For Quick Alerts
ALLOW NOTIFICATIONS  
For Daily Alerts

ಪಿಎಫ್ ತೆರಿಗೆ ನಿಯಮ ಬದಲಾವಣೆ: ಇಲ್ಲಿದೆ 10 ಪ್ರಮುಖಾಂಶ

|

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಸುರಕ್ಷಿತ ಹೂಡಿಕೆಯಲ್ಲಿ ಒಂದಾಗಿದೆ. ಇಪಿಎಫ್ ಲಕ್ಷಾಂತರ ಉದ್ಯೋಗಿಗಳ ಪ್ರಮುಖ ಹಣಕಾಸು ಯೋಜನೆ ಮತ್ತು ನಿವೃತ್ತಿ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿದೆ.

 

ಖಚಿತವಾದ ಆದಾಯ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುವ ಇಪಿಎಫ್ ಉತ್ತಮ ಹೂಡಿಕೆಯಾಗಿದೆ. Exempt, Exempt, Exempt scheme (ಇಇಇ) ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ. ಈ ನಿಧಿಯನ್ನು ಹಿಂಪಡೆಯಲು ಕೂಡಾ ಸಾಧ್ಯವಾಗುತ್ತದೆ.

ಆದರೆ ಇಪಿಎಫ್‌ಗೆ ನೀಡುವ ಕೊಡುಗೆಗಳಿಗಾಗಿ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಲಭ್ಯವಿರುವ ತೆರಿಗೆ ಪ್ರಯೋಜನಗಳಿಗೆ ಸರ್ಕಾರವು ತಿದ್ದುಪಡಿಗಳನ್ನು ತಂದಿದೆ. ಏಪ್ರಿಲ್ 1, 2022 ರಿಂದ ಭವಿಷ್ಯ ನಿಧಿ ಖಾತೆಗಳನ್ನು ತೆರಿಗೆ ಮತ್ತು ತೆರಿಗೆ ರಹಿತ ಖಾತೆಗಳಾಗಿ ವಿಂಗಡಿಸಲಾಗಿದೆ. ಇಇಇ ಯೋಜನೆಯಿಂದ ಲಾಭ ಪಡೆಯುವ ಹೆಚ್ಚಿನ ಆದಾಯ ಗಳಿಸುವವರನ್ನು ಗುರಿಯಾಗಿಸಲು ತೆರಿಗೆ ಪ್ರಯೋಜನಗಳನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಇಲ್ಲಿದೆ ಪ್ರಮುಖ ಹತ್ತು ಮಾಹಿತಿ ಮುಂದೆ ಓದಿ...

ಪಿಎಫ್ ತೆರಿಗೆ ನಿಯಮ ಬದಲಾವಣೆ: ಇಲ್ಲಿದೆ 10 ಪ್ರಮುಖಾಂಶ

ಪ್ರಮುಖ ಮಾಹಿತಿ ಇಲ್ಲಿದೆ

* ಹಣಕಾಸು ವರ್ಷ 2021-22 ಕ್ಕೆ ಇಪಿಎಫ್‌ಒ ಬಡ್ಡಿದರವನ್ನು ನಾಲ್ಕು ದಶಕಗಳ ಕನಿಷ್ಠ ಶೇಕಡಾ 8.1 ಕ್ಕೆ ಇಳಿಸಿದೆ.
* ಉದ್ಯೋಗಿಯ ಇಪಿಎಫ್‌ಗೆ ನೀಡಿದ ಕೊಡುಗೆಗಳ ಮೇಲಿನ ಯಾವುದೇ ಬಡ್ಡಿಯು ವರ್ಷಕ್ಕೆ ರೂಪಾಯಿ 2.5 ಲಕ್ಷದವರೆಗಿನ ಕೊಡುಗೆಗಳು ಮಾತ್ರ ತೆರಿಗೆ ಮುಕ್ತವಾಗಿರುತ್ತದೆ.
* ವಾರ್ಷಿಕವಾಗಿ ರೂಪಾಯಿ 2.5 ಲಕ್ಷಕ್ಕಿಂತ ಹೆಚ್ಚಿನ ಇಪಿಎಫ್ ಕೊಡುಗೆಗಳ ಮೇಲಿನ ಬಡ್ಡಿಯ ಮೇಲೆ ತೆರಿಗೆ ವಿಧಿಸಲಾಗುತ್ತದೆ.
* ಉದ್ಯೋಗದಾತನು ಉದ್ಯೋಗಿಯ ಇಪಿಎಫ್‌ಗೆ ಕೊಡುಗೆ ನೀಡದಿದ್ದರೆ ಕೊಡುಗೆ ಮಿತಿಯನ್ನು ಐದು ಲಕ್ಷಕ್ಕೆ ಹೆಚ್ಚಳ ಮಾಡಲಾಗುತ್ತದೆ.
* ಮಿತಿಗಿಂತ ಹೆಚ್ಚಿನ ಕೊಡುಗೆಗೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ, ಒಟ್ಟು ಕೊಡುಗೆಗೆ ತೆರಿಗೆ ವಿಧಿಸುವುದು ಅಲ್ಲ.
* ಹೆಚ್ಚುವರಿ ಕೊಡುಗೆಗಳು ಮತ್ತು ಅದರ ಮೇಲೆ ಸಂಗ್ರಹವಾದ ಬಡ್ಡಿಯನ್ನು ಇಪಿಎಫ್‌ಒ ಜೊತೆ ಪ್ರತ್ಯೇಕ ಖಾತೆಯಲ್ಲಿ ಇರಿಸಲಾಗುತ್ತದೆ
* ಪ್ರಾವಿಡೆಂಟ್ ಫಂಡ್, ಎನ್‌ಪಿಎಸ್‌ಗೆ ಉದ್ಯೋಗದಾತರ ಕೊಡುಗೆ ಮತ್ತು ವರ್ಷಕ್ಕೆ ಒಟ್ಟು ರೂಪಾಯಿ 7.5 ಲಕ್ಷ ಮೊತ್ತದ ಹೆಚ್ಚುವರಿ ಮೊತ್ತಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ.
* ಉದ್ಯೋಗದಾತರು ಈ ವಿವರಗಳನ್ನು ಫಾರ್ಮ್ 16 ಮತ್ತು ಫಾರ್ಮ್ 12BA ನಲ್ಲಿ ಭರ್ತಿ ಮಾಡಬೇಕು.
* ಮಾಸಿಕ ಆದಾಯ ರೂಪಾಯಿ 15,000ವರೆಗಿನ ಆದಾಯಕ್ಕೆ ಕಡ್ಡಾಯವಾಗಿ ಇಪಿಎಫ್ ಕೊಡುಗೆಗಳನ್ನು ನೀಡಬೇಕು.
* ತಡೆಹಿಡಿಯಲಾದ ತೆರಿಗೆಗಳನ್ನು ನೌಕರರು "ಇತರ ಮೂಲಗಳಿಂದ ಆದಾಯ" ಎಂದು ವರದಿ ಮಾಡಬೇಕಾಗುತ್ತದೆ.

English summary

Provident Fund Tax Rule Change, Explained in Kannada

The Employee Provident Fund (EPF) is among millions of employees' most important financial planning and retirement investment choices.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X