ಪೋಸ್ಟ್ ಪಾರ್ಸೆಲ್‌ನಿಂದ ಮಾಸಿಕ ವ್ಯವಹಾರದಲ್ಲಿ, ಪ್ರತ್ಯೇಕವಾಗಿ, ಕಮಿಷನ್ ನಿಗದಿ ಪಡಿಸಲಾಗಿದೆ

 

 ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?

ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?

ಪೋಸ್ಟ್ ಆಫೀಸ್‌ನೊಂದಿಗೆ ಫ್ರ್ಯಾಂಚೈಸ್ ಯೋಜನೆಗೆ ಅರ್ಜಿ ಸಲ್ಲಿಸಲು, ಕೆಲವು ಹಂತಗಳನ್ನು ಪಾಲನೆ ಮಾಡಬೇಕಾಗುತ್ತದೆ.

* ಅರ್ಜಿ ನಮೂನೆಯನ್ನು ಅಂಚೆ ಕಛೇರಿಯಿಂದ ಪಡೆಯಬೇಕು
* ಫ್ರ್ಯಾಂಚೈಸ್‌ಗಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ.
* ವಿವರವಾದ ಪ್ರಸ್ತಾವನೆಗಳ ಪ್ರತಿಯನ್ನು ಕೂಡಾ ಸೇರಿಸಬೇಕು.
* ಈ ಫಾರ್ಮ್ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು
* ಅಂಚೆ ಇಲಾಖೆ ಮತ್ತು ಫ್ರ್ಯಾಂಚೈಸ್ ಅರ್ಜಿದಾರರು ಒಪ್ಪಂದದ ಪತ್ರಕ್ಕೆ ಸಹಿ ಮಾಡುತ್ತಾರೆ
* ಆಯ್ಕೆಯನ್ನು ಆಯಾ ವಿಭಾಗೀಯ ಮುಖ್ಯಸ್ಥರು ಅಂತಿಮಗೊಳಿಸುತ್ತಾರೆ.
* ಅರ್ಜಿ ನಮೂನೆಯನ್ನು ಸಲ್ಲಿಸಿದ ದಿನಾಂಕದಿಂದ 14 ದಿನದಲ್ಲಿ ಇದು ನಿರ್ಧರಿತವಾಗಲಿದೆ.

 

English summary

Post Office Franchise Scheme: Learn how to Start Your Business in Just Rs.5000 in Kannada

Post Office Franchise Scheme: Learn how to Start Your Business in Just Rs.5000? Know eligibility criteria, procedures and how to apply. Read on.
Story first published: Saturday, May 28, 2022, 11:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X