For Quick Alerts
ALLOW NOTIFICATIONS  
For Daily Alerts

ಸಂಬಳ ಏರಿಕೆ ಬಳಿಕ ಇಪಿಎಫ್ ಬಡ್ಡಿದರದ ಮೇಲೆ ತೆರಿಗೆ ಬೀಳುತ್ತಾ?, ಹೀಗೆ ಚೆಕ್ ಮಾಡಿ

|

ಹಲವು ಸಂಸ್ಥೆಗಳು ವಾರ್ಷಿಕವಾಗಿ ವೇತನ ಹೆಚ್ಚಳ ಮಾಡುತ್ತದೆ. ಕಳೆದೆರಡು ತಿಂಗಳುಗಳಿಂದ ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರ ವೇತನವು ಹೆಚ್ಚಳವಾಗಿರಬಹುದು. ನಿಮ್ಮ ಸಂಬಳ ಹೆಚ್ಚಳವಾದಂತೆ ನಿಮ್ಮ ಇಪಿಎಫ್ ಕೊಡುಗೆಯು ಕೂಡಾ ಹೆಚ್ಚಳವಾಗಬಹುದು. ಹೀಗಿರುವಾಗ ನಿಮ್ಮ ಸಂಬಳದಿಂದ ಎಷ್ಟು ಇಪಿಎಫ್ ಕಡಿತವಾಗಲಿದೆ ಎಂದು ನೀವು ತಿಳಿಯುವುದು ಉತ್ತಮ.

 

ಒಂದು ವೇಳೆ ನಿಮ್ಮ ಇಪಿಎಫ್ ಮಿತಿಯು ಹೆಚ್ಚಾದರೆ ಬಡ್ಡಿದರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಹಣಕಾಸು ವರ್ಷ 2021-22ರಲ್ಲಿ ಸೂಚಿಸಲಾದ ಇತ್ತೀಚಿನ ಆದಾಯ ತೆರಿಗೆ ರಿಟರ್ನ್ ಫಾರ್ಮ್‌ಗಳು ಹೆಚ್ಚುವರಿ ಇಪಿಎಫ್ ಹಾಗೂ ವಿಪಿಎಫ್ ಕೊಡುಗೆಯನ್ನು ಹೊಂದಿದ್ದರೆ ಅದರ ಮೇಲಿನ ಬಡ್ಡಿಯನ್ನು ಉಲ್ಲೇಖಿಸಲು ಅದರ ಮೇಲೆ ತೆರಿಗೆ ಪಾವತಿ ಮಾಡಲು ಹೇಳುತ್ತದೆ.

Employee Provident Fund: ಇಪಿಎಫ್ ಈಗಲೂ ಉತ್ತಮ ಆಯ್ಕೆಯೇ? Employee Provident Fund: ಇಪಿಎಫ್ ಈಗಲೂ ಉತ್ತಮ ಆಯ್ಕೆಯೇ?

ಆದ್ದರಿಂದ ಈ ಹಣಕಾಸು ವರ್ಷ 2022-23ರಲ್ಲಿ ಮಾತ್ರವಲ್ಲ ಕಳೆದ ಹಣಕಾಸು ವರ್ಷ 2021-22ರಲ್ಲಿಯೂ ಏನಾದರೂ ತೆರಿಗೆ ಪಾವತಿ ಮಾಡಬೇಕಾದ ಇಪಿಎಫ್ ಬಡ್ಡಿದರ ಇದೆಯೇ ಎಂದು ಚೆಕ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಅದನ್ನು ಹೇಗೆ ನೀವು ಚೆಕ್ ಮಾಡುವುದು?, ಇಲ್ಲಿದೆ ವಿವರ ಮುಂದೆ ಓದಿ...

ಆಧಾರ್ Face Authentication Service ಬಳಕೆ ಮಾಡುವುದು ಹೇಗೆ? ಆಧಾರ್ Face Authentication Service ಬಳಕೆ ಮಾಡುವುದು ಹೇಗೆ?

 ಇಪಿಎಫ್ ಬಡ್ಡಿದರ ತೆರಿಗೆಗೆ ಅನ್ವಯವೇ ತಿಳಿಯುವುದು ಹೇಗೆ?

ಇಪಿಎಫ್ ಬಡ್ಡಿದರ ತೆರಿಗೆಗೆ ಅನ್ವಯವೇ ತಿಳಿಯುವುದು ಹೇಗೆ?

ಹಣಕಾಸು ವರ್ಷದಲ್ಲಿ ಪಡೆಯುವ ಇಪಿಎಫ್ ಬಡ್ಡಿದರವು ತೆರಿಗೆಗೆ ಒಳಪಡುತ್ತದೆಯೇ ಎಂದು ನಾವು ಸ್ಯಾಲರಿ ಸ್ಲಿಪ್ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು. ನಿಮಗೆ ಲಭ್ಯವಾಗುವ ಸ್ಯಾಲರಿಯಿಂದ ಪ್ರತಿ ತಿಂಗಳು ನಿಮ್ಮ ಉದ್ಯೋಗದಾತರು ಇಪಿಎಫ್ ಕೊಡುಗೆಯ ಹಣವನ್ನು ಕಡಿತ ಮಾಡುತ್ತಾರೆ. ನೀವು ವಿಪಿಎಫ್ ಕೂಡಾ ಹೊಂದಿದ್ದರೆ, ಅದು ಕೂಡ ಕಡಿತ ಮಾಡುತ್ತಾರೆ. ಇವೆರಡು ನಿಮ್ಮ ಸ್ಯಾಲರಿ ಸ್ಲಿಪ್‌ನಲ್ಲಿ ಉಲ್ಲೇಖವಾಗಲಿದೆ. ಇದು 12ರಿಂದ ಗುಣಿಸ ಬೇಕಾದ ಅಂಕಿಅಂಶವಾಗಿದೆ.

 ಉದಾಹರಣೆ ಮೂಲಕ ತಿಳಿದುಕೊಳ್ಳಿ..

ಉದಾಹರಣೆ ಮೂಲಕ ತಿಳಿದುಕೊಳ್ಳಿ..

ನಿಮ್ಮ ಮೂಲ ವೇತನ 30,000 ರೂಪಾಯಿ ಎಂದುಕೊಳ್ಳಿ. ನಿಮ್ಮ ಸಂಸ್ಥೆಯು ನಿಮ್ಮ ಇಪಿಎಫ್ ಅನ್ನು ಶೇಕಡ 12 ಎಂದು ಪರಿಗಣಿಸುತ್ತದೆ. ಹಾಗಿರುವಾಗ ನಿಮ್ಮ ಮಾಸಿಕ ಇಪಿಎಫ್ ಕೊಡುಗೆ 3600 ರೂಪಾಯಿ ಆಗಿದೆ. ನೀವು ಪ್ರತಿ ತಿಂಗಳು 3000 ರೂಪಾಯಿ ವಿಪಿಎಫ್‌ ಹೊಂದಿದ್ದೀರಿ ಅಂದುಕೊಳ್ಳಿ. ಆದ್ದರಿಂದಾಗಿ ಮಾಸಿಕವಾಗಿ ನಿಮ್ಮ ಪಿಎಫ್ ಖಾತೆಗೆ 6,600 ರೂಪಾಯಿ ಕೊಡುಗೆಯಾಗಲಿದೆ. ನೀವು ಈ ಹಣ 12ರಿಂದ ಗುಣಿಸಬೇಕಾಗುತ್ತದೆ. 6,600X12 ಅಂದರೆ ವಾರ್ಷಿಕವಾಗಿ ಇಪಿಫ್ ಖಾತೆಗೆ 79,200 ರೂಪಾಯಿ ಜಮೆ ಆಗಲಿದೆ. ಇಪಿಎಫ್, ವಿಪಿಎಫ್ 2.5 ಲಕ್ಷ ರೂಪಾಯಿ ಮೀರಿದ್ದರೆ ಮಾತ್ರ ಬಡ್ಡಿದರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಆದರೆ ಇಲ್ಲಿ 2.5 ಲಕ್ಷ ರೂಪಾಯಿ ಮೀರದ ಕಾರಣ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.

 ನೀವು ಸರ್ಕಾರಿ ಉದ್ಯಮಿಯಾದರೆ?
 

ನೀವು ಸರ್ಕಾರಿ ಉದ್ಯಮಿಯಾದರೆ?

ನೀವು ಸರ್ಕಾರಿ ಉದ್ಯಮಿಯಾದರೆ ಅಥವಾ ಇಪಿಎಫ್‌ಗೆ ಕೊಡುಗೆ ನೀಡದ ಉದ್ಯಮಿಯಾದರೆ ನಿಮ್ಮ ಇಪಿಎಫ್ ಹಾಗೂ ವಿಪಿಎಫ್ ಕೊಡುಗೆಯ ಮಿತಿಯು 5 ಲಕ್ಷ ರೂಪಾಯಿ ಆಗಿದೆ. ಅಂದರೆ ಹಣಕಾಸು ವರ್ಷದಲ್ಲಿ ಮಾಡಲಾದ ಇಪಿಎಫ್ ಕೊಡುಗೆ ಐದು ವರ್ಷ ಮೀರಿರಬಾರದು ಎಂದು ಅರ್ಥವಾಗಿದೆ.

 ನಿಮ್ಮ ಇಪಿಎಫ್ ಬಡ್ಡಿದರದ ಮೇಲೆ ತೆರಿಗೆ ಇದ್ದರೆ?

ನಿಮ್ಮ ಇಪಿಎಫ್ ಬಡ್ಡಿದರದ ಮೇಲೆ ತೆರಿಗೆ ಇದ್ದರೆ?

ಒಂದು ವೇಳೆ ಉದ್ಯೋಗಿ ಇಪಿಎಫ್ ಹಾಗೂ ವಿಪಿಎಫ್ ಹೊಂದಿದ್ದು ಇದು 2.5 ಲಕ್ಷ ರೂಪಾಯಿ ಅಥವಾ 5 ಲಕ್ಷ ರೂಪಾಯಿ ಮಿತಿಯನ್ನು ಮೀರಿದ್ದರೆ, ಬಡ್ಡಿದರ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಇಪಿಎಫ್, ವಿಪಿಎಫ್ ಮೇಲೆ ಲಭ್ಯವಾಗುವ ಬಡ್ಡಿದರಕ್ಕಾಗಿ ಪ್ರತ್ಯೇಕ ಖಾತೆ ಇರಲಿದೆ. ಇದನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಸಿಬಿಡಿಟಿ ಸ್ಪಷ್ಟಪಡಿಸಿದೆ. ಇಪಿಎಫ್ ಹಾಗೂ ವಿಪಿಎಫ್ ಬಡ್ಡಿದರವನ್ನು ಸರಿಯಾಗಿ ತಿಳಿಯುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

English summary

Salary Increments: Has Your EPF Interest Rate Become Taxable? Here's How to Check

Has your EPF interest become taxable after latest salary increments? Here's how to check.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X