For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಸಾಲದ ದರ ಮತ್ತೆ ಹೆಚ್ಚಳ: ಇಎಂಐ ಮತ್ತೆ ಏರಿಕೆ

|

ದೇಶದ ಪ್ರಮುಖ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಬೆಂಚ್‌ಮಾರ್ಕ್ ಸಾಲದ ದರವನ್ನು ಹೆಚ್ಚಳ ಮಾಡಿದೆ. ಎಸ್‌ಬಿಐ ಸಾಲದ ದರವನ್ನು 50 ಮೂಲಾಂಕ ಏರಿಕೆ ಮಾಡಿದೆ. ಇದರಿಂದಾಗಿ ಶೀಘ್ರದಲ್ಲೇ ಎಸ್‌ಬಿಐ ಗೃಹ ಸಾಲದ ಮೇಲಿನ ಬಡ್ಡಿದರವು ಅಧಿಕವಾಗಲಿದೆ.

ದೇಶದಲ್ಲಿ ಹೆಚ್ಚಾಗಿರುವ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ವಿತ್ತೀಯ ನೀತಿಯಲ್ಲಿ ಬದಲಾವಣೆಯನ್ನು ತಂದಿದೆ. ಮೂರನೇ ಬಾರಿಗೆ ಆರ್‌ಬಿಐ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಈ ಬೆನ್ನಲ್ಲೇ ಎಸ್‌ಬಿಐ ತನ್ನ ಸಾಲದ ಬಡ್ಡಿದರವನ್ನು ಅಧಿಕ ಮಾಡಿದೆ.

Breaking: ರೆಪೋ ದರ ಮತ್ತೆ 50 ಮೂಲಾಂಕ ಏರಿಸಿದ ಆರ್‌ಬಿಐBreaking: ರೆಪೋ ದರ ಮತ್ತೆ 50 ಮೂಲಾಂಕ ಏರಿಸಿದ ಆರ್‌ಬಿಐ

ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್-ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು ಎಸ್‌ಬಿಐ ಅಧಿಕ ಮಾಡಿದೆ. ಎಲ್ಲಾ ಅವಧಿಗಳ ಸಾಲಕ್ಕೆ ಎಂಸಿಎಲ್‌ಆರ್‌ ಅನ್ನು ಎಸ್‌ಬಿಐ 20 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಎಕ್ಸ್‌ಟರ್ನಲ್ ಬೆಂಚ್‌ಮಾರ್ಕ್ ಬೇಸ್ಡ್ ಲೆಂಡಿಂಗ್ ರೇಟ್ (ಇಬಿಎಲ್‌ಆರ್) ಮತ್ತು ರೆಪೊ-ಲಿಂಕ್ಡ್ ಲೆಂಡಿಂಗ್ ರೇಟ್ (ಆರ್‌ಎಲ್‌ಎಲ್‌ಆರ್) ಅನ್ನು ಎಸ್‌ಬಿಐ 50 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಸಿದೆ.

ಎಸ್‌ಬಿಐ ಸಾಲದ ದರ ಮತ್ತೆ ಹೆಚ್ಚಳ: ಇಎಂಐ ಮತ್ತೆ ಏರಿಕೆ

ಎಂದಿನಿಂದ ಈ ಹೊಸ ದರ ಜಾರಿ?

ಎಸ್‌ಬಿಐ ವೆಬ್‌ಸೈಟ್ ಪ್ರಕಾರ, ಈ ಹೊಸ ದರವು ಆಗಸ್ಟ್ 15 ರಿಂದ ಅನ್ವಯವಾಗುತ್ತವೆ. ಎಸ್‌ಬಿಐನ ಆರ್‌ಎಲ್‌ಎಲ್‌ಆರ್ 50 ಬೇಸಿಸ್ ಪಾಯಿಂಟ್‌ ಏರಿಕೆಯಾದ ಬಳಿಕ ಶೇಕಡ 7.65ಕ್ಕೆ ತಲುಪಿದೆ. ಇನ್ನು ಇಬಿಎಲ್‌ಆರ್ ಶೇಕಡಾ 8.05ರಷ್ಟು ಅಧಿಕವಾಗಿದೆ. ಚಿನ್ನ, ಆಸ್ತಿ ಅಡವಿಟ್ಟು ಸಾಲ ನೀಡುವಾಗ, ವಾಹನ ಸಾಲ ಸೇರಿದಂತೆ ಯಾವುದೇ ರೀತಿಯ ಸಾಲವನ್ನು ನೀಡುವಾಗ, ಬ್ಯಾಂಕ್‌ಗಳು ಇಬಿಎಲ್‌ಆರ್ ಮತ್ತು ಆರ್‌ಎಲ್‌ಎಲ್‌ಆರ್ ಮೇಲೆ ಕ್ರೆಡಿಟ್ ರಿಸ್ಕ್ ಪ್ರೀಮಿಯಂ (ಸಿಆರ್‌ಪಿ) ಅನ್ನು ಸೇರಿಸುತ್ತದೆ.

ರೆಪೋ ದರ ಏರಿಕೆ: ಗೃಹ ಸಾಲದ ಇಎಂಐ ಎಷ್ಟಾಗಲಿದೆ?ರೆಪೋ ದರ ಏರಿಕೆ: ಗೃಹ ಸಾಲದ ಇಎಂಐ ಎಷ್ಟಾಗಲಿದೆ?

ಈ ಬಡ್ಡಿದರ ಪರಿಷ್ಕರಣೆಯ ಬಳಿಕ ಒಂದು ವರ್ಷದ 7.50 ರಿಂದ 7.70ಕ್ಕೆ ಏರಿಕೆಯಾಗಿದ್ದರೆ, ಎರಡು ಮತ್ತು ಮೂರು ವರ್ಷದ ಎಂಸಿಎಲ್‌ಆರ್ ಕ್ರಮವಾಗಿ ಶೇಕಡ 7.90 ರಿಂದ 7.90ಕ್ಕೆ ಮತ್ತು ಶೇಕಡ 8ರಿಂದ 8ಕ್ಕೆ ತಲುಪಿದೆ. ಹೆಚ್ಚಿನ ಸಾಲಗಳು ಒಂದು ವರ್ಷದ ಎಂಸಿಎಲ್‌ಆರ್ ದರವನ್ನು ಆಧರಿಸಿವೆ. ಬಡ್ಡಿದರಗಳ ಏರಿಕೆಯಿಂದಾಗಿ, ಎಂಸಿಎಲ್‌ಆರ್, ಇಬಿಎಲ್‌ಆರ್ ಅಥವಾ ಆರ್‌ಎಲ್‌ಎಲ್‌ಆರ್ ಆಧಾರಿತ ಸಾಲವನ್ನು ಹೊಂದಿರುವವರು ತಮ್ಮ ಮಾಸಿಕ ಪಾವತಿಗಳಲ್ಲಿ ಹೆಚ್ಚಳವನ್ನು ಕಾಣುತ್ತಾರೆ.

English summary

SBI hikes lending rates by 50 bps from 15 June, EMIs to Increase

State Bank of India (SBI) raised the lending rates by 50 basis points on various tenures. MCLR rate hike hits borrowers' pockets as monthly instalments (EMIs) tend to rise as well.
Story first published: Tuesday, August 16, 2022, 13:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X