For Quick Alerts
ALLOW NOTIFICATIONS  
For Daily Alerts

SBI Annuity Deposit Plan : ಒಮ್ಮೆ ಹೂಡಿಕೆ ಮಾಡಿ, ಇಎಂಐ ಮೂಲಕ ಮಾಸಿಕ ಪಿಂಚಣಿ ಪಡೆಯಿರಿ

|

ದೇಶದ ಅತೀ ದೊಡ್ಡ ಸಾರ್ವಜನಿಕ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಾರ್ಷಿಕ ಡೆಪಾಸಿಟ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ನಾವು ಒಮ್ಮೆ ಹೂಡಿಕೆ ಮಾಡಿ ಬಳಿಕ ಇಎಂಐ ಮೂಲಕ ಮಾಸಿಕ ಪಿಂಚಣಿಯನ್ನು ಪಡೆಯಬಹುದು.

ಮಾಸಿಕವಾಗಿ ಇಎಂಐ ರೂಪದಲ್ಲಿ ಲಭ್ಯವಾಗುವ ಈ ಪಿಂಚಣಿಯು ಸಮಾನ ಮಾಸಿಕ ಕಂತು ಮೂಲಕ ಲಭ್ಯವಾಗಲಿದೆ. ಹಾಗೆಯೇ ಅಸಲು ಮೊತ್ತದ ಜೊತೆಯೇ ಬಡ್ಡಿಯು ಕೂಡಾ ಲಭ್ಯವಾಗಲಿದೆ. ತ್ರೈಮಾಸಿಕವಾಗಿ ಬಡ್ಡಿದರವನ್ನು ಪಾವತಿ ಮಾಡಲಾಗುತ್ತದೆ.

ಎಸ್‌ಬಿಐ ಬಂಪರ್ ಗಿಫ್ಟ್; ನಿಮ್ಮ ಹಣಕ್ಕೆ ಸಿಗುವ ಬಡ್ಡಿಯಲ್ಲಿ ಭಾರೀ ಹೆಚ್ಚಳಎಸ್‌ಬಿಐ ಬಂಪರ್ ಗಿಫ್ಟ್; ನಿಮ್ಮ ಹಣಕ್ಕೆ ಸಿಗುವ ಬಡ್ಡಿಯಲ್ಲಿ ಭಾರೀ ಹೆಚ್ಚಳ

ನೀವು ಎಸ್‌ಬಿಐ ವರ್ಷಾಶನ ಖಾತೆ ಯೋಜನೆಯಡಿ ಹಣವನ್ನು ಠೇವಣಿ ಮಾಡಿದರೆ, ನಿಮ್ಮ ಠೇವಣಿಯ ಮೇಲಿನ ಅಸಲು ಮತ್ತು ಬಡ್ಡಿ ಎರಡನ್ನೂ ಒಳಗೊಂಡಿರುವ ಮಾಸಿಕ ವರ್ಷಾಶನವನ್ನು ಪಡೆಯಲು ಸಾಧ್ಯವಾಗಲಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಎಸ್‌ಬಿಐ ಯೋಜನೆ: ಒಮ್ಮೆ ಹೂಡಿಕೆ ಮಾಡಿ, ಮಾಸಿಕ ಪಿಂಚಣಿ ಪಡೆಯಿರಿ

ಎಸ್‌ಬಿಐ ವಾರ್ಷಿಕ ಡೆಪಾಸಿಟ್ ಯೋಜನೆಯ ಮಾಹಿತಿ

ಈ ಯೋಜನೆಯು ನಮಗೆ ಹಲವಾರು ಅವಧಿ ಆಯ್ಕೆಗೆ ಅವಕಾಶ ನೀಡುತ್ತದೆ. ನಾವು 36, 60, 84 ಹಾಗೂ 120 ತಿಂಗಳುಗಳ ಡೆಪಾಸಿಟ್ ಅನ್ನು ಮಾಡಬಹುದು. ಈ ಯೋಜನೆಯ ಕನಿಷ್ಠ ಮಾಸಿಕ ವರ್ಷಾಶನವು ಒಂದು ಸಾವಿರ ರೂಪಾಯಿ ಆಗಿದೆ. 15,00,000 ರೂಪಾಯಿವರೆಗೆ ಹಣವನ್ನು ಮೆಚ್ಯೂರಿಟಿಗೂ ಮುನ್ನವೇ ಪಾವತಿ ಮಾಡಲಾಗುತ್ತದೆ.

ಇನ್ನು ಈ ಯೋಜನೆಯಲ್ಲಿ ಯಾವುದೇ ಗರಿಷ್ಠ ಹೂಡಿಕೆ ಮಿತಿಯಿಲ್ಲ. ಇನ್ನು ಹೂಡಿಕೆದಾರರು ನಿರ್ದಿಷ್ಟ ಅಗತ್ಯದ ಸಂದರ್ಭದಲ್ಲಿ ಉಳಿದ ಮೊತ್ತದಲ್ಲಿ ಶೇಕಡ 75ರಷ್ಟು ಹಣವನ್ನು ಪಡೆದುಕೊಳ್ಳಬಹುದು.

ಎಸ್‌ಬಿಐ ಯೋಜನೆಗೆ ಎಷ್ಟು ಬಡ್ಡಿದರವಿದೆ?

ಸಾಮಾನ್ಯ ಜನರಿಗೆ ಹಾಗೂ ಹಿರಿಯ ನಾಗರಿಕರಿಗೆ ಈ ಡೆಪಾಸಿಟ್‌ಗಳಿಗೆ ನೀಡುವ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಿಲ್ಲ. ಕೆಲವು ಯೋಜನೆಗಳಲ್ಲಿ ಹಿರಿಯ ನಾಗರಿಕರಿಗೆ ಅಧಿಕ ಬಡ್ಡಿದರವನ್ನು ನೀಡಲಾಗುತ್ತದೆ. ಆದರೆ ಈ ಯೋಜನೆಯಲ್ಲಿ ಎಲ್ಲರಿಗೂ ಸಮಾನವಾದ ಬಡ್ಡಿದರವನ್ನು ನೀಡಲಾಗುತ್ತದೆ.

ಇನ್ನು ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಪ್ರಸ್ತುತ ಸಾಮಾನ್ಯ ನಾಗರಿಕರಿಗೆ ಎಫ್‌ಡಿ ಮೇಲೆ ಶೇಕಡ 6.1ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡ 6.9ರಷ್ಟು ಬಡ್ಡಿದರ ಲಭ್ಯವಾಗಲಿದೆ ಎಂಬುವುದನ್ನು ನೀವು ಇಲ್ಲಿ ಸ್ಮರಿಸಬಹುದು.

ಇನ್ನು ಈ ಯೋಜನೆಯಲ್ಲಿ ಬಡ್ಡಿದರವು ಅವಧಿಯ ಮೇಲೆ ಆಧಾರಿತವಾಗಿದೆ. ಅವಧಿಯ ಮೇಲೆ ಬಡ್ಡಿದರ ಬದಲಾವಣೆಯಾಗುತ್ತದೆ. ಈ ಕಾರ್ಯಕ್ರಮದ ಅಡಿಯಲ್ಲಿ ನಾಲ್ಕು ಅವಧಿಗಳಿಗೆ ಠೇವಣಿಗೆ ಅವಕಾಶವಿದೆ. 36 ತಿಂಗಳವರೆಗೆ ಮಾಡಿದ ಠೇವಣಿಗಳಿಗೆ, ಬಡ್ಡಿ ದರವು ಶೇಕಡ 6.25, 60 ತಿಂಗಳವರೆಗೆ ಮಾಡಿದ ಠೇವಣಿಗಳಿಗೆ ಬಡ್ಡಿ ದರ ಸಾಮಾನ್ಯ ಜನರಿಗೆ ಶೇಕಡ 6.10 ಹಿರಿಯ ನಾಗರಿಕರಿಗೆ ಶೇಕಡ 6.5, 84 ತಿಂಗಳಿನಿಂದ 120 ತಿಂಗಳುಗಳವರೆಗೆ ಮಾಡಿದ ಠೇವಣಿಗಳಿಗೆ, ಬಡ್ಡಿ ದರವು ಸಾಮಾನ್ಯ ಜನರಿಗೆ ಶೇಕಡ 6.1 ಮತ್ತು ಹಿರಿಯ ನಾಗರಿಕರಿಗೆ ಶೇಕಡ 6.9 ಆಗಿದೆ.

English summary

SBI Annuity Deposit Plan: Invest once and receive monthly pension in EMIs, Details Here

If you make a deposit under sbi annuity deposit plan scheme you'll receive a monthly annuity that includes both the principal and interest received on the deposit.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X