PPF ದೀರ್ಘಾವಧಿ ಹೂಡಿಕೆಗೆ ಕೋಟಿ ಲಾಭ: ಈ '15x15x15 ನಿಯಮ' ಅನುಸರಿಸಿ ಕೋಟಿ ಗಳಿಸಿ
ಬೆಂಗಳೂರು, ಡಿಸೆಂಬರ್ 11: ಹೂಡಿಕೆದಾರರಿಗೆ ಹೂಡಿಕೆ ಮಾಡಲು 'ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)' ಜನಪ್ರಿಯ ಆಯ್ಕೆಯಾಗಿದೆ. ಇದರಲ್ಲಿ '15x15x15 ನಿಯಮ ಅನುಸರಿಸುವ ಮೂಲಕ ಕೋಟಿ ಆದಾಯ ಗಳಿಸಬಹುದಾಗಿದೆ.
'ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)'ನಲ್ಲಿ '15x15x15 ನಿಯಮ'ದ ಪ್ರಕಾರ, ಒಬ್ಬ ವ್ಯಕ್ತಿಯು ಪ್ರತಿ ವರ್ಷ ಶೇ.15 ರಷ್ಟು ಆದಾಯವನ್ನು ಗಳಿಸಲು ಬಯಸಿದರೆ ಅವರು 15 ವರ್ಷಗಳವರೆಗೆ ಮ್ಯೂಚುವಲ್ ಫಂಡ್‌ಗಾಗಿ ಮಾಸಿಕ 15,000 ರೂ. ಕಂತು ಪಾವತಿಸಬೇಕು. ಈ ಪಿಪಿಎಫ್ ಅಪಾಯಗಳಿಲ್ಲದ ಹೂಡಿಕೆ ಮತ್ತು ಖಾತರಿ ಲಾಭ ನೀಡುವ ಸಾರ್ವಜನಿಕ ಹೂಡಿಕೆ ಉಪಕ್ರಮವಾಗಿದೆ.
ಈ ಪಿಪಿಎಫ್ ಖಾತೆಗೆ ಗರಿಷ್ಠ ವಾರ್ಷಿಕವಾಗಿ ರೂ 1.5 ಲಕ್ಷ ಹಣವನ್ನು ಗರಿಷ್ಠ ಹೂಡಿಕೆ ಅವಧಿ 15 ವರ್ಷಗಳವರೆಗೆ ಮಾಸಿಕ 15,000 ರೂ.ನಂತೆ ಹೂಡಿಕೆ ಮಾಡಬೇಕು. ಪ್ರಸ್ತುತ ಪಿಪಿಎಫ್ ಬಡ್ಡಿ ದರವು ಶೇ.7.1ರಷ್ಟು ಆಗಿದ್ದು, ಇದು ಸಾಮಾನ್ಯವಾಗಿ ಶೇ.7ರಿಂದ ಶೇ. 8 ರಷ್ಟು ಏರಿಕೆ ಆಗುತ್ತದೆ. ಹೀಗಾಗಿ ಹೂಡಿಕೆ ಮಾಡುವವರು ಈ ಸರಳ 15x15x15 ಸೂತ್ರ ಅನುಸರಿಸಬೇಕು. ಇದು ನಿಮಗೆ ಕೋಟ್ಯಾಧಿಪತಿ ಆಗಲು ಸಹಾಯ ಮಾಡುತ್ತದೆ. ಈ ರೀತಿಯ ನಿಯಮ/ಸೂತ್ರ ಅನುಸರಿಸಿದರೆ ಹೂಡಿಕೆ ದಾರರು ಅಧಿಕ ಆದಾಯ ಗಳಿಸಬಹುದು.

ಹೂಡಿಕೆದಾರರು ದೀರ್ಘಾವಧಿಗೆ ಹಣ ಹೂಡಲು ಸಾರ್ವಜನಿಕ ವಲಯದ ಪಿಂಚಣಿ ನಿಧಿ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಥವಾ ಸ್ಥಿರ ಠೇವಣಿ ಖಾತೆಗಳ ಮೇಲೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡುವಲ್ಲಿ ಆಸಕ್ತಿ ತೋರುತ್ತಿರುವುದು ಅಧ್ಯಯನದಿಂದ ಗೊತ್ತಾಗಿದೆ.
'15x15x15 ನಿಯಮ' ಎಂದರೇನು?, ಲಾಭ ಹೇಗೆ?
ಹೂಡಿಕೆದಾರರು ಒಬ್ಬರು ಪ್ರತಿ ತಿಂಗಳು 15,000 ರೂ.ಗಳಂತೆ 15 ವರ್ಷಗಳವರೆಗೆ ಶೇ.15ರಷ್ಟು ರಷ್ಟು ನಿರೀಕ್ಷಿತ ಆದಾಯದಲ್ಲಿ ಹೂಡಿಕೆ ಮಾಡುವುದನ್ನು '15x15x15 ನಿಯಮ' ಎಂದು ಹೇಳಲಾಗುತ್ತದೆ. ಪರಿಣಾಮವಾಗಿ ಶೇ. 15ರಷ್ಟು ಬಡ್ಡಿದರದಲ್ಲಿ 15 ವರ್ಷಗಳ ನಂತರ ಹೂಡಿಕೆಯ ಸರಿಸುಮಾರು 1 ಕೋಟಿಯ ರೂ. ನಿಧಿ ನೀವು ಪಡೆಯಬಹುದಾಗಿದೆ. ಇಲ್ಲಿ ನೀವು ಪ್ರತಿ ತಿಂಗಳು ಕಟ್ಟುವ 15,000 ರೂ. 15ವರ್ಷಗಳ ನಂತರ ಒಟ್ಟು ಮೌಲ್ಯವು ಸುಮಾರು 27,00,000 ಆಗಿದ್ದರೆ, ಮುಕ್ತಾಯದ ಸಮಯದಲ್ಲಿ ನಿಮಗೆ 1,01,52,946 ರೂ. ಮರುಪಾವತಿಯಾಗಲಿದೆ.
ಷೇರು ಮಾರುಕಟ್ಟೆ ಸಂದರ್ಭಗಳು ಬದಲಾದಲ್ಲಿ ರಿಟರ್ನ್ ದರವು ಶೇ.15ಕ್ಕಿಂತ ಹೆಚ್ಚಾಗಬಹುದು. ಇಲ್ಲವೇ ಕಡಿಮೆಯೂ ಆಗಬಹುದು. ಹೀಗಾಗಿ 15 ವರ್ಷ ಆದ ಬಳಿಕ ಹೂಡಿಕೆದಾರರಿಗೆ ರಿಟರ್ನ್ ಮೊತ್ತವು ಹೆಚ್ಚು ಕಡಿಮೆ ಆಗಬಹದು. ಒಂದು ವೇಳೆ ಹೀಗಾದರೂ ಸಹ ಬಡ್ಡಿದರವು ಸರಿಸುಮಾರು ಶೇ.13 ಎಂದು ಭಾವಿಸಿದರೆ ದೀರ್ಘಾವಧಿ ಹೂಡಿಕೆಯ 15 ವರ್ಷದ ಬಳಿಕ ನಿಮಗೆ ಸರಿಸುಮಾರು 83,35,219 ರೂ. ಪಾವತಿಯಾಗುತ್ತದೆ.

ಒಂದು ವೇಳೆ ಹೂಡಿಕೆದಾರರ ಮಾಸಿಕ ಕಂತನ್ನು ರೂ.15,000 ಬದಲಾಗೆ 16,000ಗೆ ಹೆಚ್ಚಿಸಿದರೆ ಒಟ್ಟು ಹೂಡಿಕೆ 15ವರ್ಷಕ್ಕೆ 28,80,000 ರೂ. ಆಗುತ್ತದೆ. ಮೆಚ್ಯೂರಿಟಿ ಮೊತ್ತ ಶೇ.13 ಬಡ್ಡಿ ದರದಲ್ಲಿ ರೂ.88,90,900 ಅಥವಾ ಶೇ.15ರಷ್ಟು ಬಡ್ಡಿ ದರದಲ್ಲಿ ರೂ 1,08,29,810 ಆಗಿರುತ್ತದೆ. ದೀರ್ಘಾವಧಿಯ ಹೂಡಿಕೆ ತುಸು ಶ್ರಮದಾಯಕ, ಕಠಿಣ ಅನ್ನಿಸುತ್ತದೆ. ಆದರೆ ಆ ಹೂಡಿಗೆ ಅಧಿಕ ಲಾಭ ತರುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.