For Quick Alerts
ALLOW NOTIFICATIONS  
For Daily Alerts

ಎಚ್ಚರ: ಟ್ವಿಟ್ಟರ್‌ ಬಳಕೆದಾರರಿಂದ ಎನ್‌ಎಫ್‌ಟಿ, ಕ್ರಿಪ್ಟೋ ದೋಚುತ್ತಾರೆ ಸ್ಕಾಮರ್‌ಗಳು!

|

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಟ್ವಿಟ್ಟರ್ ಪ್ರೊಫೈಲ್ ಚಿತ್ರವನ್ನು ಕಳೆದ ತಿಂಗಳು ಅಜುಕಿ ಎನ್‌ಎಫ್‌ಟಿ ಯೋಜನೆಗಳಿಗಾಗಿ ಫಿಶಿಂಗ್ ಸೈಟ್‌ಗಳನ್ನು ಪ್ರಚಾರ ಮಾಡಲು ಸ್ಕ್ಯಾಮರ್‌ಗಳು ಬದಲಾವಣೆ ಮಾಡಿಕೊಂಡಿದ್ದರು. ಕಳೆದ ವರ್ಷ, ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆಯನ್ನು ಸಹ ಹ್ಯಾಕ್ ಮಾಡಲಾಗಿದೆ. ಭಾರತವು ಬಿಟ್‌ಕಾಯಿನ್ ಅನ್ನು ಕಾನೂನುಬದ್ಧ ಟೆಂಡರ್ ಆಗಿ ಸ್ವೀಕರಿಸಿದೆ ಮತ್ತು ಅದನ್ನು ನಾಗರಿಕರಿಗೆ ವಿತರಿಸುತ್ತದೆ ಎಂದು ಹೇಳಲು ಸ್ಕ್ಯಾಮರ್‌ಗಳು ಮೋದಿ ಖಾತೆ ಹ್ಯಾಕ್ ಮಾಡಿದ್ದರು. ಈಗ ಟ್ವಿಟ್ಟರ್ ಮೂಲಕವೇ ಎನ್‌ಎಫ್‌ಟಿ, ಕ್ರಿಪ್ಟೋಗಳನ್ನು ಸ್ಕ್ಯಾಮರ್‌ಗಳು ಕದಿಯುತ್ತಾರೆ.

 

ಟ್ವಿಟರ್ ಬಳಕೆದಾರರಿಂದ NFT ಗಳು ಮತ್ತು ಕ್ರಿಪ್ಟೋಗಳನ್ನು ಕದಿಯಲು ಸ್ಕ್ಯಾಮರ್‌ಗಳು ಅನೇಕ ತಂತ್ರಗಳನ್ನು ಕಂಡುಕೊಂಡಿದ್ದಾರೆ. ಟೆನೆಬಲ್‌ನ ಸ್ಟಾಫ್ ರಿಸರ್ಚ್ ಇಂಜಿನಿಯರ್ ಸತ್ನಾಮ್ ನಾರಂಗ್ ಸಂಶೋಧನೆಯ ಪ್ರಕಾರ, ಫಿಶಿಂಗ್ ಸೈಟ್‌ಗಳನ್ನು ಬಳಕೆದಾರರು ಬ್ರೌಸ್ ಮಾಡುವಂತೆ ಮಾಡಿ, ಎನ್‌ಎಫ್‌ಟಿ, ಕ್ರಿಪ್ಟೋಗಳನ್ನು ದೋಚುತ್ತಾರೆ.

ಎಚ್ಚರ: ಈ ಟ್ರಿಕ್‌ ಗೊತ್ತಿಲ್ಲದಿದ್ರೆ ನಿಮ್ಮ ಖಾತೆಯ ಹಣ ಮಂಗಮಾಯ!

"ಬೋರ್ಡ್ ಏಪ್ ಯಾಚ್ ಕ್ಲಬ್ (BAYC), Azukis, MoonBirds ಮತ್ತು OkayBears ಸೇರಿದಂತೆ ಜನಪ್ರಿಯ ಎನ್‌ಎಫ್‌ಟಿಗಳನ್ನು ಹ್ಯಾಕ್ ಮಾಡಲು ಫಿಶಿಂಗ್ ಸೈಟ್‌ ಬ್ರೌಸ್ ಮಾಡುವಂತೆ ಮಾಡಿ ಬಳಕೆದಾರರ ಕ್ರಿಪ್ಟೋ ಸ್ವತ್ತುಗಳನ್ನು ಕದಿಯಲು ಅನೇಕ (ವಂಚಕರು) ಟ್ವಿಟ್ಟರ್‌ನಲ್ಲಿ ಪರಿಶೀಲಿಸಿದ ಮತ್ತು ಪರಿಶೀಲಿಸದ ಖಾತೆಗಳನ್ನು ಹೈಜಾಕ್ ಮಾಡುತ್ತಿದ್ದಾರೆ," ಎಂದು ಸಂಶೋಧನೆ ಹೇಳಿದೆ. ಹಾಗಾದರೆ ಏನು ನಡೆಯುತ್ತಿದೆ, ನೀವೇನು ಮಾಡಬೇಕು ಎಂಬ ಬಗ್ಗೆ ತಿಳಿಯಲು ಮುಂದೆ ಓದಿ...

 ಟ್ವಿಟ್ಟರ್ ಮೇಲೆ ಸ್ಕಾಮರ್‌ಗಳ ಕಣ್ಣು

ಟ್ವಿಟ್ಟರ್ ಮೇಲೆ ಸ್ಕಾಮರ್‌ಗಳ ಕಣ್ಣು

ಸ್ಕ್ಯಾಮರ್‌ಗಳು ಟ್ವಿಟ್ಟರ್‌ಗಳನ್ನು ಹ್ಯಾಕ್ ಮಾಡುತ್ತಾರೆ ಎಂದು ಸಂಶೋಧನೆಯು ಉಲ್ಲೇಖ ಮಾಡಿದೆ. ಟ್ವಿಟ್ಟರ್ ಖಾತೆಗಳನ್ನು ಹ್ಯಾಕ್ ಮಾಡಿದ ನಂತರ, ಸ್ಕ್ಯಾಮರ್‌ಗಳು ಜನಪ್ರಿಯ ಎನ್‌ಎಫ್‌ಟಿ ಮತ್ತು ಕ್ರಿಪ್ಟೋ ಯೋಜನೆಗಳ ಹೆಸರಲ್ಲಿ ಫಿಶಿಂಗ್ ಮಾಡುತ್ತಾರೆ. ಈ ಫಿಶಿಂಗ್ ಸೈಟ್‌ಗಳು ಬಳಕೆದಾರಹೆಸರು ಮತ್ತು ಪಾಸ್‌ವರ್ಡ್‌ಗಳನ್ನು ಕೇಳುವುದಿಲ್ಲ. ಬದಲಾಗಿ, ಅವರು ತಮ್ಮ ಕ್ರಿಪ್ಟೋ ವ್ಯಾಲೆಟ್‌ಗಳನ್ನು ಸಂಪರ್ಕಿಸಲು ಬಳಕೆದಾರರಿಗೆ ಹೇಳುತ್ತದೆ. ಒಮ್ಮೆ ವ್ಯಾಲೆಟ್ ತೆರೆದಾಗ ಅವೆಲ್ಲವೂ ಕೂಡಾ ಸ್ಕ್ಯಾಮರ್‌ಗಳ ಖಾತೆಗೆ ವರ್ಗಾವಣೆ ಆಗುತ್ತದೆ.

 ಏರ್‌ಡ್ರಾಪ್ ಮತ್ತು ಉಚಿತ ಎನ್‌ಎಫ್‌ಟಿ ಸ್ಕಾಮ್

ಏರ್‌ಡ್ರಾಪ್ ಮತ್ತು ಉಚಿತ ಎನ್‌ಎಫ್‌ಟಿ ಸ್ಕಾಮ್

ಸ್ಕ್ಯಾಮರ್‌ಗಳು ಬ್ಲೂ ಚಿಪ್ ಯೋಜನೆಗಳ ಮೂಲಕ ಏರ್‌ಡ್ರಾಪ್‌ಗಳು ಮತ್ತು ಉಚಿತ NFT ಗಳ ಪ್ರಕಟಣೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಬೋರ್ಡ್ ಏಪ್ ಯಾಚ್ ಕ್ಲಬ್ (BAYC), ಅದರ ವಿವಿಧ NFT ಯೋಜನೆಗಳಾದ BAYC, ಮ್ಯುಟೆಂಟ್ ಏಪ್ ಯಾಚ್ ಕ್ಲಬ್ ಮತ್ತು ಬೋರ್ಡ್ ಏಪ್ ಕೆನಲ್ ಕ್ಲಬ್ ಹೊಂದಿರುವವರಿಗೆ ApeCoin ನ ಏರ್‌ಡ್ರಾಪ್ ಅನ್ನು ಘೋಷಿಸಿದೆ. ಇದನ್ನು ಅವಕಾಶವಾಗಿ ಬಳಸಿಕೊಂಡು ಸ್ಕಾಮರ್‌ಗಳು ಹ್ಯಾಕ್ ಮಾಡಿ ಸ್ಕಾಮ್ ಮಾಡುತ್ತಿದ್ದಾರೆ ಎಂದು ಸಂಶೋಧನೆ ಉಲ್ಲೇಖ ಮಾಡಿದೆ. ಉಚಿತ ಕ್ರಿಪ್ಟೋ ಭರವಸೆ ನೀಡಿ ನೀವು ಕ್ರಿಪ್ಟೋ ತೆರೆದಾಗ ಹ್ಯಾಕ್ ಮಾಡಿ ದೂಚುತ್ತಾರೆ ಎಂದು ಕೂಡಾ ಉಲ್ಲೇಖ ಮಾಡಿದೆ.

 ಸ್ಕಾಮರ್‌ಗಳ ಎಚ್ಚರಿಕೆ ಏನು?
 

ಸ್ಕಾಮರ್‌ಗಳ ಎಚ್ಚರಿಕೆ ಏನು?

ಸ್ಕಾಮರ್‌ಗಳು ಟ್ವಿಟ್ಟರ್‌ ಖಾತೆಯನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ. ಬಳಕೆ ಸ್ಕಾಮಿಂಗ್ ಬೆದರಿಕೆಯನ್ನು ಹಾಕುತ್ತಾರೆ. ಯಾರಿಗೆ ನೀವು ಪ್ರತಿಕ್ರಿಯೆ ನೀಡಬಹುದು, ಯಾರಿಗೆ ನೀಡುವಂತಿಲ್ಲ ಎಂಬ ಸೆಟ್ಟಿಂಗ್‌ಗಳನ್ನು ಕೂಡಾ ಬದಲಾವಣೆ ಮಾಡಿಕೊಳ್ಳುತ್ತಾರೆ. ವಂಚನೆಯ ಬಗ್ಗೆ ನೀವು ಇತರರಿಗೆ ಟ್ವೀಟ್ ಮೂಲಕ ತಿಳಿಸಲು ಸಾಧ್ಯವಾಗದಂತೆ ಮಾಡುತ್ತಾರೆ.

 ನೀವು ಏನು ಮಾಡಬೇಕು?

ನೀವು ಏನು ಮಾಡಬೇಕು?

ಟ್ವಿಟರ್ ಬಳಕೆದಾರರು ಎಲ್ಲವನ್ನೂ ಸಂದೇಹದಿಂದ ನೋಡುವ ಮೂಲಕ ವಂಚನೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಪರಿಶೀಲಿಸಿದ ಖಾತೆಗಳಿಂದಲೂ ಯಾರಾದರೂ ತಮ್ಮನ್ನು ಟ್ಯಾಗ್ ಮಾಡುತ್ತಿದ್ದರೂ ಜನರು ಎಚ್ಚರವಾಗಿರಬೇಕು. ಅಲ್ಲದೆ, ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲು ಅಥವಾ ಕ್ರಿಪ್ಟೋ ವ್ಯಾಲೆಟ್ ಅನ್ನು ಲಿಂಕ್ ಮಾಡುವ ಮೊದಲು, ಮೂಲ ಮತ್ತು ಅಧಿಕೃತ ಯೋಜನೆಯ ಬಗ್ಗೆ ತಿಳಿದುಕೊಳ್ಳಬೇಕು.

English summary

Scammers steal NFTs and cryptos from Twitter users, Here's How

Scammers steal NFTs and cryptos from Twitter users, Here's How.
Story first published: Saturday, May 28, 2022, 17:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X