For Quick Alerts
ALLOW NOTIFICATIONS  
For Daily Alerts

ಪ್ರಧಾನಿ 75 ಡಿಜಿಟಲ್ ಬ್ಯಾಂಕ್‌ ಪ್ರಾರಂಭಿಸುವ ಸಾಧ್ಯತೆ, ಏನಿದು ಡಿಜಿಟಲ್ ಬ್ಯಾಂಕ್ ಘಟಕ?

|

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನ ಆಗಸ್ಟ್ 15 ರಂದು ದೇಶಾದ್ಯಂತ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಹೊರತರುವ ಸಾಧ್ಯತೆಯಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಡಿಜಿಟಲ್ ಘಟಕಗಳು ಸಂಪೂರ್ಣವಾಗಿ ಪೇಪರ್‌ಲೆಸ್‌ ಆಗಿದ್ದು, ಇದು ಗ್ರಾಹಕರ ಡಿಜಿಟಲ್ ಆರ್ಥಿಕ ಸಾಕ್ಷರತಾ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸಲಿದೆ ಎಂದು ತಿಳಿದು ಬಂದಿದೆ.

"ಯಾವ ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕ್ ಆರಂಭ ಮಾಡಬೇಕು ಎಂಬುವುದನ್ನು ಈಗಾಗಲೇ ನಿರ್ಧಾರ ಮಾಡಲಾಗಿದೆ. ಡಿಜಿಟಲ್ ಬ್ಯಾಂಕ್ ಆರಂಭಕ್ಕೆ ಎಲ್ಲಾ 75 ಜಿಲ್ಲೆಗಳನ್ನು ಅಂತಿಮಗೊಳಿಸಲಾಗಿದೆ. ಈ ವಿಶೇಷ ಘಟಕಗಳಿಗೆ ಮೂಲಸೌಕರ್ಯ ಮತ್ತು ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ತರಬೇತಿ ನೀಡಲು ಆಯಾ ಬ್ಯಾಂಕ್‌ಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ," ಎಂದು ಈ ಬಗ್ಗೆ ತಿಳಿದಿರುವ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Digital Rupee: ಆರ್‌ಬಿಐನಿಂದ ಡಿಜಿಟಲ್ ಕರೆನ್ಸಿ 'ಡಿಜಿಟಲ್ ರೂಪಾಯಿ' ಜಾರಿDigital Rupee: ಆರ್‌ಬಿಐನಿಂದ ಡಿಜಿಟಲ್ ಕರೆನ್ಸಿ 'ಡಿಜಿಟಲ್ ರೂಪಾಯಿ' ಜಾರಿ

ಕಳೆದ ತಿಂಗಳು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಗದಿತ ವಾಣಿಜ್ಯ ಬ್ಯಾಂಕುಗಳಿಗೆ ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು (ಡಿಬಿಯು) ತೆರೆಯಲು ಅನುವು ಮಾಡಿಕೊಡುವ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಸುತ್ತೋಲೆಯ ಪ್ರಕಾರ, ಡಿಬಿಯುಗಳು ಡಿಜಿಟಲ್ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳನ್ನು ತಲುಪಿಸಲು ಮತ್ತು ಅಸ್ತಿತ್ವದಲ್ಲಿರುವ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳನ್ನು ಡಿಜಿಟಲ್ ಆಗಿ ಪರಿವರ್ತಿಸಲು ಕಾರ್ಯನಿರ್ವಹಣೆ ಮಾಡಬೇಕಾಗಿದೆ.

75 ಡಿಜಿಟಲ್ ಬ್ಯಾಂಕ್‌ ಘಟಕ ಪ್ರಾರಂಭಕ್ಕೆ ಮೋದಿ ಸಜ್ಜು: ಏನಿದು?

ಎಲ್ಲೆಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕ ಆರಂಭ?

ಲೇಹ್, ಶ್ರೀನಗರ, ಲಕ್ಷದ್ವೀಪ, ಐಜ್ವಾಲ್, ಕೋಟಾ, ನೈನಿತಾಲ್ ಮತ್ತು ಲಕ್ನೋ ಸೇರಿದಂತೆ ಸುಮಾರು 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರಂಭ ಮಾಡಲು ಸಿದ್ಧವಾಗಿದ್ದಾರೆ. ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳು, 10 ಖಾಸಗಿ ವಲಯದ ಬ್ಯಾಂಕುಗಳು ಮತ್ತು ಒಂದು ಸಣ್ಣ ಹಣಕಾಸು ಬ್ಯಾಂಕ್ ಜುಲೈ 2022 ರ ವೇಳೆಗೆ ಈ ಘಟಕಗಳ ಕಾರ್ಯನಿರ್ವಹಣೆ ಆರಂಭ ಮಾಡುವ ನಿಟ್ಟಿನಲ್ಲಿ ಈಗಾಗಲೇ ತಯಾರಿ ಪ್ರಾರಂಭಿಸಿದೆ ಎಂದು ಭಾರತೀಯ ಬ್ಯಾಂಕ್‌ಗಳ ಸಂಘವು ಹೇಳಿಕೆಯಲ್ಲಿ ತಿಳಿಸಿದೆ.

ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಆನ್‌ಲೈನ್ ನೋಂದಣಿ ಹಾಗೂ ಪಡೆಯುವುದು ಹೇಗೆ?ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಆನ್‌ಲೈನ್ ನೋಂದಣಿ ಹಾಗೂ ಪಡೆಯುವುದು ಹೇಗೆ?

"ಅಂತಹ ಘಟಕಗಳಲ್ಲಿ ಕನಿಷ್ಠ 3-4 ಸಿಬ್ಬಂದಿಗಳು ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಇದರಿಂದಾಗಿ ತಂತ್ರಜ್ಞಾನದ ತಿಳುವಳಿಕೆಯುಳ್ಳ ಗ್ರಾಹಕರು ತಾವಾಗಿಯೇ ಕಾರ್ಯನಿರ್ವಹಿಸಬಹುದು, ಸಹಾಯ ಅಥವಾ ಮೊದಲ ಬಾರಿಗೆ ಈ ತಂತ್ರಜ್ಞಾನದ ಸಹಾಯ ಪಡೆಯುವವರು ವಿಶೇಷ ಬ್ಯಾಂಕ್ ಸಿಬ್ಬಂದಿಯ ಸಹಾಯ ಪಡೆಯಬಹುದು," ಎಂದು ಅಧಿಕಾರಿಗಳು ವಿವರಿಸಿದ್ದಾರೆ.

75 ಡಿಜಿಟಲ್ ಬ್ಯಾಂಕ್‌ ಘಟಕ ಪ್ರಾರಂಭಕ್ಕೆ ಮೋದಿ ಸಜ್ಜು: ಏನಿದು?

ಏನಿದು ಡಿಜಿಟಲ್ ಬ್ಯಾಂಕಿಂಗ್ ಘಟಕ?

ಸಾಮಾನ್ಯವಾಗಿ ಎಲ್ಲರಿಗೂ ಡಿಜಿಟಲ್ ಇಂಡಿಯಾ ಪರಿಕಲ್ಪನೆಯ ಬಗ್ಗೆ ತಿಳಿದಿದೆ. ಆದರೆ ಡಿಜಿಟಲ್ ಇಂಡಿಯಾಕ್ಕಾಗಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ತಿಳಿದಿಲ್ಲ. ಡಿಜಿಟಲ್ ಇಂಡಿಯಾವನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಕೈಗೊಂಡ ಕ್ರಮಗಳಲ್ಲಿ ಒಂದಾಗಿದೆ ಈ ಡಿಜಿಟಲ್ ಬ್ಯಾಂಕಿಂಗ್ ಘಟಕ. ಡಿಜಿಟಲ್ ಬ್ಯಾಂಕಿಂಗ್ ಘಟಕವು ಡಿಜಿಟಲ್ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳನ್ನು ತಲುಪಿಸಲು ಹಾಗೂ ಯಾವುದೇ ಸಮಯದಲ್ಲಿ ಸ್ವಯಂ-ಸೇವಾ ಮೋಡ್‌ನಲ್ಲಿ ಅಸ್ತಿತ್ವದಲ್ಲಿರುವ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳನ್ನು ಡಿಜಿಟಲ್‌ನಲ್ಲಿ ಪೂರೈಸಲು ಕೆಲವು ಕನಿಷ್ಠ ಡಿಜಿಟಲ್ ಮೂಲಸೌಕರ್ಯವನ್ನು ಹೊಂದಿರುವ ವಿಶೇಷ ಘಟಕವಾಗಿದೆ.

ಡಿಜಿಟಲ್ ಇಂಡಿಯಾ ಒಂದು ಯೋಜನೆ. ಇದರ ಲಕ್ಶ್ಯ ಭಾರತಕ್ಕೆ ವಿಶ್ವದಲ್ಲೇ ಒಂದು ಅತ್ಯುತ್ತಮ ಸ್ಥಾನಮಾನವನ್ನು ನೀಡುವುದಾಗಿದೆ. ಇದರ ಜುಲೈ 1, 2015ರಂದು ಇಂಧೋರ್‌ನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಶುರುವಾಯಿತು. ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾದ ಸ್ಥಾಪಕರಾಗಿದ್ದು, ಇದಕ್ಕಾಗಿ ಒಂದು ಲಕ್ಷ ಕೋಟಿ ಅನುಮೋದನೆ ಮಾಡಿದ್ದಾರೆ. ಭಾರತೀಯ ನಾಗರಿಕರ ಡಿಜಿಟಲ್ ಸಬಲೀಕರಣ ಮಾಡುವುದು ಹಾಗೂ ಮಾಹಿತಿಯನ್ನು ಡಿಜಿಟಲೀಕರಣ ಗೊಳಿಸುವುದು ಇದರ ಪ್ರಮುಖ ಉದ್ಧೇಶವಾಗಿದೆ.

English summary

Prime Minister Narendra Modi Likely to Launch 75 Digital Banks on August 15

Prime Minister Narendra Modi Likely to Launch 75 Digital Banks on August 15.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X