For Quick Alerts
ALLOW NOTIFICATIONS  
For Daily Alerts

ಹಿರಿಯ ನಾಗರಿಕರ ವಿಶೇಷ ಎಫ್ ಡಿ ಯೋಜನೆ ಡಿಸೆಂಬರ್ 31, 2020ಕ್ಕೆ ಕೊನೆ

|

ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾದ ಹಿರಿಯ ನಾಗರಿಕರ ವಿಶೇಷ ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಯೋಜನೆಯು ಡಿಸೆಂಬರ್ 31, 2020ಕ್ಕೆ ಕೊನೆ ಆಗಲಿದೆ. ಮತ್ತೊಂದು ಕಡೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಮಾರ್ಚ್ 31, 2021ರ ತನಕ ವಿಸ್ತರಣೆ ಮಾಡಲಾಗಿದೆ.

ಕೊರೊನಾ ಬಿಕ್ಕಟ್ಟು ಉದ್ಭವಿಸಿದ ಮೇಲೆ ಅದರಿಂದಾದ ಆರ್ಥಿಕ ಪರಿಣಾಮದಿಂದಾಗಿ ಆರ್ ಬಿಐನಿಂದ ನಿರಂತರವಾಗಿ ರೆಪೋ ದರವನ್ನು ನಿರಂತರವಾಗಿ ಇಳಿಸುತ್ತಾ ಬಂತು. ಅದರ ಪರಿಣಾಮವಾಗಿ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರದಲ್ಲಿ ಭಾರೀ ಇಳಿಕೆ ಆಯಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಮೊದಲ ಬಾರಿಗೆ ಹಿರಿಯ ನಾಗರಿಕರಿಗಾಗಿ ಈ ವರ್ಷದ ಮೇ ತಿಂಗಳಲ್ಲಿ ವಿಶೇಷ ಎಫ್ ಡಿ ಯೋಜನೆಯನ್ನು ಪರಿಚಯಿಸಲಾಯಿತು.

ಫಿಕ್ಸೆಡ್ ಡೆಪಾಸಿಟ್ 7.50 ಪರ್ಸೆಂಟ್ ತನಕ ಬಡ್ಡಿ ನೀಡುವ ಟಾಪ್ 10 ಬ್ಯಾಂಕ್ ಗಳುಫಿಕ್ಸೆಡ್ ಡೆಪಾಸಿಟ್ 7.50 ಪರ್ಸೆಂಟ್ ತನಕ ಬಡ್ಡಿ ನೀಡುವ ಟಾಪ್ 10 ಬ್ಯಾಂಕ್ ಗಳು

ಆ ನಂತರ ಎಲ್ಲ ಪ್ರಮುಖ ಬ್ಯಾಂಕ್ ಗಳಿಂದಲೂ ತಮ್ಮ ಗ್ರಾಹಕರಿಗೆ ವಿಶೇಷ ಡೆಪಾಸಿಟ್ ಯೋಜನೆಯನ್ನು ಪರಿಚಯಿಸಿದವು. ಹಿರಿಯ ನಾಗರಿಕರು ಸಾಮಾನ್ಯವಾಗಿ ತಮ್ಮ ಉಳಿತಾಯವನ್ನು ಎಫ್.ಡಿ.ಯಲ್ಲಿ ಇಟ್ಟು, ತಿಂಗಳ ಆದಾಯಕ್ಕೆ ಇರಿಸಿಕೊಳ್ಳುತ್ತಾರೆ. ಈ ಹಿಂದೆ ಸ್ಕೀಮ್ ಅನ್ನು ಸೆಪ್ಟೆಂಬರ್ ತನಕ ಇರಿಸಲಾಗಿತ್ತು. ಆ ನಂತರ ಅದನ್ನು ಡಿಸೆಂಬರ್ 31, 2020ಕ್ಕೆ ವಿಸ್ತರಿಸಲಾಯಿತು.

ಹಿರಿಯ ನಾಗರಿಕರ ವಿಶೇಷ ಎಫ್ ಡಿ ಯೋಜನೆ ಡಿಸೆಂಬರ್ 31, 2020ಕ್ಕೆ ಕೊನೆ

ಎಚ್ ಡಿಎಫ್ ಸಿಯಿಂದ "ಎಚ್ ಡಿಎಫ್ ಸಿ ಸೀನಿಯರ್ ಸಿಟಿಜನ್ ಕೇರ್" ಎಂಬ ಯೋಜನೆ ತಂದಿದ್ದು, ಅದರಲ್ಲಿ ಈ ಠೇವಣಿಗಳ ಮೇಲೆ 0.75% ಹೆಚ್ಚಿನ ಬಡ್ಡಿ ದೊರೆಯುತ್ತದೆ. "ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್" ಸ್ಕೀಮ್ ನಲ್ಲಿ ಮಾಮೂಲಿ ದರಕ್ಕಿಂತ 0.80% ಹೆಚ್ಚಿನ ದರ ನೀಡುತ್ತದೆ. ಬ್ಯಾಂಕ್ ಆಫ್ ಬರೋಡಾದಿಂದ ಸದ್ಯದ ದರಕ್ಕಿಂತ 1% ಹೆಚ್ಚಿನ ಪರ್ಸೆಂಟ್ ನೀಡುತ್ತಿದೆ.

English summary

Senior Citizen Special FD Scheme Ends On December 31, 2020

Senior citizen special FD scheme in various banks will end by December 31, 2020. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X