For Quick Alerts
ALLOW NOTIFICATIONS  
For Daily Alerts

ದೀಪಾವಳಿ ಬೋನಸ್‌ ಲಭಿಸಿತೇ?, ತೆರಿಗೆ ಎಷ್ಟೆಂದು ಇಲ್ಲಿ ಪರಿಶೀಲಿಸಿ

|

ದೀಪಾವಳಿ ಆಚರಣೆಯನ್ನು ಜನರು ಸಂತಸದಿಂದ ಮಾಡುತ್ತಿದ್ದಾರೆ. ಕೊರೊನಾ ಮಾರ್ಗಸೂಚಿಯನ್ನು ಪಾಲಿಸಿಕೊಂಡು ದೀಪಾವಳಿ ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹಲವಾರು ಮಂದಿಗೆ ತಾವು ಕಾರ್ಯ ನಿರ್ವಹಣೆ ಮಾಡುವ ಸಂಸ್ಥೆಯಿಂದ ದೀಪಾವಳಿ ಬೋನಸ್‌ ಲಭ್ಯವಾಗಿರಬಹುದು. ಸಾಮಾನ್ಯವಾಗಿ ಬೋನಸ್‌ ಅನ್ನು ನಗದು ರೂಪದಲ್ಲಿ ನೀಡಲಾಗುತ್ತದೆ. ಇನ್ನು ಕೆಲವು ಸಂಸ್ಥೆಗಳಲ್ಲಿ ನಗದಿಗೆ ಬದಲಾಗಿ ಬೇರೆ ವಸ್ತುಗಳ ರೂಪದಲ್ಲಿ ಬೋನಸ್‌ ಅನ್ನು ನೀಡಲಾಗುತ್ತದೆ.

 

ಹೀಗಿರುವಾಗ ಈ ಹಣವನ್ನು ಯಾವ ರೀತಿಯಲ್ಲಿ ವ್ಯಯಿಸಬೇಕು ಎಂಬುವುದು ಆ ಬೋನಸ್‌ ಅನ್ನು ಪಡೆದ ವ್ಯಕ್ತಿಗೆ ಬಿಟ್ಟ ವಿಚಾರ. ಬೋನಸ್‌ ಬಂದ ಕೂಡಲೇ ಅದನ್ನು ಹೇಗೆ ಖರ್ಚು ಮಾಡುವುದು ಎಂದು ಈಗಲೇ ಲೆಕ್ಕ ಹಾಕಿಕೊಂಡವರು ಇದ್ದಾರೆ. ಆದರೆ ಈ ಬೋನಸ್‌ ಅನ್ನು ಸರಿಯಾದ ರೀತಿಯಲ್ಲಿ ವ್ಯಯಿಸುವುದು ಕೂಡಾ ಈ ಕೊರೊನಾ ವೈರಸ್‌ ಸೋಂಕಿನಿಂದ ಉಂಟಾದ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಅಗತ್ಯ.

ಆದರೆ ಈ ಸಂದರ್ಭದಲ್ಲಿ ಬೋನಸ್‌ ಮೇಲೆ ಬರುವ ಆದಾಯ ತೆರಿಗೆಯನ್ನು ಜನರು ತಿಳಿಯುವುದು ಮುಖ್ಯ. ಈ ದೀಪಾವಳಿ ಬೋನಸ್‌ಗೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ ಎಂಬ ಬಗ್ಗೆ ಆರ್‌ಎಸ್‌ಎಂ ಇಂಡಿಯಾದ ಸ್ಥಾಪಕ ಡಾ ಸುರೇಶ್‌ ಸುರಾನ ತನ್ನ ಎಫ್‌ಇ ಆನ್‌ಲೈನ್‌ ಇಮೇಲ್‌ ಮಾತುಕತೆಯ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

 ದೀಪಾವಳಿ ಬೋನಸ್‌ಗೆ ಯಾವೆಲ್ಲಾ ತೆರಿಗೆ ನಿಯಮ ಅನ್ವಯ

ದೀಪಾವಳಿ ಬೋನಸ್‌ಗೆ ಯಾವೆಲ್ಲಾ ತೆರಿಗೆ ನಿಯಮ ಅನ್ವಯ

ಐಟಿ ಕಾಯಿದೆಯ ನಿಬಂಧನೆಗಳ ಪ್ರಕಾರ, ಉದ್ಯೋಗಿ ನಗದು ರೂಪದಲ್ಲಿ ಸ್ವೀಕರಿಸುವ ಬೋನಸ್‌ಗೆ ಕೂಡ ತೆರಿಗೆಯನ್ನು ವಿಧಿಸಲಾಗುತ್ತದೆ. 'ಸಂಬಳದಿಂದ ಆದಾಯ' ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ. ಹಣ ಎಷ್ಟು ಇರುತ್ತದೆ ಎಂಬ ಆದಾರದಲ್ಲಿ ತೆರಿಗೆಯನ್ನು ವಿಧಿಸಲಾಗುತ್ತದೆ. ಇದು ಇಷ್ಟೇ ಎಂದು ನಿಗದಿ ಆಗಿರುವುದಿಲ್ಲ.

 ಒಂದು ಲಕ್ಷ ದೀಪಾವಳಿ ಬೋನಸ್‌ಗೆ ಎಷ್ಟು ತೆರಿಗೆ?

ಒಂದು ಲಕ್ಷ ದೀಪಾವಳಿ ಬೋನಸ್‌ಗೆ ಎಷ್ಟು ತೆರಿಗೆ?

ಬೋನಸ್‌ ಮೇಲೆ ತೆರಿಗೆಯು ಆ ವ್ಯಕ್ತಿಯ ಒಟ್ಟು ಆದಾಯದ ಮೇಲೆ ಅವಲಂಬಿತವಾಗಿರುತ್ತದೆ. ದೀಪಾವಳಿ ಬೋನಸ್‌ಗೆ ತೆರಿಗೆಯನ್ನು ಸಂಬಳ ಎಷ್ಟು ಎಂದು ನೋಡಿ ವಿಧಿಸಲಾಗುತ್ತದೆ. ಹಾಗೆಯೇ ತೆರಿಗೆದಾರರಿಗೆ ಅನ್ವಯವಾಗುವ ಸ್ಲ್ಯಾಬ್ ದರಗಳಲ್ಲಿ ತೆರಿಗೆ ವಿಧಿಸಲಾಗುತ್ತದೆ. ಇನ್ನು ಬೋನಸ್‌ ಪಡೆಯುವವರು ಯಾವುದೇ ಇತರ ಕಡಿತ ಮತ್ತು ವಿನಾಯಿತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.

 ನಗದು ಹೊರತಾಗಿ ಬೇರೆ ರೂಪದಲ್ಲಿ ಬೋನಸ್‌ ದೊರೆತರೆ?
 

ನಗದು ಹೊರತಾಗಿ ಬೇರೆ ರೂಪದಲ್ಲಿ ಬೋನಸ್‌ ದೊರೆತರೆ?

ಇನ್ನು ಕೆಲವು ಸಂಸ್ಥೆಗಳಲ್ಲಿ ದೀಪಾವಳಿ ಬೋನಸ್‌ ರೂಪದಲ್ಲಿ ನಗದು ಬದಲಾಗಿ ಬೇರೆ ವಸ್ತುಗಳನ್ನು ನೀಡುತ್ತಾರೆ. ವೋಚರ್‌ಗಳು, ಹ್ಯಾಂಪರ್‌ಗಳು, ಟೋಕನ್ ರೂಪದಲ್ಲಿ ಕೆಲವರಿಗೆ ದೀಪಾವಳಿ ಬೋನಸ್‌ ಲಭಿಸುತ್ತದೆ. ಐಟಿ ನಿಯಮಗಳ ನಿಯಮ 3(7)(iv) ಪ್ರಕಾರ ಯಾವುದೇ ವ್ಯಕ್ತಿಗೆ ನಗದು ಹೊರತಾಗಿ ಬೇರೆ ರೂಪದಲ್ಲಿ ಬೋನಸ್‌ ದೊರೆಯುತ್ತಿದ್ದರೆ ಹಾಗೂ ಆ ಬೋನಸ್‌ ಐದು ಸಾವಿರ ಅಥವಾ ಅದಕ್ಕಿಂತ ಅಧಿಕವಾಗಿದ್ದರೆ, ಸಂಬಳದ ಅಡಿಯಲ್ಲಿ ಆ ವ್ಯಕ್ತಿಯು ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ಈ ನಗದು ರಹಿತ ಬೋನಸ್‌ ಐದು ಸಾವಿರಕ್ಕಿಂತ ಕಡಿಮೆಯದ್ದು ಆಗಿದ್ದರೆ, ಅದಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.

 ದೀಪಾವಳಿ ಬೋನಸ್‌ ತೆರಿಗೆಯಿಂದ ತಪ್ಪಿಸಿಕೊಳ್ಳಬಹುದೇ?

ದೀಪಾವಳಿ ಬೋನಸ್‌ ತೆರಿಗೆಯಿಂದ ತಪ್ಪಿಸಿಕೊಳ್ಳಬಹುದೇ?

ಹಲವಾರು ಮಂದಿ ತೆರಿಗೆಯಲ್ಲಿ ವಿನಾಯಿತಿಯನ್ನು ಪಡೆಯಲು ಸಾಕಷ್ಟು ಕಸರತ್ತನ್ನು ಮಾಡುತ್ತಾರೆ. ಈ ನಡುವೆ ಈ ದೀಪಾವಳಿ ಬೋನಸ್‌ನ ಮೇಲಿನ ತೆರಿಗೆಯನ್ನು ನಾವು ಕಡಿತ ಮಾಡಬಹುದೇ ಅಥವಾ ಆ ತೆರಿಗೆಯಿಂದ ತಪ್ಪಿಸಿಕೊಳ್ಳಬಹುದೇ ಎಂದು ನಿಮಗೆ ಪ್ರಶ್ನೆ ಮೂಡಿರಬಹುದು. ಆದರೆ ಈ ಬೋನಸ್‌ ತೆರಿಗೆಯಿಂದ ತಪ್ಪಿಸಿಕೊಳ್ಳಲು ಇರುವುದು ಕೇವಲ ಒಂದು ಹಾದಿ. ಅದು ನಿಮ್ಮ ಬೋನಸ್‌ ಐದು ಸಾವಿರಕ್ಕಿಂತ ಕಡಿಮೆ ಆಗಿರುವುದು. ನಿಮಗೆ ಐದು ಸಾವಿರಕ್ಕಿಂತ ಅಧಿಕ ಬೋನಸ್‌ ದೊರೆತರೆ ನೀವು ಕಡ್ಡಾಯವಾಗಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇನ್ನು ನೀವು ಈ ಬೋನಸ್‌ ಅನ್ನು ಹಲವಾರು ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬಹುದು. ನಿಮಗೆ ಸಾಲವಿದ್ದರೆ ಈ ಬೋನಸ್‌ ಮೂಲಕ ಅದನ್ನು ಹಿಂದಕ್ಕೆ ಪಾವತಿ ಮಾಡಿ ಹೊರೆ ಕಡಿಮೆ ಮಾಡಿಕೊಳ್ಳಬಹುದು. ಹೂಡಿಕೆ ಮಾಡಿ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಬಹುದು. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿ ಮಾಡಬಹುದು. ಮನೆಯಲ್ಲಿ ದೀಪಾವಳಿ ಆಚರಣೆಗೆ ಖರ್ಚು ಮಾಡಬಹುದು. ಹಾಗೆಯೇ ಬಡವರಿಗೆ ಈ ದೀಪಾವಳಿ ಆಚರಣೆಗೆ ಸಹಾಯ ಮಾಡಬಹುದು.

English summary

Received Diwali Bonus From Your Employer? Check Income Tax Implications

Received Diwali Bonus From Your Employer? Check Income Tax Implications.
Story first published: Thursday, November 4, 2021, 13:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X