For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಲಾಕರ್‌ಗಳಿಗೆ ಹೊಸ ನಿಯಮ ಜಾರಿಗೆ ತಂದ RBI: ಮಿಸ್‌ ಮಾಡದೆ ಓದಿ

|

ದೇಶದ ಎಲ್ಲಾ ಬ್ಯಾಂಕುಗಳ ಲಾಕರ್‌ಗೆ ಅನುಗುಣವಾಗಿ ರಿಸರ್ವ್‌ ಬ್ಯಾಂಕ್ ಇಂಡಿಯಾ (ಆರ್‌ಬಿಐ) ಪರಿಷ್ಕೃತ ನಿಯಮಗಳನ್ನು ಜಾರಿಗೆ ತಂದಿದ್ದು, ಮುಂದಿನ ವರ್ಷದಿಂದ ಜಾರಿಗೆ ಬರಲಿವೆ ಎಂದು ಬುಧವಾರ (ಆಗಸ್ಟ್‌ 18) ಪ್ರಕಟಿಸಿದೆ.

ಜನವರಿ 01, 2022ರಿಂದ ಅನ್ವಯವಾಗುವಂತೆ ಬ್ಯಾಂಕ್ ಲಾಕರ್‌ ಹೊಸ ನಿಯಮಗಳು ಜಾರಿಗೆ ಬರಲಿವೆ. ಇದರ ಅಡಿಯಲ್ಲಿ ಯಾವುದೇ ರೀತಿಯ ಅಪಾಯಕಾರಿ ವಸ್ತುಗಳನ್ನು ಮತ್ತು ಅಕ್ರಮವಾದ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸುವಂತಿಲ್ಲ. ಈ ಕುರಿತಾಗಿ ಬ್ಯಾಂಕುಗಳು ಸೌಲಭ್ಯ ಪಡೆಯುವ ಗ್ರಾಹಕರಿಂದ ಸಹಿ ಮಾಡಿಸಿಕೊಳ್ಳಬೇಕಾಗುತ್ತದೆ.

ಇನ್ನು ಈ ಪರಿಷ್ಕತ ನಿಯಮಗಳು ಕೇವಲ ಹೊಸ ಬ್ಯಾಂಕ್ ಲಾಕರ್‌ಗಳಿಗಷ್ಟೇ ಅಲ್ಲದೆ ಈಗಿರುವ ಲಾಕರ್‌ಗಳಿಗೂ ಅನ್ವಯಿಸುತ್ತದೆ.

ನೂರು ಪಟ್ಟು ಹಣ ಪಾವತಿಸಬೇಕು..!

ನೂರು ಪಟ್ಟು ಹಣ ಪಾವತಿಸಬೇಕು..!

ಹೊಸ ನಿಯಮದ ಪ್ರಕಾರ ಅಗ್ನಿ, ಅನಾಹುತ, ಕಳ್ಳತನ, ಕಟ್ಟಡ ಕುಸಿತ, ಅಥವಾ ಬ್ಯಾಂಕ್ ಸಿಬ್ಬಂದಿಯಿಂದ ವಂಚನೆ ನಡೆದಲ್ಲಿ ಬ್ಯಾಂಕ್‌ ಲಾಕರ್‌ನ ವಾರ್ಷಿಕ ಮೊತ್ತದ ನೂರು ಪಟ್ಟು ಹಣವನ್ನು ಬ್ಯಾಂಕುಗಳು ಗ್ರಾಹಕರಿಗೆ ಪಾವತಿಸಬೇಕಾಗುತ್ತದೆ.

'' ಯಾವುದೇ ಪ್ರಾಕೃತಿಕ ವಿಕೋಪದಿಂದಾಗಿ, ಭೂಕಂಪ, ಪ್ರವಾಹ, ಸಿಡಿಲು ಅಥವಾ ಮನುಷ್ಯರ ನಿಯಂತ್ರಣಕ್ಕೆ ಮೀರಿದ ಸಂಗತಿಗಳಿಂದಾಗಿ, ಗ್ರಾಹಕನ ಪೂರ್ಣ ಅಜಾರೂಕತೆಯಿಂದಾಗಿ ಲಾಕರ್‌ನಲ್ಲಿ ಇರಿಸಿದ ವಸ್ತುವಿಗೆ ಹಾನಿಯಾದರೆ ಬ್ಯಾಂಕ್ ಹೊಣೆಗಾರ ಅಲ್ಲ'' ಎಂದು ಸ್ಪಷ್ಟಪಡಿಸಿದೆ. ಆದರೆ ಲಾಕರ್ ಇರುವ ಸ್ಥಳದ ಸುರಕ್ಷತೆಯ ಮೇಲೆ ನಿಗಾ ಇರಿಸಬೇಕಾಗಿರುವುದು ಆಯಾ ಬ್ಯಾಂಕ್‌ನ ಹೊಣೆ'' ಎಂದು ಆರ್‌ಬಿಐ ತಿಳಿಸಿದೆ.

 

ಬ್ಯಾಂಕ್‌ಗೆ ಹೆಚ್ಚಿನ ಹೊಣೆ

ಬ್ಯಾಂಕ್‌ಗೆ ಹೆಚ್ಚಿನ ಹೊಣೆ

ಗ್ರಾಹಕರ ವಿಚಾರದಲ್ಲಿ ತಮಗೆ ಯಾವುದೇ ಹೊಣೆ ಇಲ್ಲವೆಂದು ಬ್ಯಾಂಕ್‌ಗಳು ಹೇಳುವಂತಿಲ್ಲ. ಅಗ್ನಿ ಅನಾಹುತ ಕಳ್ಳತನ ಅಥವಾ ಬ್ಯಾಂಕ್‌ ಸಿಬ್ಬಂದಿಯಿಂದಲೇ ವಂಚನೆ ನಡೆದಲ್ಲಿ ಬ್ಯಾಂಕ್ ಹೊಣೆ ಹೊರಬೇಕಾಗುತ್ತದೆ. ಇದರ ಜೊತೆಗೆ ಲಾಕರ್‌ನ ವಾರ್ಷಿಕ ಮೊತ್ತದ ನೂರು ಪಟ್ಟು ಹಣ ಪಾವತಿಸಬೇಕು ಎಂದು ನಿಯಮಗಳಲ್ಲಿ ತಿಳಿಸಲಾಗಿದೆ.

ಈ ಮೂಲಕ ಬ್ಯಾಂಕ್‌ಗಳ ಲಾಕರ್‌ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚಿಸಿದೆ. ಒಂದು ವೇಳೆ ಗ್ರಾಹಕರ ಸಂಖ್ಯೆ ಹೆಚ್ಚಿದ್ದು, ಹಂಚಿಕೆ ಮಾಡಲು ಲಾಕರ್‌ಗಳು ಲಭ್ಯವಿಲ್ಲದಿದ್ದರೆ, ಲಾಕರ್ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದವರಿಗೆ, ಅರ್ಜಿ ಸ್ವೀಕೃತಿ ಪತ್ರ ನೀಡಬೇಕು. ಕಾಯುವಿಕೆ ಸಂಖ್ಯೆಯನ್ನು ಅವರಿಗೆ ನೀಡಬೇಕು ಎಂದು ಪರಿಷ್ಕೃತ ನಿಯಮದಲ್ಲಿ ತಿಳಿಸಿದೆ.

 ''ಜನ್ ಧನ್ ಪ್ಲಸ್''ಯೋಜನೆ ವೇಗವರ್ಧನೆಗೆ ವುಮೆನ್ಸ್ ವರ್ಲ್ಡ್ ಬ್ಯಾಂಕಿಂಗ್ ಶಿಫಾರಸು ''ಜನ್ ಧನ್ ಪ್ಲಸ್''ಯೋಜನೆ ವೇಗವರ್ಧನೆಗೆ ವುಮೆನ್ಸ್ ವರ್ಲ್ಡ್ ಬ್ಯಾಂಕಿಂಗ್ ಶಿಫಾರಸು

ಹಾಗಿದ್ರೆ ಬ್ಯಾಂಕ್ ಲಾಕರ್ ಎಂದರೇನು?

ಹಾಗಿದ್ರೆ ಬ್ಯಾಂಕ್ ಲಾಕರ್ ಎಂದರೇನು?

ಬ್ಯಾಂಕ್ ಲಾಕರ್ ಎಂದರೆ ಒಂದು ಕಬ್ಬಿಣದ ಕ್ಯಾಬಿನೆಟ್‌ಗಳನ್ನು ಹಲವಾರು ಗಾತ್ರದಲ್ಲಿ ಕಂಪಾರ್ಟ್‌ಮೆಂಟ್‌ಗಳಲ್ಲಿ ಇಡಲಾಗಿರುತ್ತದೆ. ಈ ಕ್ಯಾಬಿನೆಟ್‌ ಸುರಕ್ಷಿತವಾದ ಪ್ರತ್ಯೇಕ ಕೊಣೆಯಲ್ಲಿರುತ್ತದೆ. ಈ ಕೋಣೆಗೆ ಭದ್ರವಾದ ಬಾಗಿಲುಗಳನ್ನು ಅಳವಡಿಸಲಾಗಿರುತ್ತದೆ. ಈ ಕೋಣೆಗೆ ಯಾರು ಬೇಕಾದರೂ ಪ್ರವೇಶ ಮಾಡುವಂತಿಲ್ಲ ಅಧಿಕೃತ ವ್ಯಕ್ತಿ ಮಾತ್ರ ಪ್ರವೇಶಿಸಬಹುದು. ಗ್ರಾಹಕರ ಕೋರಿಕೆ ಮೇರೆಗೆ, ಲಭ್ಯವಿದ್ದರೆ ಮಾತ್ರ ಷರತ್ತಿನ ಮೇಲೆ ಗ್ರಾಹಕರಿಗೆ ಲಾಕರ್ ನೀಡಲಾಗುವುದು. ಈಗಿರುವ ಲಾಕರ್ ಸೇವೆಯು ಬಾಡಿಗೆ ಆಧಾರದ ಮೇಲಿದೆ.

ಎಷ್ಟು ಶುಲ್ಕ ವಿಧಿಸಲಾಗುತ್ತದೆ?

ಎಷ್ಟು ಶುಲ್ಕ ವಿಧಿಸಲಾಗುತ್ತದೆ?

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸಣ್ಣ ಗಾತ್ರದ ಲಾಕರ್ ಸೌಲಭ್ಯಕ್ಕೆ ವಾರ್ಷಿಕವಾಗಿ 2000 ರೂಪಾಯಿ, ಮಧ್ಯಮ ಗಾತ್ರದ ಲಾಕರ್‌ಗೆ 4000 ರೂಪಾಯಿ (ನಗರ & ಮಹಾನಗರ), ದೊಡ್ಡ ಪ್ರಮಾಣದ ಲಾಕರ್‌ಗಳಿಗೆ 8,000 ರೂಪಾಯಿ ಬಾಡಿಗೆ ಪಡೆಯುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿನ ಬ್ಯಾಂಕುಗಳಲ್ಲಿ 1,000 ರುಪಾಯಿ ಮತ್ತು ಜಿಎಸ್‌ಟಿ ವಿಧಿಸಲಾಗುತ್ತದೆ.

ಲಾಕರ್ ಕೀ ನೀಡಲಾಗುವುದು

ಲಾಕರ್ ಕೀ ನೀಡಲಾಗುವುದು

ಬ್ಯಾಂಕ್ ಲಾಕರ್‌ಗೆ 2 ಕೀ ಇರುತ್ತದೆ. ಒಂದು ಕೀ ನಿಮ್ಮ ಬಳಿ ಇದ್ದರೆ, ಮತ್ತೊಂದು ಕೀಯನ್ನು ಬ್ಯಾಂಕ್ ತನ್ನ ಬಳಿಯಲ್ಲೇ ಇಟ್ಟುಕೊಳ್ಳುತ್ತದೆ. ಒಂದು ವೇಳೆ ನೀವು ಕೀ ಕಳೆದುಕೊಂಡರೆ ಅಥವಾ ಎಲ್ಲಾದರೂ ಮರೆತು ಇಟ್ಟು ಮರೆತುಬಿಟ್ಟರೆ, ಬ್ಯಾಂಕ್ ನಿಮಗೆ ಬದಲಿ ಕೀ ಮಾಡಿಸಿಕೊಡುತ್ತದೆ. ಆದರೆ ನೀವು ಸೇವಾ ಶುಲ್ಕಗಳನ್ನು ಭರಿಸಬೇಕಾಗುತ್ತದೆ. ಲಾಕರ್ ಒಡೆಯುವಲ್ಲಿ ಮತ್ತು ಲಾಕರ್ ಬದಲಿಸುವ ತಗುಲುವ ಶುಲ್ಕಗಳು ಸೇರಿದಂತೆ ಸಾಮಾನ್ಯವಾಗಿ 3 ಸಾವಿರ ರುಪಾಯಿಗಳವರೆಗೂ ಶುಲ್ಕ ವಿಧಿಸುತ್ತದೆ.

ಉಳಿತಾಯ ಖಾತೆಗೆ ಎಫ್‌ಡಿಗಿಂತ ಅಧಿಕ ಬಡ್ಡಿದರ ನೀಡುತ್ತದೆ ಈ ಐದು ಬ್ಯಾಂಕುಗಳು!ಉಳಿತಾಯ ಖಾತೆಗೆ ಎಫ್‌ಡಿಗಿಂತ ಅಧಿಕ ಬಡ್ಡಿದರ ನೀಡುತ್ತದೆ ಈ ಐದು ಬ್ಯಾಂಕುಗಳು!

ನಿಮ್ಮದೇ ಆದ ಪಾಸ್‌ವರ್ಡ್ ನೀಡಬೇಕು

ನಿಮ್ಮದೇ ಆದ ಪಾಸ್‌ವರ್ಡ್ ನೀಡಬೇಕು

ಬಾಡಿಗೆದಾರನು ಮೊದಲ ಬಾರಿಗೆ ಲಾಕರ್ ಪಡೆಯುವಾಗ ಅವರಿಗೆ ಲಾಕರ್ ಕೀಲಿ ಕೈ ಜೊತೆಗೆ ತನ್ನನ್ನು ಗುರುತಿಸಲು ಅನುಕೂಲವಾಗುವಂತೆ ಪಾಸ್‌ವರ್ಡ್ ನೀಡಬೇಕು. ಅಂತಹ ಪಾಸ್‌ವರ್ಡ್ ಬ್ಯಾಂಕ್ ಸಂಕೇತವಾಗಿ ದಾಖಲು ಮಾಡಿಕೊಳ್ಳುತ್ತದೆ.

LIC: ಪಾಲಿಸಿ ಅವಧಿ ಮುಕ್ತಾಯಕ್ಕೂ ಮೊದಲೇ, ಪಾಲಿಸಿ ಶರಣಾಗತಿಗೆ ಎಷ್ಟು ಹಣ ಸಿಗಲಿದೆ?LIC: ಪಾಲಿಸಿ ಅವಧಿ ಮುಕ್ತಾಯಕ್ಕೂ ಮೊದಲೇ, ಪಾಲಿಸಿ ಶರಣಾಗತಿಗೆ ಎಷ್ಟು ಹಣ ಸಿಗಲಿದೆ?

ಲಾಕರ್ ವೈಯಕ್ತಿಕವಾಗಿ, ಜಂಟಿಯಾಗಿ ಇಡಬಹುದು

ಲಾಕರ್ ವೈಯಕ್ತಿಕವಾಗಿ, ಜಂಟಿಯಾಗಿ ಇಡಬಹುದು

ಲಾಕರ್‌ಗಳನ್ನು ವ್ಯಕ್ತಿಗಳು ವೈಯಕ್ತಿಕವಾಗಿ, ಜಂಟಿಯಾಗಿ ಇಬ್ಬರು ಅಥವಾ ಹೆಚ್ಚು ಜನರು, ಪಾಲುದಾರಿಕೆ ಸಂಸ್ಥೆಗಳು, ಕಂಪನಿಗಳು ಹಾಗೂ ಇತರರಿಗೆ ನೀಡಲಾಗುತ್ತದೆ. ಯಾರೇ ಲಾಕರ್ ಇಡಬೇಕಾದರು ನಿಮ್ಮ ಕುಟುಂಬದ ಓರ್ವ ಹೆಸರನ್ನು ನಾಮ ನಿರ್ದೇಶನ(Nominate) ಮಾಡಬೇಕಾಗುತ್ತದೆ. ಏಕೆಂದರೆ ಬಾಡಿಗೆದಾರನ ನಿಧನದ ಸಂದರ್ಭದಲ್ಲಿ ಲಾಕರ್‌ನ ವಿಷಯಗಳನ್ನು ತಿಳಿಸಲು ಇಬ್ಬ ವ್ಯಕ್ತಿಯನ್ನು ನಾಮ ನಿರ್ದೇಶನ ಮಾಡಬೇಕಾಗುತ್ತದೆ. ಬಾಡಿಗೆದಾರನ ಮರಣದ ಸಂದರ್ಭದಲ್ಲಿ ನಾಮಿನಿ ಅಪ್ರಾಪ್ತ ವಯಸ್ಕರಾಗಿದ್ದರೆ, ನಾಮಿನಿಯ ರಕ್ಷಕರಿಗೆ ಪ್ರವೇಶವನ್ನು ನೀಡಲಾಗುತ್ತದೆ.

ಲಾಕರ್ ಒಡೆಯುವ ಸಂದರ್ಭಗಳು

ಲಾಕರ್ ಒಡೆಯುವ ಸಂದರ್ಭಗಳು

ಬಾಡಿಗೆದಾರನು ಕೀ ಕಳೆದುಕೊಂಡರೆ ಲಾಕರ್‌ಗಳ ಬಾಡಿಗೆ ಸುಸ್ಥಿಯಾಗಿದ್ದಲ್ಲಿ ನ್ಯಾಯಾಲಯದ ಆದೇಶದ ಪ್ರಕಾರ ಒಡೆದು ತೆರೆಯಬೇಕಾಗಿದ್ದಲ್ಲಿ ಈ ಕಾರಣಗಳಿಗೆಲ್ಲ ಲಾಕರ್ ಒಡೆದು ತೆರೆದಲ್ಲಿ ಅದಕ್ಕೆ ತಗುಲುವ ವೆಚ್ಚವನ್ನು ಬಾಡಿಗೆದಾರನೇ ಭರಿಸಬೇಕು.

ವರ್ಷಕ್ಕೆ ಕನಿಷ್ಠ 1 ಅಥವಾ 2 ಬಾರಿಯಾದರೂ ಲಾಕರ್ ತೆರೆದು ನೋಡಬೇಕು

ವರ್ಷಕ್ಕೆ ಕನಿಷ್ಠ 1 ಅಥವಾ 2 ಬಾರಿಯಾದರೂ ಲಾಕರ್ ತೆರೆದು ನೋಡಬೇಕು

ಲಾಕರ್ ಬಾಡಿಗೆ ತೆಗೆದುಕೊಂಡ ಬಾಡಿಗೆದಾರನು ವರ್ಷಕ್ಕೆ ಒಮ್ಮೆಯಾದರೂ ಲಾಕರ್ ತೆಗೆದು ನೋಡಬೇಕು. ಹಾಗೆ ಮಾಡದಿದ್ದಲ್ಲಿ ಬ್ಯಾಂಕ್ ಬಾಡಿಗೆದಾರರನ್ನು ಸಂಪರ್ಕಿಸಿ ಲಾಕರ್ ತೆಗೆದು ನೋಡುವಂತೆ ತಿಳಿಸುತ್ತದೆ. ಬಾಡಿಗೆದಾರನು ಹೀಗೆ ಮಾಡದಿದ್ದಲ್ಲಿ ಲಾಕರ್ ಹಿಂಪಡೆಯಬಹುದು. ಜೊತೆಗೆ ಬಾಡಿಗೆದಾರನು ಮೂರು ವರ್ಷ ಬಾಡಿಗೆ ನೀಡದಿದ್ದಲ್ಲಿ, ನಿಯಮಗಳ ಅನುಸಾರ ಲಾಕರ್ ಒಡೆಯುವ ಅಧಿಕಾರ ಬ್ಯಾಂಕ್‌ಗಿದೆ.

ಇನ್ನು ಬಾಡಿಗೆದಾರನು ಹೆಚ್ಚು ಕಾಲ ಲಾಕರ್ ತೆರೆಯದಿದ್ದರೆ ಬ್ಯಾಂಕ್ ಬಾಡಿಗೆದಾರರಿಗೆ ನೋಟಿಸ್ ನೀಡಿ ಲಾಕರ್ ತೆರೆದು ನೋಡಿಲ್ಲವೆಂದು ದಾಖಲಿಸುತ್ತದೆ. ಬಾಡಿಗೆದಾರನು ಸ್ಪಂದಿಸದಿದ್ದರೆ ಮತ್ತೊಂದು ಅವಕಾಶ ನೀಡುತ್ತದೆ. ಅದಕ್ಕೂ ಸ್ಪಂದಿಸದಿದ್ದರೆ ಲಾಕರೆ ಒಡೆದು ತೆಗೆಯಬಹುದು. ಹಾಗೂ ಲಾಕರ್‌ನಲ್ಲಿರುವ ವಸ್ತುಗಳನ್ನು ಪಟ್ಟಿ ಮಾಡಿ ಬ್ಯಾಂಕ್ ತನ್ನ ಸುಪರ್ದಿನಲ್ಲಿಡಲಾಗುವುದು.

 

ಎಚ್ಚರಿಕೆಯ ಕ್ರಮಗಳೇನು?

ಎಚ್ಚರಿಕೆಯ ಕ್ರಮಗಳೇನು?

* ಲಾಕರ್‌ನಲ್ಲಿರುವ ಪ್ರತಿ ವಸ್ತುವಿನ ಫೋಟೋವನ್ನು ಸೆರೆಹಿಡಿದು ನಿಮ್ಮ ಬಳಿ ಇಟ್ಟುಕೊಳ್ಳಿ
* ಲಾಕರ್‌ನಲ್ಲಿರುವ ವಸ್ತುಗಳನ್ನು ೨ ಪಟ್ಟಿ ತಯಾರಿಸಿ ಒಂದು ಲಾಕರ್‌ನಲ್ಲಿಡಿ ಮತ್ತೊಂದು ನಿಮ್ಮ ಬಳಿ ಇಟ್ಟುಕೊಳ್ಳಿ
* ಬ್ಯಾಂಕ್ ನಿಮ್ಮನ್ನು ಸುಲಭವಾಗಿ ಸಂಪರ್ಕಿಸುವಂತೆ ದೂರವಾಣಿ ಸಂಖ್ಯೆಗಳನ್ನು ದಾಖಲು ಮಾಡಿ
* ಲಾಕರ್‌ನಲ್ಲಿರುವ ವಸ್ತುಗಳ ಅಂದಾಜು ಮೌಲ್ಯವನ್ನು ಒಂದು ನೋಟ್‌ ಬುಕ್‌ನಲ್ಲಿ ಗುರುತು ಮಾಡಿಕೊಳ್ಳಿ

English summary

RBI New Locker Rules Compensate For Loss: New Rules And Charges Details In Kannada

The Reserve Bank of India (RBI) on Wednesday directed banks to maintain a branch-wise list of vacant lockers as well as a wait-list for the purpose of allotment of lockers and ensure transparency in allotment of lockers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X