For Quick Alerts
ALLOW NOTIFICATIONS  
For Daily Alerts

ಯೋನೋದಲ್ಲಿ ರಿಯಲ್-ಟೈಮ್ ಎಕ್ಸ್‌ಪ್ರೆಸ್ ಕ್ರೆಡಿಟ್ ಪರಿಚಯಿಸಿದ ಎಸ್‌ಬಿಐ, ಏನಿದು?

|

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಯೋನೋ ಆಪ್‌ನಲ್ಲಿ ರಿಯಲ್-ಟೈಮ್ ಎಕ್ಸ್‌ಪ್ರೆಸ್ ಕ್ರೆಡಿಟ್ (ಆರ್‌ಟಿಎಕ್ಸ್‌ಸಿ) ಅನ್ನು ಆರಂಭ ಮಾಡಿದೆ.

 

Xpress Credit ಎಂಬುದು ಸಂಬಳ ಪಡೆಯುವ ಗ್ರಾಹಕರಿಗೆ ಬ್ಯಾಂಕ್‌ನ ವೈಯಕ್ತಿಕ ಸಾಲ ಪಡೆಯಲು ಅವಕಾಶ ನೀಡುವ ವೇದಿಕೆಯಾಗಿದೆ. ಇದು ಡಿಜಿಟಲ್ ರೂಪದಲ್ಲಿ ಲಭ್ಯವಿರುತ್ತದೆ. ಅರ್ಹ ಗ್ರಾಹಕರು ಈಗ ಯಾವುದೇ ದಾಖಲೆಗಳಿಲ್ಲದೆ ಯೋನೋ ಮೂಲಕ ರೂಪಾಯಿ 35 ಲಕ್ಷದವರೆಗಿನ ವೈಯಕ್ತಿಕ ಸಾಲಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಎಸ್‌ಬಿಐ ಹೇಳಿದೆ.

ಎಸ್‌ಬಿಐ ಗ್ರಾಹಕರೇ ಗಮನಿಸಿ: ಈ ಕೆಲಸ ಮಾಡದಿದ್ದರೆ ದಂಡ!, ಇಲ್ಲಿದೆ ವಿವರ

"ರಿಯಲ್-ಟೈಮ್ ಎಕ್ಸ್‌ಪ್ರೆಸ್ ಕ್ರೆಡಿಟ್ ಅಡಿಯಲ್ಲಿ, ಬ್ಯಾಂಕ್‌ನ ಕೇಂದ್ರ/ರಾಜ್ಯ ಸರ್ಕಾರ ಮತ್ತು ರಕ್ಷಣಾ ಸಂಬಳ ಪಡೆಯುವ ಗ್ರಾಹಕರು ಇನ್ನು ಮುಂದೆ ವೈಯಕ್ತಿಕ ಸಾಲವನ್ನು ಪಡೆಯಲು ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ," ಎಂದು ಬ್ಯಾಂಕ್ ಮಾಹಿತಿ ನೀಡಿದೆ.

 ಯೋನೋದಲ್ಲಿ ರಿಯಲ್-ಟೈಮ್ ಎಕ್ಸ್‌ಪ್ರೆಸ್ ಕ್ರೆಡಿಟ್ ಪರಿಚಯಿಸಿದ ಎಸ್‌ಬಿ

ಬ್ಯಾಂಕ್‌ಗೆ ಭೇಟಿ ನೀಡಿದೆ ಸಾಲ ಲಭ್ಯ

ರಿಯಲ್-ಟೈಮ್ ಎಕ್ಸ್‌ಪ್ರೆಸ್ ಕ್ರೆಡಿಟ್ ಅಡಿಯಲ್ಲಿ, ಎಸ್‌ಬಿಐನ ಸಂಬಳ ಪಡೆಯುವ ಗ್ರಾಹಕರು ಇನ್ನು ಮುಂದೆ ವೈಯಕ್ತಿಕ ಸಾಲವನ್ನು ಪಡೆಯಲು ಶಾಖೆಗೆ ಭೇಟಿ ನೀಡಬೇಕಾಗಿಲ್ಲ. "ಕ್ರೆಡಿಟ್ ಚೆಕ್‌ಗಳು, ಅರ್ಹತೆ, ಮಂಜೂರಾತಿ ಮತ್ತು ದಾಖಲಾತಿಗಳನ್ನು ಈಗ ರಿಯಲ್-ಟೈಮ್‌ನಲ್ಲಿ ಡಿಜಿಟಲ್‌ ಮೂಲಕ ನಿರ್ವಹಣೆ ಮಾಡಲಾಗುತ್ತದೆ," ಎಂದು ಕೂಡಾ ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತಿಳಿಸಿದೆ.

ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ, ಕ್ಸ್‌ಪ್ರೆಸ್ ಕ್ರೆಡಿಟ್ ಉತ್ಪನ್ನವು ಬ್ಯಾಂಕ್‌ನ ಗ್ರಾಹಕರಿಗೆ ಡಿಜಿಟಲ್, ತೊಂದರೆ-ಮುಕ್ತ ಮತ್ತು ಕಾಗದರಹಿತ ಸಾಲ ಪ್ರಕ್ರಿಯೆಗೆ ಅವಕಾಶ ಮಾಡಿಕೊಡುತ್ತದೆ ಎಂದು ವಿವರಿಸಿದ್ದಾರೆ.

ಸಾಲ ಪಡೆಯಲು ಅರ್ಹತೆ ಏನು?

* ಎಸ್‌ಬಿಐನಲ್ಲಿ ಸ್ಯಾಲರಿ ಅಕೌಂಟ್ ಹೊಂದಿರುವ ವ್ಯಕ್ತಿಗಳು ಆಗಿರಬೇಕು
* ಕನಿಷ್ಠ ಮಾಸಿಕ ಆದಾಯ 15,000 ರೂಪಾಯಿ ಆಗಿರಬೇಕು
* ಕೆಲಸ ಮಾಡುವ ಉದ್ಯೋಗಿಗಳು: ಕೇಂದ್ರ/ರಾಜ್ಯ/ಅರೆ ಸರ್ಕಾರ, ಕೇಂದ್ರ ಪಿಎಸ್‌ಯುಎಸ್ ಮತ್ತು ಲಾಭ ಗಳಿಸುತ್ತಿರುವ ರಾಜ್ಯ ಪಿಎಸ್‌ಯುಎಸ್, ರಾಷ್ಟ್ರೀಯ ಖ್ಯಾತಿಯ ಶಿಕ್ಷಣ ಸಂಸ್ಥೆಗಳು, ಆಯ್ದ ಕಾರ್ಪೊರೇಟ್‌ಗಳು ಬ್ಯಾಂಕಿನೊಂದಿಗಿನ ಸಂಬಂಧವಿರುವವರು, ಇಲ್ಲದವರು

English summary

SBI Introduces Real-Time Xpress Credit On YONO App

The country's largest lender State Bank of India (SBI) has introduced Real-Time Xpress Credit (RTXC) on YONO.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X