For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ Vs ಅಂಚೆ ಕಚೇರಿ ಎಫ್‌ಡಿ: ಎಲ್ಲಿ ಹೂಡಿಕೆ ಮಾಡಿದರೆ ಸೂಕ್ತ?

|

ಜನರು ತಮ್ಮ ಹಣವನ್ನು ಉಳಿತಾಯ ಮಾಡುವ ವಿಚಾರ ಬಂದಾಗ ಅಧಿಕ ಮಂದಿ ಫಿಕ್ಸಿಡ್‌ ಡೆಪಾಸಿಟ್‌ ಮೇಲೆ ಅಧಿಕ ಗಮನ ಹರಿಸುತ್ತಾರೆ. ನಾವು ಹೂಡಿಕೆ ಮಾಡಿ ಬಡ್ಡಿಯನ್ನು ಪಡೆಯುವ ಹಾಗೂ ನಾವು ಹೂಡಿಕೆ ಮಾಡಿದ ಹಣವು ಸುರಕ್ಷಿತವಾಗಿದೆ ಎಂಬ ನೆಮ್ಮದಿಯಿಂದ ಇರಲು ಜನರು ಅಧಿಕವಾಗಿ ಫಿಕ್ಸಿಡ್‌ ಡೆಪಾಸಿಟ್‌ ಮಾಡುತ್ತಾರೆ. ಇದು ಹೆಚ್ಚಾಗಿ ಜನರ ಭವಿಷ್ಯಕ್ಕೆ ಸುರಕ್ಷಿತೆಯನ್ನು ಒದಗಿಸುತ್ತದೆ.

ಇನ್ನು ಫಿಕ್ಸಿಡ್‌ ಡೆಪಾಸಿಟ್‌ನಲ್ಲಿ ಶಾರ್ಟ್ ಟರ್ಮ್, ಲಾಂಗ್‌ ಟರ್ಮ್, ಮಿಡ್‌ ಟರ್ಮ್ ಎಂದು ವಿವಿಧ ಅವಧಿಗಳಿವೆ. ಸಾಲದ ಹೂಡಿಕೆದಾರರು ವಾರ್ಷಿಕ ಬಡ್ಡಿದರವನ್ನು 7 ದಿನಗಳಿಂದ 10 ವರ್ಷಗಳವರೆಗಿನ ಬದಲಾಗುತ್ತಿರುವ ಮೆಚ್ಯೂರಿಟಿ ಸಮಯಕ್ಕೆ ಈ ಫಿಕ್ಸಿಡ್ ಡೆಪಾಸಿಟ್‌ ಮೇಲೆ ಪಡೆಯಬಹುದು. ಆದರೆ ಈ ಫಿಕ್ಸಿಡ್‌ ಡೆಪಾಸಿಟ್‌ ಇಡುವ ಸಂದರ್ಭದಲ್ಲಿ ಹಲವಾರು ಮಂದಿಗೆ ಕೆಲವೊಂದು ಅನುಮಾನಗಳು ಮೂಡುತ್ತದೆ.

ವಿಶೇಷ ಎಫ್‌ಡಿ: ಹೆಚ್ಚಿನ ಬಡ್ಡಿಯನ್ನು ಗಳಿಸುವ ಅವಕಾಶ, ಅಕ್ಟೋಬರ್ 07 ರವರೆಗೆ ಮಾತ್ರ ಹೂಡಿಕೆವಿಶೇಷ ಎಫ್‌ಡಿ: ಹೆಚ್ಚಿನ ಬಡ್ಡಿಯನ್ನು ಗಳಿಸುವ ಅವಕಾಶ, ಅಕ್ಟೋಬರ್ 07 ರವರೆಗೆ ಮಾತ್ರ ಹೂಡಿಕೆ

ಭಾರತದ ಪ್ರಮುಖ ಬ್ಯಾಂಕು ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಾಗೂ ಅಂಚೆ ಇಲಾಖೆಯು ಫಿಕ್ಸಿಡ್‌ ಡೆಪಾಸಿಟ್‌ ಮೇಲೆ ಉತ್ತಮ ಬಡ್ಡಿದರವನ್ನು ನೀಡು‌ತ್ತದೆ. ಹಾಗಿರುವಾಗ ಸಾಮಾನ್ಯವಾಗಿ ಜನರಿಗೆ ನಾವು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ನಲ್ಲಿ ಫಿಕ್ಸಿಡ್‌ ಡೆಪಾಸಿಟ್‌ ಇಡಬೇಕೇ? ಅಥವಾ ಅಂಚೆ ಕಚೇರಿಯಲ್ಲಿ ಫಿಕ್ಸಿಡ್‌ ಡೆಪಾಸಿಟ್‌ ಇಡಬೇಕೇ ಎಂದು ತಿಳಿಯುವುದಿಲ್ಲ. ಈ ನಿಟ್ಟಿನಲ್ಲಿ ನಾವು ಫಿಕ್ಸಿಡ್‌ ಡೆಪಾಸಿಟ್‌ನ ಬಡ್ಡಿದರದ ಹಿನ್ನೆಲೆಯಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಾಗೂ ಅಂಚೆ ಇಲಾಖೆಯನ್ನು ಹೋಲಿಕೆ ಮಾಡಿದ್ದೇವೆ. ನೀವು ಎಲ್ಲಿ ಫಿಕ್ಸಿಡ್‌ ಡೆಪಾಸಿಟ್‌ ಇಡಬೇಕು ಎಂದು ತಿಳಿಯಲು, ಮುಂದೆ ಓದಿ.

 ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾದಲ್ಲಿ ಫಿಕ್ಸಿಡ್‌ ಡೆಪಾಸಿಟ್‌

ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾದಲ್ಲಿ ಫಿಕ್ಸಿಡ್‌ ಡೆಪಾಸಿಟ್‌

ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾದಲ್ಲಿ ಕನಿಷ್ಠ ಒಂದು ಸಾವಿರ ರೂಪಾಯಿ ಡೆಪಾಸಿಟ್‌ ಇಡಬೇಕಾಗುತ್ತದೆ. ಆ ಬಳಿಕ ರೂಪಾಯಿ 100 ರಿಂದ ಆರಂಭವಾಗುವಂತೆ ಯಾವುದೇ ಗರಿಷ್ಠ ಮಿತಿಯಿಲ್ಲದೆ ಒಬ್ಬರು 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾದಲ್ಲಿ ಫಿಕ್ಸಿಡ್‌ ಡೆಪಾಸಿಟ್‌ ಇಡಬಹುದು. ಫಿಕ್ಸಿಡ್‌ ಡೆಪಾಸಿಟ್ ಖಾತೆಯನ್ನು ಹೊಂದಿರುವವರು ತ್ರೈಮಾಸಿಕ ಅವಧಿಯ ಬಡ್ಡಿಯನ್ನು ಪಡೆಯುತ್ತಾರೆ ಅಥವಾ ಫಿಕ್ಸಿಡ್‌ ಡೆಪಾಸಿಟ್‌ ಇಟ್ಟ ಸಮಯದಿಂದ ಮೆಚ್ಯೂರಿಟಿ ಅವಧಿಯವರೆಗೆ ಪ್ರಿನ್ಸಿಪಲ್‌ ಅಮೌಂಟ್‌ ಸೇರಿದಂತೆ ಬಡ್ಡಿಯನ್ನು ಪಡೆಯಲಿದ್ದಾರೆ. ಇನ್ನು ಟರ್ಮ್ ಡೆಪಾಸಿಟ್‌ ಸಂದರ್ಭದಲ್ಲಿ, ಹ್ನನೆರಡು ತಿಂಗಳುಗಳ ಟರ್ಮ್ ಅಥವಾ ಅದಕ್ಕಿಂತ ಅಧಿಕ ಟರ್ಮ್‌ಗೆ ಬಡ್ಡಿದರವನ್ನು ತಿಂಗಳ ಲೆಕ್ಕದಲ್ಲಿ, ಅರ್ಧ ವಾರ್ಷಿಕ ಲೆಕ್ಕದಲ್ಲಿ, ವಾರ್ಷಿಕ ಲೆಕ್ಕದಲ್ಲಿ ಪಾವತಿ ಮಾಡಲಾಗುತ್ತದೆ. ಒಬ್ಬರು ನಾಮಿನೇಷನ್‌ ಅನ್ನು ಮಾಡಿಕೊಳ್ಳಬಹುದು. ಹಾಗೆಯೇ ತಮ್ಮ ಈ ಫಿಕ್ಸಿಡ್‌ ಡೆಪಾಸಿಟ್‌ ಅನ್ನು ಬ್ಯಾಂಕಿನ ಒಂದು ಬ್ರಾಂಚಿನಿಂದ ಇನ್ನೊಂದು ಬ್ರಾಂಚಿಗೆ ವರ್ಗಾವಣೆಯನ್ನು ಮಾಡಿಕೊಳ್ಳಬಹುದು. ಇನ್ನು ಆದಾಯ ತೆರಿಗ ಕಾಯ್ದೆಯ ಪ್ರಕಾರವಾಗಿ ತೆರಿಗೆ ಕಡಿತವು ಕಡ್ಡಾಯವಾಗಿದೆ. ಆದರೆ ಡೆಪಾಸಿಟರ್‌ಗಳು 15G/15H ಫಾರ್ಮ್ ಅರ್ಜಿ ಸಲ್ಲಿಕೆ ಮಾಡುವ ಮೂಲಕ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳಬಹುದು. ಈ ವರ್ಷದ ಜನವರಿ ಒಂದರಿಂದ ಜಾರಿಗೆ ಬರುವಂತೆ ಎಸ್‌ಬಿಐ ತನ್ನ ಫಿಕ್ಸಿಡ್‌ ಡೆಪಾಸಿಟ್‌ ಮೇಲಿನ ಬಡ್ಡಿಯನ್ನು ಪರಿಷ್ಕರಣೆ ಮಾಡಿದೆ.

 ಎಸ್‌ಬಿಐ ಫಿಕ್ಸಿಡ್‌ ಡೆಪಾಸಿಟ್‌ ಬಡ್ಡಿದರ ಎಷ್ಟಿದೆ?

ಎಸ್‌ಬಿಐ ಫಿಕ್ಸಿಡ್‌ ಡೆಪಾಸಿಟ್‌ ಬಡ್ಡಿದರ ಎಷ್ಟಿದೆ?

7 ದಿನದಿಂದ 45 ದಿನಗಳವರೆಗಿನ ಫಿಕ್ಸಿಡ್‌ ಡೆಪಾಸಿಟ್‌: ಸಾಮಾನ್ಯ ನಾಗರಿಕರಿಗೆ ಶೇಕಡ 2.9 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3.4 ಬಡ್ಡಿದರ
46 ದಿನದಿಂದ 179 ದಿನಗಳವರೆಗಿನ ಫಿಕ್ಸಿಡ್‌ ಡೆಪಾಸಿಟ್‌: ಸಾಮಾನ್ಯ ನಾಗರಿಕರಿಗೆ ಶೇಕಡ 3.9 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.4 ಬಡ್ಡಿದರ
180 ದಿನದಿಂದ 210 ದಿನಗಳವರೆಗಿನ ಫಿಕ್ಸಿಡ್‌ ಡೆಪಾಸಿಟ್‌: ಸಾಮಾನ್ಯ ನಾಗರಿಕರಿಗೆ ಶೇಕಡ 4.4 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.9 ಬಡ್ಡಿದರ
211 ದಿನದಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಫಿಕ್ಸಿಡ್‌ ಡೆಪಾಸಿಟ್‌: ಸಾಮಾನ್ಯ ನಾಗರಿಕರಿಗೆ ಶೇಕಡ 4.4 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.9 ಬಡ್ಡಿದರ
1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯ ಫಿಕ್ಸಿಡ್‌ ಡೆಪಾಸಿಟ್‌: ಸಾಮಾನ್ಯ ನಾಗರಿಕರಿಗೆ ಶೇಕಡ 5 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.5 ಬಡ್ಡಿದರ
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಫಿಕ್ಸಿಡ್‌ ಡೆಪಾಸಿಟ್‌: ಸಾಮಾನ್ಯ ನಾಗರಿಕರಿಗೆ ಶೇಕಡ 5.1 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.6 ಬಡ್ಡಿದರ
3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಯ ಫಿಕ್ಸಿಡ್‌ ಡೆಪಾಸಿಟ್‌: ಸಾಮಾನ್ಯ ನಾಗರಿಕರಿಗೆ ಶೇಕಡ 5.3 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.8 ಬಡ್ಡಿದರ
5 ವರ್ಷದಿಂದ 10 ವರ್ಷದವರೆಗಿನ ಅವಧಿಯ ಫಿಕ್ಸಿಡ್‌ ಡೆಪಾಸಿಟ್‌: ಸಾಮಾನ್ಯ ನಾಗರಿಕರಿಗೆ ಶೇಕಡ 5.4 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.2 ಬಡ್ಡಿದರ

ಸೆಪ್ಟೆಂಬರ್‌ನಲ್ಲಿ ಈ ನಾಲ್ಕು ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಪರಿಷ್ಕರಿಸಿದೆ: ಎಷ್ಟಿದೆ ಬಡ್ಡಿದರ?ಸೆಪ್ಟೆಂಬರ್‌ನಲ್ಲಿ ಈ ನಾಲ್ಕು ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಪರಿಷ್ಕರಿಸಿದೆ: ಎಷ್ಟಿದೆ ಬಡ್ಡಿದರ?

 ಅಂಚೆ ಇಲಾಖೆಯ ಫಿಕ್ಸಿಡ್‌ ಡೆಪಾಸಿಟ್‌

ಅಂಚೆ ಇಲಾಖೆಯ ಫಿಕ್ಸಿಡ್‌ ಡೆಪಾಸಿಟ್‌

ಅಂಚೆ ಇಲಾಖೆಯಲ್ಲಿ ಓರ್ವ ವ್ಯಕ್ತಿಯ ಖಾತೆ, ಮೂವರು ವಯಸ್ಕರ ಜಂಟಿ ಖಾತೆ, ಹತ್ತು ವರ್ಷಕ್ಕಿಂತ ಕೆಳ ವಯಸ್ಸಿನ ಅಪ್ರಾಪ್ತರ ಹೆಸರಲ್ಲಿ ಖಾತೆ, ಮಕ್ಕಳಿಗಾಗಿ ಪೋಷಕರು ನಿರ್ವಹಣೆ ಮಾಡುವ ಖಾತೆಯನ್ನು ತೆರೆಯಬಹುದು. ಅಂಚೆ ಇಲಾಖೆಯಲ್ಲಿ ಕನಿಷ್ಠ ಒಂದು ಸಾವಿರ ರೂಪಾಯಿ ಡೆಪಾಸಿಟ್‌ ಇಡಬೇಕಾಗುತ್ತದೆ. ಆ ಬಳಿಕ ರೂಪಾಯಿ 100 ರಿಂದ ಆರಂಭವಾಗುವಂತೆ ಯಾವುದೇ ಗರಿಷ್ಠ ಮಿತಿಯಿಲ್ಲದೆ ಒಂದರಿಂದ ಐದು ವರ್ಷಗಳ ಫಿಕ್ಸಿಡ್‌ ಡೆಪಾಸಿಟ್‌ ಅನ್ನು ಮಾಡಿಕೊಳ್ಳಬಹುದು. ವಾರ್ಷಿಕವಾಗಿ ಫಿಕ್ಸಿಡ್‌ ಡೆಪಾಸಿಟ್‌ದಾರರ ಬಡ್ಡಿದರವನ್ನು ಪಾವತಿ ಮಾಡಲಾಗುತ್ತದೆ. ಹಾಗೆಯೇ ಐದು ವರ್ಷದ ಫಿಕ್ಸಿಡ್‌ ಡೆಪಾಸಿಟ್‌ನಲ್ಲಿ ಡೆಪಾಸಿಟ್‌ದಾರರು ತೆರಿಗೆ ವಿನಾಯಿಗೆ ಅರ್ಜಿಯನ್ನು ಸಲ್ಲಿಸಬಹುದು. ಪ್ರಸ್ತುತ ಅಂಚೆ ಇಲಾಖೆಯಲ್ಲಿ ಒಂದು ವರ್ಷದ ಫಿಕ್ಸಿಡ್‌ ಡೆಪಾಸಿಟ್‌ಗೆ ಶೇಕಡ 5.50 ಬಡ್ಡಿ ಇದೆ. ಎರಡು ವರ್ಷದ ಫಿಕ್ಸಿಡ್‌ ಡೆಪಾಸಿಟ್‌ಗೆ ಶೇಕಡ 5.50 ಬಡ್ಡಿ ಇದೆ. ಮೂರು ವರ್ಷದ ಫಿಕ್ಸಿಡ್‌ ಡೆಪಾಸಿಟ್‌ಗೆ ಶೇಕಡ 5.5 ಬಡ್ಡಿ ಇದೆ. 5 ವರ್ಷದ ಫಿಕ್ಸಿಡ್‌ ಡೆಪಾಸಿಟ್‌ಗೆ ಶೇಕಡ 6.7 ಬಡ್ಡಿ ಇದೆ.

ಸರ್ಕಾರದ ಈ ಕಂಪನಿ ಎಫ್‌ಡಿ ಮೇಲೆ ಶೇ. 8 ಬಡ್ಡಿ ದರ ವಿಧಿಸುತ್ತದೆ, ಹೂಡಿಕೆ ಮಾಡಬಹುದೇ?ಸರ್ಕಾರದ ಈ ಕಂಪನಿ ಎಫ್‌ಡಿ ಮೇಲೆ ಶೇ. 8 ಬಡ್ಡಿ ದರ ವಿಧಿಸುತ್ತದೆ, ಹೂಡಿಕೆ ಮಾಡಬಹುದೇ?

 ಹಾಗಾದರೆ ನೀವು ಎಲ್ಲಿ ಹೂಡಿಕೆ ಮಾಡಬಹುದು?

ಹಾಗಾದರೆ ನೀವು ಎಲ್ಲಿ ಹೂಡಿಕೆ ಮಾಡಬಹುದು?

ಇನ್ನು ಬ್ಯಾಂಕಿನಲ್ಲಿ ಟರ್ಮ್ ಫಿಕ್ಸಿಡ್‌ ಡೆಪಾಸಿಟ್‌ಗೆ ಕಡಿಮೆ ಬಡ್ಡಿದರ ಇರುವ ಕಾರಣದಿಂದಾಗಿ ನೀವು ಬ್ಯಾಂಕಿನಲ್ಲಿ ಹೆಚ್ಚಿನ ಅವಧಿಯ ಡೆಪಾಸಿಟ್‌ ಅನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮವಲ್ಲ. ಹಾಗೆಯೇ ಈ ಸಂದರ್ಭದಲ್ಕಿ ನೀವು ಹಣದುಬ್ಬರವನ್ನು ಕೂಡಾ ಗಮನಕ್ಕೆ ತೆಗೆದುಕೊಳ್ಳಬೇಕು. ಹಣದುಬ್ಬರವೂ ಹೂಡಿಕೆಯ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಮುಖ್ಯವಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮೇಲೆ ಅದು ಈಗಾಗಲೇ ಪ್ರಭಾವ ಬೀರಿದೆ. ಏಕೆಂದರೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ 5-10 ವರ್ಷದ ಅವಧಿಯ ಫಿಕ್ಸಿಡ್‌ ಡೆಪಾಸಿಟ್‌ಗೆ ಬರೀ 5.4 ಬಡ್ಡಿದರವನ್ನು ನೀಡುತ್ತದೆ. ಒಂದು ವೇಳೆ ಹಣದುಬ್ಬರವು 5.94% ಹಾಗೂ 6.1%. ನಡುವೆ ಇದ್ದರೆ ನಿಮಗೆ ಯಾವುದೇ ರಿಟರ್ನ್ ಇರುವುದಿಲ್ಲ. ಪರಿಣಾಮವಾಗಿ, ನೀವು ದೀರ್ಘಾವಧಿಯ ಗುರಿಯನ್ನು ಹೊಂದಿದ್ದರೆ ಮಾತ್ರ 6.7% ಬಡ್ಡಿದರದೊಂದಿಗೆ ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್‌ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಅಥವಾ ನಿಯಮಿತ ಹೂಡಿಕೆದಾರರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬಾಂಡ್‌ಗಳ ಮೇಲೆ ಹೂಡಿಕೆ ಮಾಡಬಹುದು. ಸಣ್ಣ ಹಣಕಾಸು ಬ್ಯಾಂಕುಗಳ ಫಿಕ್ಸಿಡ್‌ ಡೆಪಾಸಿಟ್‌ ಮೇಲೆ ಠೇವಣಿ ಮಾಡಬಹುದು. ಅಥವಾ ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿ (ಎನ್‌ಬಿಎಫ್‌ಸಿ) ಹೂಡಿಕೆ ಮಾಡಬಹುದು. ಈ ಮೂಲಕ ಹಣದುಬ್ಬರದಿಂದ ನೀವು ತಪ್ಪಿಸಿಕೊಳ್ಳಬಹುದು. ಈ ನಡುವೆ ಹಿರಿಯ ನಾಗರಿಕರಿಗಳು ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್‌) ಅಥವಾ ಪ್ರಧಾನ ಮಂತ್ರಿ ವಯ ವಂದನ ಯೋಜನೆ (ಪಿಎಂವಿವಿವೈ) ನಂತಹ ಜನಪ್ರಿಯ ಯೋಜನೆಗಳಲ್ಲಿ ಶೇಕಡ 7.40 ಬಡ್ಡಿದರದೊಂದಿಗೆ ಹೂಡಿಕೆ ಮಾಡಬಹುದು. ಇಲ್ಲಿ ಯಾವುದೇ ಹಣದುಬ್ಬರದ ಪ್ರಭಾವ ಇರುವುದಿಲ್ಲ. ಆದರೆ ಬಡ್ಡಿದರದಲ್ಲಿ ಆಗುವ ಬದಲಾವಣೆಯ ಅಪಾಯವಿದೆ. ಇದು ಆರ್ಥಿಕತೆ ಹಾಗೂ ಆರ್‌ಬಿಐ ನೀತಿಗಳಿಂದ ಪ್ರಭಾವಿತವಾಗಿರುತ್ತದೆ. ಆದ್ದರಿಂದ ಆರ್‌ಬಿಐ ರೆಪೊ ದರವನ್ನು ಕೇವಲ ಶೇಕಡ 4 ರಲ್ಲಿ ಇರಿಸಿರುವ ಅಲ್ಪಾವಧಿ ಫಿಕ್ಸಿಡ್‌ ಡೆಪಾಸಿಟ್‌ಗೆ ನೀವು ಹೂಡಿಕೆ ಮಾಡುವುದು ಉತ್ತಮ.

English summary

SBI FD Vs Post Office FD: Where Should You Invest?, Explained in Kannada

State Bank of India Fixed Deposit Vs Post Office Fixed Deposit: Where Should You Invest?, Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X