For Quick Alerts
ALLOW NOTIFICATIONS  
For Daily Alerts

ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ: ನಿಮ್ಮ ಹಣಕಾಸಿನ ಮೇಲೆ ಏನು ಪರಿಣಾಮ?

|

ಡಾಲರ್ ಎದುರು ರೂಪಾಯಿ ನಿರಂತರವಾಗಿ ಕುಸಿತ ಕಾಣುತ್ತಿದೆ. ಮಂಗಳವಾರ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಿದ್ದು, ರೂಪಾಯಿ 80ಕ್ಕೆ ತಲುಪಿದೆ. ನಿರಂತರವಾಗಿ ರೂಪಾಯಿ ಮೌಲ್ಯ ಕುಸಿತ ಕಂಡರೆ ಮತ್ತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಧ್ಯ ಪ್ರವೇಶ ಮಾಡಬಹುದು.

ಈಗ ರೂಪಾಯಿ ಮೌಲ್ಯ ಭಾರೀ ಕುಸಿತ ಕಂಡ ನಂತರ ಆರ್‌ಬಿಐ ಮತ್ತೆ ರೆಪೋ ದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ. ರೆಪೋ ದರವನ್ನು ಏರಿಕೆ ಮಾಡಿದರೆ ಸಾಲದ ಬಡ್ಡಿದರ ಹಾಗೂ ಎಫ್‌ಡಿ ಬಡ್ಡಿದರ ಏರಿಕೆಯಾಗುವ ಸಾಧ್ಯತೆ ಇದೆ. ಇದು ನೇರವಾಗಿ ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪ್ರಭಾವ ಬೀರಳಿದೆ.

ಡಾಲರ್ ಎದುರು ರೂಪಾಯಿ ದಾಖಲೆಯ ಮಟ್ಟ ಕುಸಿತ: ಕಾರಣವೇನು?ಡಾಲರ್ ಎದುರು ರೂಪಾಯಿ ದಾಖಲೆಯ ಮಟ್ಟ ಕುಸಿತ: ಕಾರಣವೇನು?

ನಾವು ರೂಪಾಯಿ ಮೌಲ್ಯ ಕುಸಿತವಾದರೆ ನಮಗೇನು ಪರಿಣಾಮ ಆಗಲಿದೆ ಎಂದುಕೊಳ್ಳಬಹುದು. ಆದರೆ ರೂಪಾಯಿ ಮೌಲ್ಯ ಕುಸಿತವಾದರೆ ಅದರ ನೇರ ಪರಿಣಾಮ ಜನರ ಮೇಲೆ ಬೀಳಲಿದೆ. ನಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮ ಉಂಟಾಗಲಿದೆ. ಹಾಗಾದರೆ ಏನೆಲ್ಲಾ ಪರಿಣಾಮ ಉಂಟಾಗಲಿದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...

 ಆಮದು ವೆಚ್ಚ ಅಧಿಕ

ಆಮದು ವೆಚ್ಚ ಅಧಿಕ

ರೂಪಾಯಿ ಮೌಲ್ಯ ಕುಸಿತವಾಗುತ್ತಿದ್ದಂತೆ ಅಂತಾರಾಷ್ಟ್ರೀಯ ವಹಿವಾಟನ್ನು ದುಬಾರಿಯನ್ನಾಗಿಸುತ್ತದೆ. ನಮಗೆ ಆಮದು ವೆಚ್ಚ ಅಧಿಕವಾಗುತ್ತದೆ. ಇದರಿಂದಾಗಿ ಈ ಹಿಂದಿಗಿಂತ ಅಧಿಕ ರೂಪಾಯಿ ಪಾವತಿ ಮಾಡಿ ನೀವು ಖರೀದಿ ಮಾಡಬೇಕಾಗುತ್ತದೆ. ಜನವರಿಯಲ್ಲಿ ಒಂದು ಡಾಲರ್‌ಗೆ ಒಂದು ವಿದೇಶದ ವಸ್ತು ಖರೀದಿ ಮಾಡುತ್ತಿದ್ದರೆ, ಅದಕ್ಕೆ ನಾವು 74 ರೂಪಾಯಿ ಪಾವತಿ ಮಾಡಬೇಕಾಗಿತ್ತು. ಆದರೆ ಪ್ರಸ್ತುತ 80 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.

10 ದಿನದಲ್ಲಿ 5ನೇ ಬಾರಿ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ10 ದಿನದಲ್ಲಿ 5ನೇ ಬಾರಿ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

 ಇಂಧನ ಬೆಲೆ ಅಧಿಕ

ಇಂಧನ ಬೆಲೆ ಅಧಿಕ

ಭಾರತವು ಶೇಕಡ 80 ಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ರೂಪಾಯಿ ಮೌಲ್ಯ ದುರ್ಬಲವಾದಂತೆ ನಾವು ಅಧಿಕ ಹಣ ಪಾವತಿ ಮಾಡಿ ಕಚ್ಚಾ ತೈಲ ಖರೀದಿ ಮಾಡಬೇಕಾಗುತ್ತದೆ. ತೈಲ ಸಂಸ್ಕರಣಾಗಾರಗಳು ಮತ್ತು ಮಾರ್ಕೆಟಿಂಗ್ ಕಂಪನಿಗಳ ಮೇಲೆ ವಿನಿಮಯ ದರ ಹೊರೆ ಅಧಿಕವಾದಂತೆ ಅವುಗಳು ಆ ಹೊರೆಯನ್ನು ಗ್ರಾಹಕರ ಮೇಲೆ ಇಳಿಸುತ್ತದೆ. ಅಂದರೆ ರೂಪಾಯಿ ಮೌಲ್ಯ ಕುಸಿತವಾದಂತೆ ಪೆಟ್ರೋಲ್ ಹಾಗೂ ಡೀಸೆಲ್ ದರವು ಅಧಿಕವಾಗುವ ಸಾಧ್ಯತೆ ಹೆಚ್ಚಾಗಿದೆ. ಜಾಗತಿಕ ಅಂಶಗಳಿಂದ ತೈಲ ಬೆಲೆ ಶೇ.2ರಷ್ಟು ಏರಿಕೆಯಾಗಿದೆ. ಆದರೆ ರೂಪಾಯಿ ಕುಸಿತದಿಂದಾಗಿ ಶೇ.6ರಷ್ಟು ಹೆಚ್ಚಾಗಿದೆ.

 ಹಣದುಬ್ಬರ ಏರಿಕೆ

ಹಣದುಬ್ಬರ ಏರಿಕೆ

ಆರ್‌ಬಿಐ ಏಪ್ರಿಲ್ ವಿತ್ತೀಯ ನೀತಿಯ ಪ್ರಕಾರ, ಹಣದುಬ್ಬರವು ಸುಮಾರು 20 ಬಿಪಿಎಸ್‌ಗಳಷ್ಟು ಹೆಚ್ಚಾಗಬಹುದು. ಆದರೆ ಈ ಸಂದರ್ಭದಲ್ಲೇ ಜಿಡಿಪಿ ಬೆಳವಣಿಗೆಯು 15 ಬಿಪಿಎಸ್‌ಗಳಷ್ಟು ಅಧಿಕವಾಗಬಹುದು. ರೂಪಾಯಿ ಕುಸಿತವಾದಂತೆ ಹಣದುಬ್ಬರವೂ ಕೂಡಾ ಅಧಿಕವಾಗಲಿದೆ.

 ವಿದೇಶಿ ಶಿಕ್ಷಣ ಮತ್ತು ಅಂತರಾಷ್ಟ್ರೀಯ ಪ್ರಯಾಣಕ್ಕೆ ಅಧಿಕ ವೆಚ್ಚ

ವಿದೇಶಿ ಶಿಕ್ಷಣ ಮತ್ತು ಅಂತರಾಷ್ಟ್ರೀಯ ಪ್ರಯಾಣಕ್ಕೆ ಅಧಿಕ ವೆಚ್ಚ

ರೂಪಾಯಿ ಮೌಲ್ಯ ದುರ್ಬಲವಾಗುತ್ತಿದ್ದಂತೆ ನೀವು ಈ ಹಿಂದೆ ವಿದೇಶದಲ್ಲಿ ಶಿಕ್ಷಣ ಪಡೆಯಲು ಮಾಡಿದ ವೆಚ್ಚಗಿಂತ ಅಧಿಕ ವೆಚ್ಚವಾಗಲಿದೆ. ಹಾಗೆಯೇ ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ನೀವು ಅಧಿಕ ಪಾವತಿ ಮಾಡಬೇಕಾಗುತ್ತದೆ. ಉದಾಹರಣೆಗೆ, ಜನವರಿಯಲ್ಲಿ ಅಂತರಾಷ್ಟ್ರೀಯ ಪ್ರಯಾಣಕ್ಕೆ 1,000 ಡಾಲರ್ ಆಗಿದ್ದರೆ, ಆ ಸಂದರ್ಭದಲ್ಲಿ ಭಾರತೀಯ ರೂಪಾಯಿಯ ಪ್ರಕಾರ 74,000 ರೂಪಾಯಿ ವೆಚ್ಚವಾದಂತೆ. ಆದರೆ ಈಗ ನೀವು ಅದೇ ಪ್ರವಾಸಕ್ಕೆ 80,000 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಡಾಲರ್ ಎದುರು ರೂಪಾಯಿ ಈ ವರ್ಷ ಶೇಕಡಾ 7 ರಷ್ಟು ದುರ್ಬಲಗೊಂಡಿದೆ. ಅಂದರೆ ಆರು ತಿಂಗಳಲ್ಲಿ ಯುಎಸ್‌ ಶಿಕ್ಷಣ ಮತ್ತು ಪ್ರಯಾಣವು ಶೇಕಡ 7 ರಷ್ಟು ದುಬಾರಿಯಾಗಿದೆ.

 ಭಾರತೀಯ ರಫ್ತಿಗೆ ಸಹಾಯಕ?

ಭಾರತೀಯ ರಫ್ತಿಗೆ ಸಹಾಯಕ?

ದುರ್ಬಲಗೊಳ್ಳುತ್ತಿರುವ ಕರೆನ್ಸಿಯು ರಫ್ತಿಗೆ ಸಹಾಯ ಮಾಡುತ್ತದೆ. ಹಾಗೆಯೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತೀಯ ಸರಕುಗಳನ್ನು ಸ್ಪರ್ಧಾತ್ಮಕವಾಗಿಸುತ್ತದೆ. 1 ಡಾಲರ್ ಮೌಲ್ಯದ ಉತ್ಪನ್ನಕ್ಕೆ ಈ ಹಿಂದೆ 74 ಪಡೆಯುತ್ತಿದ್ದ ರಫ್ತುದಾರರು ಈಗ ಅದಕ್ಕೆ 80 ರೂಪಾಯಿ ಪಡೆಯುತ್ತಾರೆ.

English summary

Rupee Hits 80 Per Dollar: What It's Effect on Personal Finance, Explained in Kannada

The rupee hit 80 per dollar for the first time ever on july 19. What is Effect on Personal Finance, Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X