For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಬಳಕೆದಾರರಿಗೆ ಮೆಗಾ ಫೆಸ್ಟಿವಲ್‌ ಆಫರ್‌

|

ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾ ತನ್ನ ಕಾರ್ಡ್ ಬಳಕೆದಾರರಿಗೆ ಮೂರು ದಿನಗಳ ಹಬ್ಬದ ಕ್ಯಾಷ್‌ಬ್ಯಾಕ್‌ ಆಫರ್‌ ಅನ್ನು ಎಲ್ಲಾ ದೇಶೀಯ ಇ-ಕಾಮರ್ಸ್ ವೇದಿಕೆಗಳಲ್ಲಿ ನೀಡಿದೆ. ಈ ಆಫರ್‌ ಮೂರು ದಿನಗಳ ಕಾಲ ಇರಲಿದೆ. ಈ ಆಫರ್‌ ಅಕ್ಟೋಬರ್‌ 3 ರಿಂದ ಆರಂಭವಾಗಲಿದೆ. ಭಾರತದಲ್ಲಿ ಈಗ ಹಬ್ಬದ ಸೀಸನ್‌ ಆಗಿದೆ. ಹಲವಾರು ಮಂದಿ ಈಗ ಹೆಚ್ಚಾಗಿ ಖರೀದಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಹಲವಾರು ಬ್ಯಾಂಕುಗಳು, ಇತರೆ ಸಂಸ್ಥೆಗಳು ಆಫರ್‌ಗಳನ್ನು ನೀಡುತ್ತದೆ.

ಈ ಬಗ್ಗೆ ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾ ಘೋಷಣೆಯನ್ನು ಮಾಡಿದೆ. "ಮೂರು ದಿನಗಳ ಕಾಲ ಮೆಗಾ ಶಾಪಿಂಗ್‌ ಫೆಸ್ಟಿವಲ್ ಆಫರ್‌ ದಮ್‌ದಾರ್‌ ದಸ್‌ ಅಕ್ಟೋಬರ್‌ 3 ರಿಂದ ಆರಂಭವಾಗಲಿದೆ," ಎಂದು ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾ ತಿಳಿಸಿದೆ. "ಇದು ಆನ್‌ಲೈನ್‌ ಶಾಪಿಂಗ್‌ ಫೆಸ್ಟಿವಲ್ ಆಫರ್‌ ಆಗಿದ್ದು, ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾದ ಕ್ರೆಡಿಟ್‌ ಕಾರ್ಡ್ ಹೊಂದಿರುವವರು ಯಾವುದೇ ದೇಶೀಯ ಇ-ಕಾಮರ್ಸ್ ಸೈಟ್‌ನಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡಬಹುದಾಗಿದೆ," ಎಂದು ಕೂಡಾ ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾ ಮಾಹಿತಿ ನೀಡಿದೆ.

ಗಮನಿಸಿ: ಅಂಚೆ ಕಚೇರಿ ಎಟಿಎಂ ಕಾರ್ಡ್ ನಿಯಮ ಅ. 1 ರಿಂದ ಬದಲಾವಣೆ, ಹೊಸದೇನು?ಗಮನಿಸಿ: ಅಂಚೆ ಕಚೇರಿ ಎಟಿಎಂ ಕಾರ್ಡ್ ನಿಯಮ ಅ. 1 ರಿಂದ ಬದಲಾವಣೆ, ಹೊಸದೇನು?

"ಗ್ರಾಹಕರು ಆನ್‌ಲೈನ್‌ನ ಯಾವುದೇ ವೇದಿಯಲ್ಲಿ ಅಕ್ಟೋಬರ್‌ 3 ರಿಂದ ಮೂರು ದಿನಗಳ ಕಾಲ ಈ ಆಫರ್‌ ಪಡೆಯುವ ಖರೀದಿ ಮಾಡಲು ಸ್ವತಂತ್ರರಾಗಿದ್ದಾರೆ. ಇದು ಕೇವಲ ಒಂದೆರಡು ಸೈಟ್‌ಗಳಿಗೆ ಸೀಮಿತವಾಗಿಲ್ಲ. ಗ್ರಾಹಕರಿಗೆ ಒಟ್ಟು ಶೇಕಡ 10 ಕ್ಯಾಷ್‌ಬ್ಯಾಕ್‌ ನೀಡಲಾಗುತ್ತದೆ," ಎಂದು ಕೂಡಾ ತಿಳಿಸಿದೆ.

 ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಬಳಕೆದಾರರಿಗೆ ಮೆಗಾ ಫೆಸ್ಟಿವಲ್‌ ಆಫರ್‌

ಪ್ರಸ್ತುತ ಭಾರತದಲ್ಲಿ ಆನ್‌ಲೈನ್‌ ಮೂಲಕ ಇಎಂಐನಲ್ಲಿ ಖರೀದಿ ಮಾಡುವುದು ಹೆಚ್ಚಾಗುತ್ತಿದೆ. ಆ ಹಿನ್ನೆಲೆಯಲ್ಲಿ ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾ ಆ‌ನ್‌ಲೈನ್‌ನಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಈ ಆಫರ್‌ ಬಳಸಿಕೊಂಡು ಇಎಂಐ ಮೂಲಕ ಪಡೆಯಬಹುದಾಗಿದೆ. ಈ ಫೆಸ್ವಿವಲ್‌ ಆಫರ್‌ನಲ್ಲಿ ಎಸ್‌ಬಿಐ ಗ್ರಾಹಕರು ಆನ್‌ಲೈನ್‌ ಮೂಲಕ ಹಲವಾರು ಸಾಮಾಗ್ರಿಗಳನ್ನು ಖರೀದಿ ಮಾಡಬಹುದಾಗಿದೆ.

ಮೊಬೈಲ್‌ ಫೋನ್‌, ಬೇರೆ ಪರಿಕರಗಳು, ಟಿವಿ, ಇತರೆ ದೊಡ್ಡ ಉಪಕರಣಗಳು, ಲ್ಯಾಪ್‌ಟಾಪ್‌ಗಳು, ಡ್ಯಾಬ್‌ಲೇಟ್‌ಗಳು, ಗೃಹೋಪಯೋಗಿ ವಸ್ತುಗಳು, ಅಡುಗೆ ವಸ್ತುಗಳು, ಫಾಷ್ಯನ್‌, ಜೀವನಶೈಲಿಗೆ ಬೇಕಾದ ಸಾಮಾಗ್ರಿಗಳು, ಕ್ರೀಡೆ, ಫಿಟ್‌ನೆಸ್‌ಗೆ ಬೇಕಾದ ಸಾಮಾಗ್ರಿಗಳನ್ನು ಎಸ್‌ಬಿಐ ಗ್ರಾಹಕರು ಶೇಕಡ 10 ಕ್ಯಾಷ್‌ಬ್ಯಾಕ್‌ ಪಡೆಯುವ ಮೂಲಕ ಖರೀದಿ ಮಾಡಬಹುದು. ಆದರೆ ಈ ಆಫರ್‌ ವಿಮೆ, ಪ್ರಯಾಣ, ವಾಲೆಟ್‌, ಜ್ಯುವೆಲ್ಲರಿ, ಶಿಕ್ಷಣ, ಆರೋಗ್ಯ, ಉಪಯುಕ್ತತೆಯ ವ್ಯಾಪಾರಿಗಳಿಗೆ ಸಂಬಂಧಿಸಿದ್ದಕ್ಕೆ ಅನ್ವಯ ಆಗುವುದಿಲ್ಲ.

ಎಸ್‌ಬಿಐ Vs ಅಂಚೆ ಕಚೇರಿ ಎಫ್‌ಡಿ: ಎಲ್ಲಿ ಹೂಡಿಕೆ ಮಾಡಿದರೆ ಸೂಕ್ತ?ಎಸ್‌ಬಿಐ Vs ಅಂಚೆ ಕಚೇರಿ ಎಫ್‌ಡಿ: ಎಲ್ಲಿ ಹೂಡಿಕೆ ಮಾಡಿದರೆ ಸೂಕ್ತ?

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಎಸ್‌ಬಿಐ ಕಾರ್ಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಮಮೋಹನ್ ರಾವ್ ಅಮರ, "ವಿಶೇಷವಾಗಿ ಹಬ್ಬದ ಅವಧಿಯಲ್ಲಿ ನಮ್ಮ ಕಾರ್ಡ್‌ದಾರರು ಅಧಿಕವಾಗಿ ಆನ್‌ಲೈನ್‌ ಶಾಪಿಂಗ್‌ನಲ್ಲಿ ತೊಡಗಿರುವುದನ್ನು ನಾವು ಗಮನಿಸಿದ್ದೇವೆ. ಈ ಹಿನ್ನೆಲೆಯಿಂದಾಗಿ ಹಬ್ಬಗಳ ಸಂದರ್ಭದಲ್ಲಿ ನಾವು ಆನ್‌ಲೈನ್‌ ಶಾಪಿಂಗ್‌ಗೆ ಕ್ಯಾಷ್‌ಬ್ಯಾಕ್‌ ಆಫರ್‌ ನೀಡಿದ್ದೇವೆ," ಎಂದು ತಿಳಿಸಿದ್ದಾರೆ.

ಹಾಗೆಯೇ ಈ ಸಂದರ್ಭದಲ್ಲೇ "ಪ್ರಸ್ತುತ ಇಎಂಐ ವಹಿವಾಟು ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಆಫರ್‌ ಅನ್ನು ಇಎಂಐ ಮೂಲಕ ಖರೀದಿ ಮಾಡುವವರಿಗೂ ವಿಸ್ತರಣೆ ಮಾಡಿದ್ದೇವೆ. ಈ ಹಬ್ಬದ ಆಫರ್‌ಗಳ ಬಗ್ಗೆ ಜನರಿಗೆ ತಿಳಿಸಲು ನಟ ಜಾವೇದ್‌ ಜಾಫೆರಿ ಒಳಗೊಂಡ ಡಿಜಿಟಲ್‌ ಅಭಿಯಾನವನ್ನು ಆರಂಭಿಸಲು ಎಸ್‌ಬಿಐ ಕಾರ್ಡ್ ಯೋಜಿಸಿದೆ," ಎಂದಿದ್ದಾರೆ.

"ನಾವು ಎಸ್‌ಬಿಐ ಕಾರ್ಡ್ ಹೊಂದಿರುವವರಿಗೆ ಅನುಕೂಲಕರ, ತಡೆರಹಿತ ಹಾಗೂ ಸುರಕ್ಷಿತ ಪಾವತಿ ಪರಿಹಾರಗಳನ್ನು ಎಲ್ಲಿಯಾದರೂ, ಯಾವುದೇ ಸಂದರ್ಭದಲ್ಲಿ ಆದರೂ ಈವರೆಗೂ ನೀಡುತ್ತಾ ಬಂದಿದ್ದೇವೆ. ಈ ಆಫರ್‌ ಸಂದರ್ಭದಲ್ಲೂ ಎಸ್‌ಬಿಐ ಕಾರ್ಡ್ ಹೊಂದಿರುವವರು ತಡೆರಹಿತ ಹಾಗೂ ಸುರಕ್ಷಿತ ಪಾವತಿ ಪರಿಹಾರಗಳನ್ನು ಪಡೆಯಬಹುದು," ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.

English summary

SBI Credit Card Holders Can Avail 3 Days Mega Festive Offers, Starting from 3 Oct

SBI Credit Card Holders Can Avail 3 Days Mega Festive Offers, Starting from 3 Oct. To know more Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X