For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಗ್ರಾಹಕರೆ ಗಮನಿಸಿ: ಸಾಲದ ಬಡ್ಡಿದರ ಏರಿಕೆ, ಮಾಸಿಕ ಬಜೆಟ್‌ಗೆ ಇಎಂಐ ಕತ್ತರಿ

|

ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಲು ಆರಂಭ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಲವಾರು ಅವಧಿಯ ಸಾಲದ ಬಡ್ಡಿದರದಲ್ಲಿ 20 ಮೂಲಾಂಕ ಹೆಚ್ಚಳ ಮಾಡಿದೆ. ಹೊಸ ಬಡ್ಡಿದರವು ಇಂದಿನಿಂದಲೇ (ಜೂನ್ 15) ಜಾರಿಗೆ ಬರಲಿದೆ ಎಂದು ಬ್ಯಾಂಕ್ ತಿಳಿಸಿದೆ.

 

ಜೂನ್ 15ರಿಂದ ಎಸ್‌ಬಿಐ ಓವರ್‌ನೈಟ್, ಮಾಸಿಕ, ತ್ರೈಮಾಸಿಕ ಅವಧಿಯ ಬಡ್ಡಿದರವನ್ನು ಶೇಕಡ 7.05ಕ್ಕೆ ಏರಿಕೆ ಮಾಡಿದೆ. ಈ ಹಿಂದಿನ ಬಡ್ಡಿದರವು ಶೇಕಡ 6.85 ಆಗಿತ್ತು. ಇನ್ನು ಆರು ತಿಂಗಳ ಅವಧಿಯ ಬಡ್ಡಿದರವು ಶೇಕಡ 7.35ಕ್ಕೆ ಏರಿಕೆಯಾಗಲಿದೆ. ಈ ಹಿಂದೆ ಆರು ತಿಂಗಳ ಅವಧಿಯ ಬಡ್ಡಿದರವು ಶೇಕಡ 7.15 ಆಗಿತ್ತು. ಇದೇ ಸಂದರ್ಭದಲ್ಲಿ ಒಂದು ವರ್ಷದ ಸಾಲದ ಬಡ್ಡಿದರವು ಶೇಕಡ 7.40ಕ್ಕೆ ಏರಿದೆ. ಈ ಹಿಂದೆ ಶೇಕಡ 7.20 ಆಗಿತ್ತು.

 ಸಾಲದ ಬಡ್ಡಿದರ ಹೆಚ್ಚಿಸಿದ ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್: ಇಎಂಐ ಇನ್ನು ದುಬಾರಿ ಸಾಲದ ಬಡ್ಡಿದರ ಹೆಚ್ಚಿಸಿದ ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್: ಇಎಂಐ ಇನ್ನು ದುಬಾರಿ

ಇನ್ನು ಎರಡು ವರ್ಷದ ಅವಧಿಯ ಬಡ್ಡಿದರವು ಶೇಕಡ 7.60ಗೆ ಏರಿಕೆಯಾಗಿದೆ. ಈ ಹಿಂದೆ ಶೇಕಡ 7.40 ಆಗಿತ್ತು. ಇನ್ನು ಮೂರು ವರ್ಷಗಳ ಬಡ್ಡಿದರವು ಶೇಕಡ 7.70ಕ್ಕೆ ಏರಿದೆ. ಈ ಹಿಂದಿನ ಬಡ್ಡಿದರವು ಶೇಕಡ 7.50 ಆಗಿತ್ತು. ರೆಪೋ ದರವನ್ನು ಆರ್‌ಬಿಐ ಏರಿಕೆ ಮಾಡುವ ಮುನ್ನವೇ ಕೆಲವು ಬ್ಯಾಂಕುಗಳು ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಈ ನಡುವೆ ಈಗ ಎಸ್‌ಬಿಐ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಎಸ್‌ಬಿಐನ ಗೃಹ ಸಾಲ, ವೈಯಕ್ತಿಕ ಸಾಲ, ಆಟೋ ಸಾಲ ಮೊದಲಾದ ಸಾಲದ ಬಡ್ಡಿದರ ಎಷ್ಟಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..

 ಗೃಹ ಸಾಲದ ಬಡ್ಡಿದರವೆಷ್ಟು?

ಗೃಹ ಸಾಲದ ಬಡ್ಡಿದರವೆಷ್ಟು?

ಎಸ್‌ಬಿಐನ ಗೃಹ ಸಾಲದ ಬಡ್ಡಿದರವು ಶೇಕಡ 7.05ರಿಂದ ಶೇಕಡ 7.55ರ ನಡುವೆ ವ್ಯತ್ಯಯವಾಗುತ್ತದೆ. ಈ ಬಡ್ಡಿದರವು ಸಿಬಿಲ್ ಸ್ಕೋರ್ ಆಧಾರದಲ್ಲಿ ಬದಲಾವಣೆಯಾಗುತ್ತದೆ. ಈ ತಿಂಗಳ ಆರಂಭದಲ್ಲಿ ಎಸ್‌ಬಿಐ ಗೃಹ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಪ್ರಸ್ತುತ 800 ಅಥವಾ ಅದಕ್ಕಿಂತ ಅಧಿಕ ಸಿಬಿಲ್ ಸ್ಕೋರ್ ಹೊಂದಿರುವವರಿಗೆ ಸಾಮಾನ್ಯ ಗೃಹ ಸಾಲದ ಮೇಲೆ ಶೇಕಡ 7.05ರಷ್ಟು ಬಡ್ಡಿದರವಾಗಿದೆ. ಈ ಸಂದರ್ಭದಲ್ಲೇ 750-799 ಸಿಬಿಲ್ ಸ್ಕೋರ್ ಇದ್ದರೆ ಶೇಕಡ 7.15 ಬಡ್ಡಿದರವಾಗಲಿದೆ. 700-749 ಸಿಬಿಲ್ ಸ್ಕೋರ್ ಆಗಿದ್ದರೆ, ಶೇಕಡ 7.25ರಷ್ಟು ಬಡ್ಡಿದರವಾಗಲಿದೆ. 650-699 ಸಿಬಿಲ್ ಸ್ಕೋರ್ ಹೊಂದಿರುವವರಿಗೆ ಶೇಕಡ 7.35ರಷ್ಟು ಆಗಿದೆ. 550-649 ಸಿಬಿಲ್ ಸ್ಕೋರ್ ಹೊಂದಿರುವವರಿಗೆ ಶೇಕಡ 7.55ರಷ್ಟು ಬಡ್ಡಿದರವಿದೆ. ಇನ್ನು ಮಹಿಳೆಯರಿಗೆ 5 ಕಡಿಮೆ ಮೂಲಾಂಕದಲ್ಲಿ ಲಭ್ಯವಾಗಲಿದೆ.

 ಕಾರು, ಆಟೋ ಸಾಲಗಳ ಬಡ್ಡಿದರ ಎಷ್ಟಿದೆ?
 

ಕಾರು, ಆಟೋ ಸಾಲಗಳ ಬಡ್ಡಿದರ ಎಷ್ಟಿದೆ?

ಕಾರು ಸಾಲ, ಎನ್‌ಆರ್‌ಐ ಕಾರು ಸಾಲಕ್ಕೆ ಎಸ್‌ಬಿಐ ಬ್ಯಾಂಕ್ ಶೇಕಡ 7.45ರಿಂದ ಶೇಕಡ 8.15ರವರೆಗೆ ಬಡ್ಡಿದರವನ್ನು ವಿಧಿಸುತ್ತದೆ. 757 ಹಾಗೂ ಅದಕ್ಕಿಂತ ಅಧಿಕ ಸಿಬಿಲ್ ಸ್ಕೋರ್ ಹೊಂದಿರುವವರಿಗೆ, 3-5 ವರ್ಷಗಳ ಸಾಲಕ್ಕೆ ಎಸ್‌ಬಿಐ ಶೇಕಡ 7.45ಬಡ್ಡಿದರವನ್ನು ವಿಧಿಸುತ್ತದೆ. ಅದೇ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ 5 ವರ್ಷಗಳ ಅವಧಿಗೆ ಶೇಕಡ 7.55ರಷ್ಟು ಬಡ್ಡಿದರವನ್ನು ವಿಧಿಸುತ್ತದೆ. ಇನ್ನು ಕಾರು ಖರೀದಿ ಸಾಲವಾದರೆ 721-756 ಸಿಬಿಲ್ ಸ್ಕೋರ್ ಹೊಂದಿರುವವರಿಗೆ 5 ವರ್ಷಕ್ಕಿಂತ ಅಧಿಕ ಅವಧಿಗೆ ಶೇಕಡ 7.80 ಬಡ್ಡಿದರ, 3-5 ವರ್ಷಕ್ಕಿಂತ ಅಧಿಕ ಅವಧಿಗೆ ಶೇಕಡ 7.70ರಷ್ಟು ಬಡ್ಡಿದರವನ್ನು ವಿಧಿಸುತ್ತದೆ.

ಸಿಬಿಲ್ ಸ್ಕೋರ್ 689-720 ಆಗಿದ್ದರೆ 3-5 ಅವಧಿ ಸಾಲಕ್ಕೆ 7.95 ಬಡ್ಡಿದರ ವಿಧಿಸುತ್ತದೆ. ಅದೇ 5 ವರ್ಷಕ್ಕಿಂತ ಅಧಿಕ ಅವಧಿಯ ಸಾಲಕ್ಕೆ ಶೇಕಡ 8.05ರಷ್ಟು ಬಡ್ಡಿದರವನ್ನು ವಿಧಿಸುತ್ತದೆ. ಕ್ರೆಡಿಟ್ ಸ್ಕೋರ್ 606-688 ಆಗಿದ್ದರೆ, 3-5 ಅವಧಿ ಸಾಲಕ್ಕೆ 8.05 ಬಡ್ಡಿದರ, 5 ವರ್ಷಕ್ಕಿಂತ ಅಧಿಕ ಅವಧಿಯ ಸಾಲಕ್ಕೆ ಶೇಕಡ 8.15 ಬಡ್ಡಿದರವಾಗಿದೆ. ಒಂದಕ್ಕಿಂತ ಕಡಿಮೆ ಸಿಬಿಲ್ ಸ್ಕೋರ್ ಹೊಂದಿರುವರಿಗೆ (ಸಾಮಾನ್ಯವಾಗಿ ಮೊದಲ ಬಾರಿಗೆ ಸಾಲ ಪಡೆಯುವವರು) ಶೇಕಡ 7.45ರಿಂದ ಶೇಕಡ 7.80ರವರೆಗೆ ಬಡ್ಡಿದರವನ್ನು ವಿಧಿಸುತ್ತದೆ. ಮಹಿಳೆಯರಿಗೆ 606-688 ಕ್ರೆಡಿಟ್ ಸ್ಕೋರ್ ಹೊಂದಿದ್ದರೆ 5 ಮೂಲಾಂಕ ವಿನಾಯಿತಿ ಲಭ್ಯವಾಗಲಿದೆ. ಇನ್ನು ಎಲೆಕ್ಟ್ರಾನಿಕ್ ಕಾರುಗಳ ಮೇಲೆ ಶೇಕಡ 7.25ರಿಂದ ಶೇಕಡ 7.60ರಷ್ಟು ಬಡ್ಡಿದರವಿರಲಿದೆ. ದ್ವಿಚಕ್ರ ವಾಹನದ ಮೇಲೆ ವಾರ್ಷಿಕವಾಗಿ ಶೇಕಡ 16.45ರಿಂದ ಶೇಕಡ 18.20ರಷ್ಟು ಇರಲಿದೆ.

 

 ವೈಯಕ್ತಿಕ ಸಾಲಕ್ಕೆ ಎಷ್ಟಿದೆ ಬಡ್ಡಿದರ?

ವೈಯಕ್ತಿಕ ಸಾಲಕ್ಕೆ ಎಷ್ಟಿದೆ ಬಡ್ಡಿದರ?

ವೈಯಕ್ತಿಕ ಸಾಲದ ಮೇಲೆ ಎಸ್‌ಬಿಐ ಹಲವಾರು ಯೋಜನೆಗಳನ್ನು ಹೊಂದಿದ್ದು, ಇದರ ಬಡ್ಡಿದರ ಯೋಜನೆಗೆ ತಕ್ಕಂತೆ ಬದಲಾವಣೆ ಆಗುತ್ತದೆ. ಪೊಲೀಸ್, ಇಂಡಿಯನ್ ಕೋಸ್ಟ್ ಗಾರ್ಡ್, ಸೈನ್ಯದವರು ಶೇಕಡ 9.80ರಿಂದ ಶೇಕಡ 11.30ರ ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಪೊಲೀಸ್, ರೈಲ್ವೇ ಸಿಬ್ಬಂದಿಗಳಿಗೆ ಸಾಲದ ಮೇಲಿನ ಬಡ್ಡಿದರವು ಶೇಕಡ 9.80ರಿಂದ ಶೇಕಡ 12.30ರ ನಡುವೆ ಇರಲಿದೆ. ಇನ್ನು ಇತರೆ ಕೋ ಆಪರೇಟಿವ್ ವಿಭಾಗದಲ್ಲಿ ಕಾರ್ಯ ನಿರ್ವಹಣೆ ಮಾಡುವವರು ಅರ್ಜಿ ಸಲ್ಲಿಸಿದರೆ ಶೇಕಡ 10.80ರಿಂದ ಶೇಕಡ 12.30ರ ನಡುವೆ ಬಡ್ಡಿದರವಿರಲಿದೆ. ಎಸ್‌ಬಿಐನ್ಲಲಿಯೇ ವೇತನದ ಖಾತೆ (salary accounts) ಇದ್ದರೆ ಅದಕ್ಕೆ ಶೇಕಡ 9.80ರಿಂದ ಶೇಕಡ 11.30 ಬಡ್ಡಿದರವಿರಲಿದೆ. ಬೇರೆ ಬ್ಯಾಂಕ್‌ನಲ್ಲಿ ಸ್ಯಾಲರಿ ಅಕೌಂಟ್ ಇದ್ದರೆ ಸಾಲದ ಬಡ್ಡಿದರವು ಶೇಕಡ 10.05ರಿಂದ ಶೇಕಡ 11.55ರ ನಡುವೆ ಇರಲಿದೆ.

 ಸಾಲದ ಬಡ್ಡಿದರ ಇನ್ನೂ ಏರಿಕೆ ಸಾಧ್ಯತೆ, ಕಾರಣವೇನು?

ಸಾಲದ ಬಡ್ಡಿದರ ಇನ್ನೂ ಏರಿಕೆ ಸಾಧ್ಯತೆ, ಕಾರಣವೇನು?

ತಜ್ಞರ ಪ್ರಕಾರ ಹಣದುಬ್ಬರವು ಇನ್ನೂ ನಿಯಂತ್ರಣಕ್ಕೆ ಬಾರದೆ ಇರುವ ಕಾರಣದಿಂದಾಗಿ ಆರ್‌ಬಿಐ ರೆಪೋ ದರವನ್ನು ಮತ್ತಷ್ಟು ಏರಿಕೆ ಮಾಡಬಹುದು. ಇದರಿಂದಾಗಿ ಸಾಲದ ಬಡ್ಡಿದರವು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಪ್ರಸ್ತುತ ಸಾಲವನ್ನು ಪಡೆಯುವುದಕ್ಕೆ ಸೂಕ್ತ ಸಮಯ ಅಲ್ಲ ಎಂದು ತಜ್ಞರು ಹೇಳುತ್ತಾರೆ. ಆದರೆ ತೀರಾ ಅಗತ್ಯವಿದ್ದರೆ ಯಾವ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಾಗಲಿದೆ ಎಂದು ಪರಿಶೀಲನೆ ಮಾಡಿ ಬಳಿಕ ಸಾಲವನ್ನು ಪಡೆದುಕೊಳ್ಳಿ ಎಂದು ಕೂಡಾ ತಜ್ಞರು ಸಲಹೆ ನೀಡಿದ್ದಾರೆ.

English summary

SBI hikes lending rates by 20 bps from 15 June, EMIs to Increase

State Bank of India (SBI) raised the lending rates by 20 basis points on various tenures. The new lending rates will come into effect from June 15. MCLR rate hike hits borrowers' pockets as monthly instalments (EMIs) tend to rise as well.
Story first published: Wednesday, June 15, 2022, 12:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X