For Quick Alerts
ALLOW NOTIFICATIONS  
For Daily Alerts

ಮಾಸಿಕ ಶೇಕಡ 6.6ರಷ್ಟು ಬಡ್ಡಿ ಪಡೆಯಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ

|

ಜನರು ಎಂದಿಗೂ ಹೂಡಿಕೆ ಮಾಡುವಾಗ ಹೆಚ್ಚು ರಿಟರ್ನ್ ಎಲ್ಲಿ ಲಭ್ಯವಾಗುತ್ತದೆ ಎಂದು ನೋಡುತ್ತಾರೆ. ಆದರೆ ಇದರ ಜೊತೆಗೆ ಸುರಕ್ಷಿತ ಹೂಡಿಕೆ ಯೋಜನೆಯತ್ತ ಕೂಡಾ ಹೂಡಿಕೆದಾರರು ಹೆಚ್ಚು ಗಮನ ಹರಿಸುತ್ತಾರೆ. ಇದ್ದ ಹಣವನ್ನು ಹೂಡಿಕೆ ಮಾಡಿ ಬಳಿಕ ಕೈಸುಟ್ಟುಕೊಳ್ಳುವುದು ಯಾಕೆ ಹೇಳಿ?, ಮಿಂಚಿ ಹೋದ ಕಾಲಕ್ಕೆ ಚಿಂತಿಸುವ ಬದಲು ಹೂಡಿಕೆ ಮಾಡುವ ಮುನ್ನವೇ ಸರಿಯಾಗಿ ಯೋಚಿಸಿ, ತಜ್ಞರ ಸಲಹೆ ಪಡೆದು ಸುರಕ್ಷಿತ ಹೂಡಿಕೆ ಮಾಡುವುದು ಉತ್ತಮವಲ್ಲವೇ?, ಇಂತಹ ಹೂಡಿಕೆಗಳಲ್ಲಿ ಅಂಚೆ ಕಚೇರಿ ಹೂಡಿಕೆ ಕೂಡಾ ಒಂದು.

ಜನರಿಗೆ ಹೂಡಿಕೆ ಮಾಡಿದ್ದಕ್ಕೆ ವೇತನವನ್ನು ನೀಡಲಾಗುತ್ತದೆ. ಹಾಗೆಯೇ ನಾವು ಮಾಡಿದ ಹೂಡಿಕೆಗೂ ಕೂಡಾ ನಮಗೆ ರಿಟರ್ನ್ ಲಭ್ಯವಾಗುತ್ತದೆ. ನೀವು ಮಾಡಿದ ಹೂಡಿಕೆಯಿಂದ ಉತ್ತಮ ರಿಟರ್ನ್ ಅನ್ನು ಪಡೆಯಬೇಕಾದರೆ ಈ ಒಂದು ಯೋಜನೆ ಉತ್ತಮವಾಗಿದೆ. ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಮೂಲಕ ಉತ್ತಮ ರಿಟರ್ನ್ ಅನ್ನು ಗಳಿಸಲು ಸಾಧ್ಯವಾಗಲಿದೆ.

ಕೇವಲ ರೂ.5000 ಹೂಡಿಕೆ ಮಾಡಿ ಸ್ವಂತ ವ್ಯವಹಾರ ಆರಂಭ ಹೀಗೆ ಮಾಡಿಕೇವಲ ರೂ.5000 ಹೂಡಿಕೆ ಮಾಡಿ ಸ್ವಂತ ವ್ಯವಹಾರ ಆರಂಭ ಹೀಗೆ ಮಾಡಿ

ಈ ಯೋಜನೆಯಲ್ಲಿ ನಿಯತಕಾಲಿಕವಾಗಿ ನೀವು ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗಲಿದೆ. ನೀವು ಮಾಸಿಕವಾಗಿ ನಿಗದಿತ ಬಡ್ಡಿದರವನ್ನು ಪಡೆಯಲು ಬಯಸಿದರೆ, ನೀವು ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯ ಮೇಲೆ ಹೂಡಿಕೆ ಮಾಡಬಹುದು. ಈ ಸಂಪೂರ್ಣ ಪ್ರಕ್ರಿಯೆ ಯಾವ ರೀತಿ ಇದೆ, ನೀವು ಎಷ್ಟು ಹೂಡಿಕೆ ಮಾಡಬೇಕು?, ವಯಸ್ಸಿನ ಮಿತಿ ಯಾವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಎಷ್ಟು ಹೂಡಿಕೆ ಮಾಡಬೇಕಾಗುತ್ತದೆ?

ಎಷ್ಟು ಹೂಡಿಕೆ ಮಾಡಬೇಕಾಗುತ್ತದೆ?

ಈ ಮಾಸಿಕ ಆದಾಯ ಯೋಜನೆಯಲ್ಲಿ ನೀವು 100 ರೂಪಾಯಿಯಿಂದ 1000 ರೂಪಾಯಿವರೆಗೆ ಗುಣಕವಾಗಿ ಹೂಡಿಕೆ ಮಾಡಲು ಸಾಧ್ಯವಾಗಲಿದೆ. ನೀವು ಕೇವಲ 4.5 ಲಕ್ಷದವರೆಗೆ ಮಾತ್ರ ಹೂಡಿಕೆ ಮಾಡಬಹುದು. ನೀವು ಒಂದೇ ಖಾತೆಯನ್ನು ಹೊಂದಿದ್ದರೆ ಮತ್ತು ನೀವು ಜಂಟಿ ಖಾತೆಯನ್ನು ಹೊಂದಿದ್ದರೆ ನೀವು ಗರಿಷ್ಠ 9 ಲಕ್ಷ ರೂಪಾಯಿವರೆಗೆ ಠೇವಣಿ ಮಾಡಬಹುದಾಗಿದೆ.

ಪೋಸ್ಟ್ ಆಫೀಸ್ ಯೋಜನೆಯಲ್ಲಿ ರೂ. 5000, 10,000, 1 ಲಕ್ಷ ಡಬಲ್ ಮಾಡುವುದು ಹೇಗೆ?ಪೋಸ್ಟ್ ಆಫೀಸ್ ಯೋಜನೆಯಲ್ಲಿ ರೂ. 5000, 10,000, 1 ಲಕ್ಷ ಡಬಲ್ ಮಾಡುವುದು ಹೇಗೆ?

 ವಯಸ್ಸಿನ ಮಿತಿ ಎಷ್ಟಿದೆ ನೋಡಿ

ವಯಸ್ಸಿನ ಮಿತಿ ಎಷ್ಟಿದೆ ನೋಡಿ

ನೀವು ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಠೇವಣಿ ಮಾಡಬೇಕಾದರೆ ನಿಮಗೆ ಕನಿಷ್ಠ 18 ವರ್ಷವಾದರೂ ಆಗಿರಬೇಕು. ಕನಿಷ್ಠ ಒಬ್ಬರು ಮತ್ತು ಗರಿಷ್ಠ ಮೂರು ಜನರು ಒಂದೇ ಸಮಯದಲ್ಲಿ ಈ ಖಾತೆಯನ್ನು ತೆರೆಯಬಹುದು. ಅಂದರೆ ಈ ಖಾತೆಯನ್ನು ಜಂಠಿಯಾಗಿಯೂ ಹಾಗೂ ವೈಯಕ್ತಿಕವಾಗಿಯೂ ತೆರೆಯುವ ಅವಕಾಶವಿದೆ.

 ಮೆಚ್ಯೂರಿಟಿ ಅವಧಿ ಎಷ್ಟಿದೆ?

ಮೆಚ್ಯೂರಿಟಿ ಅವಧಿ ಎಷ್ಟಿದೆ?

ನೀವು ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಸುಮಾರು 5 ವರ್ಷದವರೆಗೆ ಖಾತೆಯನ್ನು ತೆರೆಯಲು ಸಾಧ್ಯವಾಗಲಿದೆ. ಇಲ್ಲಿ ನೀವು ಹೂಡಿಕೆ ಮಾಡಿದ ಹಣವನ್ನು ಒಂದು ವರ್ಷ ಕಾಲದವರೆಗೆ ವಿತ್‌ಡ್ರಾ ಮಾಡಲು ಅಥವಾ ಯೋಜನೆಗೆ ಹಣ ಜಮೆ ಮಾಡುವುದನ್ನು ನಿಲ್ಲಿಸಿ ಹೂಡಿಕೆ ಮಾಡಿದ ಹಣವನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ನೀವು ಒಂದು ವರ್ಷದ ಬಳಿಕ ಮೂರು ವರ್ಷದವರೆಗಿನ ಅವಧಿಯ ನಡುವೆ ಹಣವನ್ನು ಹಿಂದಕ್ಕೆ ಪಡೆದರೆ ನೀವು ಠೇವಣಿ ಮಾಡಿದ ಹಣದಿಂದ ಶೇಕಡ 2ರಷ್ಟನ್ನು ದಂಡ ಅಥವಾ ಶುಲ್ಕದ ರೂಪದಲ್ಲಿ ಪಡೆಯಲಾಗುತ್ತದೆ. ನೀವು ಮೂರು ವರ್ಷದ ಬಳಿಕ ಐದು ವರ್ಷದವರೆಗೆ ಹಣವನ್ನು ವಿತ್‌ಡ್ರಾ ಮಾಡಿದರೆ ನೀವು ಠೇವಣಿ ಮಾಡಿದ ಹಣದಿಂದ ಶೇಕಡ 1ರಷ್ಟು ಹಣವನ್ನು ದಂಡ ಅಥವಾ ಶುಲ್ಕದ ರೂಪದಲ್ಲಿ ಪಡೆಯಲಾಗುತ್ತದೆ.

 ಹೂಡಿಕೆ ಆಯ್ಕೆ ವಿವರ ಇಲ್ಲಿದೆ

ಹೂಡಿಕೆ ಆಯ್ಕೆ ವಿವರ ಇಲ್ಲಿದೆ

ನೀವು ಈ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಮಾಡುವ ಹೂಡಿಕೆಗೆ ಪ್ರತಿ ತಿಂಗಳು ಶೇಕಡ 6.6ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗಲಿದೆ. ನೀವು ನಿಮ್ಮ ಖಾತೆಗೆ ಒಂದು ಬಾರಿಯೇ 50,000 ರೂಪಾಯಿ ಜಮೆ ಮಾಡಿದರೆ, ನಿಮಗೆ ಪ್ರತಿ ತಿಂಗಳು ರೂಪಾಯಿ 275 ಬಡ್ಡಿ ರೂಪದಲ್ಲಿ ಲಭ್ಯವಾಗಲಿದೆ. ಮಾಸಿಕವಾಗಿ 3300 ರೂಪಾಯಿ ಹಣ ಲಭ್ಯವಾಗಲಿದೆ. ನೀವು ಐದು ವರ್ಷದಲ್ಲಿ ಒಟ್ಟು 16500 ರೂಪಾಯಿ ಬಡ್ಡಿದರವನ್ನು ಪಡೆಯಲು ಸಾಧ್ಯವಾಗಲಿದೆ.

English summary

Post Office Scheme: Invest in This Scheme to Get 6.6 Percent Interest Per Month

Post Office Scheme: Invest in this post office scheme to get 6.6% interest per month. Here's details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X