For Quick Alerts
ALLOW NOTIFICATIONS  
For Daily Alerts

ಫೋಸ್ಟ್ ಆಫೀಸ್ ಉಳಿತಾಯ ಖಾತೆದಾರರಿಗೆ ಶೀಘ್ರವೇ ಹೊಸ ಸೌಲಭ್ಯ

|

ಪೋಸ್ಟ್ ಆಫೀಸ್ ಖಾತೆದಾರರು ಶೀಘ್ರದಲ್ಲೇ ಹೊಸ ಸೌಲಭ್ಯವನ್ನು ಪಡೆಯಲಿದ್ದಾರೆ. ಪೋಸ್ಟ್ ಆಫೀಸ್ ಖಾತೆದಾರರು ಶೀಘ್ರದಲ್ಲೇ NEFT ಮತ್ತು RTGS ಸೌಲಭ್ಯಗಳನ್ನು ಬಳಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಪೋಸ್ಟ್ ಆಫೀಸ್ ಗ್ರಾಹಕರು ತಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಇತರ ಬ್ಯಾಂಕ್‌ಗಳಿಂದ ಪೋಸ್ಟ್ ಆಫೀಸ್ ಖಾತೆಗಳಿಗೆ ಹಣವನ್ನು ಕಳುಹಿಸಬಹುದು.

 

ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಸೂಚನೆಯ ಪ್ರಕಾರ, ಈ ಸೌಲಭ್ಯವು ಮೇ 31, 2022 ರಿಂದ ಲಭ್ಯವಿರುತ್ತದೆ. "ಇದು ಫೋಸ್ಟ್ ಆಫೀಸ್ ಉಳಿತಾಯ ಖಾತೆಗಳಿಗೆ NEFT/RTGS ಸೌಲಭ್ಯ ದೊರೆಯಲಿದೆ. ಇದು 31.05.2022 ರಿಂದ ಕಾರ್ಯನಿರ್ವಹಿಸಲಿದೆ," ಎಂದು ಅಧಿಕೃತ ಹೇಳಿಕೆ ಉಲ್ಲೇಖ ಮಾಡಿದೆ.

"ಪಾವತಿ ಚಾನೆಲ್ ವಿಭಾಗ, ಬೆಂಗಳೂರು (ಅನುಬಂಧ ಎಲ್), ಅಂಚೆ ಕಛೇರಿಗಳ ಅಂತಿಮ ಬಳಕೆದಾರರಿಗೆ ಪ್ರಮಾಣಿತ ಕಾರ್ಯನಿರ್ವಹಣೆಯ ಕಾರ್ಯವಿಧಾನ (ಅನುಬಂಧ ll), ಮತ್ತು ಪ್ರಮಾಣಿತ ಲೆಕ್ಕಪತ್ರ ವಿಧಾನ (ಅನುಬಂಧ-III) ಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ಇಲ್ಲಿ ಲಗತ್ತಿಸಲಾಗಿದೆ," ಎಂದು ಉಲ್ಲೇಖ ಮಾಡಲಾಗಿದೆ.

ಫೋಸ್ಟ್ ಆಫೀಸ್ ಉಳಿತಾಯ ಖಾತೆದಾರರಿಗೆ ಶೀಘ್ರವೇ ಹೊಸ ಸೌಲಭ್ಯ

NEFT ಮತ್ತು RTGS ಎಂದರೇನು?

ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ (NEFT) ಎಂಬುದು ಇಂಟರ್‌ಬ್ಯಾಂಕ್ ಪಾವತಿ ವ್ಯವಸ್ಥೆಯಾಗಿದೆ. ಇದನ್ನು ದಿನದ 24 ಗಂಟೆಗಳು, ವಾರದ 7 ದಿನಗಳು, ವರ್ಷದ 365 ದಿನಗಳು ಬಳಸಬಹುದು. ಈ ವಹಿವಾಟು ಆರ್‌ಬಿಐ ಮೂಲಕ ಬ್ಯಾಂಕುಗಳ ನಡುವೆ ಅರ್ಧ ಗಂಟೆಯಲ್ಲಿ ನಿರ್ವಹಣೆ ಮಾಡಲಾಗುತ್ತದೆ.

RTGS ಎಂದರೆ ರಿಯಲ್-ಟೈಮ್ ಗ್ರಾಸ್ ಸೆಟಲ್‌ಮೆಂಟ್. ಇದು ರಿಯಲ್-ಟೈಮ್ ಹಣ ವರ್ಗಾವಣೆಯ ವ್ಯವಸ್ಥೆಯಾಗಿದೆ. ಇಲ್ಲಿ ವೈಯಕ್ತಿಕ ನಿಧಿ ವರ್ಗಾವಣೆ ಮಾಡಲಾಗುತ್ತದೆ. ಈ ವ್ಯವಸ್ಥೆಯು ಕೂಡಾ ವರ್ಷದ 365 ದಿನಗಳೂ ಲಭ್ಯವಿರಲಿದೆ.

RTGS, NEFT ಬಳಕೆಗೆ ಶುಲ್ಕ

* 10,000 ರೂಪಾಯಿವರೆಗಿನ ವಹಿವಾಟುಗಳಿಗೆ ರೂಪಾಯಿ 2.50+ಜಿಎಸ್‌ಟಿ
* 10,000 ರೂಪಾಯಿಗಿಂತ ಅಧಿಕ 1 ಲಕ್ಷದವರೆಗಿನ ವಹಿವಾಟುಗಳಿಗೆ ರೂಪಾಯಿ 5+ಜಿಎಸ್‌ಟಿ
* 1 ಲಕ್ಷ ರೂಪಾಯಿಯಿಂದ 2 ಲಕ್ಷದವರೆಗಿನ ವಹಿವಾಟುಗಳಿಗೆ ರೂಪಾಯಿ 15+ಜಿಎಸ್‌ಟಿ
* 2 ಲಕ್ಷಕ್ಕಿಂತ ಹೆಚ್ಚಿನ ಮತ್ತು ಗರಿಷ್ಠ ಮಿತಿಯನ್ನು ಮೀರದ ವಹಿವಾಟುಗಳಿಗೆ ರೂಪಾಯಿ 25+ಜಿಎಸ್‌ಟಿ

English summary

Post Office savings account holders to get RTGS, NEFT facility soon: Details in Kannada

NEFT, RTGS Facility To Be Provided To Post Office Account Holders soon. Check Details in kannada.
Story first published: Wednesday, May 25, 2022, 16:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X