For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಗ್ರಾಹಕರಿಗೆ ಸಿಹಿಸುದ್ದಿ: ಎಫ್‌ಡಿ ಮೇಲಿನ ಬಡ್ಡಿದರ ಹೆಚ್ಚಳ

|

ತನ್ನ ಗ್ರಾಹಕರಿಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಿಹಿಸುದ್ದಿಯನ್ನು ನೀಡಿದೆ. ಪ್ರಮುಖವಾಗಿ ಬ್ಯಾಂಕ್‌ನಲ್ಲಿ ಫಿಕ್ಸಿಡ್‌ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡಿರುವ ಎಸ್‌ಬಿಐ ಗ್ರಾಹಕರಿಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಅದ್ಭುತ ಸುದ್ದಿಯನ್ನು ನೀಡಿದೆ. ಬ್ಯಾಂಕ್ ಸ್ಥಿರ ಠೇವಣಿ (ಎಫ್‌ಡಿ) ಮೇಲಿನ ಬಡ್ಡಿದರಗಳನ್ನು 10 ಬೇಸಿಸ್ ಪಾಯಿಂಟ್‌ಗಳವರೆಗೆ ಅಥವಾ ಶೇಕಡಾ 0.10 ರಷ್ಟು ಹೆಚ್ಚಿಸಿದೆ ಎಂದು ಶನಿವಾರ ಹೇಳಿದೆ.

 

ಇನ್ನು ಈ ಬಗ್ಗೆ ಹೆಚ್ಚಿನ ವಿವರವನ್ನು ನೀಡಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, "ಎಸ್‌ಬಿಐ 1 ವರ್ಷದ ಅವಧಿಯ ಅಥವಾ 2 ವರ್ಷಕ್ಕಿಂತ ಕಡಿಮೆ ಅವಧಿಯ ಫಿಕ್ಸಿಡ್‌ ಡೆಪಾಸಿಟ್‌ ಮೇಲಿನ ಬಡ್ಡಿ ದರವನ್ನು 5.0 ರಿಂದ ಶೇಕಡಾ 5.1 ಕ್ಕೆ ಹೆಚ್ಚಿಸಿದೆ," ಎಂದು ಹೇಳಿದೆ.

ಎಫ್‌ಡಿ ಮೇಲಿನ ಮೂಲದರ, ಬಡ್ಡಿದರ ಹೆಚ್ಚಳ ಮಾಡಿದ ಎಸ್‌ಬಿಐ

ಆದರೂ ಹಿರಿಯ ನಾಗರಿಕರಿಗೆ, 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯ ಫಿಕ್ಸಿಡ್‌ ಡೆಪಾಸಿಟ್‌ ಮೇಲಿನ ದರವನ್ನು ಶೇ 5.50 ರಿಂದ 5.60 ಕ್ಕೆ ಹೆಚ್ಚಿಸಲಾಗಿದೆ ಎಂದು ಎಸ್‌ಬಿಐ ವೆಬ್‌ಸೈಟ್ ಉಲ್ಲೇಖ ಮಾಡಿದೆ. ಇನ್ನು ಇತರೆ ಅವಧಿಯ ಫಿಕ್ಸಿಡ್‌ ಡೆಪಾಸಿಟ್‌ ಮೇಲಿನ ಬಡ್ಡಿ ದರಗಳು ಬದಲಾಗದೆ ಉಳಿದಿವೆ.

 ಎಸ್‌ಬಿಐ ಗ್ರಾಹಕರಿಗೆ ಸಿಹಿಸುದ್ದಿ: ಎಫ್‌ಡಿ ಮೇಲಿನ ಬಡ್ಡಿದರ ಹೆಚ್ಚಳ

2 ಕೋಟಿಗಿಂತ ಕಡಿಮೆ ಮೊತ್ತದ ಫಿಕ್ಸಿಡ್‌ ಡೆಪಾಸಿ‌ಟ್‌ಗಳಿಗೆ ಬಡ್ಡಿ ದರ ಅನ್ವಯವಾಗಲಿದ್ದು, ಪರಿಷ್ಕೃತ ದರವು ಜನವರಿ 15, 2022 ರಿಂದ ಜಾರಿಗೆ ಬರುತ್ತದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಹೇಳಿದೆ. ಪ್ರಸ್ತುತ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ 5-10 ವರ್ಷಗಳ ಅವಧಿಯ ಫಿಕ್ಸಿಡ್‌ ಡೆಪಾಸಿಟ್‌ನಲ್ಲಿ 5.40 ಪ್ರತಿಶತದಷ್ಟು ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ, ಎಸ್‌ಬಿಐ 5 ವರ್ಷದಿಂದ ಮತ್ತು 10 ವರ್ಷಗಳವರೆಗಿನ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರವನ್ನು ಶೇಕಡಾ 6.20 ಕ್ಕೆ ನೀಡುತ್ತದೆ. ಕನಿಷ್ಠ ಎರಡು ವರ್ಷಗಳಿಂದ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯ ಫಿಕ್ಸಿಡ್‌ ಡೆಪಾಸಿಟ್‌ಗಳ ಬಡ್ಡಿ ದರವು ಶೇಕಡ 5.10 ಆಗಿದೆ. 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಯ ಫಿಕ್ಸಿಡ್‌ ಡೆಪಾಸಿಟ್‌ ದರವು ಶೇಕಡ 5.30 ಆಗಿದೆ.

 

ಡಿ.1ರಿಂದ ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಇಎಂಐ ವಹಿವಾಟಿಗೆ ಶುಲ್ಕ

ಕಳೆದ ತಿಂಗಳು ಬಡ್ಡಿದರ ಹೆಚ್ಚಳ ಮಾಡಿದ್ದ ಎಸ್‌ಬಿಐ

ಕಳೆದ ತಿಂಗಳು ದೇಶದ ಸರ್ಕಾರಿ ಸ್ವಾಮ್ಯದ ಅತೀ ದೊಡ್ಡ ಬ್ಯಾಂಕ್‌ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮೂಲ ದರ ಶೇಕಡ 0.10 ರಷ್ಟು ಅಥವಾ ಹತ್ತು ಬೇಸಿಸ್‌ ಪಾಯಿಂಟ್‌‌ (ಬಿಪಿಎಸ್‌) ರಷ್ಟು ಏರಿಕೆ ಮಾಡಿದೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ ಮೂಲ ದರವನ್ನು ಇಳಿಕೆ ಮಾಡಿದ್ದವು. ಐದು ಬೇಸಿಸ್‌ ಪಾಯಿಂಟ್‌ ರಷ್ಟು ಇಳಿಕೆ ಮಾಡಿದ್ದವು. ಈ ಹೊಸ ಬಡ್ಡಿ ದರವು ಹೊಸ ಫಿಕ್ಸಿಡ್‌ ಡೆಪಾಸಿಟ್‌ಗಳಿಗೆ ಮಾತ್ರವಲ್ಲದೇ ಈಗಾಗಲೇ ಮೆಚ್ಯೂರ್‌ ಆಗಿರುವ ಫಿಕ್ಸಿಡ್‌ ಡೆಪಾಸಿಟ್‌ ಅನ್ನು ರಿನೀವಲ್‌ ಮಾಡಿದರೆ ಅನ್ವಯ ಆಗಲಿದೆ. ಈ ಬಡ್ಡಿ ದರವು ಸ್ಥಳೀಯ ಟರ್ಮ್ ಡೆಪಾಸಿಟ್‌ಗೂ ಅ‌ನ್ವಯ ಆಗಲಿದೆ.

ಕೇಂದ್ರ ಬಜೆಟ್‌ ಅಧಿವೇಶನ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ತಮ್ಮ ನಾಲ್ಕನೇ ಬಜೆಟ್ ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಅದಕ್ಕೆ ಇನ್ನು ಕೆಲವೇ ವಾರಗಳು ಇದೆ. ಈ ನಡುವೆ 2022 ರ ಬಜೆಟ್‌ನಲ್ಲಿ ಏನೆಲ್ಲಾ ಘೋಷಣೆ ಆಗಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರತಿ ವರ್ಷದಂತೆ ಈ ವರ್ಷದ ಬಜೆಟ್‌ನಿಂದಲೂ ತೆರಿಗೆದಾರರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. 2022 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತೆರಿಗೆದಾರರಿಗೆ ಗರಿಷ್ಠ ಸಡಿಲಿಕೆಯನ್ನು ನೀಡಲು ಕೇಂದ್ರವು ಗಮನಹರಿಸುತ್ತಿದೆ. ಸಂಬಳ ಪಡೆಯುವ ವರ್ಗಕ್ಕೆ ಹಲವಾರು ಒಳ್ಳೆಯ ಸುದ್ದಿಗಳನ್ನು ಕೇಂದ್ರ ಬಜೆಟ್ ನೀಡುವ ನಿರೀಕ್ಷೆ ಇದೆ.

English summary

SBI Hikes Interest Rates On FDs By Up To 10 Basis Points

State Bank Of India Hikes Interest Rates On Fixed Deposits By Up To 10 Basis Points.
Story first published: Sunday, January 16, 2022, 15:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X